TV9 Kannada Spiritual June Festival List 2026: List of Important festivals celebrated in June month
June Festival List 2026: ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಹಿಂದೂ ಧರ್ಮದಲ್ಲಿ ವರ್ಷ ಪೂರ್ತಿ ವಿವಿಧ ಹಬ್ಬಗಳು, ವ್ರತ ಹಾಗೂ ಆಚರಣೆಗಳು ಇದ್ದೆ ಇರುತ್ತವೆ. ಈ ವರ್ಷದ ಆರನೇ ತಿಂಗಳಾದ ಜೂನ್‌ನಲ್ಲಿ ವಿವಿಧ ಹಬ್ಬಗಳು ಹಾಗೂ ಆಚರಣೆಗಳಿವೆ. ಹೀಗಾಗಿ ಈ ತಿಂಗಳಲ್ಲಿ ಯಾವೆಲ್ಲಾ ಹಬ್ಬಗಳು ಹಾಗೂ ಆಚರಣೆಗಳಿವೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ತಿಂಗಳು ಉರುಳಿದ್ದೇ ತಿಳಿಯುತ್ತಿಲ್ಲ. ಕಣ್ಣು ಮುಚ್ಚಿ ಬಿಡುವುದರೊಳಗೆ 2026 ರ ಆರನೇ ತಿಂಗಳಿಗೆ ಕಾಲಿಡಲು ಸಜ್ಜಾಗಿದ್ದೇವೆ. ಮೇ ತಿಂಗಳಿಗೆ ಗುಡ್ ಬೈ ಹೇಳಿ ಜೂನ್ ತಿಂಗಳನ್ನು ಆಹ್ವಾನಿಸಲು ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಹಿಂದೂ ಪಂಚಾಂಗದ (Hindu Calendar) ಪ್ರಕಾರವಾಗಿ ಜೂನ್ ತಿಂಗಳು ಜ್ಯೇಷ್ಠ ಮಾಸದಿಂದ ಪ್ರಾರಂಭವಾಗುತ್ತದೆ. ಜೂನ್ ತಿಂಗಳಲ್ಲಿ ಪ್ರಮುಖವಾದ ಹಬ್ಬ ಹಾಗೂ ಆಚರಣೆಗಳಿವೆ. ಹಾಗಾದ್ರೆ ಈ ಜೂನ್ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಕುರಿತಾದ ಮಾಹಿತಿ ಇಲ್ಲಿದೆ.
ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಜೂನ್ 01 – ಅಧಿಕ ಜ್ಯೇಷ್ಠ ಕೃಷ್ಣ ಪಕ್ಷ
ಜೂನ್ 03 – ಸಂಕಷ್ಟಹರ ಚತುರ್ಥಿ
ಜೂನ್ 05 – ಶ್ರವಣ ಅಹೋರಾತ್ರ
ಜೂನ್ 08- ಮಹಾನಕ್ಷತ್ರ ಮೃಗಾಶಿರಾ
ಜೂನ್ 11- ಪರಮ ಏಕಾದಶಿ
ಜೂನ್ 12 – ಪ್ರದೋಷ
ಜೂನ್ 13 – ಮಾಸಶಿವರಾತ್ರಿ
ಜೂನ್ 15 – ಮಿಥುನ ಸಂಕ್ರಮಣ
ಜೂನ್ 15 – ಕರವೀರವ್ರತ
ಜೂನ್ 15 – ಸೋಮಾವತಿ ಅಮಾವಾಸ್ಯಾ
ಜೂನ್ 16 – ನಿಜಜ್ಯೇಷ್ಠ ಶುಕ್ಲಪಕ್ಷ
ಜೂನ್ 17 – ಮೊಹರಂ ಪ್ರಾರಂಭ
ಜೂನ್ 18 – ಉಮಾಪೂಜನ ವ್ರತ
ಜೂನ್ 19 – ಶ್ರುತ ಪಂಚಮಿ
ಜೂನ್ 21 – ದಕ್ಷಿಣಾಯನ ಆರಂಭ
ಜೂನ್ 22 – ಮಹಾನಕ್ಷತ್ರ ಆರ್ದಾ
ಜೂನ್ 25 – ನಿರ್ಜಲಾ ಏಕಾದಶಿ
ಜೂನ್ 26 – ಮೊಹರಂ
ಜೂನ್ 27 – ಪ್ರದೋಷ
ಜೂನ್ 29 – ವಟಸಾವಿತ್ರಿ ವ್ರತ
ಜೂನ್ 29 – ಕಬೀರದಾಸ ಜಯಂತಿ
ಜೂನ್ 30 – ನಿಜ ಜ್ಯೇಷ್ಠ ಕೃಷ್ಣ ಪಕ್ಷ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ