ರುದ್ರಾಕ್ಷಿಯನ್ನು ಶಿವನ ಕಣ್ಣೀರಿನ ಹನಿಗಳೆಂದು ಹೇಳಲಾಗುತ್ತೆ. ರುದ್ರಾಕ್ಷಿಯು ವೇರಾಲು ಮರದ ಬೀಜಗಳಾಗಿವೆ. ರುದ್ರಾಕ್ಷಿಯನ್ನು ಸಾಮಾನ್ಯವಾಗಿ ಹಿಂದೂಗಳು ಮತ್ತು ಬೌದ್ಧರು ಪ್ರಾರ್ಥನಾ ಮಣಿಗಳಾಗಿ ಬಳಸುತ್ತಾರೆ. ರುದ್ರಾಕ್ಷಿ ಮರವು ನೇಪಾಳ, ಇಂಡೋನೇಷಿಯಾ, ಜಾವಾ ಮತ್ತು ಬರ್ಮಾದ ಪರ್ವತಗಳು ಮತ್ತು ಪರ್ವತ ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದರ ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ ಮತ್ತು ಹಣ್ಣುಗಳು ಕಂದು ಬಣ್ಣ ಮತ್ತು ರುಚಿಯಲ್ಲಿ ಹುಳಿಯಾಗಿರುತ್ತವೆ. ಜ್ಞಾನ ಮತ್ತು ವಿಮೋಚನೆಗಾಗಿ ಯೋಗಿಗಳು ಮತ್ತು ಖುಷಿ-ಮುನಿಗಳು ರುದ್ರಾಕ್ಷಿ ಮಣಿಗಳನ್ನು ಧರಿಸುತ್ತಾರೆ. ಹಾಗಾದ್ರೆ ರುದ್ರಾಕ್ಷಿ ಧರಿಸುವುದರಿಂದ ಆಗುವ ಪ್ರಯೋಜನಗಳನ್ನು ಇಲ್ಲಿ ತಿಳಿಯಿರಿ.
ಪ್ರಾಚೀನ ಭಾರತೀಯ ಗ್ರಂಥಗಳ ಪ್ರಕಾರ, ರುದ್ರಾಕ್ಷಿ ಶಿವನ ಕಣ್ಣೀರಿನಿಂದ ವಿಕಸನಗೊಂಡಿದೆ, ಆದ್ದರಿಂದ ಇದನ್ನು ರುದ್ರಾಕ್ಷ ಎಂದು ಕರೆಯಲಾಗುತ್ತದೆ. ರುದ್ರ ಎಂದರೆ ಶಿವ ಮತ್ತು ಅಕ್ಷ ಎಂದರೆ ಕಣ್ಣುಗಳು. ಶಿವ ಪುರಾಣದಲ್ಲಿ ರುದ್ರಾಕ್ಷಿಯ ಮೂಲವನ್ನು ಶಿವನ ಕಣ್ಣೀರು ಎಂದು ವಿವರಿಸಲಾಗಿದೆ. ಸಕಲ ಜೀವಿಗಳ ಕಲ್ಯಾಣಕ್ಕಾಗಿ ಹಲವು ವರ್ಷಗಳ ಕಾಲ ಧ್ಯಾನ ಮಾಡಿದ ನಂತರ, ಶಿವನು ಕಣ್ಣು ತೆರೆದಾಗ, ಶಿವನ ಕಣ್ಣಿನಿಂದ ಕಣ್ಣೀರು ಸುರಿಯಿತು ಮತ್ತು ಭೂಮಿ ಮೇಲೆ ಹನಿಗಳು ಬಿದ್ದಾಗ ರುದ್ರಾಕ್ಷ ವೃಕ್ಷಗಳಿಗೆ ಭೂಮಿ ತಾಯಿ ಜನ್ಮ ನೀಡಿದಳು ಎನ್ನಲಾಗಿದೆ.
ದೇಹ ಮತ್ತು ಮನಸ್ಸಿಗೆ ಪ್ರಯೋಜನಕಾರಿ
ರುದ್ರಾಕ್ಷಿಯು ದೇಹದಲ್ಲಿನ ಶಕ್ತಿಯನ್ನು ವೃದ್ಧಿಸುತ್ತದೆ, ಇದು ರೋಗಗಳ ವಿರುದ್ಧ ಹೋರಾಡುತ್ತದೆ. ಆಯುರ್ವೇದದ ಪ್ರಕಾರ, ರುದ್ರಾಕ್ಷಿ ದೇಹವನ್ನು ಬಲಪಡಿಸುತ್ತದೆ. ಮನಸಲ್ಲಿನ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಹಾಗೂ ಮಾನವ ದೇಹದ ಒಳಗಿನ ಮತ್ತು ಹೊರಗಿನ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ರುದ್ರಾಕ್ಷಿಯು ತಲೆನೋವು, ಕೆಮ್ಮು, ಪಾರ್ಶ್ವವಾಯು, ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ ಎನ್ನಲಾಗಿದೆ.
ರುದ್ರಾಕ್ಷಿಯನ್ನು ಧರಿಸುವುದರಿಂದ ಮುಖದ ಮೇಲೆ ಹೊಳಪು ಬರುತ್ತದೆ. ಇದು ವ್ಯಕ್ತಿತ್ವವನ್ನು ಶಾಂತವಾಗಿ ಮತ್ತು ಆಕರ್ಷಕವಾಗಿ ಮಾಡುತ್ತದೆ. ರುದ್ರಾಕ್ಷಿ ಮಣಿಗಳನ್ನು ಪಠಣೆಗಾಗಿ ಬಳಸಲಾಗುತ್ತದೆ. ಜಪ ಮಾಡುವ ಪ್ರಕ್ರಿಯೆಯು ಆಧ್ಯಾತ್ಮಿಕ ಶಕ್ತಿ ಮತ್ತು ಜೀವನದಲ್ಲಿ ಮುಂದುವರೆಯಲು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದ್ದರಿಂದ ರುದ್ರಾಕ್ಷಿ ಆರೋಗ್ಯ ಪ್ರಯೋಜನಗಳನ್ನು ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಒದಗಿಸಲು ಉಪಯುಕ್ತವಾಗಿವೆ.
ರುದ್ರಾಕ್ಷವನ್ನು ಧರಿಸುವುದರಿಂದ ಪ್ರಸ್ತುತ ಜೀವನದಲ್ಲಿ ತೊಂದರೆಗಳನ್ನು ಉಂಟುಮಾಡುವ ಹಿಂದಿನ ಜನ್ಮದ ಪಾಪಗಳು ನಾಶವಾಗುತ್ತವೆ. ರುದ್ರಾಕ್ಷಿಯನ್ನು ಧರಿಸುವುದರಿಂದ ಭಗವಾನ್ ರುದ್ರನ ರೂಪವನ್ನು ಪಡೆಯಬಹುದು. ಇದು ಎಲ್ಲಾ ಪಾಪಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಒಬ್ಬರ ಜೀವನದಲ್ಲಿ ಉನ್ನತ ಗುರಿಯನ್ನು ಸಾಧಿಸಲು, ಯಶಸ್ಸನ್ನು ಪಡೆಯಲು ಸಹಾಯ ಮಾಡುತ್ತದೆ.
ರುದ್ರಾಕ್ಷಿ ದುಷ್ಟ ಮತ್ತು ಋಣಾತ್ಮಕ ಪರಿಣಾಮಗಳನ್ನು ತೆಗೆದುಹಾಕುತ್ತದೆ
ರುದ್ರಾಕ್ಷಿಯನ್ನು ಆಧ್ಯಾತ್ಮಿಕ ಮಣಿ ಎಂದು ಪರಿಗಣಿಸಲಾಗುತ್ತದೆ. ಆಧ್ಯಾತ್ಮಿಕ ಶಕ್ತಿ, ಆತ್ಮವಿಶ್ವಾಸ, ಧೈರ್ಯವನ್ನು ಹೆಚ್ಚಿಸಲು ಮತ್ತು ಸಕಾರಾತ್ಮಕ ಮನೋಭಾವವನ್ನು ನಿರ್ಮಿಸಲು ಪ್ರಾಚೀನ ಕಾಲದಿಂದಲೂ ಇದನ್ನು ಬಳಸಲಾಗುತ್ತಿದೆ.
ಒತ್ತಡವನ್ನು ನಿಯಂತ್ರಿಸುತ್ತದೆ
ರುದ್ರಾಕ್ಷಿ ಧರಿಸುವುದರಿಂದ ಅದು ನಮ್ಮ ಒತ್ತಡವನ್ನು ಸಕ್ರಿಯವಾಗಿ ನಿಯಂತ್ರಿಸುತ್ತದೆ ಮತ್ತು ದೇಹ, ಮನಸ್ಸು ಆತ್ಮಕ್ಕೆ ಧನಾತ್ಮಕ ಶಕ್ತಿ ನೀಡುತ್ತದೆ.
ಇದನ್ನೂ ಓದಿ: ಈ ರುದ್ರಾಕ್ಷಿ ಧರಿಸುವುದರಿಂದ ನಿಮ್ಮ ಜಾತಕದಲ್ಲಿರುವ ದೋಷಗಳನ್ನ ಬಗೆಹರಿಸಿಕೊಳ್ಳಬಹುದು, ಹೇಗೆ ಇಲ್ಲಿ ತಿಳಿಯಿರಿ