ಈ ರುದ್ರಾಕ್ಷಿ ಧರಿಸುವುದರಿಂದ ನಿಮ್ಮ ಜಾತಕದಲ್ಲಿರುವ ದೋಷಗಳನ್ನ ಬಗೆಹರಿಸಿಕೊಳ್ಳಬಹುದು, ಹೇಗೆ ಇಲ್ಲಿ ತಿಳಿಯಿರಿ

ಸತಿ ದೇಹತ್ಯಾಗದ ನಂತರ ಶಿವ ಸಿಟ್ಟಿಗೊಳಗಾಗಿ ರುದ್ರನರ್ತನ ಮಾಡುವಾಗ ಶಿವನ ಕಣ್ಣಿಂದ ಬಂದ ಕಣ್ಣೀರು ಭೂಮಿಯ ಮೇಲೆ ಹಲವು ಕಡೆ ಬಿದ್ದು ರುದ್ರಾಕ್ಷಿಯಾಯಿತೆಂಬ ನಂಬಿಕೆ ಇದೆ. ಇಂತಹ ಪವಿತ್ರ ರುದ್ರಾಕ್ಷಿ ಧಾರಣೆಯಿಂದ ಅನೇಕ ಪ್ರಯೋಜನಗಳಿವೆ.

ಈ ರುದ್ರಾಕ್ಷಿ ಧರಿಸುವುದರಿಂದ ನಿಮ್ಮ ಜಾತಕದಲ್ಲಿರುವ ದೋಷಗಳನ್ನ ಬಗೆಹರಿಸಿಕೊಳ್ಳಬಹುದು, ಹೇಗೆ ಇಲ್ಲಿ ತಿಳಿಯಿರಿ
ರುದ್ರಾಕ್ಷಿ ಮಾಲೆ
Follow us
TV9 Web
| Updated By: ಆಯೇಷಾ ಬಾನು

Updated on: Aug 27, 2021 | 7:09 AM

ಶಿವನ(Lord Shiva) ಅಂಶವೆಂದೇ ಹೇಳಲಾಗುವ ರುದ್ರಾಕ್ಷಿ(Rudrakshi) ಅಸಾಧಾರಣ ಮಹತ್ವ ಹೊಂದಿದೆ. ಸತಿ ದೇಹತ್ಯಾಗದ ನಂತರ ಶಿವ ಸಿಟ್ಟಿಗೊಳಗಾಗಿ ರುದ್ರನರ್ತನ ಮಾಡುವಾಗ ಶಿವನ ಕಣ್ಣಿಂದ ಬಂದ ಕಣ್ಣೀರು(Tears of Lord Shiva) ಭೂಮಿಯ ಮೇಲೆ ಹಲವು ಕಡೆ ಬಿದ್ದು ರುದ್ರಾಕ್ಷಿಯಾಯಿತೆಂಬ ನಂಬಿಕೆ ಇದೆ. ಇಂತಹ ಪವಿತ್ರ ರುದ್ರಾಕ್ಷಿ ಧಾರಣೆಯಿಂದ ಅನೇಕ ಪ್ರಯೋಜನಗಳಿವೆ. ಸನಾತನ ಹಿಂದೂ ಧರ್ಮದಲ್ಲಿ, ರುದ್ರಾಕ್ಷಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿಯನ್ನು ಧರಿಸಿದ ವ್ಯಕ್ತಿಯು ತನ್ನ ಜನ್ಮ ಪಟ್ಟಿಯಲ್ಲಿರುವ ಎಲ್ಲಾ ದೋಷಗಳಿಂದ(Dosha) ಮುಕ್ತನಾಗುವ ಭಾಗ್ಯ ಪಡೆಯುತ್ತಾನೆ ಎಂದು ನಂಬಲಾಗಿದೆ.

ರುದ್ರಾಕ್ಷಿ ಧರಿಸುವವರನ್ನು ಶಿವ ರಕ್ಷಿಸುತ್ತಾನೆ ಮತ್ತು ಅವರ ಜೀವನದಲ್ಲಿ ಬರುವ ಕಷ್ಟಗಳನ್ನು ದೂರ ಮಾಡುತ್ತಾನೆ. ಹಾಗೂ ನಿಮ್ಮ ಜಾತಕದಲ್ಲಿ ನೀವು ಯಾವುದೇ ರೀತಿಯ ಅಶುಭ ಯೋಗ ಅಥವಾ ದೋಷವನ್ನು ಹೊಂದಿದ್ದರೆ, ನೀವು ರುದ್ರಾಕ್ಷಿಯನ್ನು ಧರಿಸುವ ಮೂಲಕ ಅದರ ದುಷ್ಪರಿಣಾಮಗಳನ್ನು ತೊಡೆಯಬಹುದು. ರುದ್ರಾಕ್ಷಿಯಲ್ಲಿ ಅನೇಕ ವಿಧಗಳಿವೆ. ಹಾಗಾದ್ರೆ ಯಾವ ಅಶುಭ ಯೋಗಕ್ಕಾಗಿ ಎಷ್ಟು ಮುಖಿ ರುದ್ರಾಕ್ಷಿ ಧರಿಸಬೇಕು ಎಂದು ಇಲ್ಲಿ ತಿಳಿಯಿರಿ.

ಕಾಳ ಸರ್ಪ ದೋಷ ಕಾಳ ಸರ್ಪ ದೋಷ ವ್ಯಕ್ತಿಯ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಕಾಳ ಸರ್ಪ ದೋಷ ಇರುವ ವ್ಯಕ್ತಿ ಮಾಡುವ ಕೆಲಸದಲ್ಲಿ ಸಮಸ್ಯೆ, ಕೆಡಕಾಗುತ್ತಾ ಹೋಗುತ್ತದೆ. ನಿಮ್ಮ ಜಾತಕದಲ್ಲಿ ಕಾಳ ಸರ್ಪ ದೋಷವಿದ್ದರೆ ನೀವು 8 ಮತ್ತು 9 ಮುಖಿ ರುದ್ರಾಕ್ಷಿಯನ್ನು ಧರಿಸಬೇಕು. ಇದರಿಂದ ನಿಮಗೆ ಸಾಕಷ್ಟು ಪ್ರಯೋಜನವಾಗುತ್ತೆ.

ಗ್ರಹಣ ಯೋಗ ರಾಹು-ಕೇತು ಮತ್ತು ಚಂದ್ರ ಒಟ್ಟಿಗೆ ಗ್ರಹಣ ದೋಷವನ್ನು ಸೃಷ್ಟಿಸುತ್ತಾರೆ. ಅಂತಹ ಸನ್ನಿವೇಶದಲ್ಲಿ, ಒಬ್ಬ ವ್ಯಕ್ತಿಯು 2 ಅಥವಾ 8 ಮುಖಿ ರುದ್ರಾಕ್ಷಿಯನ್ನು ಧರಿಸಿದರೆ, ಅವನು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾನೆ ಮತ್ತು ಎಲ್ಲಾ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.

ಚಾಂಡಾಲ ಯೋಗ ರಾಹು ಜಾತಕದ ಯಾವುದೇ ಮನೆಯಲ್ಲಿ ಗುರುವಿನ ಜೊತೆ ಕುಳಿತರೆ ಅದು ಚಾಂಡಾಲ ಯೋಗವಾಗುತ್ತದೆ. ಚಾಂಡಾಲ ಯೋಗವು ವ್ಯಕ್ತಿಯ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಹಣದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಮತ್ತು ಅದು ಅನೇಕ ವಿಷಯಗಳ ಮೇಲೂ ಪರಿಣಾಮ ಬೀರುತ್ತದೆ. ಹೊಟ್ಟೆ ಮತ್ತು ಉಸಿರಾಟದ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, 5 ಮತ್ತು 10 ಮುಖಿ ರುದ್ರಾಕ್ಷಿಯನ್ನು ಧರಿಸಬೇಕು.

ಅಂಗಾರಕ ಯೋಗ ಅಂಗಾರಕ ಯೋಗವಿದ್ದರೆ ಈ ವ್ಯಕ್ತಿಯು ಪ್ರತಿ ಮಾತಿಗೂ ತುಂಬಾ ಕೋಪಗೊಳ್ಳುವ ಸ್ವಭಾವ ಬೆಳೆಯುತ್ತದೆ. ಕೆಲವೊಮ್ಮೆ ಹಿಂಸಾತ್ಮಕ ಮತ್ತು ನಕಾರಾತ್ಮಕವಾಗ ತೊಡಗುತ್ತಾನೆ. ಜಾತಕದಲ್ಲಿ ಮಂಗಳ ಮತ್ತು ರಾಹು ಒಟ್ಟಿಗೆ ಇದ್ದಾಗ ಈ ಯೋಗ ಸಂಭವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆ ವ್ಯಕ್ತಿ 3 ಮುಖಿ ರುದ್ರಾಕ್ಷಿಯನ್ನು ಧರಿಸುವುದು ಉತ್ತಮ.

ಕೆಮ್ಡ್ರಮ್ ಯೋಗ ಈ ಯೋಗವು ಚಂದ್ರನ ಕಾರಣದಿಂದ ರೂಪುಗೊಳ್ಳುತ್ತೆ ಮತ್ತು ಈ ಯೋಗದಿಂದ ಜೀವನದಲ್ಲಿ ಅಹಿತಕರ ಪರಿಣಾಮಗಳು ಬೀರಲು ಶುರುವಾಗುತ್ತೆ. ತನ್ನ ಜಾತಕದಲ್ಲಿ ಈ ಯೋಗವನ್ನು ಹೊಂದಿರುವ ವ್ಯಕ್ತಿಯು ತನ್ನ ಜೀವನದಲ್ಲಿ ನಿರಂತರ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಜನರು 13 ಮುಖಿ ರುದ್ರಾಕ್ಷಿಯನ್ನು ಬೆಳ್ಳಿಯಲ್ಲಿ ಧರಿಸಬೇಕು.

ಮಂಗಳ ಯೋಗ ನಿಮ್ಮ ಜಾತಕದಲ್ಲಿ ಮಂಗಳ ದೋಷವಿದ್ದರೂ ಸಹ, ನಿಮ್ಮ ಜೀವನದಲ್ಲಿ ತೊಂದರೆ, ಕೋಪ ಇತ್ಯಾದಿ ಸಮಸ್ಯೆಗಳು ಉಂಟಾಗುತ್ತವೆ. ಇದನ್ನು ಹೋಗಲಾಡಿಸಲು, ನೀವು 11 ಮುಖಿ ರುದ್ರಾಕ್ಷಿಯನ್ನು ಧರಿಸಬೇಕು.

ಶಕ್ತ ಯೋಗ ಎಲ್ಲಾ ಗ್ರಹಗಳು ಮೊದಲ ಮತ್ತು ಏಳನೇ ಮನೆಯಲ್ಲಿದ್ದಾಗ ಶಕ್ತ ಯೋಗವು ರೂಪುಗೊಳ್ಳುತ್ತದೆ. ಕೆಲವೊಮ್ಮೆ ಗುರು ಮತ್ತು ಚಂದ್ರನ ಸ್ಥಾನ ಬದಲಾವಣೆ ಕೂಡ ಈ ಯೋಗವನ್ನು ಸೃಷ್ಟಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಯೋಗ ಹೊಂದಿರುವ ವ್ಯಕ್ತಿಯು 10 ಮುಖಿ ರುದ್ರಾಕ್ಷಿಯನ್ನು ಧರಿಸಬೇಕು.

ಇದನ್ನೂ ಓದಿ: Sankashti Chaturthi 2021: ಶ್ರಾವಣ ಮಾಸದ ಸಂಕಷ್ಟ ಚತುರ್ಥಿಯನ್ನು ಆಚರಿಸುವುದು ಹೇಗೆ?

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ