ಜ್ಯೋತಿಷ್ಯದ ಚಮತ್ಕಾರ: ಈ 5 ರಾಶಿಯ ಜನರಿಗೆ ಸೆಪ್ಟೆಂಬರ್​ ತುಂಬಾ ಅದೃಷ್ಟದ ತಿಂಗಳು, ಅದು ಹೇಗೆ? ಇಲ್ಲಿದೆ ಮಾಹಿತಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೆಪ್ಟೆಂಬರ್ ಮಾಸ ತುಂಬಾ ಮಹತ್ವ ಪಡೆದುಕೊಳ್ಳುತ್ತದೆ. ಮುಂದಿನ ತಿಂಗಳು ಆರಂಭವಾಗುತ್ತಿದ್ದಂತೆ ಐದು ಗ್ರಹ ರಾಶಿಗಳು ಪರಿವರ್ತನೆಯಾಗಲಿದೆ. ಮೊದಲನೆಯದಾಗಿ ಮಂಗಳ ಗ್ರಹವು 2021ನೇ ಸೆಪ್ಟೆಂಬರ್ ಮಾಸದ 6ನೇ ತಾರೀಕಿನಿಂದ ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶವಾಗಲಿದೆ. ಇದೇ ದಿನ ಭೌತಿಕ ಸುಖ ಕೊಡುವ ಶುಕ್ರ ಗ್ರಹವು ಸಹ ತುಲಾ ರಾಶಿಯಲ್ಲಿ ಕಾಣಿಸಿಕೊಳ್ಳಲಿದೆ.

ಜ್ಯೋತಿಷ್ಯದ ಚಮತ್ಕಾರ: ಈ 5 ರಾಶಿಯ ಜನರಿಗೆ ಸೆಪ್ಟೆಂಬರ್​ ತುಂಬಾ ಅದೃಷ್ಟದ ತಿಂಗಳು, ಅದು ಹೇಗೆ? ಇಲ್ಲಿದೆ ಮಾಹಿತಿ
ಬದಲಾವಣೆ ಎಂಬುದು ಜಗದ ನಿಯಮ: ಆದರೆ ಈ 3 ರಾಶಿಯ ಜನ ಬದಲಾವಣೆಯನ್ನು ಇಷ್ಟಪಡುವುದಿಲ್ಲ!
Follow us
TV9 Web
| Updated By: ಆಯೇಷಾ ಬಾನು

Updated on:Aug 27, 2021 | 7:22 AM

ಇದು ಜ್ಯೋತಿಷ್ಯ ಶಾಸ್ತ್ರದ ಚಮತ್ಕಾರವೇ ಸರಿ. ಇರುವ 12 ರಾಶಿಯ ಪೈಕಿ 5 ರಾಶಿಯ ಜನರಿಗೆ ಸೆಪ್ಟೆಂಬರ್​ ತುಂಬಾ ಅದೃಷ್ಟದ ತಿಂಗಳಾಗಲಿದೆ. ಅದು ಹೇಗೆ? ಇಲ್ಲಿದೆ ಮಾಹಿತಿ. ಗ್ರಹ ಗತಿಗಳ ಪರಿವರ್ತನೆಯ ಫಲವಾಗಿ ಈ ಐದು ರಾಶಿಯ ಜನರಿಗೆ ಅದೃಷ್ಟ ಖುಲಾಯಿಸಲಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೆಪ್ಟೆಂಬರ್ ಮಾಸ ತುಂಬಾ ಮಹತ್ವ ಪಡೆದುಕೊಳ್ಳುತ್ತದೆ. ಮುಂದಿನ ತಿಂಗಳು ಆರಂಭವಾಗುತ್ತಿದ್ದಂತೆ ಐದು ಗ್ರಹ ರಾಶಿಗಳು ಪರಿವರ್ತನೆಯಾಗಲಿದೆ. ಮೊದಲನೆಯದಾಗಿ ಮಂಗಳ ಗ್ರಹವು 2021ನೇ ಸೆಪ್ಟೆಂಬರ್ ಮಾಸದ 6ನೇ ತಾರೀಕಿನಿಂದ ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶವಾಗಲಿದೆ. ಇದೇ ದಿನ ಭೌತಿಕ ಸುಖ ಕೊಡುವ ಶುಕ್ರ ಗ್ರಹವು ಸಹ ತುಲಾ ರಾಶಿಯಲ್ಲಿ ಕಾಣಿಸಿಕೊಳ್ಳಲಿದೆ.

ಅದರ ಬಳಿಕ ದೇವ ಗುರು ಬೃಹಸ್ಪತಿ ಸೆಪ್ಟೆಂಬರ್ ಮಾಸದ 14ನೇ ತಾರೀಕಿನಿಂದ ಮಕರ ರಾಶಿಯ ಮೇಲೆ ವಕ್ರ ದೃಷ್ಟಿ ಬೀರಲಿದೆ. ಮತ್ತೆ ಸೆಪ್ಟೆಂಬರ್ 16 ರಂದು ಸೂರ್ಯ ಭಗವಂತ ಸಿಂಹ ರಾಶಿಯಿಂದ ಹೊರಬಂದು ಕನ್ಯಾ ರಾಶಿಯಲ್ಲಿ ಗೋಚರವಾಗುತ್ತಾನೆ. ಕೊನೆಯಲ್ಲಿ, ಬುಧ ಗ್ರಹವೂ ತುಲಾ ರಾಶಿಯಲ್ಲಿ ಸೇರಿಕೊಳ್ಳುತ್ತದೆ. ಅದಾದ ಬಳಿಕ ಸೆಪ್ಟೆಂಬರ್ ಮಾಸದ 27 ರಿಂದ ಬುಧ ಗ್ರಹವು ತುಲಾ ರಾಶಿಯ ಮೇಲೆ ವಕ್ರ ದೃಷ್ಟಿ ಬೀರುತ್ತದೆ.

ಈ 5 ಗ್ರಹಗಳ ಚಲನೆಯು ಎಲ್ಲಾ 12 ರಾಶಿಗಳ ಮೇಲೂ ಪ್ರಭಾವ ಬೀರುತ್ತದೆ. ಆದರೆ ಜ್ಯೋತಿಷ್ಯ ಪಂಡಿತರು ಹೇಳುವ ಪ್ರಕಾರ ನಿರ್ದಿಷ್ಟವಾಗಿ 5 ರಾಶಿಯ ಜನರ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಅದು ಧನಾತ್ಮಕವಾಗಿರುತ್ತದೆ ಎಂಬುದು ವಿಶೇಷ. ಆದ್ದರಿಂದ ಇವರ ಭಾಗ್ಯ ಖುಲಾಯಿಸುತ್ತದೆ. ಆರ್ಥಿಕ ಲಾಭಗಳು ಗೋಚರವಾಗಲಿವೆ. ಬನ್ನೀ ಆ ಐದು ರಾಶಿಗಳು ಯಾವುವು, ಅದರ ಪ್ರಭಾವಗಳು ಏನು ತಿಳಿಯೋಣ.

1. ವೃಷಭ ರಾಶಿ Taurus: ವೃಷಭ ರಾಶಿಯವರಿಗೆ ಸೆಪ್ಟೆಂಬರ್ ಮಾಸವು ಭರಪೂರಾಗಿ ಭಾಗ್ಯದ ಬಾಗಿಲು ತೆರೆದಿರುತ್ತದೆ. ಈ ಭಾಗ್ಯದ ಸಮ್ಮುಖದಲ್ಲಿ ಹೊಸ ಹೊಸ ಕಾರ್ಯಗಳ ಶುಭಾರಂಭ ಮಾಡಬಹುದು. ಇದರಿಂದ ಆರ್ಥಿಕವಾಗಿ ಅಭಿವರ್ಧನೆ ಸಾಧಿಸಬಹುದು. ಹಿಂದಿನ ಯೋಜನೆಗೂ ಈ ಮಾಸದಲ್ಲಿ ಫಲ ನೀಡಬಹುದು. ಒಟ್ಟಾರೆಯಾಗಿ ಸೆಪ್ಟೆಂಬರ್ ತಿಂಗಳು ವೃಷಭ ರಾಶಿಯವರಿಗೆ ಶುಭವೋ ಶುಭ.

2. ಮಿಥುನ ರಾಶಿ Gemini: ಮಿಥುನ ರಾಶಿಯವರಿಗೆ ಮುಂದಿನ ಸೆಪ್ಟೆಂಬರ್ ಸುಖ ಸುವಿಧಾಗಳನ್ನು ತಂದುಕೊಡುವ ತಿಂಗಳು ಎಂಬುದು ಸಾಬೀತಾಗಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದ್ದಾರೆ. ಈ ತಿಂಗಳಲ್ಲಿ ಮುಖ್ಯವಾಗಿ ನಿಮ್ಮ ಅನೇಕ ತೊಂದರೆಗಳು ಕಡಿಮೆಯಾಗಲಿವೆ. ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಉತ್ತಮ ಆರೋಗ್ಯ ಹೊಂದಲಿದ್ದೀರಿ.

3. ಸಿಂಹ ರಾಶಿ Leo: ಸಿಂಹ ರಾಶಿಯವರಿಗೆ ಹೇಳುವುದಾದರೆ ಬಹಳ ಸಮಯದಿಂದ ನಿಮಗೆ ಅನೇಕ ಕೆಲಸ ಕಾರ್ಯಗಳು ಕೈಗೂಡದೇ ಇದ್ದರೂ ಈ ತಿಂಗಳಲ್ಲಿ ಅವೆಲ್ಲಾ ಪೂರೈಸಲಿವೆ. ಶೀಘ್ರಸ್ಯ ಶೀಘ್ರ ಶುಭ ಸಮಾಚಾರ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಸೆಪ್ಟೆಂಬರ್ ಮಾಸದಲ್ಲಿ ನಿಮಗೆ ಪ್ರಬಲ ಯೋಗ ಒಲಿದುಬರಲಿದೆ. ಇದರಿಂದ ಆರ್ಥಿಕವಾಗಿ ನಿಮಗೆ ಅನೇಕ ಪ್ರಯೋಜನಗಳು ಲಭಿಸಲಿವೆ.

4. ಕನ್ಯಾ ರಾಶಿ Virgo: ಕನ್ಯಾ ರಾಶಿಯವರಿಗೆ ಉತ್ತಮ ಗ್ರಹ ಗೋಚರಗಳ ಫಲವಾಗಿ ಸೆಪ್ಟೆಂಬರ್ ಉತ್ತಮ ಆರ್ಥಿಕ ಮಾಸವಾಗಲಿದೆ. ಬಾಕಿ ಉಳಿದಿರುವ ಕೆಲಸ ಕಾರ್ಯಗಳೂ ಫಲಪ್ರದವಾಗಿ ನೆರವೇರಲಿವೆ. ಮನೆ, ಸೈಟು ಖರೀದಿ ಸೇರಿದಂತೆ ವ್ಯಾಪಾರದಲ್ಲಿಯೂ ಲಾಭ ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳಿಗೂ ಮುಂದಿನ ಸೆಪ್ಟೆಂಬರ್ ಉತ್ತಮ ಫಲಿತಾಂಶದ ತಿಂಗಳಾಗಲಿದೆ. ಕನ್ಯಾ ರಾಶಿಯವರಿಗೆ ಈ ತಿಂಗಳು ಅನುಕೂಲಕರವಾಗಲಿದೆ. ಅದೃಷ್ಟ ನಿಮ್ಮ ಕೈಹಿಡಿಯಲಿದೆ. ಒಟ್ಟು ಈ ಮಾಸವು ಸಫಲತೆ ತಂದುಕೊಡಲಿದೆ.

5. ವೃಶ್ಚಿಕ ರಾಶಿ Scorpio: ವೃಶ್ಚಿಕ ರಾಶಿಯವರಿಗೆ ಮುಂದಿನ ಸೆಪ್ಟೆಂಬರ್ ತಿಂಗಳು ತುಂಬಾ ಲಾಭದಾಯಕವಾಗಲಿದೆ. ನಿಮ್ಮ ಮನೆಯಲ್ಲಿ ಮಂಗಳಕಾರ್ಯ ನೆರವೇರಲಿದೆ. ನಿಮ್ಮ ಸಂಬಂಧಗಳು ಗಟ್ಟಿಯಾಗಲಿವೆ. ನಿಮಗೆ ಅಡ್ಡಗಾಲು ಹಾಕುತ್ತಿರುವ ತೊಂದರೆಗಳು ಮಂಜಿನಂತೆ ಕರಗಲಿವೆ.

(five big planets in september month will prove lucky for 5 zodiac signs)

Published On - 7:05 am, Fri, 27 August 21

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ