AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ಯಾವ ಬಣ್ಣ ಇಷ್ಟ ಎಂದು ನಿರ್ಧರಿಸುವ ವಿಚಾರ ಇದು; ಬೇಕಿದ್ದರೆ ಪರಿಶೀಲಿಸಿ ನೋಡಿ

ಭಾರತೀಯರು ನಂಬಿಕೆಗೆ ಹೆಚ್ಚು ಮಹತ್ವ ಕೊಡುವುದರಿಂದ ಕೆಲವೊಂದು ವಿಚಾರಗಳನ್ನು ಎಷ್ಟೆಂದರೂ ಕಡೆಗಣಿಸಲಾಗುವುದಿಲ್ಲ. ದೇವರು, ವಾಸ್ತು, ಅದೃಷ್ಟ ಸಂಖ್ಯೆ, ಅದೃಷ್ಟ ಬಣ್ಣ, ರಾಶಿ, ತಿಥಿ, ನಕ್ಷತ್ರ ಇತ್ಯಾದಿಗಳು ಬದುಕಿನ ಎಷ್ಟೋ ಕ್ಷಣಗಳನ್ನು ನಿರ್ಧರಿಸುತ್ತವೆ.

ನಿಮಗೆ ಯಾವ ಬಣ್ಣ ಇಷ್ಟ ಎಂದು ನಿರ್ಧರಿಸುವ ವಿಚಾರ ಇದು; ಬೇಕಿದ್ದರೆ ಪರಿಶೀಲಿಸಿ ನೋಡಿ
ಯಾವ ರಾಶಿಯವರಿಗೆ ಯಾವ ಬಣ್ಣ ಇಷ್ಟ?
TV9 Web
| Updated By: ಆಯೇಷಾ ಬಾನು|

Updated on:Aug 26, 2021 | 8:07 AM

Share

ನಮ್ಮ ಬದುಕಿನ ಮೇಲೆ ಯಾವೆಲ್ಲಾ ಅಂಶಗಳು ಪರಿಣಾಮ ಬೀರಬಹುದು ಎಂದು ಲೆಕ್ಕ ಹಾಕುತ್ತಾ ಕೂತರೆ ಒಬ್ಬೊಬ್ಬರಿಗೆ ಒಂದೊಂದು ತೆರನಾದ ಸಂಗತಿಗಳು ಕಾಣಿಸುತ್ತಾ ಹೋಗುತ್ತವೆ. ಜೀವನದ ಹಾದಿಯಲ್ಲಾದ ಅನುಭವ, ನೋಡಿ ಕಲಿತ ಪಾಠ, ನಂಬಿಕೆ ಹೀಗೆ ಎಲ್ಲವೂ ನಮ್ಮ ಮೇಲೆ ಗೊತ್ತೋ ಗೊತ್ತಿಲ್ಲದೆಯೋ ಪರಿಣಾಮ ಬೀರುತ್ತಲಿರುತ್ತವೆ. ಅದರಲ್ಲಿಯೂ ಭಾರತೀಯರು ನಂಬಿಕೆಗೆ ಹೆಚ್ಚು ಮಹತ್ವ ಕೊಡುವುದರಿಂದ ಕೆಲವೊಂದು ವಿಚಾರಗಳನ್ನು ಎಷ್ಟೆಂದರೂ ಕಡೆಗಣಿಸಲಾಗುವುದಿಲ್ಲ. ದೇವರು, ವಾಸ್ತು, ಅದೃಷ್ಟ ಸಂಖ್ಯೆ, ಅದೃಷ್ಟ ಬಣ್ಣ, ರಾಶಿ, ತಿಥಿ, ನಕ್ಷತ್ರ ಇತ್ಯಾದಿಗಳು ಬದುಕಿನ ಎಷ್ಟೋ ಕ್ಷಣಗಳನ್ನು ನಿರ್ಧರಿಸುತ್ತವೆ ಕೂಡಾ. ಹಾಗಿದ್ದರೆ ಬಣ್ಣದ ವಿಚಾರದಲ್ಲಿ ಯಾರಿಗೆ ಯಾವುದು ಅದೃಷ್ಟ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.

ಪೂರ್ವಜರು 12 ರಾಶಿಗಳಲ್ಲಿ 9 ಗ್ರಹವನ್ನು ವಿಂಗಡಿಸಿ ಆ ರಾಶಿಗೊಂದು ಅಧಿಪತಿ ಮಾಡಿ ಅದರದೇ ಆದ ಬಣ್ಣಗಳನ್ನು ವಿಂಗಡಿಸಿಟ್ಟಿದ್ದಾರೆ. ಅದರ ಪ್ರಕಾರವಾಗಿ ನೋಡಿದರೆ ಮೇಷ ಮತ್ತು ವೃಶ್ಚಿಕ ರಾಶಿಗೆ ಕುಜ ಅಧಿಪತಿಯಾದ್ದರಿಂದ ಕೆಂಪು ಬಣ್ಣ. ವೃಷಭ ಹಾಗೂ ತುಲಾ ರಾಶಿಗೆ ಶುಕ್ರ ಅಧಿಪತಿಯಾದ್ದರಿಂದ ಬಿಳಿ ಬಣ್ಣ. ಮಿಥುನ ಹಾಗೂ ಕನ್ಯಾ ರಾಶಿಗೆ ಬುಧ ಅಧಿಪತಿಯಾದ್ದರಿಂದ ಹಸಿರು ಬಣ್ಣ. ಕಟಕ ರಾಶಿಯ ಅಧಿಪತಿ ಚಂದ್ರ ಆಗಿರುವುದರಿಂದ ಬಿಳಿ ಬಣ್ಣ. ಸಿಂಹ ರಾಶಿಗೆ ರವಿ ಅಧಿಪತಿ ಆದ್ದರಿಂದ ಕೆಂಪು ಬಣ್ಣ. ಧನಸ್ಸು ಹಾಗೂ ಮೀನ ರಾಶಿಗೆ ಗುರು ಅಧಿಪತಿ ಆದ್ದರಿಂದ ಹಳದಿ ಬಣ್ಣ. ಮಕರ ಹಾಗೂ ಕುಂಭ ರಾಶಿಗೆ ಶನಿ ಅಧಿಪತಿಯಾಗಿರುವುದರಿಂದ ಕಪ್ಪು ಬಣ್ಣ ಎಂದು ಗುರುತಿಸಲಾಗಿದೆ.

ಸಿಂಹ ರಾಶಿಯ ಅಧಿಪತಿ ರವಿ ಆಗಿದ್ದು ಇದರ ಬಣ್ಣ ಕೆಂಪು ಆಗಿರುವುದರಿಂದ ಅವರು ಕೆಂಪು ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾರೆ. ಸಿಂಹ ರಾಶಿಯವರು ಹೆಚ್ಚು ಉತ್ಸಾಹದಿಂದ ಇರುವವರಾಗಿದ್ದು, ಯಾವುದೇ ವಿಚಾರವನ್ನು ಬೇಗ ಗ್ರಹಿಸುತ್ತಾರೆ. ಆದರೆ, ಸಿಂಹ ರಾಶಿಯವರಿಗೆ ಕಪ್ಪು ಬಣ್ಣವೆಂದರೆ ಕೊಂಚ ದೂರ. ರವಿಗೆ ಶನಿಯು ಶತ್ರುವಾಗಿದ್ದು ಸಿಂಹ ರಾಶಿಯವರು ಕಪ್ಪು ಬಣ್ಣದ ಬಟ್ಟೆ, ವಸ್ತುಗಳನ್ನು ಉಪಯೋಗಿಸದೇ ಇರುವುದು ಉತ್ತಮ.

ಕಟಕ, ವೃಷಭ ಮತ್ತು ತುಲಾ ರಾಶಿಯವರು ಬಿಳಿ ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾರೆ. ಅವರು ಬಿಳಿ ಬಣ್ಣದ ಬಟ್ಟೆ ಧರಿಸಿದರೆ ಸಹಜವಾಗಿಯೇ ಹೆಚ್ಚು ಆಕರ್ಷಿತರಾಗಿ ಕಾಣುತ್ತಾರೆ. ಅವರು ಸಾತ್ವಿಕ ಸ್ವಭಾವದವರಾಗಿದ್ದು, ಕಪ್ಪು ಬಟ್ಟೆಯನ್ನು ಧರಿಸದೇ ಇರುವುದು ಒಳಿತು.

ಮಿಥುನ ಹಾಗೂ ಕನ್ಯಾ ರಾಶಿಯವರು ಹಸಿರು ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರುಬದುಕಿನಲ್ಲಿ ಹೆಚ್ಚು ಭರವಸೆಯನ್ನು ಇಟ್ಟುಕೊಂಡ ವ್ಯಕ್ತಿಗಳಾಗಿದ್ದು, ಸದಾ ಹೊಸತನದತ್ತ ತೆರೆದುಕೊಳ್ಳುತ್ತಿರುತ್ತಾರೆ. ಈ ರಾಶಿಯ ಅಧಿಪತಿ ಬುಧನಾಗಿದ್ದು ಚಂದ್ರನಿಗೆ ಶತ್ರುವೆಂದು ಪರಿಗಣಿಸಲ್ಪಟ್ಟಿರುವುದರಿಂದ ಬಿಳಿ ಬಣ್ಣ ಉಪಯೋಗಿಸದೇ ಇರುವುದು ಉತ್ತಮ.

ಧನಸ್ಸು ಮತ್ತು ಮೀನ ರಾಶಿಯವರು ಹಳದಿ ಬಣ್ಣವನ್ನು ಹೆಚ್ಚು ಇಷ್ಟ ಪಡುತ್ತಾರೆ. ಅವರಿಗೆ ನೀಲಿ, ಹಸಿರು ಬಣ್ಣ ಅಷ್ಟಕಷ್ಟೇ ಆಗಿದ್ದು, ಆ ಬಣ್ಣವನ್ನು ಉಪಯೋಗಿಸದೇ ಇರುವುದು ಉತ್ತಮ.

ಮಕರ ಹಾಗೂ ಕುಂಭ ರಾಶಿಯವರು ಕಪ್ಪು ಬಣ್ಣವನ್ನು ಇಷ್ಟಪಡುತ್ತಾರೆ. ಬೇರೆಯವರೆಲ್ಲರೂ ಕಪ್ಪನ್ನು ಅಶುಭವೆಂದು ಭಾವಿಸಿದರೂ ಇವರು ಮಾತ್ರ ಕಪ್ಪು ಬಣ್ಣದೆಡೆಗೆ ಹೆಚ್ಚು ಆಕರ್ಷಿತರಾಗಿರುತ್ತಾರೆ. ಈ ರಾಶಿಯವರಿಗೆ ಬಿಳಿ ಬಣ್ಣವೆಂದರೆ ಅಷ್ಟಾಗಿ ಕೂಡಿಬರುವುದಿಲ್ಲ. ಹೀಗಾಗಿ ಬಿಳಿ ಬಣ್ಣದಿಂದ ದೂರ ಇದ್ದಷ್ಟೂ ಅವರಿಗೆ ಒಳ್ಳೆಯದು.

ಇದನ್ನೂ ಓದಿ: ಈ ಎರಡು ರಾಶಿಯ ಜನ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣುತ್ತಾರೆ! ಅವರ ನಿಜ ವಯಸ್ಸು ತಿಳಿದು ಜನ ಹೌಹಾರುತ್ತಾರೆ! 

ಈ ನಾಲ್ಕು ರಾಶಿಯವರು ಪ್ರತಿ ಹೆಜ್ಜೆಯಲ್ಲಿಯೂ ಶ್ರಮ ಜೀವನ ನಡೆಸುತ್ತಾ, ಕೊನೆಗೆ ಗುರಿ ತಲುಪುತ್ತಾರೆ! ಯಾರವರು?

(Your Zodiac sign decides your Favourite Color check once to know)

Published On - 8:07 am, Thu, 26 August 21

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?