AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಎರಡು ರಾಶಿಯ ಜನ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣುತ್ತಾರೆ! ಅವರ ನಿಜ ವಯಸ್ಸು ತಿಳಿದು ಜನ ಹೌಹಾರುತ್ತಾರೆ!

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹವನ್ನು ತುಂಬಾ ಮಂಗಳಕರ ಎಂದು ಪರಗಣಿಸಲಾಗಿದೆ. ಯಾರ ಕುಂಡಲಿಯಲ್ಲಿ ಬುಧ ಮಜಬೂತಾಗಿ ಇರುತ್ತಾನೋ ಆ ವ್ಯಕ್ತಿ ಕುಶಾಗ್ರಮತಿಯಾಗಿ ಜನರನ್ನು ತುಂಬಾ ಪ್ರಭಾವಿರತಾಗಿಸುತ್ತಾರೆ.

ಈ ಎರಡು ರಾಶಿಯ ಜನ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣುತ್ತಾರೆ! ಅವರ ನಿಜ ವಯಸ್ಸು ತಿಳಿದು ಜನ ಹೌಹಾರುತ್ತಾರೆ!
ಈ ಎರಡು ರಾಶಿಯ ಜನ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣುತ್ತಾರೆ! ಅವರ ನಿಜ ವಯಸ್ಸು ತಿಳಿದು ಜನ ಹೌಹಾರುತ್ತಾರೆ!
TV9 Web
| Updated By: ಆಯೇಷಾ ಬಾನು|

Updated on:Aug 25, 2021 | 7:21 AM

Share

ಆ ಎರಡು ರಾಶಿಯ ಜನ ಇದ್ದಾರೆ. ಅವರು ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣುತ್ತಾರೆ! ಅವರ ನಿಜ ವಯಸ್ಸು ತಿಳಿದು ಜನ ಹೌಹಾರುತ್ತಾರೆ! ಆ ಎರಡು ರಾಶಿಯ ವ್ಯಕ್ತಿಗಳ ಮೇಲೆ ಬುಧ ಗ್ರಹದ ವಿಶೇಷ ಪ್ರಭಾವ ಇರುತ್ತದೆ. ಈ ಎರಡು ರಾಶಿಯ ಜನ ತಿಳಿವಳಿಕೆಯಲ್ಲಿ ಕುಶಾಗ್ರಮತಿಗಳಾಗಿರುತ್ತಾರೆ. ನೋಡಿದರೆ ನಿಜಕ್ಕೂ ತಮ್ಮ ನಿಜ ವಯಸ್ಸಿಗಿಂತ ಚಿಕ್ಕವರಾಗಿ ಕಾಣುತ್ತಾರೆ. ಅವರ ವಯಸ್ಸನ್ನು ಸುಲಭವಾಗಿ ಅಂದಾಜಿಸಲು ಸಾಧ್ಯವಾಗದು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹವನ್ನು ತುಂಬಾ ಮಂಗಳಕರ ಎಂದು ಪರಗಣಿಸಲಾಗಿದೆ. ಯಾರ ಕುಂಡಲಿಯಲ್ಲಿ ಬುಧ ಮಜಬೂತಾಗಿ ಇರುತ್ತಾನೋ ಆ ವ್ಯಕ್ತಿ ಕುಶಾಗ್ರಮತಿಯಾಗಿ ಜನರನ್ನು ತುಂಬಾ ಪ್ರಭಾವಿರತಾಗಿಸುತ್ತಾರೆ.

ಕನ್ಯಾ ಮತ್ತು ಮಿಥುನ ರಾಶಿಯ ಜನ ಈ ಅರ್ಹತೆಗೆ ಪಾತ್ರರಾಗುತ್ತಾರೆ. ಏಕೆಂದರೆ ಈ ರಾಶಿಯ ಅಧಿಪತಿ ಬುಧ ಗ್ರಹ ಆಗಿರುತ್ತದೆ. ಈ ರಾಶಿಯ ಜನ ಜೀವನದಲ್ಲಿ ತುಂಬಾ ಫಲ ಉಣ್ಣುತ್ತಾರೆ. ಹಾಗಾದರೆ ಈ ರಾಶಿಯ ಜನರ ಸ್ವಭಾವ ಮತ್ತು ವ್ಯಕ್ತಿತ್ವವನ್ನು ತಿಳಿದುಕೊಳ್ಳೋಣ ಬನ್ನೀ.

1. ಮಿಥುನ ರಾಶಿ Gemini: ಮಿಥುನ ರಾಶಿ ಜನ ಆತ್ಮೀಯರು, ಸ್ಮೇಹಪರರೂ ಆಗಿರುತ್ತಾರೆ. ಮಾತುಕತೆಯಲ್ಲಿ ತುಂಬಾ ಫಾಸ್ಟ್​ ಆಗಿರುತ್ತಾರೆ. ಇವರು ತಮ್ಮ ಮಾತಿನಲ್ಲಿಯೇ ಎಂಥವರನ್ನುಬೇಕಾದರೂ ತಮ್ಮ ವಶ ಮಾಡಿಕೊಳ್ಳುತ್ತಾರೆ. ಇವರ ವ್ಯಕ್ತಿತ್ವವನ್ನು ನೋಡಿ ಸುಲಭವಾಗಿ ಜನ ಇವರ ಮೇಲೆ ವಿಶ್ವಾಸವಿಡುತ್ತಾರೆ, ಭರವಸೆಯಿಡುತ್ತಾರೆ. ಇವರ ಮಾತೂ ಹಾಗೆಯೇ ಪಕ್ಕಾ ಆಗಿರುತ್ತದೆ, ಸತ್ಯಕ್ಕೆ ಹತ್ತಿರವಿರುತ್ತದೆ. ತಾವು ಏನಾದರೂ ಮಾತು ಕೊಟ್ಟರೆ ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ. ತಮ್ಮ ಮಾತಿನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಇದರಿಂದಲೇ ಇವರು ಯಶಸ್ವಿ ಜನ ಅನ್ನಿಸಿಕೊಳ್ಳುತ್ತಾರೆ.

ಆದರೆ ಇವರ ವ್ಯಕ್ತಿತ್ವದಲ್ಲಿನ ದೋಷವೆಂದರೆ ಇವರು ತಮ್ಮ ಯಾವುದೇ ಒಂದು ವಿಷಯಕ್ಕೆ ಅಂಟಿಕೊಳ್ಳುವುದಿಲ್ಲ. ತಮ್ಮ ಮಾತನ್ನು ಬದಲಿಸುತ್ತಾ ಇರುತ್ತಾರೆ. ಒಂದೇ ವಿಷಯವನ್ನು ಎರಡು ರೂಪದಲ್ಲಿ ನೋಡುತ್ತಾರೆ. ಹಾಗಾಗಿ ಇವರು ಭ್ರಮಾಲೋಕದಲ್ಲಿ ಹೆಚ್ಚು ವಿಹರಿಸುತ್ತಾ ಇರುತ್ತಾರೆ. ಹಾಗಾಗಿ ಯಾವುದೇ ಖಚಿತ ನಿರ್ಧಾರಕ್ಕೆ ಬರಲಾರರು. ಆದರೆ ಇವರಲ್ಲಿ ಅಂತಃಸತ್ವ ಬಲಾಢ್ಯವಾಗಿರುತ್ತದೆ. ಅದು ದೇವರು ಕೊಟ್ಟ ವರವೇ ಸರಿ. ಈ ರಾಶಿಯ ಜನ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣುತ್ತಾರೆ!

2. ಕನ್ಯಾ ರಾಶಿ Virgo: ಕನ್ಯಾ ರಾಶಿ ಜನ ತುಂಬಾ ಶ್ರಮಜೀವಿಗಳು ಆಗಿರುತ್ತಾರೆ. ಜೀವನದಲ್ಲಿ ತುಂಬಾ ಶಿಸ್ತು ಮತ್ತು ವ್ಯವಸ್ಥಿತವಾಗಿರುತ್ತಾರೆ. ಇವರು ಏನೇ ಮಾಡಿದರೂ ತಮ್ಮತ್ತಲೇ ಕೇಂದ್ರೀಕರಿಸಿಕೊಂಡು ಶ್ರಮ ಹಾಕುತ್ತಾರೆ. ಇವರಲ್ಲಿ ನಾಯಕತ್ವದ ಗುಣಗಳು ಅದ್ಭುತವಾಗಿರುತ್ತದೆ. ಒಳ್ಳೇಯ ಮಾತುಗಾರರೂ ಆಗಿರುತ್ತಾರೆ. ಇವರ ಮಾತಿನಲ್ಲಿ ಮಂತ್ರಮುಗ್ಧಗೊಳಿಸುತ್ತಾರೆ. ಸುಲಭವಾಗಿ ಎದುರಿಗಿನ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತಾರೆ. ತಮ್ಮ ಪರಿಶ್ರಮದಿಂದಾಗಿ ಜೀವನದಲ್ಲಿ ಅಪಾರ ಸಾಧನೆ ಮಾಡುತ್ತಾರೆ. ಜೀವನದಲ್ಲಿ ಎಲ್ಲಾ ಸುಖ ಭೋಗಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇವರ ವ್ಯಾವಹಾರಿಕ ಗುಣ ಸ್ವಭಾವ ಇವರ ಶಕ್ತಿಯಾಗಿರುತ್ತದೆ. ಕನ್ಯಾ ರಾಶಿಯ ಜನ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣುತ್ತಾರೆ!

(people of these 2 zodiac signs look much younger than their age)

Published On - 7:18 am, Wed, 25 August 21

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ