ಈ ನಾಲ್ಕು ರಾಶಿಯವರು ಪ್ರತಿ ಹೆಜ್ಜೆಯಲ್ಲಿಯೂ ಶ್ರಮ ಜೀವನ ನಡೆಸುತ್ತಾ, ಕೊನೆಗೆ ಗುರಿ ತಲುಪುತ್ತಾರೆ! ಯಾರವರು?
ಯಾವುದೇ ವ್ಯಕ್ತಿಯಲ್ಲಾಗಲಿ ಅನೇಕ ಗುಣಾವಗುಣಗಳು ಮನೆ ಮಾಡಿರುತ್ತವೆ. ಅವರವರದೇ ಆದ ಕಾರ್ಯಕ್ಷಮತೆ ಹೊಂದಿರುತ್ತಾರೆ. ಕೆಲವರಿಗೆ ಏನೂ ಕಷ್ಟಪಡದೆ ಅನಾಯಾಸವಾಗಿ ಎಲ್ಲವನ್ನೂ ಗಳಿಸಿಬಿಡುತ್ತಾರೆ. ಜನ್ಮತಃ ಭಾಗ್ಯಾಶಾಲಿಗಳಾಗಿರುತ್ತಾರೆ. ಅಂತಹವರಿಗೆ ಅಂದುಕೊಂಡಿದ್ದೆಲ್ಲ ದಕ್ಕಿಬಿಡುತ್ತದೆ.
ನಾಲ್ಕು ರಾಶಿಯವರು ಪ್ರತಿ ಹೆಜ್ಜೆಯಲ್ಲಿಯೂ ಶ್ರಮ ಹಾಕಿ ಜೀವನ ನಡೆಸುತ್ತಾರೆ. ಆದರೆ ಕೊನೆಗೆ ವಿಜಯ ಸಾಧಿಸಿ, ನಿಟ್ಟುಸಿರುಬಿಡುತ್ತಾರೆ. ಕೆಲವರು ಜೀವನದುದ್ದಕ್ಕೂ ಕಷ್ಟಪಡುತ್ತಾರೆ. ಅದರಿಂದ ಅವರು ಎಷ್ಟು ಮಜಭೂತರಾಗುತ್ತಾರೆ ಅಂದರೆ ಮುಂದೆ ಅವರು ಏನು ಬೇಕಾದರೂ ಸಾಧಿಸಿಬಿಡುತ್ತಾರೆ. ಕಷ್ಟಕರ ಪರಿಸ್ಥಿತಿಗಳಲ್ಲಿ ಜೀವನ ಎದುರಿಸುವುದನ್ನು ಕಲಿತಿರುತ್ತಾರೆ. ಹೀಗೆ ನಾಲ್ಕು ರಾಶಿಯ ಜನ ತಮ್ಮ ಜೀವನವನ್ನು ಕಷ್ಟಪಟ್ಟು ದೂಡುತ್ತಾ, ಅಗಾಧ ಸಾಧನೆ ಮಾಡುತ್ತಾರೆ.
ಯಾವುದೇ ವ್ಯಕ್ತಿಯಲ್ಲಾಗಲಿ ಅನೇಕ ಗುಣಾವಗುಣಗಳು ಮನೆ ಮಾಡಿರುತ್ತವೆ. ಅವರವರದೇ ಆದ ಕಾರ್ಯಕ್ಷಮತೆ ಹೊಂದಿರುತ್ತಾರೆ. ಕೆಲವರಿಗೆ ಏನೂ ಕಷ್ಟಪಡದೆ ಅನಾಯಾಸವಾಗಿ ಎಲ್ಲವನ್ನೂ ಗಳಿಸಿಬಿಡುತ್ತಾರೆ. ಜನ್ಮತಃ ಭಾಗ್ಯಾಶಾಲಿಗಳಾಗಿರುತ್ತಾರೆ. ಅಂತಹವರಿಗೆ ಅಂದುಕೊಂಡಿದ್ದೆಲ್ಲ ದಕ್ಕಿಬಿಡುತ್ತದೆ.
ಆದರೆ ಕೆಲವರಿಗೆ ಪ್ರತಿ ಹೆಜ್ಜೆಯಲ್ಲೂ ಕಷ್ಟದ ಜೀವನವಾಗಿಬಿಟ್ಟಿರುತ್ತದೆ. ಆದರೆ ಇವರು ಕಷ್ಟಪಟ್ಟು ಎಷ್ಟು ಗಟ್ಟಿಯಾಗುತ್ತಾರೆ ಅಂದರೆ ಮುಂದೆ ಏನೇ ಬರಿ ಎಲ್ಲವನ್ನೂ ಸಾಧಿಸಿ ಗಳಿಸುತ್ತಾರೆ. ಏಕೆಂದರೆ ಜೀವನದ ವಿಪರೀತ ಘಳಿಗೆಗಳನ್ನುಅವರು ಎದುರಿಸಿ, ಧೈರ್ಯ ತಂದುಕೊಂಡಿರುತ್ತಾರೆ. ಇಂತಹವರು ಕಠಿಣ ಪರಿಶ್ರಮದಿಂದ ತಮ್ಮ ಭಾಗ್ಯವನ್ನು ತಾವೇ ಬರೆದುಕೊಳ್ಳುತ್ತಾರೆ. ಕೊನೆಗೆ ಜೀವನದ ಶಿಖರವನ್ನು ತಲುಪುತ್ತಾರೆ. ಬನ್ನೀ ಹಾಗಾದರೆ ಈ ನಾಲ್ಕು ರಾಶಿಯ ಜನ ಸಂಘರ್ಷ ಜೀವನ ನಡೆಸಿ ಮುನ್ನಡೆಯುತ್ತಾರೆ. ಯಾವುದೇ ಸಂದರ್ಭದಲ್ಲಿಯೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ.
1. ಮಿಥುನ ರಾಶಿ Gemini: ಮಿಥುನ ರಾಶಿ ಜನ ಬಹಳ ಶ್ರಮಜೀವಿಗಳಾಗಿರುತ್ತಾರೆ. ಆದರೆ ಕುಶಾಗ್ರಮತಿ ಆಗಿರುತ್ತಾರೆ. ಇವರು ಜೀವನದಲ್ಲಿ ಬಹಳ ಸಂಘರ್ಷ ನಡೆಸುತ್ತಾರೆ. ಆದರೆ ಅವರು ಎಂದಿಗೂ ಎದಗುಂದುವುದಿಲ್ಲ; ನಿರಾಶರಾಗುವುದಿಲ್ಲ. ಆದರೆ ಜೀವನದಲ್ಲಿ ಕಲಿಯುತ್ತಾ ಸಾಗುತ್ತಾರೆ. ಅದನ್ನು ಉಚಿತ ರೀತಿಯಲ್ಲಿ ಬಳಕೆ ಮಾಡುತ್ತಾ, ಸಾಧನೆ ಮಾಡುತ್ತಾ ಸಾಗುತ್ತಾರೆ. ತಮ್ಮಗುರಿ ಸಾಧನೆಯ ಬಳಿಕವಷ್ಟೇ ವಿಶ್ರಮಿಸುತ್ತಾರೆ.
2. ತುಲಾ ರಾಶಿ Libra: ತುಲಾ ರಾಶಿಯ ಜನರೂ ಸಹ ಜೀವನದಲ್ಲಿ ಅನೇಕ ತರಹದ ಕಷ್ಟಗಳನ್ನು ಎದುರಿಸುತ್ತಾರೆ. ಆದರೆ ಅವರು ಖಡಕ್ಕಾಗಿರುತ್ತಾರೆ. ಪರಿಶ್ರಮ ಹಾಕುವಲ್ಲಿ ಹಿಂಜರಿಯುವುದಿಲ್ಲ. ಇವರನ್ನು ಇತರರು ಅನೇಕ ಬಾರಿ ತಪ್ಪಾಗಿ ತಿಳಿಯುತ್ತಾರೆ. ಆದರೆ ಇವರು ಹೃದಯದಲ್ಲಿ ಸ್ವಚ್ಛವಾಗಿರುತ್ತಾರೆ. ಶಾಸನಬದ್ಧವಾಗಿ, ಶಾಸ್ತ್ರೋಕ್ತವಾಗಿ ನಡೆದುಕೊಳ್ಳುತ್ತಾರೆ. ದೃಢ ಇಚ್ಛಾಶಕ್ತಿಯಿಂದ ತಮ್ಮ ಗುರಿ ಸಾಧನೆ ಮಾಡಿಕೊಳ್ಳುತ್ತಾರೆ.
3. ಧನು ರಾಶಿ Sagittarius : ಧನು ರಾಶಿಯ ಜನ ಬಹಳಷ್ಟು ಚಿಂತನೆ ನಡೆಸುತ್ತಾರೆ. ಇವರ ಕನಸುಗಳು ದೊಡ್ಡದಾಗಿರುತ್ತವೆ. ಹಾಗಾಗಿಯೇ ಇವರು ಸಣ್ಣಪುಟ್ಟ ಸಾಫಲ್ಯಗಳಿಂದ ತೃಪ್ತರಾಗುವುದಿಲ್ಲ. ಸ್ವಯಂ ತಾವೇ ಉತ್ತೇಜಿತರಾಗಿ ಮಹತ್ತರ ಸಾಧನೆಗೆ ಅಣಿಯಾಗಿಬಿಡುತ್ತಾರೆ. ಇವರು ಜೀವನದ ಸಾರ್ಥಕತೆಯನ್ನು ಚೆನ್ನಾಗಿ ಬಲ್ಲವರಾಗಿರುತ್ತಾರೆ. ಹಾಗಾಗಿಯೇ ಯಾವುದೇ ಕೆಲಸ ಪ್ರಾರಂಭಿಸಿದರೂ ಸಂಪೂರ್ಣವಾಗಿ ಮತ್ತು ಸಕಾರಾತ್ಮಕವಾಗಿ ತೊಡಗಿಸಿಕೊಳ್ಳುತ್ತಾರೆ. ಇವರಿಗೆ ಭಗವಂತನ ಮೇಲೆ ಹೆಚ್ಚು ಭಯ-ಭಕ್ತಿ, ವಿಶ್ವಾಸವಿರುತ್ತದೆ. ಹಾಗಾಗಿ ಕೊನೆಗೆ ಜಯಶಾಲಿಗಳಾಗುತ್ತಾರೆ.
4. ಮಕರ ರಾಶಿ Capricorn : ಮಕರ ರಾಶಿಯ ಜನ ಸಂಘರ್ಷಶೀಲರಾಗಿರುತ್ತಾರೆ. ಅವರು ತಮ್ಮ ಕರ್ಮದಂತೆ ನಡೆಯುತ್ತಾರೆ. ಹೆಚ್ಚು ಶಕ್ತಿಶಾಲಿಗಳು, ತೇಜಸ್ಸು ಉಳ್ಳವರಾಗಿದ್ದರೂ ಸ್ವಲ್ಪವೇ ಆಲಸ್ಯದಿಂದಾಗಿ ಜೀವನದಲ್ಲಿ ಹಿನ್ನಡೆ ಸಾಧಿಸುತ್ತಾರೆ. ಸುಲಭವಾಗಿ ಸಾಧಿಸಬಹುದಾಗಿರುವುದನ್ನೂ ಕಷ್ಟಪಟ್ಟು, ಬಹಳ ಶ್ರಮ ಹಾಕಿ ಸಾಧಿಸುತ್ತಾರೆ. ಆದರೆ ಇವರಿಗೆ ಸೂಕ್ತ ಗುರು, ಮಾರ್ಗದರ್ಶಕ ಸಿಕ್ಕಿದರೆ ನಿಶ್ಚಿತವಾಗಿಯೂ ಇವರು ಅಗಾಧವಾದುದನ್ನೇ ಸಾಧಿಸಿಬಿಡುತ್ತಾರೆ.
(people from these 4 zodiac signs fight hard to achieve in spite good efforts)