Sankashti Chaturthi 2021: ಶ್ರಾವಣ ಮಾಸದ ಸಂಕಷ್ಟ ಚತುರ್ಥಿಯನ್ನು ಆಚರಿಸುವುದು ಹೇಗೆ?

ಪ್ರತಿ ತಿಂಗಳು ಬರುವ ಚತುರ್ಥಿಗೆ ತನ್ನದೇ ಆದ ಮಹತ್ವವಿದೆ. ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿಯೆಂದು ಮತ್ತು ಅಮಾವಾಸ್ಯ ನಂತರ ಬರುವ ಚತುರ್ಥಿಯನ್ನು ವಿನಾಯಕ ಚತುರ್ಥಿಯೆಂದು ಕರೆಯುತ್ತಾರೆ.

Sankashti Chaturthi 2021: ಶ್ರಾವಣ ಮಾಸದ ಸಂಕಷ್ಟ ಚತುರ್ಥಿಯನ್ನು ಆಚರಿಸುವುದು ಹೇಗೆ?
ಗಣೇಶ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 07, 2021 | 4:55 PM

ಶ್ರಾವಣ ಮಾಸವೇ(Shravana Masa) ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ಮಾಸ. ಈ ಮಾಸ ಮಾಡುವ ಉಪವಾಸಗಳು, ವ್ರತಗಳು ಹೆಚ್ಚಿನ ಫಲ ನೀಡುತ್ತವೆ. ಈ ಮಾಸದಲ್ಲಿ ಬರುವ ಸಂಕಷ್ಟ ಚತುರ್ಥಿ(Sankashti Chaturthi 2021) ತನ್ನದೇ ಆದ ಮಹತ್ವ ಹೊಂದಿದೆ. ಸಂಕಷ್ಟ ಚತುರ್ಥಿಯನ್ನು ಕೆಲವು ಕಡೆ ಬಹುಳಾ ಚತುರ್ಥಿ ಎಂದೂ ಸಹ ಕರೆಯಲಾಗುತ್ತೆ. ಈ ದಿನ ಸಂಕಷ್ಟ ಹರ ಗಣೇಶನನ್ನು(Lord Ganesha) ಪೂಜಿಸುವುದರಿಂದ ನಿಮಗೆ ಎದುರಾಗುವ ಎಲ್ಲಾ ವಿಘ್ನವನ್ನು ಗಣೇಶ ಪರಿಹರಿಸುತ್ತಾನೆ. ಹಾಗೂ ಸರ್ವ ಸಿದ್ಧಿ ಯೋಗ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ನೀವು ಮಾಡುತ್ತಿರುವಂತಹ ಕೆಲಸಗಳಲ್ಲಿ ವಿಘ್ನಗಳು ಬರುತ್ತಿದ್ದರೆ ಈ ವ್ರತ ಮಾಡುವುದರಿಂದ ಅಡೆ-ತಡೆ ದೂರವಾಗಿ ಕೆಲಸ ಸರಾಗವಾಗುತ್ತದೆ.

ಸಂಕಷ್ಟ ಚತುರ್ಥಿ ಸಮಯ? ಆಗಸ್ಟ್ 25 ರಂದು ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಇದನ್ನು ಬಹುಳಾ ಅಥವಾ ಹೇರಂಬ ಸಂಕಷ್ಟಿ ಚತುರ್ಥಿ ಎಂದೂ ಸಹ ಕರೆಯುತ್ತಾರೆ. ಸಂಕಷ್ಟ ಚತುರ್ಥಿ ಆಗಸ್ಟ್ 25ರ ಸಂಜೆ 4:18 ಕ್ಕೆ ಆರಂಭವಾಗಿ ಮರುದಿನ ಅಂದರೆ 26 ಆಗಸ್ಟ್ 5:13 ಕ್ಕೆ ಕೊನೆಗೊಳ್ಳುತ್ತದೆ.

ಸಂಕಷ್ಟಿ ಚತುರ್ಥಿಯ ಮಹತ್ವ ಪ್ರತಿ ತಿಂಗಳು ಬರುವ ಚತುರ್ಥಿಗೆ ತನ್ನದೇ ಆದ ಮಹತ್ವವಿದೆ. ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿಯೆಂದು ಮತ್ತು ಅಮಾವಾಸ್ಯ ನಂತರ ಬರುವ ಚತುರ್ಥಿಯನ್ನು ವಿನಾಯಕ ಚತುರ್ಥಿಯೆಂದು ಕರೆಯುತ್ತಾರೆ. ಧಾರ್ಮಿಕ ನಂಬಿಕೆಯ ಪ್ರಕಾರ, ಸಂಕಷ್ಟ ಚತುರ್ಥಿಯಂದು ಪೂಜೆ ಮತ್ತು ಉಪವಾಸವನ್ನು ಮಾಡುವುದರಿಂದ ಸಂಕಷ್ಟ ಪರಿಹಾರವಾಗಿ ಮಕ್ಕಳ ದೀರ್ಘಾಯುಷ್ಯ, ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಯಾರು ಸಂಕಷ್ಟ ಚತುರ್ಥಿಯಂದು ಗಣಪತಿಯನ್ನು ಪೂಜಿಸುತ್ತಾರೋ ಅವರ ವಿಘ್ನಗಳು ದೂರವಾಗಿ ಅವರ ಆಸೆಗಳು ಪೂರೈಸುತ್ತದೆ. ಹಾಗೂ ವಿಶೇಷವಾಗಿ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ದೂರವಾಗುತ್ತವೆ.

ಈ ದಿನ ಉಪವಾಸವಿದ್ದು ಗಣೇಶನನ್ನು ಪೂಜಿಸಲಾಗುತ್ತೆ. ಗಣೇಶ ಮಂತ್ರವನ್ನು ಪಠಿಸುತ್ತಾರೆ. ಈ ದಿನ, ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ನಂತರ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಬಳಿಕ ಗಣೇಶನಿಗೆ ಬಿಳಿ ಅಥವಾ ಕೆಂಪು ಹೂವುಗಳನ್ನು ಅರ್ಪಿಸಿ ಪೂಜೆ ಮಾಡಲಾಗುತ್ತದೆ.

ಇದನ್ನೂ ಓದಿ: Shravana Putrada Ekadashi Vrat: ಶ್ರಾವಣ ಪುತ್ರ ಏಕಾದಶಿ ವ್ರತ ಮಾಡುವುದು ಹೇಗೆ?

Published On - 7:43 am, Mon, 23 August 21