Shravana Putrada Ekadashi Vrat: ಶ್ರಾವಣ ಪುತ್ರ ಏಕಾದಶಿ ವ್ರತ ಮಾಡುವುದು ಹೇಗೆ?
ಶ್ರಾವಣದ ಏಕಾದಶಿ ತಿಥಿಯಂದು ಉಪವಾಸವನ್ನು ಮಾಡಿದರೆ ಹಿಂದಿನ ಪಾಪಗಳಿಂದ ಮುಕ್ತಿ ಹೊಂದಬಹುದು ಎಂದು ಋಷಿ ತಿಳಿಸುತ್ತಾರೆ. ಇಷ್ಟೆಲ್ಲ ಆದ ಬಳಿಕ ಋಷಿ ಹೇಳಿದಂತೆ ಉಪವಾಸ ಮಾಡಿದ ಮೇಲೆ ರಾಜನಿಗೆ ಪುತ್ರ ಭಾಗ್ಯ ಕಲ್ಪಿಸುತ್ತದೆ ಎಂಬ ಕಥೆ ಪುರಾಣದಲ್ಲಿದೆ.
ಶ್ರಾವಣ ಮಾಸದ ಏಕಾದಶಿ ತಿಥಿ, ಶುಕ್ಲ ಪಕ್ಷದಂದು ಉಪವಾಸವನಿಟ್ಟು ಆಚರಿಸುವ ವ್ರತವೇ ಶ್ರಾವಣ ಪುತ್ರ ಏಕಾದಶಿ ವ್ರತ. ಇದು ಆಗಸ್ಟ್ 8ರಂದು ಆಚರಿಸಲಾಗುತ್ತದೆ. ಭಗವಾನ್ ವಿಷ್ಣುವಿನ(Lord Vishnu) ಭಕ್ತರು ನಿನ್ನೆ ಅಂದರೆ ದಶಮಿ ತಿಥಿ, ಶ್ರಾವಣ, ಶುಕ್ಲ ಪಕ್ಷದ ರಾತ್ರಿ ತಮ್ಮ ಏಕಾದಶಿ ವ್ರತವನ್ನು ಆರಂಭಿಸುತ್ತಾರೆ, ಇದು ದಶಮಿ ತಿಥಿಯ ಬೆಳಗಿನವರೆಗೂ ಈ ವ್ರತ ಮುಂದುವರಿಯುತ್ತದೆ. ಕುತೂಹಲವೆಂದರೆ, ಪ್ರತಿ ಏಕಾದಶಿ ವ್ರತವು ಒಂದು ನಿರ್ದಿಷ್ಟ ಕಥೆಯನ್ನು, ಮಹತ್ವವನ್ನು ಹೊಂದಿದೆ. ಆದ್ದರಿಂದ, ಇಂದು ನಾವು ನಿಮಗೆ ಶ್ರಾವಣ ಪುತ್ರದ ಏಕಾದಶಿ ವ್ರತದ ಬಗೆಗಿನ ಕೆಲವು ಸಂಗತಿಗಳನ್ನು ತಿಳಿಸಲಿದ್ದೇವೆ.
ಶ್ರಾವಣ ಪುತ್ರ ಏಕಾದಶಿ ವ್ರತ ಶ್ರಾವಣ ಪುತ್ರ ಏಕಾದಶಿಯ ಈ ದಂತಕಥೆಯು ದ್ವಾಪರ ಯುಗದಲ್ಲಿ ಪ್ರಾರಂಭವಾಯಿತು, ಮಹಿಜಿತ್ ಎಂಬ ರಾಜನು ಮಹಿಷ್ಮತಿ ಎಂಬ ರಾಜ್ಯವನ್ನು ಆಳುತ್ತಿದ್ದ. ಆತ ಜನರು ಕಂಡ ಅತ್ಯುತ್ತಮ ಆಡಳಿತಗಾರರಲ್ಲಿ ಒಬ್ಬನಾಗಿದ್ದ. ಆತ ದಯೆ, ಸಹಾನುಭೂತಿ, ಜವಾಬ್ದಾರಿ ಮತ್ತು ಉದಾರ ಆಡಳಿತಗಾರನಾಗಿದ್ದ. ಆತನ ನಾಯಕತ್ವದಲ್ಲಿ, ಅವರ ಪ್ರಜೆಗಳು ಸುರಕ್ಷಿತ ಮತ್ತು ನೆಮ್ಮದಿಯಿಂದಿದ್ದರು. ಆದ್ರೆ ರಾಜನು ಮಕ್ಕಳಿಲ್ಲದ ಕಾರಣ ಖಿನ್ನತೆಗೆ ಒಳಗಾಗಿದ್ದ. ಆತ ಯಾವ ಪಾಪ ಮಾಡಿದನೆಂದು ದೇವರು ಆತನಿಗೆ ಇಂತಹ ಶಿಕ್ಷೆ ನೀಡರಬಹುದು ಎಂದು ಮರುಗುತ್ತಿದ್ದ. ರಾಜನ ಈ ದುಃಖವನ್ನು ತಿಳಿದುಕೊಂಡ ಆತನ ಪ್ರಜೆಗಳು ಮುನಿಗಳಿಂದ ಮಾರ್ಗದರ್ಶನ ಪಡೆಯಲು ಅರಣ್ಯಕ್ಕೆ ಭೇಟಿ ನೀಡಿದರು. ಕಾಡಿನಲ್ಲಿ, ವಯಸ್ಸಾದ ಲೋಮಾಶ್ ಎಂಬ ಋಷಿ ಸಿಗುತ್ತಾರೆ.
ಆತನ ಶಕ್ತಿಯ ಬಗ್ಗೆ ತಿಳಿದುಕೊಂಡ ನಂತರ, ಜನರು ತಮ್ಮ ರಾಜನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುವಂತೆ ಋಷಿಗೆ ಮನವಿ ಮಾಡುತ್ತಾರೆ. ಆಗ ರಾಜನು ತನ್ನ ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದನೆಂದು ಹಾಗೂ ಮಹಿಜೀತ್ ಒಬ್ಬ ಬಡ ವ್ಯಾಪಾರಿಯಾಗಿದ್ದನೆಂದು ಋಷಿ ಪ್ರಜೆಗಳಿಗೆ ತಿಳಿಸುತ್ತಾರೆ. ರಾಜ ಮಹಿಜೀತ್ ತನ್ನ ಹಿಂದಿನ ಜನ್ಮದಲ್ಲಿ ವ್ಯಾಪಾರಿಯಾಗಿದ್ದಾಗ ಸರಕುಗಳನ್ನು ಮಾರಾಟ ಮಾಡಲು ಒಂದು ನಗರಕ್ಕೆ ತೆರಳಿದಾಗ ವ್ಯಾಪಾರಿಯು ಒಮ್ಮೆ ಕೊಳದಿಂದ ನೀರು ಕುಡಿಯುವಾಗ ಹಸುವನ್ನು ದೂರ ತಳ್ಳಿದ್ದಾನೆ. ಬಾಯಾರಿದ ವ್ಯಾಪಾರಿಯು ತನ್ನ ಬಾಯಾರಿಕೆಯನ್ನು ನೀಗಿಸಲು ಸ್ವಾರ್ಥಕ್ಕಾಗಿ ಹಸುವಿನಿಂದ ನೀರನ್ನು ಕಸಿದುಕೊಂಡಿದ್ದಾನೆ. ಹೀಗಾಗಿ ಅವನು ತನ್ನ ಕರ್ಮದ ಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತಿದ್ದಾನೆ ಎಂದು ಹೇಳುತ್ತಾರೆ. ಅದಕ್ಕೆ ಪ್ರಜೆಗಳು ಇದಕ್ಕೆ ಪರಿಹಾರವನ್ನು ಕೇಳಿದಾಗ, ಶ್ರಾವಣದ ಏಕಾದಶಿ ತಿಥಿಯಂದು ಉಪವಾಸವನ್ನು ಮಾಡಿದರೆ ಹಿಂದಿನ ಪಾಪಗಳಿಂದ ಮುಕ್ತಿ ಹೊಂದಬಹುದು ಎಂದು ಋಷಿ ತಿಳಿಸುತ್ತಾರೆ. ಇಷ್ಟೆಲ್ಲ ಆದ ಬಳಿಕ ಋಷಿ ಹೇಳಿದಂತೆ ಉಪವಾಸ ಮಾಡಿದ ಮೇಲೆ ರಾಜನಿಗೆ ಪುತ್ರ ಭಾಗ್ಯ ಕಲ್ಪಿಸುತ್ತದೆ ಎಂಬ ಕಥೆ ಪುರಾಣದಲ್ಲಿದೆ.
ಶ್ರಾವಣ ಪುತ್ರ ಏಕಾದಶಿ ವಿಷ್ಣು ಪೂಜೆ ವಿಧಿ ಮುಂಜಾನೆದ್ದು ಪವಿತ್ರ ಗಂಗಾಜಲ ಸೇರಿಸಿದ ನೀರುನೊಂದಿಗೆ ಸ್ನಾನ ಮಾಡಿ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಎಳ್ಳಿನ ಎಣ್ಣೆ, ಸಾಸಿವೆ ಎಣ್ಣೆ ಅಥವಾ ತುಪ್ಪದೊಂದಿಗೆ ಮಣ್ಣಿನ ಅಥವಾ ಹಿತ್ತಾಳೆಯ ದೀಪವನ್ನು ಹಚ್ಚಿ ಮತ್ತು ಅದನ್ನು ನಿಮ್ಮ ಮನೆಯ ದೇವರ ಮನೆಯಲ್ಲಿ ಇರಿಸಿ. ಗಣೇಶನನ್ನು ಪೂಜಿಸಿ ಮತ್ತು ಗಣೇಶನ ಆಶೀರ್ವಾದಕ್ಕೆ ಪಾತ್ರರಾಗಿ. ನಂತರ ಭಗವಾನ್ ವಿಷ್ಣುವನ್ನು ಆಹ್ವಾನಿಸಿ.
ವಿಷ್ಣುವಿಗೆ ನೀರು, ಹೂ, ನೈಸರ್ಗಿಕ ಸುಗಂಧ ದ್ರವ್ಯ ಅರ್ಪಿಸಿ. ಎಣ್ಣೆ ದೀಪ, ಧೂಪ ಮತ್ತು ನೈವೇಧ್ಯ (ಯಾವುದೇ ಹಣ್ಣು ಅಥವಾ ಸಿಹಿ ತಯಾರಿಸಿ) ಇಡಿ ‘ಓಂ ನಮೋ ಭಗವತೇ ವಾಸುದೇವಾಯ’ ಎಂದು ಪಠಿಸಿ ಪೂಜೆ ಮಾಡಿ. ನಂತರ, ಎಲೆ, ಅಡಿಕೆ, ತೆಂಗಿನಕಾಯಿ, ಬಾಳೆಹಣ್ಣು, ಕುಂಕುಮ, ಅರಿಶಿಣ, ಅಕ್ಷತೆ ಅಂದರೆ ತಾಂಬೂಲ ಅರ್ಪಿಸಿ. ಏಕಾದಶಿ ವ್ರತ ಕಥೆಯನ್ನು ಓದಿ. ವಿಷ್ಣು ಸಹಸ್ರನಾಮವನ್ನು ಜಪಿಸಿ.
ಸಂಜೆ (ಸೂರ್ಯಾಸ್ತದ ಸಮಯದಲ್ಲಿ ಅಥವಾ ನಂತರ), ಎಣ್ಣೆ ದೀಪ, ಧೂಪದ್ರವ್ಯಗಳನ್ನು ಹಚ್ಚಿ ಮತ್ತು ವಿಷ್ಣುವನ್ನು ಪ್ರಾರ್ಥಿಸಿ. ಹೂವುಗಳು, ನೀರು, ಮತ್ತು ಸಿಹಿ ತಯಾರಿಸಿ ಆರತಿಯನ್ನು ಮಾಡುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಿ. ಹೀಗೆಲ್ಲ ಮಾಡುವುದರಿಂದ ಕಷ್ಟಗಳು ದೂರಬಾಗಿ ನೆಮ್ಮದಿ ನೆಲೆಸುತ್ತದೆ. ಹಾಗೂ ಸಂತಾಸ ಭಾಗ್ಯ ಲಭಿಸುತ್ತದೆ.
ಇದನ್ನೂ ಓದಿ: ಪ್ರಥಮ ಶ್ರಾವಣ ಶನಿವಾರ, ವಟುಗಳು ಪಡಿ ಬೇಡುವುದರ ಮಹತ್ವ ಏನು? ಪಾಲಿಸಬೇಕಾದ ನಿಯಮ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
Published On - 7:41 am, Wed, 18 August 21