ಪ್ರಥಮ ಶ್ರಾವಣ ಶನಿವಾರ, ವಟುಗಳು ಪಡಿ ಬೇಡುವುದರ ಮಹತ್ವ ಏನು? ಪಾಲಿಸಬೇಕಾದ ನಿಯಮ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

Shravana Shanivara chanting Venkateshaya Mangalam: ಅಕ್ಕ ಪಕ್ಕದ ಮನೆಯ ಹೊಸಿಲಲ್ಲಿ ನಿಂತು ಕೊಂಡು ಇಲ್ಲವೇ ದೇವರ ಮನೆಯ ಮುಂದೆ ನಿಂತು ಶ್ರೀನಿವಾಸಾಯ ಮಂಗಳಂ ಎಂದು ಜೋರಾಗಿ ಕೂಗಿದಾಗ ಆ ಮನೆಯ ಒಡತಿ ಒಳಗಿನಿಂದ ಹಿಡಿ ಅಕ್ಕಿಯನ್ನು ಮೂರು ಬಾರಿ ಹಾಕಿ ಅದರಿಂದ ಕೆಲ ಅಕ್ಕಿಕಾಳನ್ನು ತಾನು ತಂದ ಪಾತ್ರೆಗೆ ಹಾಕಿಕೊಳ್ಳುತ್ತಾರೆ. ಅಕ್ಕಿಯ ಜೊತೆ ಬೆಲ್ಲ ಮತ್ತು ಕೈಲಾದಷ್ಟು ದಕ್ಷಿಣೆ ಹಾಕಿ ಕಳುಹಿಸುತ್ತಾರೆ.

ಪ್ರಥಮ ಶ್ರಾವಣ ಶನಿವಾರ, ವಟುಗಳು ಪಡಿ ಬೇಡುವುದರ ಮಹತ್ವ ಏನು? ಪಾಲಿಸಬೇಕಾದ ನಿಯಮ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
ಮೊದಲ ಶ್ರಾವಣ ಶನಿವಾರ, ವಟುಗಳು ಪಡಿ ಬೇಡುವುದರ ಮಹತ್ವ ಏನು? ಪಾಲಿಸಬೇಕಾದ ನಿಯಮಗಳು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
Follow us
TV9 Web
| Updated By: sandhya thejappa

Updated on:Aug 14, 2021 | 9:24 AM

ಕೆಲವೊಮ್ಮೆ ದೊಡ್ಡವರು ಕೂಡಾ, ಶುಭ್ರ ವಸ್ತ್ರದಲ್ಲಿ ಹಣೆಗೆ ಮೂರು ಎಳೆ ಇಲ್ಲವೇ ಒಂದು ಎಳೆ ನಾಮವನ್ನು ಹಚ್ಚಿಕೊಂಡು ಕೈಯಲ್ಲಿ ಪಂಚಪಾತ್ರೆ ಇಲ್ಲವೇ ಸಣ್ಣ ಚೊಂಬು ಹಿಡಿದು ಅದಕ್ಕೂ ನಾಮ ಬಳಿದು, ಕೆಲವೊಂದು ಬಾರಿ ಅದಕ್ಕೆ ಹೂವಿನ ಮಾಲೆಯನ್ನು ಸುತ್ತಿ ಕೊಂಡು ಅಕ್ಕ ಪಕ್ಕದ ಮನೆಯ ಹೊಸಿಲಲ್ಲಿ ನಿಂತು ಕೊಂಡು ಇಲ್ಲವೇ ದೇವರ ಮನೆಯ ಮುಂದೆ ನಿಂತು |ಶ್ರೀನಿವಾಸಾಯ ಮಂಗಳಂ, ರಂಗನಾಥಾಯ ಮಂಗಳಂ, ಶ್ರೀ ವೆಂಕಟೇಶಾಯ ಮಂಗಳಂ ಇಲ್ಲವೇ ಶ್ರೀ ಲಕ್ಷ್ಮೀ ನರಸಿಂಹಾಯ ಮಂಗಳಂ| ಎಂದು ಜೋರಾಗಿ ಕೂಗಿದಾಗ (chanting Venkateshaya Mangalam), ಆ ಮನೆಯ ಒಡತಿ ಒಳಗಿನಿಂದ ಹಿಡಿ ಅಕ್ಕಿಯನ್ನು ಮೂರು ಬಾರಿ ಹಾಕಿ ಅದರಿಂದ ಕೆಲ ಅಕ್ಕಿಕಾಳನ್ನು ತಾನು ತಂದ ಪಾತ್ರೆಗೆ ಹಾಕಿಕೊಳ್ಳುತ್ತಾರೆ. ಅಕ್ಕಿಯ ಜೊತೆ ಬೆಲ್ಲ ಮತ್ತು ಕೈಲಾದಷ್ಟು ದಕ್ಷಿಣೆ ಹಾಕಿ ಕಳುಹಿಸುತ್ತಾರೆ. ಇಡೀ ಶ್ರಾವಣ ಮಾಸದ ಶನಿವಾರದಂದು (Shravana Shanivara) ವೆಂಕಟರಮಣ ಸ್ವಾಮಿ, ರಂಗನಾಥ ಸ್ವಾಮಿ ಇಲ್ಲವೇ ನರಸಿಂಹ ಸ್ವಾಮಿಯ ಒಕ್ಕಲಿನವರು ಕನಿಷ್ಠ ಪಕ್ಷ ಐದು ಮನೆಯಲ್ಲಾದರೂ ಈ ರೀತಿಯಾಗಿ ಮಾಡಬೇಕು (Shravana shanivara bramhachari begging alms -padi).

ಸಾಧಾರಣವಾಗಿ ಚಿಕ್ಕ ಮಕ್ಕಳು ಈ ರೀತಿಯಾಗಿ ಪಡಿ ಬೇಡಲು ಅತ್ತು ಕರೆದು ಗೋಳಾಡಿದರೆ, ಇನ್ನು ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳು ಪಡಿ ಬೇಡುವುದಕ್ಕೆ ಸಂಕೋಚ ಪಡುವುದೂ ಉಂಟು. ಅದಕ್ಕಾಗಿ ಹೆಚ್ಚಿನ ಸಮಯದಲ್ಲಿ ಸಣ್ಣ ಮಕ್ಕಳ ಜೊತೆ ತಂದೆ ಇಲ್ಲವೇ ತಾಯಿಯರು ಪಡಿ ಬೇಡಲು ಬಂದರೆ, ದೊಡ್ಡ ವಯಸ್ಸಿನ ಮಕ್ಕಳು ತಂದೆ ತಾಯಿಯರ ಭಯಕ್ಕೋ ಇಲ್ಲವೋ, ಗದುರುವಿಕೆಯಿಂದಲೋ, ಒಲ್ಲದ ಮನಸ್ಸಿನಿಂದಲೇ ಬಂದು ಪಡಿ ಬೇಡುವುದನ್ನು ಕಾಣಬಹುದಾಗಿದೆ.

ಈ ರೀತಿಯಾಗಿ ಪಡಿ ಬೇಡಿ ತಂದ ಅಕ್ಕಿ ಬೆಲ್ಲ ಮತ್ತು ಹಣವನ್ನು ಜೋಪಾನವಾಗಿ ಎತ್ತಿಟ್ಟು ಕಡೆಯ ಶ್ರಾವಣ ಶನಿವಾರದಂದು ಆ ಅಕ್ಕಿ ಮತ್ತು ಬೆಲ್ಲದಿಂದ ಪಾಯಸ ಇಲ್ಲವೇ ಸಿಹಿ ಹುಗ್ಗಿ, ಬೆಲ್ಲದನ್ನೋ ಮಾಡಿ ತಮ್ಮ ಮನೆ ದೇವರಿಗೆ ನೈವೇದ್ಯ ಮಾಡಿ ಎಲ್ಲರೂ ಅದನ್ನು ಪ್ರಸಾದ ರೂಪದಲ್ಲಿ ಮನೆಯವರೆಲ್ಲರೂ ಸೇವಿಸುತ್ತಾರೆ ಮತ್ತು ಹಾಗೆ ಕಾಣಿಕೆ ರೂಪದಲ್ಲಿ ಸಂಗ್ರಹಿಸಿದ್ದ ಹಣವನ್ನು ಮುಡಿ ಕಟ್ಟಿ ಎತ್ತಿಟ್ಟು ತಮ್ಮ ಮನೆದೇವರ ದರ್ಶನಕ್ಕೆ ಹೋದಾಗ ಆ ದೇವಾಲಯದ ಹುಂಡಿಯಲ್ಲಿ ಭಕ್ತಿಯಿಂದ ಹಾಕಿ ಪಾವನರಾಗುತ್ತಾರೆ.

ಪಡಿ ಬೇಡುವುದರ ಮಹತ್ವ ಏನು? ಪ್ರಥಮವಾಗಿ ಪಡಿ ಬೇಡುವುದರಿಂದ ಮಕ್ಕಳಲ್ಲಿನ ಸಂಕೋಚ ಸ್ವಭಾವ ನೀಗುತ್ತದೆ ಮತ್ತು ಕಷ್ಟದ ಪರಿಸ್ಥಿಯಲ್ಲಿ ಮಧುಕರಿವೃತ್ತಿ (ಭಿಕ್ಷೆ ಬೇಡಿಯಾದರೂ) ಜೀವನ ನಡೆಸಬಹುದು ಎಂಬುದನ್ನು ಕಲಿಸುತ್ತದೆ. ಮಕ್ಕಳಿಗೆ ತಾವು ತಿನ್ನುವ ಅಕ್ಕಿಯ ಸಂಪಾದಿಸುವುದರ ಮಹತ್ವ ಮತ್ತು ಮತ್ತೊಬ್ಬರ ಮನೆಯಲ್ಲಿ ಭಿಕ್ಷೆ ಬೇಡುವ ಮೂಲಕ ತಗ್ಗಿ ಬಗ್ಗಿ ನಡೆಯವುದನ್ನೂ ಮತ್ತು ಕೀಳರಿಮೆಯನ್ನು ಹೋಗಲಾಡಿಸುತ್ತದೆ.

ಇನ್ನೂ ಭಿಕ್ಷೇ ನೀಡುವವರಿಗೂ ತಮ್ಮಲ್ಲಿರುವ ದವಸ ಧಾನ್ಯಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುವ ಮನೋಭಾವವನ್ನು ಬೆಳೆಸುತ್ತದೆ ಮತ್ತು ಮೂರು ಬಾರಿ ಅಕ್ಕಿಯನ್ನು ಹಾಗಿ ಕಡೆಯಲ್ಲಿ ನಾಲ್ಕು ಕಾಳು ಅಕ್ಕಿಯನ್ನು ಆ ಪಡಿ ಬೇಡಿದ ಪಾತ್ರೆಯಿಂದ ತನ್ನ ಪಾತ್ರೆಗೆ ಹಾಕಿಕೊಳ್ಳುವುದರ ಮೂಲಕ ತಮ್ಮ ಮನೆಯಲ್ಲಿ ಸದಾಕಾಲವೂ ಧನಧಾನ್ಯಗಳು ಆಕ್ಷಯವಾಗಲೀ ಎಂಬುದರ ಸಂಕೇತವಾಗಿದೆ. ಇನ್ನು ತಮ್ಮ ಮನೆದೇವರಿಗೆ ಪಡಿ ಬೇಡುವಾಗ ಸಂಗ್ರಹಿಸಿದ ಹಣವನ್ನು ಸಮರ್ಪಿಸಲು ವರ್ಷಕ್ಕೆ ಒಮ್ಮೆಯಾದರೂ ಹೋಗಿ ಬರುವಂತಾಗಲೀ ಎನ್ನುವ ಭಾವನೆಯೂ ಇದೆ.

ಹಿಂದೆ ಸುಮಾರು 8 ವರ್ಷಕ್ಕೆಲ್ಲಾ ಗಂಡು ಮಕ್ಕಳಿಗೆ ಉಪನಯನವನ್ನು ಮಾಡಿ ನಂತರ ವಿಧ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸುತ್ತಿದ್ದರು. ಶಿಕ್ಷಣಾರ್ಥಿಗಳು ಗುರುಕುಲದಲ್ಲಿ ಅಧ್ಯಯನ ಮಾಡುತ್ತಾ ಅಕ್ಕ ಪಕ್ಕದ ಊರಿನಿಂದ ಕೇವಲ ಭಿಕ್ಷೆಯಿಂದಲೇ ಜೀವನ ಸಾಗಿಸಬೇಕಾಗಿತ್ತು. ಅಂತಹ ವಿದ್ಯಾರ್ಥಿಗಳಿಗೆ ಮತ್ತು ಗುರುಗಳಿಗೆ ಗೃಹಸ್ಥರು ಧಾರಾಳವಾಗಿ ಭಿಕ್ಷೆ ನೀಡಿ ಪೋಷಿಸುತ್ತಿದ್ದರು.

ಹಾಗಾಗಿ ಗುರುಕುಲಕ್ಕೆ ಕಳುಹಿಸುವ ಮುಂಚೆಯೇ ಚಿಕ್ಕ ವಯಸ್ಸಿನಿಂದಲೇ ಮಧುಕರ ವೃತ್ತಿಯ ಸಂಕೋಚನ್ನು ನೀಗಿಸಲು ಮನೆಯಲ್ಲಿಯೇ ಈ ರೀತಿಯಾಗಿ ತರಬೇತಿ ನೀಡುವುದರ ಸಲುವಾಗಿಯೇ ಇಂತಹ ಪದ್ಧತಿ ರೂಢಿಯಲ್ಲಿ ಬಂದಿರಬೇಕು ಎಂಬುದು ಹಿರಿಯರ ಅಭಿಪ್ರಾಯ.

ಇನ್ನು ಶ್ರಾವಣ ಮಾಸದಲ್ಲಿಯೇ ಪಡಿ ಏಕೆ ಬೇಡಬೇಕು ಎಂದು ಪ್ರಶ್ನಿಸಿಕೊಂಡಾಗ, ಹೇಳೀ ಕೇಳಿ ಶ್ರಾವಣ ಮಾಸ ಹಬ್ಬದ ಮಾಸ. ಈ ತಿಂಗಳಿನಲ್ಲಿ ದಾನ ಮಾಡಿದರೆ ಹೆಚ್ಚು ಪುಣ್ಯ ಬರುತ್ತದೆ ಎಂಬ ನಂಬಿಕೆ ಇರುವುದರಿಂದ ಮತ್ತು ಈ ವಿದ್ಯಾರ್ಥಿಗಳೂ ಬೇಡಿ ತಂದ ದವಸ ಧಾನ್ಯಗಳಿಂದ ವಿಜೃಂಭಣೆಯಿಂದ ಹಬ್ಬಗಳನ್ನು ಆಚರಿಸಬಹುದ್ದಾದ್ದರಿಂದ ವರ್ಷಕ್ಕೂಮ್ಮೆ ಶ್ರಾವಣ ಮಾಸದ ಶನಿವಾರದಂದು ಈ ಪಡಿ ಬೇಡುವ ಅಭ್ಯಾಸ ಆರಂಭವಾಗಿರಬಹುದು ಅನ್ನಿಸುತ್ತದೆ.

ಅನೇಕ ಬಾರಿ ಹೇಳಿದಂತೆ ನಮ್ಮ ಹಿರಿಯರು ರೂಢಿಗೆ ತಂದ ಮತ್ತು ಆಚರಿಸುತ್ತಿದ್ದ ಎಲ್ಲಾ ಹಬ್ಬ ಹರಿದಿನಗಳ ಹಿಂದೆಯೂ ಅನೇಕ ಗೂಡಾರ್ಥಗಳಿರುತ್ತವೆ. ನಾವು ಅದನ್ನು ಸರಿಯಾಗಿ ಅರ್ಥೈಸಿಕೊಂಡು ಹಬ್ಬ ಹರಿದಿನಗಳನ್ನು ಆಚರಿಸಿದಾಗ ಮಾತ್ರವೇ ಅದಕ್ಕೆ ಸಾರ್ಥಕತೆ ದೊರಕಿದಂತಾಗುತ್ತದೆ, ಇಲ್ಲವೇ ಅವೆಲ್ಲವೂ ಕಾಟಾಚಾರಗಳಾಗಿ ಹೋಗಿ ಮುಂದೆ ಕೆಲವು ವರ್ಷಗಳ ನಂತರ ಈ ಎಲ್ಲಾ ಆಚರಣೆಗಳೂ ನಿಂತು ಹೋದರೂ ಆಚ್ಚರಿಯೇನಿಲ್ಲ. ಆದರೆ ಆ ರೀತಿಯಾಗದಂತೆ ನಮ್ಮ ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಜತನದಿಂದ ಕಾಪಾಡಿಕೊಂಡು ಹೋಗುವ ಜವಾಬ್ಧಾರಿ ನಮ್ಮ ಮೇಲಿದೆ.

ಈ ಸಂದರ್ಭದಲ್ಲಿ ದಾಸಯ್ಯನ ಬಗ್ಗೆ ಪುರಂದರದಾಸರು ಬರೆದಿರುವ ಈ ಕೀರ್ತನೆ ನೆನಪಿಗೆ ಬರುತ್ತದೆ

ಊರಿಗೆ ಬಂದರೆ ದಾಸಯ್ಯ, ನಮ್ಮಕೇರಿಗೆ ಬಾ ಕಂಡ್ಯ ದಾಸಯ್ಯ |ಪ| ಕೇರಿಗೆ ಬಂದರೆ ದಾಸಯ್ಯ, ಗೊಲ್ಲ ಕೇರಿಗೆ ಬಾ ಕಂಡ್ಯ ದಾಸಯ್ಯ |ಅ|

ಕೊರಳೊಳು ವನಮಾಲೆ ಧರಿಸಿದನೆ, ಕಿರು-ಬೆರಳಲಿ ಬೆಟ್ಟವನೆತ್ತಿದನೆ ಇರುಳು ಹಗಲು ನಿನ್ನ ಕಾಣದೆ ಇರಲಾರೆ ಮರುಳು ಮಾಡಿದಂಥ ದಾಸಯ್ಯ |

ಕಪ್ಪು ವರ್ಣದ ದಾಸಯ್ಯ, ಕಂ-ದರ್ಪನ ಪಿತನೆಂಬೊ ದಾಸಯ್ಯ ಅಪ್ಪಿಕೊಂಡು ನಮ್ಮ ಮನಸಿಗೆ ಬಂದರೆ ಅಪ್ಪವ ಕೊಡುವೆನು ದಾಸಯ್ಯ |

ಮುಂದೇನು ದಾರಿ ದಾಸಯ್ಯ, ಚೆಲ್ವ ಪೊಂಗೊಳಲೂದುವ ದಾಸಯ್ಯ ಹಾಂಗೆ ಪೋಗದಿರು ದಾಸಯ್ಯ, ಹೊ-ನ್ನುಂಗುರ ಕೊಡುವೆನು ದಾಸಯ್ಯ |

ಸಣ್ಣ ನಾಮದ ದಾಸಯ್ಯ, ನಮ್ಮ ಸದನಕೆ ಬಾ ಕಂಡ್ಯ ದಾಸಯ್ಯ ಸದನಕೆ ಬಂದರೆ ದಾಸಯ್ಯ, ಮಣಿ-ಸರವನು ಕೊಡುವನು ದಾಸಯ್ಯ |

ಸಿಟ್ಟು ಮಾಡದಿರು ದಾಸಯ್ಯ, ಸಿರಿ-ಪುರಂದರವಿಟ್ಠಲದಾಸಯ್ಯ ರಟ್ಟು ಮಾಡದಿರು ದಾಸಯ್ಯ, ತಮ್- ಬಿಟ್ಟು ಕೊಡುವನು ದಾಸಯ್ಯ |

(Shravana Shanivara Lord Venkateshwara worship boys asking for Padi begging alms every Saturday chanting Venkateshaya Mangalam)

Published On - 7:00 am, Sat, 14 August 21

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್