Narasimha Jayanti 2024: ನರಸಿಂಹ ಜಯಂತಿ ಆಚರಣೆ ಮಾಡುವವರು ಈ ವಿಷಯಗಳನ್ನು ಮರೆಯಬೇಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 21, 2024 | 3:21 PM

ವಿಷ್ಣುವು ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಣೆ ಮಾಡಲು ನರಸಿಂಹ ಅವತಾರವನ್ನು ತಾಳಿದನು ಎನ್ನಲಾಗುತ್ತದೆ. ಇದು ಕೂಡ ದೇವರನ್ನು ನಂಬಿದರೆ ಎಂದಿಗೂ ಆತ ನಮ್ಮ ಕೈಬಿಡುವುದಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಇದೆಲ್ಲಾ ಕಾರಣದಿಂದ, ಪ್ರತಿವರ್ಷ ಈ ದಿನವನ್ನು ನರಸಿಂಹ ಜಯಂತಿಯನ್ನಾಗಿ ಆಚರಿಸಲಾಗುತ್ತದೆ.

Narasimha Jayanti 2024: ನರಸಿಂಹ ಜಯಂತಿ ಆಚರಣೆ ಮಾಡುವವರು ಈ ವಿಷಯಗಳನ್ನು ಮರೆಯಬೇಡಿ
Follow us on

ನರಸಿಂಹ ಜಯಂತಿಯನ್ನು ಪ್ರತಿವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಮೇ 22 ರಂದು ಆಚರಿಸಲಾಗುವುದು. ಈ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ನರಸಿಂಹನು, ಹಿರಣ್ಯಕಶ್ಯಪನನ್ನು ಸಂಹಾರ ಮಾಡುವ ಮೂಲಕ ದುಷ್ಟತನದ ವಿರುದ್ಧ ಬುದ್ದಿವಂತಿಕೆಯಿಂದ ಹೋರಾಡಿ ಜಯಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಜೊತೆಗೆ ವಿಷ್ಣುವು ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಣೆ ಮಾಡಲು ನರಸಿಂಹ ಅವತಾರವನ್ನು ತಾಳಿದನು ಎನ್ನಲಾಗುತ್ತದೆ. ಇದು ಕೂಡ ದೇವರನ್ನು ನಂಬಿದರೆ ಎಂದಿಗೂ ಆತ ನಮ್ಮ ಕೈಬಿಡುವುದಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಇದೆಲ್ಲಾ ಕಾರಣದಿಂದ, ಪ್ರತಿವರ್ಷ ಈ ದಿನವನ್ನು ನರಸಿಂಹ ಜಯಂತಿಯನ್ನಾಗಿ ಆಚರಿಸಲಾಗುತ್ತದೆ.

ಪೂಜೆಯ ಶುಭ ಸಮಯ

ನರಸಿಂಹ ಜಯಂತಿಯಂದು ದೇವರಿಗೆ ನೈವೇದ್ಯ ಅರ್ಪಿಸಲು ಮತ್ತು ಆರತಿ ಮಾಡಲು ಶುಭ ಸಮಯವೆಂದರೆ ಮೇ 22 ರ ಬುಧವಾರ ಬೆಳಿಗ್ಗೆ 06:27 ರಿಂದ 08:12 ರವರೆಗೆ. ಮೇ 22 ರಂದು ಸೂರ್ಯೋದಯದ ನಂತರ ಪಾರಾಯಣ, ಪೂಜೆ ಮಾಡಬಹುದು.

ನರಸಿಂಹ ಜಯಂತಿಯ ಪೂಜಾ ವಿಧಾನ

-ನರಸಿಂಹ ಜಯಂತಿಯ ದಿನ, ಸಂಜೆ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.

-ನಿಮ್ಮ ಮನೆಯಲ್ಲಿ ನರಸಿಂಹ ದೇವರ ವಿಗ್ರಹ ಅಥವಾ ಪ್ರತಿಮೆಯನ್ನು ಇಟ್ಟು ಹೂವುಗಳಿಂದ ಅಲಂಕಾರ ಮಾಡಿ.

-ದೇವರಿಗೆ ಹೂಮಾಲೆ, ಹಣ್ಣು, ಸಿಹಿತಿಂಡಿ ಮತ್ತು ಧೂಪದ್ರವ್ಯಗಳನ್ನು ಅರ್ಪಿಸಿ.

-ನರಸಿಂಹ ಜಯಂತಿಯ ದಿನ ಕಥೆ ಓದಿ ಅಥವಾ ಕೇಳಿ ಬಳಿಕ ದೇವರಿಗೆ ಆರತಿ ಮಾಡಿ.

-ಕಥೆ ಕೇಳಲು ಸಾಧ್ಯವಾಗದಿದ್ದಲ್ಲಿ ಭಜನೆ- ಕೀರ್ತನೆಯಲ್ಲಿ ಭಾಗವಹಿಸಿ ಇಷ್ಟಾರ್ಥ ಸಿದ್ಧಿಸಿಕೊಳ್ಳಿ.

ಈ ವಿಷಯಗಳನ್ನು ನೆನಪಿನಲ್ಲಿಡಿ;

-ನರಸಿಂಹ ಜಯಂತಿಯ ದಿನ ಬಡವರಿಗೆ ಆಹಾರ, ಬಟ್ಟೆ ಮತ್ತು ದಕ್ಷಿಣೆ ನೀಡಿ.

-ಈ ದಿನ ಮಾಂಸ ಆಹಾರ ಸೇವನೆ ಮತ್ತು ಮದ್ಯಪಾನ ಮಾಡಬೇಡಿ.

-ನರಸಿಂಹ ಜಯಂತಿಯ ಪೂಜಾ ವಿಧಾನ ಮತ್ತು ಉಪವಾಸ ನಿಯಮಗಳಲ್ಲಿ ಪ್ರಾದೇಶಿಕ ವ್ಯತ್ಯಾಸವಿರಬಹುದು. ಹಾಗಾಗಿ ಪೂಜಾ ವಿಧಾನ ಮತ್ತು ಉಪವಾಸ ನಿಯಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು ವಿದ್ವಾಂಸರು ಅಥವಾ ನಿಮ್ಮ ಗುರುಗಳನ್ನು ಸಂಪರ್ಕಿಸಬಹುದು.