ನಾರದ ಜಯಂತಿಯನ್ನು ಪ್ರತಿ ವರ್ಷ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಪ್ರತಿಪಾದ ಅಥವಾ ಪಾಡ್ಯದ ದಿನದಂದು ಆಚರಿಸಲಾಗುತ್ತದೆ. ಬ್ರಹ್ಮರ್ಷಿ ನಾರದ ಮುನಿಗಳ ಜನ್ಮದಿನದ ಪ್ರಯುಕ್ತ ಈ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಬ್ರಹ್ಮರ್ಷಿ ನಾರದರ ಜೊತೆಗೆ ಶ್ರೀಹರಿಯನ್ನು ಪೂಜಿಸಲಾಗುತ್ತದೆ. ಭಗವದ್ಗೀತೆಯಲ್ಲಿ, ಶ್ರೀಕೃಷ್ಣನು ಅರ್ಜುನನಿಗೆ ಹೇಳಿರುವ ಪ್ರಕಾರ “ನಾನು ಋಷಿಮುನಿಗಳಲ್ಲಿ ದೇವರ್ಷಿ ನಾರದ” ಎಂದು ಹೇಳಿದ್ದಾನೆ. ಆದ್ದರಿಂದ ನಾರದನನ್ನು ವಿಷ್ಣುವಿನ ಪ್ರತಿರೂಪ ಎಂದು ಪರಿಗಣಿಸಲಾಗಿದೆ. ಜೊತೆಗೆ ಆತ ಬ್ರಹ್ಮಾಂಡದ ಮೊದಲ ಪತ್ರಕರ್ತ ಎಂದರೂ ತಪ್ಪಾಗಲಾರದು, ಏಕೆಂದರೆ ನಾರದ ಮುನಿಗಳು ಮೂರು ಲೋಕದ ಮಾಹಿತಿಯನ್ನು ಕಲೆ ಹಾಕಿ ಅದನ್ನು ವಿನಿಮಯ ಮಾಡುತ್ತಿದ್ದರು.
ಪಂಚಾಂಗದ ಪ್ರಕಾರ, ನಾರದ ಜಯಂತಿಯು ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಪಾಡ್ಯ ತಿಥಿಯಂದು ಮೇ 23 ಗುರುವಾರ ಸಂಜೆ 7:22 ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಮೇ 24, ಶುಕ್ರವಾರ ಸಂಜೆ 7:24 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಉದಯ ತಿಥಿ. ಇದರ ಪ್ರಕಾರ, ನಾರದ ಜಯಂತಿಯನ್ನು ಮೇ 24 ರಂದು ಶುಕ್ರವಾರ ಆಚರಿಸಲಾಗುವುದು.
ನಾರದ ಜಯಂತಿಯಂದು ಈ ರೀತಿ ಪೂಜೆ ಮಾಡಿ;
-ಈ ದಿನ, ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ನೆಚ್ಚಿನ ದೇವರನ್ನು ನೆನಪಿಸಿಕೊಳ್ಳುವ ಮೂಲಕ ದಿನವನ್ನು ಪ್ರಾರಂಭಿಸಬೇಕು.
-ದೈನಂದಿನ ಚಟುವಟಿಕೆಗಳನ್ನು ಮುಗಿಸಿಕೊಂಡ ನಂತರ, ಮನೆಯನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಬೇಕು ಬಳಿಕ ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು. ಬಳಿಕ ಪೂಜಾ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.
-ನಾರದರ ವಿಗ್ರಹ ಅಥವಾ ಮೂರ್ತಿಯನ್ನು ಮರದ ಹಲಗೆಯ ಮೇಲೆ ಇಟ್ಟು ತುಪ್ಪದ ದೀಪ ಹಚ್ಚಿ ಧೂಪದ್ರವ್ಯದಿಂದ ಆರತಿ ಮಾಡಿ ಬಳಿಕ ಪೂಜೆ ಮಾಡಿ. ನೈವೇದ್ಯಕ್ಕೆ ಹಣ್ಣುಗಳು ಅಥವಾ ಸಿಹಿತಿಂಡಿಗಳನ್ನು ಅರ್ಪಿಸಿ. ದೇವರ ಆಶೀರ್ವಾದಕ್ಕಾಗಿ ಪ್ರಾರ್ಥಿಸಿ, ಬಳಿಕ ಕುಟುಂಬ ಸದಸ್ಯರಿಗೆ ಪ್ರಸಾದವನ್ನು ವಿತರಿಸಿ.
ಇದನ್ನೂ ಓದಿ: ನರಸಿಂಹ ಜಯಂತಿ ಆಚರಣೆ ಮಾಡುವವರು ಈ ವಿಷಯಗಳನ್ನು ಮರೆಯಬೇಡಿ
ನಾರದ ಜಯಂತಿಯ ಶುಭ ಸಮಯದಲ್ಲಿ ಕೃಷ್ಣನ ಯಾವುದಾದರೂ ಒಂದು ದೇವಾಲಯಕ್ಕೆ ಹೋಗಿ ಕೊಳಲನ್ನು ಅರ್ಪಿಸಿ ಬನ್ನಿ, ಈ ರೀತಿ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ