ಹಸ್ತಸಾಮುದ್ರಿಕ ಶಾಸ್ತ್ರ: ಕೈಯಲ್ಲಿ ಈ ಒಂದು ಚಿಹ್ನೆ ಇದ್ದರೆ ನೀವು ನಿಜಕ್ಕೂ ಅದೃಷ್ಟವಂತರು!

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿನ 'ಚೌಕದ ಗುರುತು' ಭದ್ರತೆ, ಸ್ಥಿರತೆ ಮತ್ತು ಸೌಭಾಗ್ಯದ ಶುಭ ಸಂಕೇತ. ಇದು ವ್ಯಕ್ತಿಯ ಪ್ರಾಮಾಣಿಕ ಸ್ವಭಾವ, ಉತ್ತಮ ಹಣಕಾಸು ನಿರ್ವಹಣೆ, ಕಷ್ಟದ ಸಮಯದಲ್ಲಿ ರಕ್ಷಾ ಕವಚವಾಗಿ ವರ್ತಿಸುವುದನ್ನು ಸೂಚಿಸುತ್ತದೆ. ಇಂತಹ ವ್ಯಕ್ತಿಗಳು ನಾಯಕತ್ವ ಗುಣ ಮತ್ತು ಸಾಮಾಜಿಕ ಗೌರವವನ್ನು ಹೊಂದಿರುತ್ತಾರೆ. ಈ ಚಿಹ್ನೆ ನಿಮ್ಮ ಭವಿಷ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರವಾಗಿ ತಿಳಿಯಿರಿ.

ಹಸ್ತಸಾಮುದ್ರಿಕ ಶಾಸ್ತ್ರ: ಕೈಯಲ್ಲಿ ಈ ಒಂದು ಚಿಹ್ನೆ ಇದ್ದರೆ ನೀವು ನಿಜಕ್ಕೂ ಅದೃಷ್ಟವಂತರು!
ಹಸ್ತಸಾಮುದ್ರಿಕ ಶಾಸ್ತ್ರ
Image Credit source: Getty Images
Edited By:

Updated on: Oct 03, 2026 | 10:14 AM

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿರುವ ರೇಖೆಗಳು ಮತ್ತು ಅವುಗಳಿಂದ ರೂಪುಗೊಳ್ಳುವ ವಿಭಿನ್ನ ಚಿಹ್ನೆಗಳಿಗೆ ಅತ್ಯಂತ ವಿಶೇಷವಾದ ಮಹತ್ವವಿದೆ. ಇಂತಹ ಚಿಹ್ನೆಗಳಲ್ಲಿ ‘ಚೌಕ’ (Square mark) ಗುರುತು ಅತ್ಯಂತ ಪ್ರಮುಖವಾದದ್ದು. ಸಾಮಾನ್ಯವಾಗಿ ಈ ಚಿಹ್ನೆಯು ಹೆಬ್ಬೆರಳಿನ ಕೆಳಗಿನ ಭಾಗದಲ್ಲಿ (ಶುಕ್ರ ಪರ್ವತ) ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಕೈಯ ಇತರ ಪರ್ವತಗಳ ಮೇಲೆಯೂ ಕಾಣಿಸಿಕೊಳ್ಳಬಹುದು.

ಅಂಗೈಯಲ್ಲಿ ಸ್ಪಷ್ಟವಾಗಿ ಮೂಡಿರುವ ಚೌಕದ ಗುರುತನ್ನು ಭದ್ರತೆ, ಸ್ಥಿರತೆ ಮತ್ತು ಸೌಭಾಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಇದನ್ನು ಅತ್ಯಂತ ಶುಭ ಚಿಹ್ನೆ ಎಂದೇ ಹೇಳಲಾಗುತ್ತದೆ. ಹಾಗಾದರೆ ಅಂಗೈಯಲ್ಲಿ ಈ ರೀತಿಯ ಚೌಕಡಿ ಗುರುತಿರುವ ಜನರ ಸ್ವಭಾವ, ಗುಣಲಕ್ಷಣ ಮತ್ತು ಅವರ ಭವಿಷ್ಯ ಹೇಗಿರುತ್ತದೆ ಎಂಬುದನ್ನು ವಿವರವಾಗಿ ತಿಳಿಯೋಣ.

ಪ್ರಾಮಾಣಿಕ ಮತ್ತು ಸರಳ ಸ್ವಭಾವ:

ನಿಮ್ಮ ಅಂಗೈಯಲ್ಲಿ ಸ್ಪಷ್ಟವಾದ ಚೌಕದ ಗುರುತಿದ್ದರೆ, ಅದು ನಿಮ್ಮ ಸರಳ ಮತ್ತು ನೇರ ನಡವಳಿಕೆಯನ್ನು ಸೂಚಿಸುತ್ತದೆ. ಇಂತಹ ವ್ಯಕ್ತಿಗಳು ಯಾವುದೇ ವಿಷಯವನ್ನು ನೇರವಾಗಿ, ಸ್ಪಷ್ಟವಾಗಿ ಹೇಳಲು ಇಷ್ಟಪಡುತ್ತಾರೆ. ಮಾತುಗಳನ್ನು ತಿರುಚಿ ಅಥವಾ ಸುತ್ತಿ ಬಳಸಿ ಹೇಳುವುದು ಇವರಿಗೆ ಇಷ್ಟವಾಗುವುದಿಲ್ಲ. ಇವರ ನಡವಳಿಕೆಯಲ್ಲಿ ಕಪಟತನವಾಗಲಿ, ವಂಚನೆಯಾಗಲಿ ಇರುವುದಿಲ್ಲ. ಇದೇ ಕಾರಣಕ್ಕೆ ಇತರರು ಇವರನ್ನು ಬೇಗನೆ ನಂಬುತ್ತಾರೆ. ಅಲ್ಲದೆ, ಇವರು ಸಂಬಂಧಗಳಲ್ಲಿ ಪ್ರಾಮಾಣಿಕತೆ ಮತ್ತು ನಂಬಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

ಹಣಕಾಸಿನ ನಿರ್ವಹಣೆಯಲ್ಲಿ ಚತುರರು:

ಅಂಗೈಯಲ್ಲಿ ಚೌಕಡಿ ಗುರುತಿರುವ ವ್ಯಕ್ತಿಗಳು ಅನಗತ್ಯವಾಗಿ ಹಣ ಪೋಲು ಮಾಡುವುದಿಲ್ಲ. ಇವರ ಜೀವನದಲ್ಲಿ ಆರ್ಥಿಕ ಸ್ಥಿರತೆ ಹೆಚ್ಚಾಗಿರುತ್ತದೆ. ಯಾವುದೇ ಹಣಕಾಸಿನ ವಿಚಾರದಲ್ಲೂ ಇವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೂ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುವುದರಲ್ಲಿ ಹೆಚ್ಚಿನ ನಂಬಿಕೆ ಹೊಂದಿರುತ್ತಾರೆ.

ಇದನ್ನೂ ಓದಿ: ಪಿತೃಪಕ್ಷದಲ್ಲಿ ಮರಣ ಸಂಭವಿದರೆ ಶುಭವೋ ಅಶುಭವೋ? ಗರುಡ ಪುರಾಣ ಹೇಳುವುದೇನು?

ಕಷ್ಟದ ಸಮಯದಲ್ಲಿ ರಕ್ಷಾ ಕವಚ:

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಚೌಕದ ಗುರುತನ್ನು ಒಂದು ‘ರಕ್ಷಾ ಕವಚ’ ಎಂದು ಕರೆಯಲಾಗುತ್ತದೆ. ಒಂದು ವೇಳೆ ಹಸ್ತದ ಮುಖ್ಯ ರೇಖೆಯೊಂದು ಮುರಿದಿರುವಾಗ ಅದರ ಸುತ್ತಲೂ ಈ ಚೌಕದ ಚಿಹ್ನೆ ಕಂಡುಬಂದರೆ, ಅದನ್ನು ಅತ್ಯಂತ ಶುಭ ಸಂಕೇತವೆನ್ನಲಾಗುತ್ತದೆ. ಇದು ವ್ಯಕ್ತಿಯನ್ನು ಯಾವುದೇ ದೊಡ್ಡ ನಷ್ಟ, ಕಾಯಿಲೆ ಅಥವಾ ಅಪಾಯದಿಂದ ರಕ್ಷಿಸುವ ಸೂಚನೆಯಾಗಿದೆ. ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಅದರಿಂದ ಸುರಕ್ಷಿತವಾಗಿ ಹೊರಬರುವ ಸಾಮರ್ಥ್ಯ ಇವರಿಗೆ ಇರುತ್ತದೆ.

ನಾಯಕತ್ವ ಗುಣ ಮತ್ತು ಸಾಮಾಜಿಕ ಗೌರವ:

ಅಂಗೈಯಲ್ಲಿರುವ ಚೌಕದ ಗುರುತು ವ್ಯಕ್ತಿಯ ಸಾಮಾಜಿಕ ಗೌರವ ಮತ್ತು ಉನ್ನತ ಸ್ಥಾನಮಾನವನ್ನು ಪ್ರತಿನಿಧಿಸುತ್ತದೆ. ಇಂತಹ ಜನರು ತಮ್ಮ ವೃತ್ತಿಜೀವನದಲ್ಲಿ ಸ್ವಂತ ಶ್ರಮದಿಂದ ಉತ್ತಮ ಹೆಸರು ಮತ್ತು ಗುರುತನ್ನು ಪಡೆದುಕೊಳ್ಳುತ್ತಾರೆ. ಇವರಲ್ಲಿ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮತ್ತು ಇತರರಿಗೆ ಸರಿಯಾದ ಮಾರ್ಗದರ್ಶನ ನೀಡುವ ಅದ್ಭುತ ಗುಣವಿರುತ್ತದೆ. ಇದರಿಂದಾಗಿ ಇವರು ಮುಂದೆ ತಮ್ಮ ಕ್ಷೇತ್ರದಲ್ಲಿ ಒಬ್ಬ ಯಶಸ್ವಿ ನಾಯಕನಾಗಿ (Leader) ಹೊರಹೊಮ್ಮುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

TV9 Web

TV9 Kannada

Read More
Loading...
Unable to load recommendations.
Follow Us