
ವಾಸ್ತು ಶಾಸ್ತ್ರ ಮತ್ತು ಶಕುನ ಶಾಸ್ತ್ರದ ಆಧಾರದ ಮೇಲೆ ಕೆಲವು ಪಕ್ಷಿಗಳ ಗರಿಗಳನ್ನು ಮನೆಯಲ್ಲಿ ಇಡುವುದು ತುಂಬಾ ಶುಭ ಎಂದು ನಂಬಲಾಗಿದೆ. ಇದಲ್ಲದೇ ಕೆಲ ಹಕ್ಕಿಗಳ ರೆಕ್ಕೆಗಳು ಮನೆಯಲ್ಲಿ ಕಂಡುಬಂದರೆ ನಿಮ್ಮ ಅದೃಷ್ಟ ಸುಧಾರಿಸಲು ಹೆಚ್ಚು ಸಮಯ ಬೇಕಾಗಿಲ್ಲ ಎಂದರ್ಥ. ಅಂದಹಾಗೇ ಇಂದು ಪಾರಿವಾಳದ ಗರಿಯನ್ನು ಮನೆಯಲ್ಲಿ ಇಡುವುದರಿಂದ ಉಂಟಾಗುವ ಪ್ರಯೋಜನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ವಾಸ್ತು ಶಾಸ್ತ್ರದ ಪ್ರಕಾರ ಪಾರಿವಾಳದ ಗರಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ಸದಾ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ. ಇದರಿಂದಾಗಿ ನಿಮ್ಮ ಮನೆಯಲ್ಲಿ ಎಂದಿಗೂ ಹಣದ ಕೊರತೆ ಬರುವುದಿಲ್ಲ. ಜೊತೆಗೆ ನೀವು ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲೂ ನೀವು ಹೆಚ್ಚಿನ ಪ್ರಗತಿಯನ್ನು ಸಾಧಿಸುವಿರಿ ಎಂದು ಬಲವಾಗಿ ನಂಬಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಬಿದ್ದ ಪಾರಿವಾಳದ ಗರಿಯನ್ನು ಎತ್ತಿಕೊಂಡು, ಅದನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಹರಡುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದವೂ ಸಿಗುತ್ತದೆ ಎಂದು ನಂಬಲಾಗಿದೆ. ಇದಲ್ಲದೆ, ಮನೆಯಲ್ಲಿ ನಕಾರಾತ್ಮಕ ವಿಷಯಗಳು ಮತ್ತು ಶಕ್ತಿಗಳು ಮನೆಯಿಂದ ದೂರವಿರುತ್ತವೆ. ಮನೆಯಲ್ಲಿ ಉದ್ಭವಿಸುವ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಮನೆಯಲ್ಲಿ ಪ್ರತಿನಿತ್ಯ ಜಗಳ ನೆಮ್ಮದಿ ಕೆಡಿಸುತ್ತಿದೆಯೇ? ಸರಳ ಆಧ್ಯಾತ್ಮಿಕ ಪರಿಹಾರ ಇಲ್ಲಿದೆ
ವಾಸ್ತು ಶಾಸ್ತ್ರದ ಪ್ರಕಾರ, ಪಾರಿವಾಳದ ಗರಿಯನ್ನು ಮನೆಯ ದಕ್ಷಿಣ ಮೂಲೆಯಲ್ಲಿ, ಅಡುಗೆಮನೆಯ ಉತ್ತರ ಮೂಲೆಯಲ್ಲಿ ಮತ್ತು ಮಲಗುವ ಕೋಣೆಯ ಪೂರ್ವ ಮೂಲೆಯಲ್ಲಿ ಯಾರಿಗೂ ಕಾಣದಂತೆ ಇಡುವುದು ಉತ್ತಮ. ಇನ್ನೊಂದು ಮುಖ್ಯ ವಿಷಯವೆನೆಂದರೆ ಪಾರಿವಾಳದಿಂದ ಬಿದ್ದ ಗರಿಯನ್ನು ತಂದಿಡಿ, ಬದಲಾಗಿ ಬಲವಂತವಾಗಿ ಹಕ್ಕಿಯನ್ನು ನೋಯಿಸಿ ಗರಿಯನ್ನು ತರುವುದು ಶುಭವಲ್ಲ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ