AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasthu Shastra: ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ವಾಸ್ತು ಶಾಸ್ತ್ರದ ಪ್ರಕಾರ, ಮಂಗಳವಾರ ಮತ್ತು ಶನಿವಾರ ಬಟ್ಟೆ ಒಗೆಯುವುದು ಅಶುಭವೆಂದು ಪರಿಗಣಿಸಲಾಗಿದೆ. ಮಂಗಳವಾರ ಮಂಗಳ ಗ್ರಹಕ್ಕೆ, ಶನಿವಾರ ಶನಿ ದೇವರಿಗೆ ಸಂಬಂಧಿಸಿದೆ. ಈ ದಿನಗಳಲ್ಲಿ ಬಟ್ಟೆ ಒಗೆಯುವುದರಿಂದ ಈ ದೇವರುಗಳ ಕೋಪಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ನಂಬಲಾಗಿದೆ. ಇದರಿಂದ ಆರ್ಥಿಕ ಸಮಸ್ಯೆಗಳು ಮತ್ತು ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದಲ್ಲದೇ ರಾತ್ರಿಯಲ್ಲಿಯೂ ಬಟ್ಟೆ ಒಗೆಯುವುದನ್ನು ತಪ್ಪಿಸಬೇಕು.

Vasthu Shastra: ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!
Vastu Shastra And Laundry
ಅಕ್ಷತಾ ವರ್ಕಾಡಿ
|

Updated on: May 21, 2025 | 12:08 PM

Share

ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂದು ದಿಕ್ಕು ಮತ್ತು ಪ್ರತಿದಿನವೂ ಒಂದು ನಿರ್ದಿಷ್ಟ ಶಕ್ತಿಯನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ, ಕೆಲವು ದಿನಗಳನ್ನು ಪೂಜೆಗೆ ಮತ್ತುಒಂದೊಂದು ಕೆಲಸಗಳಿಗೆ ಪರಿಗಣಿಸಲಾಗುತ್ತದೆ. ಅದೇ ರೀತಿ, ಬಟ್ಟೆ ಒಗೆಯುವುದಕ್ಕೂ ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ನಿಯಮಗಳಿವೆ. ವಿಶೇಷವಾಗಿ ಗುರುವಾರ ಮತ್ತು ಶನಿವಾರದಂದು ಬಟ್ಟೆ ಒಗೆಯುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಮಂಗಳವಾರ ಮಂಗಳ ಗ್ರಹಕ್ಕೆ ಸಂಬಂಧಿಸಿದ ದಿನ, ಮತ್ತು ಶನಿವಾರ ಶನಿಗೆ ಸಂಬಂಧಿಸಿದ ದಿನ. ಈ ಎರಡು ದಿನಗಳಲ್ಲಿ ಕೊಳಕು ಬಟ್ಟೆಗಳನ್ನು ಒಗೆಯುವುದರಿಂದ ಈ ದೇವರುಗಳು ಕೋಪಗೊಳ್ಳುತ್ತಾರೆ ಮತ್ತು ಅವರು ಆಶೀರ್ವಾದ ನೀಡುವುದನ್ನು ತಡೆಯುತ್ತಾರೆ. ಈ ದಿನಗಳಲ್ಲಿ ಬಟ್ಟೆಗಳನ್ನು ಒಗೆದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಇದರಿಂದಾಗಿ ಹಣದ ನಷ್ಟ ಮತ್ತು ಆರ್ಥಿಕ ತೊಂದರೆಗಳು ಉಂಟಾಗುತ್ತವೆ ಎಂದು ನಂಬಲಾಗಿದೆ.

ಮಂಗಳವಾರ ಬಟ್ಟೆ ಒಗೆಯಬಾರದು?

ಮಂಗಳ ಗ್ರಹವು ಬೆಂಕಿ ಮತ್ತು ವಿನಾಶಕಾರಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ, ಮಂಗಳವಾರ ಬಟ್ಟೆ ಒಗೆಯುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಅಡ್ಡಿಪಡಿಸುತ್ತದೆ ಎಂದು ನಂಬಲಾಗಿದೆ. ಅದರಂತೆ ರಾತ್ರಿಯಲ್ಲಿ ಬಟ್ಟೆ ಒಗೆಯಬೇಡಿ ಅಥವಾ ಒಣಗಿಸಬೇಡಿ. ಮಂಗಳವಾರ ಬಟ್ಟೆ ಒಗೆಯುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಮತ್ತು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಇಂದಿಗೂ ಸಹ, ಅನೇಕ ಕುಟುಂಬಗಳು ಮಂಗಳವಾರದಂದು ಬಟ್ಟೆ ಒಗೆಯುವುದಿಲ್ಲ ಅಥವಾ ಮನೆಯನ್ನು ಸ್ವಚ್ಛಗೊಳಿಸುವುದಿಲ್ಲ. ಹೀಗೆ ಮಾಡುವುದರಿಂದ ಮನೆಯ ಅದೃಷ್ಟವನ್ನು ಕಾಪಾಡುವ ಒಂದು ಮಾರ್ಗವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಇಂದಿನಿಂದ ಅಗ್ನಿ ಪಂಚಕ ಆರಂಭ; 5 ದಿನಗಳ ಕಾಲ ಈ ಕೆಲಸಗಳನ್ನು ಮಾಡಲೇಬೇಡಿ!

ಶನಿವಾರ ಬಟ್ಟೆ ಏಕೆ ಒಗೆಯಬಾರದು?

ಶನಿವಾರ ಶನಿ ದೇವರಿಗೆ ಅರ್ಪಿತವಾದ ದಿನ. ಈ ದಿನ ಶನಿ ದೇವರನ್ನು ಪೂಜಿಸಲಾಗುತ್ತದೆ. ಈ ದಿನವನ್ನು ಕರ್ಮ, ನ್ಯಾಯ ಮತ್ತು ಕಠಿಣತೆಯ ಸಂಕೇತವೆಂದು ಪರಿಗಣಿಸಲಾಗಿದೆ. ಶನಿ ದೇವನನ್ನು ಮೆಚ್ಚಿಸಲು ಜನರು ಈ ದಿನ ಉಪವಾಸ ಮಾಡಿ ದಾನ ನೀಡುತ್ತಾರೆ. ಆದಾಗ್ಯೂ, ಈ ದಿನದಂದು ಬಟ್ಟೆ ಒಗೆಯುವಂತಹ ಕೆಲಸಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಜೀವನದಲ್ಲಿ ಅಡೆತಡೆಗಳು, ಆರ್ಥಿಕ ಸಮಸ್ಯೆಗಳು ಮತ್ತು ನ್ಯಾಯಾಲಯದ ಪ್ರಕರಣಗಳಿಗೆ ಕಾರಣವಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಿಶೇಷವಾಗಿ ಮನೆಯಲ್ಲಿ ಈಗಾಗಲೇ ಆರ್ಥಿಕ ಸಮಸ್ಯೆಗಳಿದ್ದರೆ, ಶನಿವಾರ ಬಟ್ಟೆ ಒಗೆಯುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ