Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
ಪಂಚಮುಖಿ ಆಂಜನೇಯನ ಪೂಜೆಯ ಫಲಗಳು ಮತ್ತು ಅದರ ಹಿಂದಿನ ರಹಸ್ಯವನ್ನು ಗುರೂಜಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಹನುಮನ ಐದು ಮುಖಗಳು ಪಂಚಭೂತಗಳು ಮತ್ತು ಐದು ದಿಕ್ಕುಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ. ಪಂಚಮುಖಿ ಹನುಮಾನನ ಫೋಟೋ ಅಥವಾ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಬುದ್ಧಿ, ಶಕ್ತಿ, ಧೈರ್ಯ ಮತ್ತು ಮನೋಬಲ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
ಬೆಂಗಳೂರು, ಮೇ 22: ಪಂಚಮುಖಿ ಆಂಜನೇಯನ ಪೂಜೆ ಮತ್ತು ಅದರ ಫಲಗಳ ಬಗ್ಗೆ ಈ ವಿಡಿಯೋದಲ್ಲಿ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಆಂಜನೇಯನ ಐದು ಮುಖಗಳು – ಹನುಮಂತ, ನರಸಿಂಹ, ವರಾಹ, ಹಯಗ್ರೀವ ಮತ್ತು ಗರುಡ – ಬುದ್ಧಿ, ವಾಕ್‌ಶಕ್ತಿ, ಧೈರ್ಯ, ಜ್ಞಾನ ಮತ್ತು ಅಷ್ಟಸಿದ್ಧಿಗಳನ್ನು ಪ್ರತಿನಿಧಿಸುತ್ತವೆ. ಪುರಾಣಗಳ ಪ್ರಕಾರ, ಹನುಮಾನ ಪಾತಾಳಲೋಕದಲ್ಲಿ ರಾಮಲಕ್ಷ್ಮಣರನ್ನು ಬಿಡುಗಡೆ ಮಾಡಲು ಐದು ಜ್ಯೋತಿಗಳನ್ನು ಶಾಂತಗೊಳಿಸಿದನು. ಈ ಐದು ಜ್ಯೋತಿಗಳು ಐದು ದಿಕ್ಕುಗಳನ್ನು ಮತ್ತು ಪಂಚಭೂತಗಳನ್ನು ಪ್ರತಿನಿಧಿಸುತ್ತವೆ. ವಿಡಿಯೋ ನೋಡಿ.
Latest Videos

