ಪಿತೃಪಕ್ಷದಲ್ಲಿ ಮಗು ಜನಿಸಿದರೆ ಶುಭವೇ ಅಥವಾ ಅಶುಭವೇ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?

ಹಿಂದೂ ಸಂಪ್ರದಾಯದಲ್ಲಿ ಪಿತೃಪಕ್ಷವು ಪೂರ್ವಜರನ್ನು ಸ್ಮರಿಸಲು ಪವಿತ್ರ ಅವಧಿ. ಈ ವೇಳೆ ಹುಟ್ಟಿದ ಮಕ್ಕಳ ಭವಿಷ್ಯದ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಪಿತೃಪಕ್ಷದಲ್ಲಿ ಜನನ ಅಶುಭವಲ್ಲ. ಮಗುವಿನ ಭವಿಷ್ಯ ಕೇವಲ ಹುಟ್ಟಿದ ಪಕ್ಷದಿಂದ ನಿರ್ಧಾರವಾಗುವುದಿಲ್ಲ, ಬದಲಿಗೆ ಸಂಪೂರ್ಣ ಜಾತಕದ ಆಧಾರದ ಮೇಲೆ ನಿಲ್ಲುತ್ತದೆ. ಇಂತಹ ಮಕ್ಕಳು ಹಿರಿಯರ ಬಗ್ಗೆ ವಿಶೇಷ ಗೌರವ ಹೊಂದಿರುತ್ತಾರೆ. ಪೋಷಕರು ಆತಂಕಪಡುವ ಅಗತ್ಯವಿಲ್ಲ.

ಪಿತೃಪಕ್ಷದಲ್ಲಿ ಮಗು ಜನಿಸಿದರೆ ಶುಭವೇ ಅಥವಾ ಅಶುಭವೇ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?
ಪಿತೃಪಕ್ಷ
Image Credit source: Getty Images

Updated on: Sep 30, 2026 | 9:44 AM

ಹಿಂದೂ ಸಂಪ್ರದಾಯದಲ್ಲಿ ಪಿತೃಪಕ್ಷಕ್ಕೆ ಅತ್ಯಂತ ವಿಶೇಷವಾದ ಮಹತ್ವವಿದೆ. ಈ ಅವಧಿಯನ್ನು ನಮ್ಮ ಪೂರ್ವಜರನ್ನು ಸ್ಮರಿಸಲು, ಅವರಿಗೆ ಶ್ರಾದ್ಧ, ತರ್ಪಣ ಹಾಗೂ ಪಿಂಡಪ್ರದಾನಗಳನ್ನು ಅರ್ಪಿಸಿ ಗೌರವ ಸಲ್ಲಿಸಲು ಪವಿತ್ರ ಸಮಯವೆಂದು ಪರಿಗಣಿಸಲಾಗುತ್ತದೆ. ಈ ವರ್ಷ ಪಿತೃಪಕ್ಷವು ಸೆಪ್ಟೆಂಬರ್ 26 ರ ಹುಣ್ಣಿಮೆಯ ಶ್ರಾದ್ಧದಿಂದ ಪ್ರಾರಂಭವಾಗಿ ಅಕ್ಟೋಬರ್ 10 ರ ಸರ್ವ ಪಿತೃ ಅಮವಾಸ್ಯೆಯವರೆಗೆ ಇರಲಿದೆ.

ಪಿತೃಪಕ್ಷದ ಈ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುವ ಒಂದು ಕುತೂಹಲಕಾರಿ ಪ್ರಶ್ನೆಯೆಂದರೆ ಪಿತೃಪಕ್ಷದಲ್ಲಿ ಜನಿಸಿದ ಮಕ್ಕಳ ಭವಿಷ್ಯ ಹೇಗಿರುತ್ತದೆ? ಈ ಸಮಯದಲ್ಲಿ ಮಗು ಜನಿಸುವುದು ಅವರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಅವರು ಪೂರ್ವಜರ ಆಶೀರ್ವಾದ ಪಡೆಯುತ್ತಾರೆಯೇ ಅಥವಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೇ? ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ಇದರ ಹಿಂದಿರುವ ನೈಜ ಸತ್ಯ ಇಲ್ಲಿದೆ.

ಪಿತೃಪಕ್ಷದಲ್ಲಿ ಮಗು ಜನಿಸುವುದು ಅಶುಭವೇ?

ಅನೇಕರಲ್ಲಿ ಪಿತೃಪಕ್ಷ ಎಂದರೆ ಕೇವಲ ಅಶುಭ ಅಥವಾ ನಕಾರಾತ್ಮಕ ಸಮಯ ಎಂಬ ತಪ್ಪು ಕಲ್ಪನೆಯಿದೆ. ಆದರೆ ಧಾರ್ಮಿಕ ನಂಬಿಕೆಗಳ ಪ್ರಕಾರ, ಪಿತೃಪಕ್ಷವು ಪೂರ್ವಜರಿಗೆ ಧನ್ಯವಾದ ಅರ್ಪಿಸುವ ಅತ್ಯಂತ ಪವಿತ್ರ ಅವಧಿ. ಆದ್ದರಿಂದ ಈ ದಿನಗಳಲ್ಲಿ ಮಗು ಜನಿಸುವುದು ಅಶುಭದ ಸಂಕೇತವಲ್ಲ. ಅದೇ ರೀತಿ, ಈ ಅವಧಿಯಲ್ಲಿ ಹುಟ್ಟಿದ ಪ್ರತಿಯೊಂದು ಮಗುವೂ ವಿಶೇಷ ಅದೃಷ್ಟಶಾಲಿಯಾಗಿರುತ್ತದೆ ಎಂದಾಗಲಿ ಅಥವಾ ಕಷ್ಟಗಳನ್ನು ಮಾತ್ರ ಎದುರಿಸುತ್ತದೆ ಎಂದಾಗಲಿ ಹೇಳಲಾಗುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಗುವಿನ ಭವಿಷ್ಯವು ಕೇವಲ ಜನಿಸಿದ ಪಕ್ಷದಿಂದ ನಿರ್ಧಾರವಾಗುವುದಿಲ್ಲ; ಬದಲಿಗೆ ಜನಿಸಿದ ನಿಖರ ಸಮಯ, ದಿನಾಂಕ, ಜನ್ಮ ಸ್ಥಳ, ಲಗ್ನ, ಚಂದ್ರ ರಾಶಿ ಮತ್ತು ಗ್ರಹಗಳ ಸ್ಥಾನಗಳನ್ನು ಆಧರಿಸಿರುತ್ತದೆ.

ಇದನ್ನೂ ಓದಿ: ಪಿತೃಪಕ್ಷದಲ್ಲಿ ಮರಣ ಸಂಭವಿದರೆ ಶುಭವೋ ಅಶುಭವೋ? ಗರುಡ ಪುರಾಣ ಹೇಳುವುದೇನು?

ಪಿತೃಪಕ್ಷದಲ್ಲಿ ಜನಿಸಿದ ಮಕ್ಕಳ ವಿಶೇಷ ಗುಣಲಕ್ಷಣಗಳು:

ಸಾಂಪ್ರದಾಯಿಕ ಮತ್ತು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಪಿತೃಪಕ್ಷದಲ್ಲಿ ಜನಿಸುವ ಮಕ್ಕಳಲ್ಲಿ ಕೆಲವು ವಿಶಿಷ್ಟ ಸ್ವಭಾವಗಳು ಕಂಡುಬರುತ್ತವೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಜನಿಸಿದ ಮಕ್ಕಳು ತಮ್ಮ ಕುಟುಂಬ, ರಕ್ತಸಂಬಂಧಿಗಳು ಮತ್ತು ಹಿರಿಯರ ಬಗ್ಗೆ ವಿಶೇಷ ಪ್ರೀತಿ ಹಾಗೂ ಗೌರವವನ್ನು ಹೊಂದಿರುತ್ತಾರೆ. ಹಿರಿಯರನ್ನು ಗೌರವಿಸುವುದು ಮತ್ತು ಸಾಂಪ್ರದಾಯಿಕ ಹಾಗೂ ಕುಟುಂಬ ಮೌಲ್ಯಗಳನ್ನು ಎತ್ತಿಹಿಡಿಯುವ ಸ್ವಭಾವ ಇವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಪೋಷಕರಿಗೆ ಮುಖ್ಯ ಸಲಹೆ:

ಪಿತೃಪಕ್ಷದಲ್ಲಿ ಮಗು ಜನಿಸಿದ ಮಾತ್ರಕ್ಕೆ ಪೋಷಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಥವಾ ಚಿಂತಿಸುವ ಅಗತ್ಯವಿಲ್ಲ. ಈ ಅವಧಿಯಲ್ಲಿ ಹುಟ್ಟಿದ ತಕ್ಷಣ ಮಗುವಿನ ಜೀವನ ಪೂರ್ತಿ ಅದೃಷ್ಟವೇ ಇರುತ್ತದೆ ಎಂದಾಗಲಿ ಅಥವಾ ಸಮಸ್ಯೆಗಳೇ ಬರುತ್ತವೆ ಎಂದಾಗಲಿ ಭಾವಿಸಬಾರದು. ಮಗುವಿನ ಸರಿಯಾದ ಜನ್ಮ ಸಮಯ, ದಿನಾಂಕ ಮತ್ತು ಸ್ಥಳದ ವಿವರಗಳೊಂದಿಗೆ ಜಾತಕವನ್ನು ಪರಿಶೀಲಿಸಿದಾಗ ಮಾತ್ರ ಜ್ಯೋತಿಷ್ಯದ ಪ್ರಕಾರ ನಿಖರವಾದ ವಿಶ್ಲೇಷಣೆ ಪಡೆಯಲು ಸಾಧ್ಯ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us