
ಸ್ನಾನವು ದೇಹ ಮತ್ತು ಮನಸ್ಸನ್ನು ಶುದ್ಧಗೊಳಿಸುತ್ತದೆ. ಆದರೆ ಸ್ನಾನದ ನಂತರ ನೀವು ಮಾಡುವ ಕೆಲ ತಪ್ಪುಗಳು ಗ್ರಹ ದೋಷಕ್ಕೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಆದರಿಂದ ಸ್ನಾನದ ನಂತರ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಅನೇಕ ಜನರು ಸ್ನಾನ ಮಾಡಿದ ತಕ್ಷಣ ನಿದ್ರೆಗೆ ಜಾರುತ್ತಾರೆ, ಇದು ಆರೋಗ್ಯಕ್ಕೂ ಒಳ್ಳೆಯದಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನ ಮಾಡಿದ ತಕ್ಷಣ ಮಲಗುವುದು ಸೂರ್ಯ ದೋಷಕ್ಕೆ ಕಾರಣವಾಗಬಹುದು. ಜಾತಕದಲ್ಲಿ ಸೂರ್ಯ ದುರ್ಬಲ ಸ್ಥಾನದಲ್ಲಿದರೆ, ವ್ಯಕ್ತಿಯ ಜೀವನದಲ್ಲಿ ಸೋಮಾರಿತನ ಮತ್ತು ಆಯಾಸ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಅನೇಕ ಜನರು ಸ್ನಾನ ಮಾಡಿ ಬಂದ ನಂತರ ಕೊಳಕು ನೀರು, ಕೊಳಕು ಬಟ್ಟೆ ಇತ್ಯಾದಿಗಳನ್ನು ಬಕೆಟ್‌ನಲ್ಲಿ ಅಲ್ಲೇ ಬಿಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ಎಂದಿಗೂ ಮಾಡಬಾರದು. ಈ ಕ್ರಿಯೆಗಳಿಂದಾಗಿ ರಾಹು ಮತ್ತು ಕೇತುವಿನಂತಹ ಗ್ರಹಗಳು ಕೋಪಗೊಳ್ಳುತ್ತವೆ. ಈ ಗ್ರಹಗಳ ಕೆಟ್ಟ ನೆರಳು ನಿಮ್ಮನ್ನು ಕಷ್ಟಕ್ಕೆ ತಳ್ಳಬಹುದು.
ಸ್ನಾನದ ನಂತರ ಉದುರಿದ ಕೂದಲನ್ನು ಸ್ನಾನಗೃಹದಲ್ಲಿ ಹಾಗೆಯೇ ಬಿಟ್ಟು ಬರುವ ಅಭ್ಯಾಸ ಒಳ್ಳೆಯದಲ್ಲ. ಈ ಅಭ್ಯಾಸ ಶನಿ ಮತ್ತು ಮಂಗಳ ಗ್ರಹಗಳ ಅಶುಭ ಫಲಿತಾಂಶಕ್ಕೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.
ಇದನ್ನೂ ಓದಿ: ಮಕ್ಕಳಲ್ಲಿ ಕಂಡುಬರುವ ಬಾಲಾರಿಷ್ಟ ದೋಷಕ್ಕೆ ಸರಳ ಪರಿಹಾರ ಇಲ್ಲಿದೆ
ಅನೇಕ ಜನರು ಸ್ನಾನಗೃಹದಲ್ಲಿಯೂ ಸಹ ಚಪ್ಪಲಿಗಳನ್ನು ಬಳಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಚಪ್ಪಲಿಗಳನ್ನು ಧರಿಸಿ ಸ್ನಾನ ಮಾಡಬಾರದು. ಹೀಗೆ ಮಾಡುವುದರಿಂದ ರಾಹು ಮತ್ತು ಕೇತುವಿನ ಕೆಟ್ಟ ದೃಷ್ಟಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಮಹಿಳೆಯರು ಸ್ನಾನ ಮಾಡಿದ ತಕ್ಷಣ ಒದ್ದೆ ಕೂದಲಿನ ಮೇಲೆ ಸಿಂಧೂರ ಹಚ್ಚುವುದು ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ತಲೆ ಕೂದಲಿನ ನೀರಿನೊಂದಿಗೆ ಸಿಂಧೂರವೂ ಹರಿದು ಹೋಗುತ್ತದೆ. ಆದ್ದರಿಂದ, ಸ್ನಾನ ಮಾಡಿದ ನಂತರ, ನಿಮ್ಮ ಕೂದಲನ್ನು ಚೆನ್ನಾಗಿ ಒಣಗಿಸಿ ಮತ್ತು ನಂತರ ಸಿಂಧೂರವನ್ನು ಹಚ್ಚಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ