16 ಕೆಜಿ ಚಿನ್ನದ ಸೀರೆ, 2 ಕೆಜಿ ರತ್ನಖಚಿತ ಕಿರೀಟ: ಪುಣೆ ಮಹಾಲಕ್ಷ್ಮಿಯ ದಿವ್ಯ ರೂಪ ಕಣ್ತುಂಬಿಕೊಂಡ ಭಕ್ತರು

ನವರಾತ್ರಿ ಹಾಗೂ ವಿಜಯದಶಮಿ ಅಂಗವಾಗಿ ಪುಣೆಯ ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ದೇವಿಗೆ 16 ಕೆಜಿ ತೂಕದ ಸ್ವರ್ಣ ಸೀರೆ ಹಾಗೂ 2 ಕೆಜಿ ತೂಕದ ರತ್ನಖಚಿತ ಕಿರೀಟಧಾರಣೆ ಮಾಡಲಾಗಿದೆ. ಈ ಅಲಂಕಾರವು ಲಕ್ಷಾಂತರ ಭಕ್ತರ ಗಮನಸೆಳೆದಿದೆ. ಈ ಸ್ವರ್ಣ ಸೀರೆಯನ್ನು ಸುಮಾರು 17 ವರ್ಷಗಳ ಹಿಂದೆ ತಯಾರಿಸಲಾಗಿತ್ತು. ಅಂದಿನಿಂದ ಪ್ರತೀವರ್ಷ ದಸರಾ ಹಬ್ಬದಂದು ತಾಯಿಗೆ ಈ ಬೆಲೆ ಬಾಳುವ ಸೀರೆ ಉಡಿಸಿ ಪೂಜೆ ಮಾಡಲಾಗುತ್ತಿದೆ.

16 ಕೆಜಿ ಚಿನ್ನದ ಸೀರೆ, 2 ಕೆಜಿ ರತ್ನಖಚಿತ ಕಿರೀಟ: ಪುಣೆ ಮಹಾಲಕ್ಷ್ಮಿಯ ದಿವ್ಯ ರೂಪ ಕಣ್ತುಂಬಿಕೊಂಡ ಭಕ್ತರು
ಚಿನ್ನದ ಸೀರೆಯಲ್ಲಿ ಮಹಾಲಕ್ಷ್ಮಿಯ ದಿವ್ಯ ರೂಪ

Updated on: Oct 22, 2026 | 11:05 AM

ಪುಣೆ: ಭಾರತದಲ್ಲಿ ಶರನ್ನವರಾತ್ರಿ ಮತ್ತು ವಿಜಯದಶಮಿ ಉತ್ಸವಗಳು ಭಕ್ತಿ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ವೈಭವದ ಪ್ರತೀಕವಾಗಿವೆ. ಈದಿನಗಳಲ್ಲಿ ದೇಶದ ವಿವಿಧ ದೇವಾಲಯಗಳಲ್ಲಿ ದೇವಿಯರಿಗೆ ವಿಶೇಷ ಅಲಂಕಾರಗಳು, ಪೂಜೆಗಳು ನೆರವೇರುತ್ತವೆ. ಈ ಸಾಲಿನಲ್ಲಿ ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಅಲಂಕಾರವು ಭಕ್ತರ ಗಮನಸೆಳೆದಿದೆ. ಇಲ್ಲಿ ದೇವಿಯನ್ನು ಬರೋಬ್ಬರಿ 16 ಕೆಜಿ ತೂಕದ ಚಿನ್ನದ ಸೀರೆ ಮತ್ತು ರತ್ನಖಚಿತ ಕಿರೀಟದಿಂದ ಅಲಂಕರಿಸಿರುವುದು ವಿಶೇಷ.

ಚಿನ್ನದ ಸೀರೆಯಲ್ಲಿ ಮಹಾಲಕ್ಷ್ಮಿಯ ದಿವ್ಯ ರೂಪ:

ಪುಣೆಯ ಸಾರಸ್‌ಬಾಗ್‌ನಲ್ಲಿರುವ ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ನವರಾತ್ರಿ ಮತ್ತು ದಸರಾ ಸಮಯದಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡುವುದು ದಶಕಗಳಿಂದ ಬಂದಿರುವ ಸಂಪ್ರದಾಯ. ದಸರಾ ಶುಭಸಮಯದಲ್ಲಿ ದೇವಿಗೆ ಚಿನ್ನದ ಸೀರೆಯುಡಿಸಿ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಾಗುತ್ತದೆ. ಸ್ವರ್ಣಾಭರಣಗಳಿಂದ ಮೆರೆಯುತ್ತಿರುವ ದೇವಿಯ ದಿವ್ಯ ರೂಪಾವಲೋಕನಕ್ಕಾಗಿ ಸಾವಿರಾರು ಭಕ್ತರು ದೇವಾಲಯಕ್ಕೆ ಹರಿದುಬರುತ್ತಿದ್ದಾರೆ.

ಹೈದರಾಬಾದ್ ಕಲಾವಿದರಿಂದ 6 ತಿಂಗಳ ಶ್ರಮದಲ್ಲಿ ರೂಪುಗೊಂಡ ಸೀರೆ:

ಈ ಅಪೂರ್ವ ಚಿನ್ನದ ಸೀರೆಯನ್ನು ಹೈದರಾಬಾದ್‌ನ ನಿಪುಣ ಕಲಾವಿದರು ರಚಿಸಿದ್ದಾರೆ. ಇದರ ತಯಾರಿಕೆಗೆ ಸುಮಾರು ಆರು ತಿಂಗಳ ಕಾಲಬೇಕಾಯಿತು ಎಂದು ದೇವಾಲಯ ನಿರ್ವಾಹಕರು ತಿಳಿಸಿದ್ದಾರೆ. ಒಟ್ಟು 16 ಕೆಜಿ ತೂಕವುಳ್ಳ ಈ ಸ್ವರ್ಣ ಸೀರೆಯನ್ನು ಸುಮಾರು 17 ವರ್ಷಗಳ ಹಿಂದೆ ತಯಾರಿಸಲಾಗಿತ್ತು. ಅಂದಿನಿಂದ ದೇವಾಲಯ ಆಡಳಿತ ಮಂಡಳಿಯು ಈ ಭಕ್ತಿಪೂರ್ವಕ ಸಂಪ್ರದಾಯವನ್ನು ಪ್ರತಿವರ್ಷ ನಿರಂತರವಾಗಿ ನೆರವೇರಿಸಿಕೊಂಡು ಬರುತ್ತಿದೆ.

ಇದನ್ನೂ ಓದಿ: ದುರ್ಗಾ ದೇವಿಯ ಕೈಯಲ್ಲಿರುವ ಆಯುಧಗಳ ರಹಸ್ಯವೇನು? ತ್ರಿಶೂಲದಿಂದ ಚಕ್ರದವರೆಗೆ ಎಲ್ಲದರ ಮಹತ್ವ ಇಲ್ಲಿದೆ!

ರತ್ನಖಚಿತ ಕಿರೀಟದ ಮೆರುಗು:

ಚಿನ್ನದ ಸೀರೆಯೊಂದಿಗೆ ದೇವಿಗೆ ಅಮೂಲ್ಯ ರತ್ನಗಳಿಂದ ಅಲಂಕರಿಸಿದ ವಿಶೇಷ ಕಿರೀಟವನ್ನು ತೊಡಿಸಲಾಗುತ್ತದೆ. ಸುಮಾರು 2 ಕೆಜಿ ತೂಕವಿರುವ ಈ ಕಿರೀಟವನ್ನು ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಯ ಶಿರಸ್ಸಿನಲ್ಲಿರಿಸಿ ಪೂಜಿಸಲಾಗುತ್ತದೆ. ಚಿನ್ನದ ಸೀರೆ ಮತ್ತು ರತ್ನದ ಕಿರೀಟದಿಂದ ದೇದೀಪ್ಯಮಾನವಾಗಿ ಮೆರೆಯುತ್ತಿರುವ ಶ್ರೀ ಮಹಾಲಕ್ಷ್ಮಿ ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಹರಿದುಬರುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:03 am, Thu, 22 October 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us