Ramayan: ಸೀತೆಯ ಅಗ್ನಿಪರೀಕ್ಷೆ ನಡೆದಿದ್ದು ಎಲ್ಲಿ?

|

Updated on: Jan 19, 2024 | 3:01 PM

ವಾಲ್ಮೀಕಿ ಬರೆದ ರಾಮಾಯಣದಲ್ಲಿ ಸೀತೆಯ ಅಗ್ನಿಪ್ರವೇಶಕ್ಕೆ ಬಹಳ ಪ್ರಾಮುಖ್ಯತೆಯಿದೆ. ರಾವಣನಿಂದ ಅಪಹರಿಸಲ್ಪಟ್ಟಿದ್ದ ಸೀತೆ ತಾನು ಪರಿಶುದ್ಧಳಾಗಿದ್ದೇನೆ ಎಂದು ಸಾಬೀತುಪಡಿಸಲು ಅಗ್ನಿಗೆ ಹಾಕುತ್ತಾಳೆ. ಆಗ ಆಕೆ ಅಗ್ನಿಕುಂಡದಿಂದ ಮೇಲೆದ್ದುಬರುತ್ತಾಳೆ. ಮಹಾ ಪತಿವ್ರತೆಯಾದ ಸೀತೆ ಅಗ್ನಿ ಪ್ರವೇಶ ಮಾಡಿದ ಈ ಸ್ಥಳ ಎಲ್ಲಿದೆ ಗೊತ್ತಾ?

Ramayan: ಸೀತೆಯ ಅಗ್ನಿಪರೀಕ್ಷೆ ನಡೆದಿದ್ದು ಎಲ್ಲಿ?
ಸೀತೆ
Image Credit source: sanatana dhara
Follow us on

ವಾಲ್ಮೀಕಿ ಬರೆದ ರಾಮಾಯಣದಲ್ಲಿ (Ramayan) ರಾಮನ ಪತ್ನಿ ಸೀತೆಯ ತ್ಯಾಗ, ಆದರ್ಶ, ಪಾತಿವ್ರತ್ಯದ ಬಗ್ಗೆ ಬಹಳ ವಿವರವಾಗಿ ಬರೆಯಲಾಗಿದೆ. ವನವಾಸದಲ್ಲಿದ್ದ (Vanavas) ಸೀತೆಯ ಮೇಲೆ ವ್ಯಾಮೋಹಿತನಾದ ಶ್ರೀಲಂಕೆಯ ರಾಜ ರಾವಣ ಋಷಿ ವೇಷದಲ್ಲಿ ಬಂದು ಸೀತೆಯನ್ನು ಅಪಹರಿಸಿದ್ದ, ಬಳಿಕ ಆಕೆಯನ್ನು ಲಂಕೆಯ ಅಶೋಕವನದಲ್ಲಿ ಬಂಧಿಯಾಗಿರಿಸಿದ್ದ. ಕೊನೆಗೆ ರಾಮನು ರಾವಣದ (Ravan) ವಿರುದ್ಧ ಹೋರಾಡಿ ಸೀತೆಯನ್ನು (Sita Mata) ಬಿಡಿಸಿಕೊಂಡು ಬಂದನು. ಆದರೆ, ತನ್ನ ಪಾತಿವ್ರತ್ಯವನ್ನು ಸಾಬೀತುಪಡಿಸಲು ಸೀತೆ ಅಗ್ನಿ ಪ್ರವೇಶ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಆ ಪರೀಕ್ಷೆಯಲ್ಲಿ ಸೀತೆ ಪರಿಶುದ್ಧಳೆಂದು ಸಾಬೀತಾದರೂ ಆಕೆಯನ್ನು ಅಯೋಧ್ಯೆಯಿಂದ (Ayodhya) ಬಹಿಷ್ಕಾರ ಹಾಕಲಾಯಿತು. ಕೊನೆಗೆ ಆಕೆ ಕಾಡಿನಲ್ಲಿಯೇ ತನ್ನಿಬ್ಬರು ಮಕ್ಕಳಿಗೆ ಜನ್ಮ ನೀಡಿದ್ದು ರಾಮಾಯಣದ ಪ್ರಮುಖ ಘಟ್ಟಗಳಲ್ಲೊಂದು.

ಲಕ್ಷ್ಮಿಯ ಅವತಾರವಾದ ಸೀತೆ ಅಗ್ನಿ ಪ್ರವೇಶ ಮಾಡಿದ ಸ್ಥಳ ಈಗಲೂ ಇದೆ. ಈ ಸ್ಥಳಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಜನಕರಾಜನ ಮಗಳು ಸೀತೆಗೆ ಸಂಬಂಧಿಸಿದ ಅನೇಕ ಸ್ಥಳಗಳು ಶ್ರೀಲಂಕಾದಲ್ಲಿದೆ. ಮಹರ್ಷಿ ವಾಲ್ಮೀಕಿಯವರು ವಾಲ್ಮೀಕಿ ರಾಮಾಯಣದಲ್ಲಿ ಬರೆದ ಘಟನೆಗಳ ಅನೇಕ ಪುರಾವೆಗಳು ಶ್ರೀಲಂಕಾದಲ್ಲಿ ಕಂಡುಬರುತ್ತವೆ. ಅಂತಹ ಸ್ಥಳಗಳಲ್ಲಿ ಸೀತಾಮಾತೆಯು ತನ್ನ ಪರಿಶುದ್ಧತೆಯ ಪರೀಕ್ಷೆಯಾಗಿ ಅಗ್ನಿ ಪ್ರವೇಶ ನಡೆಸಿದ ಸ್ಥಳವೂ ಒಂದು. ಇದು ‘ದಿವಿರುಂಪೊಲ’ದಲ್ಲಿದೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾ ಮೂರ್ತಿ: ಇಲ್ಲಿದೆ ಮೊದಲ ಚಿತ್ರ

ದಿವಿರುಂಪೊಲ ಶ್ರೀಲಂಕಾದ ಮಧ್ಯ ಭಾಗದಲ್ಲಿರುವ ಎತ್ತರದ ಪರ್ವತ ಶ್ರೇಣಿಯಲ್ಲಿರುವ ‘ನುವಾರಾ ಎಲಿಯಾ’ ಪಟ್ಟಣದಿಂದ 18 ಕಿಮೀ ದೂರದಲ್ಲಿದೆ. ಚಿನ್ಮಯ ಮಿಷನ್ ಪ್ರಕಟಿಸಿದ ‘ರಾಮಾಯಣ ಇನ್ ಲಂಕಾ’ ಎಂಬ ಪುಸ್ತಕದಲ್ಲಿ ಈ ಸ್ಥಳದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಹೆಚ್ಚಿನ ಹಿಂದೂಗಳಿಗೆ ಈ ಸ್ಥಳದ ಬಗ್ಗೆ ತಿಳಿದೇ ಇಲ್ಲ. ಈ ಸ್ಥಳದ ಬಗ್ಗೆ ಅಂತರ್ಜಾಲದಲ್ಲಿ ಕೂಡ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ, ಇಲ್ಲಿನ ಜನರು ಈ ಜಾಗವನ್ನು ಸೀತೆಯ ಪರಿಶುದ್ಧತೆ ಸಾಬೀತಾದ ಜಾಗವೆಂದು ನಂಬಿದ್ದಾರೆ.

ಇದನ್ನೂ ಓದಿ: ರಾಮಾವತಾರಕ್ಕೆ ನಾರದರ ಶಾಪವೂ ಕಾರಣವೇ? ಕಪಿ – ಕರಡಿ ಸಹಾಯದಿಂದ ಸೀತೆಯನ್ನು ಪಡೆದ ರಾಮ

ಸೀತೆ ಅಗ್ನಿ ಪರೀಕ್ಷೆಗೆ ಒಳಗಾದ ಸ್ಥಳವಾದ್ದರಿಂದ ದಿವಿರುಂಪೊಲದಲ್ಲಿರುವ ದೇವಾಲಯವು ಜನರ ನಡುವಿನ ಘರ್ಷಣೆಗಳನ್ನು ಪರಿಹರಿಸುವಲ್ಲಿ ಪ್ರತಿಜ್ಞೆ ಮಾಡುವ ಸ್ಥಳವೆಂದು ಪೂಜಿಸಲ್ಪಟ್ಟಿದೆ. ರಾಮಾಯಣದಲ್ಲಿ ನಮೂದಿಸಲ್ಪಟ್ಟಿರುವ ಈ ಸ್ಥಳ ಇದೀಗ ಧಾರ್ಮಿಕ ಕೇಂದ್ರವಾಗಿದೆ. ರಾಮಾಯಣದ ವರ್ಣಚಿತ್ರಗಳನ್ನು ದೇವಾಲಯದಲ್ಲಿ ಚಿತ್ರಿಸಲಾಗಿದೆ. ಹೀಗಾಗಿ, ಅಜ್ಞಾತವಾಗಿಯೇ ಇರುವ ಈ ಸ್ಥಳಕ್ಕೆ ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಇನ್ನಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Fri, 19 January 24