ಚೇಳುಗಳು ಆಧ್ಯಾತ್ಮಿಕವಾಗಿ, ಸಾಮಾನ್ಯವಾಗಿ ಬದಲಾವಣೆ, ಪರಿವರ್ತನೆಯ ನಿಯಮಗಳೊಂದಿಗೆ ಸಂಬಂಧ ಹೊಂದಿವೆ. ಇದಕ್ಕೆ ಒಂದೆರಡು ಕಾರಣಗಳಿವೆ. ಮೊದಲನೆಯದಾಗಿ, ಚೇಳುಗಳು ಸಾಮಾನ್ಯವಾಗಿ ಮಾರಣಾಂತಿಕವಾಗಿರುವುದರಿಂದ, ಜನರು ತಮ್ಮ ಜೀವನದಲ್ಲಿ ಸಾವಿನ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾರೆ. ಇಲ್ಲಿ ಚೇಳಿನ ಕನಸು ಸಾಂಕೇತಿಕವಾಗಿರುತ್ತದೆ. ಹಾಗಾಗಿ ಅದನ್ನು ನೀವು ದಾರ್ಶನಿಕವಾಗಿ ಅಂದರೆ ಜೀವನದಲ್ಲಿ ಫಿಲಾಸಫಿಕಲಿ ತಗೋಬಹುದು.
ಬಹುಶಃ ಅತ್ಯಂತ ಗಮನಾರ್ಹವಾಗಿ, ಚೇಳುಗಳನ್ನು ದೊಡ್ಡ ಅಪಾಯದ ಮೂಲಗಳು ಅಥವಾ ಸಂಕೇತಗಳಾಗಿ ನೋಡಲಾಗುತ್ತದೆ. ಅದರ ಸಿಗ್ನೇಚರ್ ಸ್ಟಿಂಗ್ಗಳು ಸಾಮಾನ್ಯವಾಗಿ ಮಾರಣಾಂತಿಕ ವಿಷವನ್ನು ಹೊರಹಾಕುತ್ತವೆ. ಜಾನಪದ ಕಥೆಗಳು, ಚಲನಚಿತ್ರಗಳು, ಕಾದಂಬರಿಗಳು ಮತ್ತು ಮುಂತಾದವುಗಳಲ್ಲಿ ಅವುಗಳನ್ನು ಅಂತಹ ಅಸಾಧಾರಣ ಜೀವಿಗಳಾಗಿ ಚಿತ್ರಿಸಿರುವುದು ಆಶ್ಚರ್ಯವೇನಿಲ್ಲ. ಚೇಳಿನ ಚಿತ್ರಣ, ಚೇಳಿನ ಕನಸು ಸಾಮಾನ್ಯವಾಗಿ ಕೆಲವು ರೀತಿಯ ಅಪಾಯ ಅಥವಾ ಭೀತಿಯನ್ನು ಮುನ್ಸೂಚಿಸುತ್ತದೆ.
ಚೇಳುಗಳು ಕೈಗೆಟುಕದ, ಒಂಟಿಯಾಗಿರುವ ಜೀವಿಗಳು. ಬಿರುಕುಗಳಲ್ಲಿ ಮತ್ತು ಮೂಲೆಗಳಲ್ಲಿ ಸಲೀಸಾಗಿ ಅಡಗಿಕೊಳ್ಳುತ್ತವೆ. ಬೇಟೆ ಸಿಕ್ಕಿದರೆ ಕಚ್ಚಲು ಕಾಯುತ್ತವೆ. ಈ ಕಾರಣಕ್ಕಾಗಿ ಚೇಳುಗಳು ಸಾಮಾನ್ಯವಾಗಿ ಗುಪ್ತವಾಗಿರುತ್ತವೆ. ಆದರೆ ಕನಸಿನ ವಿಚಾರದಲ್ಲಿ ಶಕ್ತಿಯುತ ಭಾವನೆಗಳನ್ನು ಸಂಕೇತಿಸುತ್ತವೆ. ನೀವು ಮೊದಲು ಅದನ್ನು ಗಮನಿಸದೇ ಇರಬಹುದು, ಆದರೆ ಅದು ಸುಪ್ತವಾಗಿದ್ದು, ಸಮಯ ಬಂದಾಗ ಅರಿವಿಗೆ ಬರುತ್ತದೆ.
ಕೆಲವು ಸಮಾಜ, ಸಂಸ್ಕೃತಿಗಳಲ್ಲಿ ಚೇಳುಗಳನ್ನು ದೈಹಿಕ ಆಸೆ ಮತ್ತು ಯುವೋತ್ಸಾಹಕ್ಕೆ ರೂಪಕಗಳಾಗಿ ಬಳಸಲಾಗುತ್ತದೆ. ಮತ್ತು ಇದು ಅರ್ಥಪೂರ್ಣವಾಗಿರುತ್ತದೆ. ಅವು ಶಕ್ತಿಯುತ ಆಕರ್ಷಣೆ, ಬಯಕೆ ಅಥವಾ ನಿಗ್ರಹಿಸದ ಭಾವನೆಗಳನ್ನು ಹೊರಹಾಕುತ್ತವೆ.
ನಾವು ಚೇಳುಗಳನ್ನು ಅಪಾಯಕಾರಿ ಬೆದರಿಕೆಗಳಾಗಿ ಕಾಣಬಹುದು, ಆದರೆ ಚೇಳಿನ ದೃಷ್ಟಿಕೋನದಿಂದ ನೋಡಿದರೆ ಅವು ಕೇವಲ ತಮ್ಮಲ್ಲಿರುವ (ಮುಳ್ಳಿನ) ಸಾಧನಗಳೊಂದಿಗೆ ಜೈವಿಕವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹಾತೊರೆಯುತ್ತವೆ. ಈ ಕಾರಣಕ್ಕಾಗಿ, ಕನಸುಗಳು ಮತ್ತು ಇತರ ಚಿತ್ರಣಗಳಲ್ಲಿನ ಚೇಳುಗಳು ಕೆಲವೊಮ್ಮೆ ಶಕ್ತಿ ಮತ್ತು ಪ್ರತಿ ರಕ್ಷಣೆಯನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ.
ಚೇಳು ಕುಟುಕುವುದು ತಮಾಷೆಯಲ್ಲ, ಮತ್ತು ಕನಸಿನಲ್ಲಿ ನೀವು ಅನುಭವಿಸುವ ನೋವು ನಿಮ್ಮ ದೈನಂದಿನ ಜೀವನದಲ್ಲಿ ನೀವು ಯಾವುದೋ ದಾಳಿಗೆ ಒಳಗಾಗುತ್ತಿರುವಿರಿ ಎಂದು ಸೂಚಿಸುತ್ತದೆ. ಯಾರೋ ನಿಮ್ಮನ್ನು ವಿರೋಧಿಸುತ್ತಿದ್ದಾರೆ ಅಥವಾ ವಿಷಯಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯುತ್ತಿಲ್ಲ ಎಂದು ನೀವು ಭಾವಿಸಬಹುದು. ಆ ಸಂದರ್ಭಗಳಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ತ್ವರಿತವಾಗಿ ಕಾರ್ಯನಿರ್ವಹಿಸದಿದ್ದರೆ, ನೀವು ಹೆಚ್ಚು ದಾಳಿಗಳನ್ನು ಅನುಭವಿಸುವಿರಿ.
ಕಪ್ಪು ಚೇಳುಗಳು ಸಾಮಾನ್ಯವಾಗಿ ದುರಾದೃಷ್ಟದ ಬಗ್ಗೆ ಎಚ್ಚರಿಕೆ ನೀಡುತ್ತವೆ ಅಥವಾ ನೀವು ತಪ್ಪು ಮಾಡಲಿದ್ದೀರಿ ಎಂದು ಕನಸಿನಲಿ ಬಂದು ಎಚ್ಚರಿಸುತ್ತವೆ. ನೀವು ನಿಮ್ಮ ಜೀವನವನ್ನು ಬದಲಾಯಿಸುವ ಬಗ್ಗೆ ನಿರ್ಧರಿಸುತ್ತಿರಬಹುದು ಅಥವಾ ನಿಮ್ಮ ಜೀವನದ ಪ್ರಮುಖ ಪರಿವರ್ತನೆಯ ಅವಧಿಯಲ್ಲಿರಬಹುದು. ಆಗ ನೀವು ಅನುಸರಿಸಲು ಉದ್ದೇಶಿಸಿರುವ ಮಾರ್ಗವು ನಿಮಗೆ ಉತ್ತಮ ಮಾರ್ಗವಲ್ಲ ಎಂದು ಈ ಕನಸು ನಿಮಗೆ ಹೇಳುತ್ತಿರಬಹುದು.
ಕೆಲವು ಹಳದಿ ಚೇಳುಗಳು ಕುಖ್ಯಾತ ಡೆತ್‌ಸ್ಟಾಕರ್ ಚೇಳಿನಂತೆ ಅತ್ಯಂತ ವಿಷಕಾರಿ. ಅದಕ್ಕಾಗಿಯೇ ಕನಸಿನಲ್ಲಿ ಹಳದಿ ಚೇಳುಗಳು ನಿರ್ದಿಷ್ಟ ಶತ್ರು ಅಥವಾ ನಿಮ್ಮ ಜೀವನದಲ್ಲಿ ವಿರೋಧಿಯಾಗಿ ವರ್ತಿಸುವ ವ್ಯಕ್ತಿಯನ್ನು ಪ್ರತಿನಿಧಿಸುತ್ತವೆ. ಇದು ತೊಂದರೆ ಕೊಡುವ ಸಹೋದ್ಯೋಗಿಯಾಗಿರಬಹುದು ಅಥವಾ ನಿಮಗೆ ಹೊಂದಿಕೆಯಾಗದ ಕುಟುಂಬದ ಸದಸ್ಯರಾಗಿರಬಹುದು. ಯಾವುದೇ ಸಂದರ್ಭದಲ್ಲಿ, ಅವರು ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ತೊಂದರೆ/ಒತ್ತಡವನ್ನು ಉಂಟುಮಾಡುತ್ತಿದ್ದರೆ ಆ ಒತ್ತಡವು ಹಳದಿ ಚೇಳಿನ ಮೂಲಕ ನಿಮ್ಮ ಕನಸಿನಲ್ಲಿ ಹರಿದುಬರುತ್ತದೆ.
ಕಂದು ಬಣ್ಣವು ಸಾಮಾನ್ಯವಾಗಿ ಸ್ಥಿರತೆ ಅಥವಾ ಸುರಕ್ಷೆಯನ್ನು ಸಂಕೇತಿಸುತ್ತದೆ. ನೀವು ಜೀವನದಲ್ಲಿ ಭಾವನಾತ್ಮಕವಾಗಿ ದುರ್ಬಲರಾಗಿದ್ದೀರಿ ಅಥವಾ ನೀವು ತಪ್ಪು ಹೆಜ್ಜೆಯನ್ನು ತೆಗೆದುಕೊಳ್ಳುವ ಅಪಾಯದಲ್ಲಿದ್ದೀರಿ ಎಂದಾದಾಗ… ನಿಮ್ಮ ಕನಸಿನಲ್ಲಿ ಕಂದು ಚೇಳನ್ನು ಕಂಡುಬಂದರೆ ನಿಮ್ಮ ಮಾತುಗಳ ಬಗ್ಗೆ ಲಕ್ಷ್ಯ ವಹಿಸಿ, ಮತ್ತು ನಿಮ್ಮ ಆಯ್ಕೆಗಳ ಬಗ್ಗೆ ಎಚ್ಚರಿಕೆಯಿಂದ ನಿಗಾವಹಿಸಲು ಜ್ಞಾಪನೆ ಮಾಡಿದಂತಿರುತ್ತದೆ.
ಕೆಂಪು ಬಣ್ಣವನ್ನು ಹೆಚ್ಚಾಗಿ ಕೋಪ, ಉದ್ರಿಕ್ತ ಅಥವಾ ಬಿಸಿ ಭಾವನೆಗಳನ್ನು ಪ್ರತಿನಿಧಿಸಲು ಬಳಸಲಾಗುತ್ತದೆ. ಅಂತೆಯೇ, ನಿಮ್ಮ ಕನಸಿನಲ್ಲಿ ಕೆಂಪು ಚೇಳುಗಳ ಮುಖಾಮುಖಿಯು ನಿಮ್ಮ ಜೀವನದಲ್ಲಿ ಯಾರಾದರೂ ನಿಮ್ಮೊಂದಿಗೆ ಕೋಪಗೊಂಡಿದ್ದಾರೆ ಎಂದು ಸೂಚಿಸುತ್ತದೆ. ನೀವು ಹೇಗಾದರೂ ಅವರಿಗೆ ಅನ್ಯಾಯ ಮಾಡಿರಬಹುದು, ಅಥವಾ ಬಹುಶಃ ತಪ್ಪು ತಿಳಿವಳಿಕೆಯು ಕೆಲವು ರೀತಿಯ ದ್ವೇಷಕ್ಕೆ ಕಾರಣವಾಗಬಹುದು. ಯಾವುದೇ ಸಂದರ್ಭದಲ್ಲಿ, ಸಂಘರ್ಷವು ನಿಮ್ಮ ಮನಸ್ಸಿಗೆ ಭಾರವನ್ನುಂಟುಮಾಡುತ್ತದೆ. ಅಂತಹ ಸಂದರ್ಭದಲ್ಲಿ ಚೇಳಿನ ಕನಸುಗಳು ಅದನ್ನು ಪರಿಹರಿಸಿಕೊಳ್ಳಲು ಸೂಚಿಸುತ್ತವೆ.
ಚೇಳುಗಳು ಆಗಾಗ್ಗೆ ಅಪಾಯ ಅಥವಾ ಪ್ರತಿಕೂಲತೆಯನ್ನು ಸಂಕೇತಿಸುತ್ತದೆ. ಆದ್ದರಿಂದ, ನಿಮ್ಮ ಕನಸಿನಲ್ಲಿ ಚೇಳನ್ನು ಕೊಲ್ಲುವುದು ನಿಮ್ಮ ಜೀವನದಲ್ಲಿ ನೀವು ಒಂದು ದೊಡ್ಡ ಅಡಚಣೆಯನ್ನು ಜಯಿಸಲಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಇದು ನಿಮ್ಮ ಯಶಸ್ಸನ್ನು ದೃಢೀಕರಿಸುವ ನಿಮ್ಮ ಸುಪ್ತಪ್ರಜ್ಞೆಯ ಮಾರ್ಗವಾಗಿರಬಹುದು. ಆದರೆ ಹಾಗೆ ಚೇಳನ್ನು ಸಾಯಿಸುವ ಅನುಭವವು ಆತಂಕಕಾರಿ ಅಥವಾ ಒತ್ತಡದಿಂದ ಕೂಡಿದ್ದರೂ, ಆ ಕನಸು ಮುಗಿದ ನಂತರ ನೀವು ನೆಮ್ಮದಿಯ ನಿದ್ದೆಯನ್ನು ಪಡೆಯಬಹುದು.
ಕನಸಿನಲ್ಲಿ ನೀವು ಚೇಳಿನೊಂದಿಗೆ ಸಮರದಲ್ಲಿ ಸಿಲುಕಿದ್ದರೆ ಚೇಳು ನಿಮ್ಮಿಂದ ಬಂಧಮುಕ್ತವಾಗಿ ದೂರ ಹೋದರೆ, ಜೀವನದಲ್ಲಿ ನಿಮ್ಮ ತೊಂದರೆಗಳು ಇನ್ನೂ ಮುಗಿದಿಲ್ಲ ಎಂದು ಅರ್ಥೈಸಬಹುದು. ನಿಮ್ಮ ಜೀವನದಲ್ಲಿ ಯಾವುದೋ ತೊಂದರೆಯುಂಟಾಗಿದೆ ಮತ್ತು ಹೋರಾಟ ಮುಂದುವರಿಯುತ್ತದೆ ಎಂದು ಭಾವಿಸಿಕೊಳಿ. ಆದರೆ ನೀವು ಚೇಳಿನಂತೆ ಪಟ್ಟುಹಿಡಿದು ಸಮಸ್ಯೆಯನ್ನು ತೊಡೆದುಹಾಕಿದರೆ, ನೀವು ಶೀಘ್ರದಲ್ಲೇ ಯಶಸ್ಸನ್ನು ಕಾಣುತ್ತೀರಿ ಎಂಬುದನ್ನೂ ಮನನ ಮಾಡಿಕೊಳೀ.
ಚೇಳನ್ನು ತಿನ್ನುವ ಅಥವಾ ನುಂಗುವ ಕ್ರಿಯೆ ಕನಸಿನಲ್ಲಿ ಬಂದುಬಿಟ್ಟರೆ ನಿಮ್ಮ ದೇಹಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಭಾವಿಸಿಕೊಳೀ. ಇದು ನಿಮ್ಮ ಸನಿಹದಲ್ಲೇ ಇರುವ ಕೆಲವು ರೀತಿಯ ಅಪಾಯಗಳ ರೂಪಕವಾಗಿರಬಹುದು. ಅದು ನಿಮಗೆ ಗೋಚರಿಸದಿರಬಹುದು, ಅಥವಾ ನಿಮ್ಮ ಅನುಭವಕ್ಕೆ ಬಾರದಿರಬಹುದು. ಅದು ನಿಮ್ಮಿಂದ ತಮ್ಮ ಭಾವನೆಗಳನ್ನು ಮರೆಮಾಚುವ ಸ್ನೇಹಿತರಾಗಿರಬಹುದು ಅಥವಾ ನಿಮ್ಮ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದ ಕುಟುಂಬದ ಸದಸ್ಯರಾಗಿರಬಹುದು. ಯಾವುದೇ ಸಂದರ್ಭದಲ್ಲಿ, ಜಾಗ್ರತೆಯಿಂದ ನಡೆದುಕೊಳ್ಳಲು ಈ ಕನಸು ಎಚ್ಚರಿಕೆಯ ಗಂಟೆಯಾಗಿರಬಹುದು.
ಒಂದೇ ಚೇಳು ಅಂದರೂ ಅದು ಸಾಕಷ್ಟು ಅಸಾಮಾನ್ಯವಾದ ಸಂಗತಿಯಾಗಿರುತ್ತದೆ. ಅದೇ ದೈತ್ಯ ಚೇಳು ಅಥವಾ ಗುಂಪುಗುಂಪಾಗಿ ಚೇಳುಗಳ ಸಮೂಹವೇ ಕನಿಸನಲ್ಲಿ ಕಾಣಿಸಿಕೊಂಡುಬಿಟ್ಟರೆ ಏನದರ ಅರ್ಥ ಅಲ್ಲವೇ? ಹೀಗೆ ನಿಮ್ಮ ಕನಸಿನಲ್ಲಿ ಇವುಗಳನ್ನು ನೋಡುವುದರಿಂದ ನೀವು ದೈನಂದಿನ ಜೀವನದಲ್ಲಿ ಯಾವುದೋ ಒಂದು ವಿಷಯದ ಬಗ್ಗೆ ಅತಿಯಾದ ಆತಂಕದಲ್ಲಿರುವಿರಿ ಎಂದು ಸೂಚಿಸುತ್ತದೆ. ನಿಮಗೆ ನಿಮ್ಮ ಜವಾಬ್ದಾರಿಗಳೇ ಹೊರೆಯಾಗಿಬಹುದು, ಅಥವಾ ಪ್ರಕ್ಷುಬ್ಧ ಪರಿಸ್ಥಿತಿಯು ನಿಮ್ಮ ನಿಯಂತ್ರಣಕ್ಕೆ ಸಿಲುಕದಿರಬಹುದು. ಮತ್ತು ಅದನ್ನು ಜಯಿಸಲು ನೀವು ಅಸಹಾಯಕರಾಗುತ್ತೀರಿ ಎಂದರ್ಥ.
ಚೇಳುಗಳಿಗೆ ತಮ್ಮದೇ ಆದ ವಿಷ ಏನೂ ಮಾಡುವುದಿಲ್ಲ. ಅಂತಹ ವಿಷ ಅವುಗಳಿಗೆ ನಿರೋಧಕವಾಗಿರುತ್ತವೆ. ಹಾಗಾಗಿ ಚೇಳುಗಳು ಪರಸ್ಪರ ಕುಟುಕುವುದು ನಿಮ್ಮ ಕನಸಿಗೆ ಬಂದಿದ್ದರೆ ಅದು ಸಾಕಷ್ಟು ಗೊಂದಲಕ್ಕೀಡು ಮಾಡುತ್ತದೆ. ಚೇಳುಗಳ ಮಾದರಿಯಲ್ಲಿ ನಮ್ಮನ್ನು ನಾವೇ ನೋಯಿಸಿಕೊಳ್ಳಲು ಪ್ರಯತ್ನಿಸುವುದು ಅರ್ಥಹೀನವಾಗಿರುತ್ತದೆ. ನೀವು ಇತ್ತೀಚಿಗೆ ನಿಮ್ಮ ಮೇಲೆ ಹಿಡಿತ ಸಾಧಿಸಿಕೊಳ್ಳದೆ ಕಷ್ಟಪಡುತ್ತಿರಬಹುದು ಅಥವಾ ನಿಮ್ಮಷ್ಟಕ್ಕೆ ಅತಿಯಾಗಿ ಕೆಲಸ ಮಾಡುತ್ತಿರಬಹುದು. ಇದರರ್ಥ ನಿಮಗೆ ಅಗತ್ಯವಾಗಿ ವಿರಾಮದ ಸಮಯ ಬೇಕಿದೆ ಎಂಬುದನ್ನು ನಿಮ್ಮ ಈ ಕನಸು ನಿಮಗೆ ಹೇಳಲು ಪ್ರಯತ್ನಿಸುತ್ತಿರಬಹುದು ಎಂಬುದನ್ನು ಅರಿಯಿರಿ.
ಚೇಳೊಂದು ಕಪ್ಪೆಯ ಬೆನ್ನಿನ ಮೇಲೆ ನದಿಯಲ್ಲಿ ಸವಾರಿ ಮಾಡಿಕೊಂಡು ಹೋಗುವ ಬಗ್ಗೆ ಹಳೆಯ ಜಾನಪದ ಕಥೆ ಚಾಲ್ತಿಯಲ್ಲಿದೆ. ನೀರು ದಾಟಲು ಇನ್ನೂ ಅರ್ಧ ದಾರಿಯಿದ್ದರೂ, ಚೇಳು ತನ್ನ ಕುಟುಕು ಬುದ್ದಿಯನ್ನು ಬಿಡದೆ, ಕಪ್ಪೆಯನ್ನು ಕುಟುಕಿಬಿಡುತ್ತದೆ. ಮುಂದೇನಾಗುತ್ತದೆ? ಎರಡೂ ನೀರಲ್ಲಿ ಮುಳುಗಿಬಿಡುತ್ತವೆ. ಹಾಗಾಗಿ ನೀವು ನೀರಿನಲ್ಲಿ ಸಂಚರಿಸುತ್ತಿರುವ ಚೇಳುಗಳ ಕನಸು ಕಂಡರೆ ಅದರರ್ಥ ನೀವು ಹೇಗಾದರೂ ನಿಮ್ಮನ್ನು ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ. ನಿಮಗೆ ನೀವೇ ಅಪಾಯವನ್ನು ತಂದೊಡ್ಡುಕೊಳ್ಳುತ್ತಿದ್ದೀರಿ ಎಂದರ್ಥ. ಹೆಚ್ಚಾಗಿ, ನೀವು ಹಿಂದಿನ ದುರಂತಗಳು ಅಥವಾ ತಪ್ಪುಗಳನ್ನು ಯೋಚಿಸುತ್ತಾ ಅದೇ ಗುಂಗಿನಲ್ಲಿ ಜೀವಿಸುತ್ತಿದ್ದೀರಿ ಮತ್ತು ಅದರ ಭಾರ ನಿಮ್ಮನ್ನು ಜೀವನದಲ್ಲಿ ಜಗ್ಗುತ್ತಿದೆ ಎಂಬುದನ್ನು ಮನನ ಮಾಡಿಕೊಳ್ಳಿ. ಹಾಗಾಗಿ ಸಾಂಕೇತಿಕವಾಗಿ ಇಂತಹ ಕನಸು ಬಿದ್ದಾಗ ಅವುಗಳಿಂದ ದೂರವಾಗಲೇಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಪರಿಭಾವಿಸಿಕೊಳ್ಳಿ.
ಬೈಬಲ್‌ನಲ್ಲಿ, ಚೇಳುಗಳನ್ನು ಸಾಮಾನ್ಯವಾಗಿ ದುಷ್ಟ ಶಕ್ತಿಗಳನ್ನು ಅಥವಾ ದೆವ್ವವನ್ನು ಸಂಕೇತಿಸಲು ಬಳಸಲಾಗುತ್ತದೆ. ಮುಂದೆ ಸದ್ಗುಣಶೀಲ ವ್ಯಕ್ತಿಗಳು ಅವುಗಳನ್ನು ಚಚ್ಚಿ ಚಚ್ಚಿ ಕೊಂದುಹಾಕುವಂತೆ ಚಿತ್ರಿಸಲಾಗಿದೆ. Bible ಅಧ್ಯಯನ ವೇಳೆ Book of Revelation ಎಂಬ ರೆವೆಲೆಶನ್ ಪುಸ್ತಕದಲ್ಲಿಯೂ ಸಹ ಚೇಳುಗಳ ಪ್ರಸ್ತಾಪವಿದೆ. ಅಲ್ಲಿ ಅವು ಅಂತ್ಯಕಾಲದಲ್ಲಿ ಮನುಷ್ಯನ ಜೊತೆಯಲ್ಲಿರುತ್ತವೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಕ್ರಿಶ್ಚಿಯನ್ ಧರ್ಮವು ಈ ಪ್ರಾಣಿಯನ್ನು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಹೋರಾಟದ ರೂಪಕವಾಗಿ ಬಳಸುತ್ತವೆ.
ಪ್ರಾಚೀನ ಈಜಿಪ್ಟಿನವರು ಚೇಳುಗಳ ಶಕ್ತಿ ಮತ್ತು ಅಪಾಯ ಎರಡನ್ನೂ ಗುರುತಿಸಿದ್ದರು. ಅವುಗಳನ್ನು ಹೆಚ್ಚಾಗಿ ಆಡಳಿತಗಾರರಿಗೆ ಹೆಸರಿಸುತ್ತಿದ್ದರು ಅಥವಾ ಹೋಲಿಸುತ್ತಿದ್ದರು. ಅದೇ ಗೌರವಾನ್ವಿತ ವೈದ್ಯರನ್ನು ಸಹ ಚೇಳುಗಳಿಗೆ ಹೋಲಿಸಲಾಗುತ್ತಿತ್ತು. ಜೀವನ ಮತ್ತು ಮರಣದ ಶಕ್ತಿಯನ್ನು ಚೇಳುಗಳು ಹಿಡಿದಿಟ್ಟುಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಗಮನಾರ್ಹವಾಗಿ ಹೇಳುವುದಾರದೆ ಸೆರ್ಕೆಟ್ ದೇವತೆಯು goddess Serket ದೇವೀಕರಿಸಲ್ಪಟ್ಟ ಚೇಳು. ಮರಣಾನಂತರದ ಜೀವನಕ್ಕೆ ಪ್ರಯಾಣಿಸುವಾಗ ಸತ್ತವರ ದೇಹಗಳನ್ನು ಚೇಳು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ.
ಮೂಲ ಅಮೆರಿಕನ್ನರಾದ ನವಾಜೊ, ಅಥವಾ ಡೈನೆ ಜನರು, ಚೇಳಿನ ಶಕ್ತಿಯುತವಾದ ಕುಟುಕಿಗೆ ಒಪ್ಪಿಗೆಯ ಮುದ್ರೆಯೊತ್ತಿದ್ದರು. ಅದನ್ನು ಗೌರವ ಮತ್ತು ಎಚ್ಚರಿಕೆಯಿಂದ ಪರಿಗಣಿಸಿದ್ದರು. ನವಾಜೋ ಸಂಪ್ರದಾಯಗಳಲ್ಲಿ, ಚೇಳುಗಳು ಪುರಾತನ ಮೊದಲ ಪ್ರಪಂಚದಲ್ಲಿ ಗಾಢ ಬಣ್ಣದ ಕೀಟಗಳ ಜೊತೆಗೆ ಜೀವಿಸುತ್ತಿದ್ದವು ಎಂದು ಹೇಳಲಾಗುತ್ತದೆ. ಮೊದಲ ಪ್ರಪಂಚವು ಮಾನವಕುಲ ಉದಯಕ್ಕೂ ಮುನ್ನ ಇದ್ದ ಜಾಗವಾಗಿದೆ.
ಇನ್ನು ಮುಸಲ್ಮಾನರ ವಿಷಯಕ್ಕೆ ಬಂದರೆ… ಅನೇಕ ಸಂಸ್ಕೃತಿಗಳಲ್ಲಿರುವಂತೆ ಮುಸ್ಲಿಂ ಸಂಪ್ರದಾಯಗಳು ಚೇಳನ್ನು ಕ್ಷುಲ್ಲಕವಲ್ಲದ ಬೇಟೆಗಾರ ಎಂದು ಪರಿಗಣಿಸುತ್ತವೆ. ಈ ಕಾರಣದಿಂದಾಗಿ, ಅವುಗಳನ್ನು ಸಾಮಾನ್ಯವಾಗಿ ದುಷ್ಟತನದ ಸಂಕೇತವಾಗಿ ಪ್ರತಿನಿಧಿಸಲಾಗುತ್ತದೆ. ಮುಸ್ಲಿಂ ಜಾನಪದದಲ್ಲಿ ಕೆಲವು ಕಥೆಗಳು ಚೇಳುಗಳನ್ನು ಒಂಟೆಯಷ್ಟು ದೊಡ್ಡದಾಗಿ ವಿವರಿಸುತ್ತವೆ, ಸಮುದ್ರದಲ್ಲಿನ ಯಾವುದೇ ಮೀನನ್ನು ಕೊಲ್ಲುವಷ್ಟು ವಿಷವನ್ನು ಚೇಳು ಹೊಂದಿರುತ್ತದೆ. ಇನ್ನು ಕೆಲವು ಸಂಪ್ರದಾಯಗಳಲ್ಲಿ ಚೇಳನ್ನು ಉನ್ಮಾದ, ಕಾಮ ಅಥವಾ ಬಯಕೆಯ ರೂಪಕವಾಗಿ ಚಿತ್ರಿಸಲಾಗಿದೆ.
ಮತ್ತಷ್ಟು ಪ್ರೀಮಿಯಂ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:02 pm, Tue, 3 September 24