Shukra Pradosh Vrat 2024: ಈ ವ್ರತವು ಬಿರುಕು ಮೂಡಿದ ದಾಂಪತ್ಯ ಜೀವನದಲ್ಲಿ ನೆಮ್ಮದಿ ತರುತ್ತದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 07, 2024 | 5:25 PM

ಪ್ರದೋಷ ವ್ರತವನ್ನು ಆಚರಿಸುವುದರಿಂದ, ಆ ವ್ಯಕ್ತಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಪ್ರಾಪ್ತವಾಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಪ್ರದೋಷ ವ್ರತವನ್ನು ಒಂದು ತಿಂಗಳಲ್ಲಿ 2 ಬಾರಿ ಆಚರಿಸಲಾಗುತ್ತದೆ. ಇದು ಶುಕ್ರವಾರ ಬಂದಿರುವುದರಿಂದ ಈ ದಿನ ವ್ರತ ಆಚರಣೆ ಮಾಡುವವರಿಗೆ ಜೀವನದಲ್ಲಿ ಅದೃಷ್ಟ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾದರೆ ಈ ದಿನದ ಮಹತ್ವವೇನು? ಯಾವಾಗ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ.

Shukra Pradosh Vrat 2024: ಈ ವ್ರತವು ಬಿರುಕು ಮೂಡಿದ ದಾಂಪತ್ಯ ಜೀವನದಲ್ಲಿ ನೆಮ್ಮದಿ ತರುತ್ತದೆ
Follow us on

ಹಿಂದೂ ಧರ್ಮದಲ್ಲಿ ಪ್ರದೋಷ ವ್ರತಕ್ಕೆ ಅದರದ್ದೇ ಆದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವಿದೆ. ಸಾಮಾನ್ಯವಾಗಿ ಈ ವ್ರತವನ್ನು ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ಸಮಯದಲ್ಲಿ ತಿಂಗಳಿಗೆ ಎರಡು ಬಾರಿ ಆಚರಿಸಲಾಗುತ್ತದೆ. ಈ ವರ್ಷ ಶುಕ್ರ ಪ್ರದೋಷ ವ್ರತವು ಮಹಾ ಶಿವರಾತ್ರಿಯಂದು ಬಂದಿದ್ದು ಕೃಷ್ಣ ಪಕ್ಷದ ತ್ರಯೋದಶಿ ಅಂದರೆ ಮಾ. 8 ರಂದು ವ್ರತಾಚರಣೆ ಮಾಡಲಾಗುತ್ತದೆ. ಶುಕ್ರ ಪ್ರದೋಷ ವ್ರತವು ಬೆಳಿಗ್ಗೆ 01:19 ಕ್ಕೆ ಪ್ರಾರಂಭವಾಗುತ್ತದೆ. ಈ ತಿಥಿಯು ಮಾರ್ಚ್ 8 ರಂದು ರಾತ್ರಿ 09:57ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ದಿನದ ಪೂಜಾ ಸಮಯ ಸಂಜೆ 05:54 ರಿಂದ ರಾತ್ರಿ 08:19ರ ವರೆಗೆ ಇರುತ್ತದೆ. ಹಾಗಾಗಿ ಆ ಸಮಯದಲ್ಲಿ ಪೂಜೆ ಮಾಡಬಹುದು.

ಈ ಪವಿತ್ರ ವ್ರತವನ್ನು ಆಚರಿಸುವುದರಿಂದ, ವ್ಯಕ್ತಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಪ್ರಾಪ್ತವಾಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಪ್ರದೋಷ ವ್ರತವನ್ನು ಒಂದು ತಿಂಗಳಲ್ಲಿ 2 ಬಾರಿ ಆಚರಿಸಲಾಗುತ್ತದೆ. ಇದು ಶುಕ್ರವಾರ ಬಂದಿರುವುದರಿಂದ ಈ ದಿನ ವ್ರತ ಆಚರಣೆ ಮಾಡುವವರಿಗೆ ಜೀವನದಲ್ಲಿ ಅದೃಷ್ಟ ವೃದ್ಧಿಯಾಗುತ್ತದೆ ಮತ್ತು ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ನೆಲೆಯಾಗುತ್ತದೆ ಎನ್ನುವ ನಂಬಿಕೆಯಿದೆ.

ಶುಕ್ರ ಪ್ರದೋಷ ವ್ರತದ ಮಹತ್ವವೇನು?

ಶುಕ್ರವಾರದಂದು ಬರುವ ಪ್ರದೋಷವನ್ನು ಶುಕ್ರ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ವಿವಿಧ ರೀತಿಯ ಪೂಜೆ ಮತ್ತು ಹವನಗಳನ್ನು ಮಾಡಲು ಈ ದಿನ ಶುಭವೆಂದು ಪರಿಗಣಿಸಲಾಗುತ್ತದೆ. ಈ ವರ್ಷ, ಮಹಾ ಶಿವರಾತ್ರಿಯ ದಿನದಂದು ಪ್ರದೋಷ ವ್ರತವು ಬಂದಿರುವುದರಿಂದ, ಹೆಚ್ಚು ವಿಶೇಷವಾಗಿದೆ. ಶಿವ ಮತ್ತು ಪಾರ್ವತಿ ದೇವಿಯನ್ನು ನೆನೆಯುವ ಈ ಆಚರಣೆಯು ಭಕ್ತರ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಅತ್ಯಂತ ಭಕ್ತಿಯಿಂದ ಮತ್ತು ಶುದ್ಧ ಮನಸ್ಸಿನಿಂದ ಪೂಜೆ ಮಾಡಿದಲ್ಲಿ ಇಷ್ಟಾರ್ಥ ಸಿದ್ಧಿಸುತ್ತದೆ ಜೊತೆಗೆ ಬಿರುಕು ಮೂಡಿದ ದಾಂಪತ್ಯ ಜೀವನದಲ್ಲಿ ನೆಮ್ಮದಿ ತರುತ್ತದೆ.

ಇದನ್ನೂ ಓದಿ: ಹಿಂದೂ ಪುರಾಣಗಳಲ್ಲಿ ಬರುವ ಶಕ್ತಿಶಾಲಿ ಮಹಿಳೆಯರು ಇವರೇ ನೋಡಿ!

ಶುಕ್ರ ಪ್ರದೋಷ ವ್ರತದ ಪೂಜಾ ವಿಧಾನಗಳು;

1. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ.

2. ಮನೆಯನ್ನು ಮತ್ತು ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ.

3. ಶುಕ್ರ ಪ್ರದೋಷ ವ್ರತವು ಮಹಾಶಿವರಾತ್ರಿಯ ದಿನದಂದು ಬರುವುದರಿಂದ ಈ ದಿನವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.

4. ಶಿವ ಮತ್ತು ಪಾರ್ವತಿ ದೇವಿಯನ್ನು ಇರಿಸಲು ಒಂದು ಪೀಠವನ್ನು ತಯಾರಿಸಿ ಮತ್ತು ಅವುಗಳನ್ನು ಹೂವುಗಳಿಂದ ಅಲಂಕರಿಸಿ.

5. ತುಪ್ಪದಿಂದ ದೀಪವನ್ನು ಬೆಳಗಿಸಿ ಮತ್ತು ಪಂಚಾಕ್ಷರಿ ಮಂತ್ರ ಹಾಗೂ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ.

6. ಮನೆಯಲ್ಲಿ ಶಿವಲಿಂಗವನ್ನು ಇಡದವರು ರುದ್ರಾಭಿಷೇಕ ಮಾಡಲು ದೇವಾಲಯಕ್ಕೆ ಭೇಟಿ ನೀಡಿ.

7. ಮಹಾದೇವನನ್ನು ಮೆಚ್ಚಿಸಲು ಕಟ್ಟುನಿಟ್ಟಾದ ಉಪವಾಸವನ್ನು ಮಾಡಿ

8. ಶಿವನ ನೈವೇದ್ಯಕ್ಕೆ ಮಾಡಿದ ಪ್ರಸಾದವನ್ನು ಕುಟುಂಬದವರೊಂದಿಗೆ ಹಂಚಿ ತಿನ್ನಿ. ಈ ದಿನ ಯಾವುದೇ ಕಾರಣಕ್ಕೂ ಮಾಂಸ ಆಹಾರ ಸೇವನೆ ಮಾಡಬೇಡಿ.

ಈ ದಿನ ಯಾವ ಮಂತ್ರವನ್ನು ಪಠಣ ಮಾಡಬೇಕು?

-ಓಂ ನಮಃ ಶಿವಾಯ

-ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ

ಊರ್ವರೂಕಮಿವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾಮೃತಾತ್‌||

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ