Women’s Day 2024: ಹಿಂದೂ ಪುರಾಣಗಳಲ್ಲಿ ಬರುವ ಶಕ್ತಿಶಾಲಿ ಮಹಿಳೆಯರು ಇವರೇ ನೋಡಿ!

ಶಕ್ತಿ ಮತ್ತು ಧೈರ್ಯಕ್ಕೆ ಹೆಸರುವಾಸಿಯಾಗಿರುವ ಮಹಿಳೆಯರನ್ನು ಪ್ರತಿನಿತ್ಯವೂ ನೋಡುತ್ತೇವೆ ಇಂದು ನಮ್ಮ ಮನೆಯ ಮಹಿಳೆಯರ ಜೊತೆಗೆ ಬದುಕಿಗೆ ಸ್ಫೂರ್ತಿ ನೀಡುವವರ ಬಗ್ಗೆ ಅಂದರೆ ಹಿಂದೂ ಪುರಾಣದ ಮಹಿಳೆಯರ ಬಗ್ಗೆ ತಿಳಿದುಕೊಳ್ಳೋಣ. ಏಕೆಂದರೆ ಅವರು ಒಂದಿಲ್ಲೊಂದು ಕಾರಣಗಳಿಂದ ನಮಗೆ ದಾರಿ ದೀಪವಾಗುತ್ತಾರೆ. ಹಾಗಾಗಿ ಈ ಬಾರಿ ಹಿಂದೂ ಪುರಾಣಗಳಲ್ಲಿ ಬರುವ ಶಕ್ತಿಶಾಲಿ ಮಹಿಳೆಯರನ್ನು ಗೌರವಿಸುವ ಮೂಲಕ ಮಹಿಳಾ ದಿನವನ್ನು ಆಚರಿಸಿ. ಅವರ ಶಕ್ತಿ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತದೆ.

Women's Day 2024: ಹಿಂದೂ ಪುರಾಣಗಳಲ್ಲಿ ಬರುವ ಶಕ್ತಿಶಾಲಿ ಮಹಿಳೆಯರು ಇವರೇ ನೋಡಿ!
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 07, 2024 | 3:28 PM

ನಿಮಗೆ ತಿಳಿದಿರುವಂತೆ, ಮಾರ್ಚ್ 8 ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನವನ್ನು (Women’s Day) ಆಚರಿಸಲಾಗುತ್ತದೆ. ಈ ದಿನ ಮಹಿಳೆಯರನ್ನು ಗೌರವಿಸಲು ಮತ್ತು ಸಂತೋಷ ಪಡಿಸಲು ಅನೇಕ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ತನ್ನ ಕುಟುಂಬಕ್ಕಾಗಿ 24 ಘಂಟೆಯೂ ಕೆಲಸ ಮಾಡುವ ಹಾಗೂ ಶಕ್ತಿ ಮತ್ತು ಧೈರ್ಯಕ್ಕೆ ಹೆಸರುವಾಸಿಯಾಗಿರುವ ಮಹಿಳೆಯರನ್ನು ಪ್ರತಿನಿತ್ಯವೂ ನೋಡುತ್ತೇವೆ ಇಂದು ನಮ್ಮ ಮನೆಯ ಮಹಿಳೆಯರ ಜೊತೆಗೆ ಬದುಕಿಗೆ ಸ್ಫೂರ್ತಿ ನೀಡುವವರ ಬಗ್ಗೆ ಅಂದರೆ ಹಿಂದೂ ಪುರಾಣದ (Hindu mythology) ಮಹಿಳೆಯರ ಬಗ್ಗೆ ತಿಳಿದುಕೊಳ್ಳೋಣ. ಏಕೆಂದರೆ ಅವರು ಒಂದಿಲ್ಲೊಂದು ಕಾರಣಗಳಿಂದ ನಮಗೆ ದಾರಿ ದೀಪವಾಗುತ್ತಾರೆ. ಹಾಗಾಗಿ ಈ ಬಾರಿ ಹಿಂದೂ ಪುರಾಣಗಳಲ್ಲಿ ಬರುವ ಶಕ್ತಿಶಾಲಿ ಮಹಿಳೆಯರನ್ನು ಗೌರವಿಸುವ ಮೂಲಕ ಮಹಿಳಾ ದಿನವನ್ನು ಆಚರಿಸಿ. ಅವರ ಶಕ್ತಿ, ನಿಷ್ಠೆ ಎಲ್ಲವೂ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತದೆ.

ಹಿಂದೂ ಪುರಾಣಗಳಲ್ಲಿ ಕಂಡು ಬರುವ ಶಕ್ತಿಶಾಲಿ ಮಹಿಳೆಯರು ಯಾರು?

ಪಾರ್ವತಿ ದೇವಿ

ಪ್ರೀತಿ, ನಿಷ್ಠೆಗೆ ಹೆಸರುವಾಸಿಯಾದ ಪಾರ್ವತಿ ದೇವಿಯೂ ಎಲ್ಲಾ ಮಹಿಳೆಯರಿಗೂ ಸ್ಫೂರ್ತಿಯಾಗುತ್ತಾಳೆ. ಹಿಂದೂ ದೇವತೆಗಳಲ್ಲಿ ಆಕೆ ಅಗ್ರಸ್ಥಾನದಲ್ಲಿ ನಿಲ್ಲುತ್ತಾಳೆ. ಆಕೆಯು ಪ್ರೀತಿ ಮತ್ತು ದೃಢತೆಗೆ ಹೆಸರುವಾಸಿಯಾಗಿದ್ದಾಳೆ ಜೊತೆಗೆ ಶಿವನ ಪತ್ನಿಯಾಗಿ ರಕ್ಷಣೆ ನೀಡುವ ತಾಯಿಯಾಗಿ ಎಲ್ಲರನ್ನೂ ಸಲಹುತ್ತಾಳೆ.

ಸರಸ್ವತಿ ದೇವಿ

ಜ್ಞಾನದ ದೇವತೆಯಾಗಿ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ಸಾಹಿತ್ಯ, ಸಂಗೀತ ಮತ್ತು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡುವವರು ಮೊದಲು ಆಕೆಯ ಆಶೀರ್ವಾದ ಪಡೆಯಬೇಕು. ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಲು ಪ್ರತಿದಿನವೂ ಆಕೆಯನ್ನು ಆರಾಧಿಸಿ. ಸರಸ್ವತಿ ದೇವಿಯನ್ನು ಪೂಜಿಸದವರು ಎಂದಿಗೂ ಉನ್ನತ ಮಟ್ಟಕ್ಕೆ ಹೋಗಲಾರರು ಎಂಬ ಮಾತಿದೆ. ಹಾಗಾಗಿ ಅವಳು ಯಾರನ್ನೂ ಕೈ ಬಿಡುವುದಿಲ್ಲ. ನೀವು ಆಕೆಯನ್ನು ನಂಬಿ ಯಶಸ್ಸನ್ನು ಮಡಿಲಿಗೆ ಹಾಕಿಕೊಳ್ಳಬಹುದು.

ಅನುಸೂಯಾ

ಹಿಂದೂ ಪುರಾಣಗಳಲ್ಲಿ, ಅನಸೂಯಾಳನ್ನು ಧರ್ಮನಿಷ್ಠೆಗೆ ಹೆಸರುವಾಸಿಯಾದ ಮಹಿಳೆ ಎಂದು ಗುರುತಿಸಲಾಗುತ್ತದೆ, ಜೊತೆಗೆ ಅವಳ ಪರಿಶುದ್ಧ ಭಕ್ತಿಗಾಗಿ ಅವಳನ್ನು ಆರಾಧಿಸಲಾಗುತ್ತದೆ. ಅನಸೂಯೆ ಕರ್ದಮ ಮುನಿ ಹಾಗು ದೇವಹೂತಿಯರ ಮಗಳು. ಅತ್ರಿ ಮಹರ್ಷಿಯ ಹೆಂಡತಿ. ಪರಮ ಪತಿವ್ರತೆ. ಹಾಗಾಗಿ ಪ್ರತಿ ಮಹಿಳೆಯರಿಗೂ ಆಕೆ ಸ್ಫೂರ್ತಿಯಾಗಿ, ಒಂದು ರೀತಿಯ ಶಕ್ತಿಯಾಗಿ ನಿಲ್ಲುತ್ತಾಳೆ.

ಅಹಲ್ಯಾ

ಹಿಂದೂ ಪುರಾಣಗಳಲ್ಲಿ, ಅಹಲ್ಯಾ ತನ್ನ ಪರಿಶುದ್ಧ ಭಕ್ತಿಗೆ ಹೆಸರುವಾಸಿಯಾದ ಗೌರವಾನ್ವಿತ ಮಹಿಳೆ. ದಾಂಪತ್ಯದಲ್ಲಿ ಆದ ದ್ರೋಹಕ್ಕಾಗಿ ಅವಳು ಗಂಡನಿಂದ ಶಾಪಗ್ರಸ್ತಳಾಗಿ ಬಳಿಕ ಪ್ರಭು ಶ್ರೀರಾಮನ ಪಾದಸ್ಪರ್ಶದಿಂದಾಗಿ ಶಾಪದಿಂದ ವಿಮೋಚನೆಗೊಂಡಳು. ಹಿಂದೂ ಧರ್ಮದಲ್ಲಿ, ಅಹಲ್ಯೆಯನ್ನು ಪಂಚಕನ್ಯೆಯರಲ್ಲಿ ಪ್ರಮುಖಳು ಎಂದು ಗುರುತಿಸಲಾಗುತ್ತದೆ.

ಕುಂತಿ

ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಕುಂತಿಯೂ ಒಬ್ಬಳು. ಜೀವನದಲ್ಲಿ ಬಂದ ಎಲ್ಲಾ ತೊಂದರೆಗಳ ಹೊರತಾಗಿಯೂ ಕೂಡ ಆಕೆ ನೈತಿಕತೆಯನ್ನು ಬಿಡಲಿಲ್ಲ, ಬದ್ಧತೆಯಲ್ಲಿ ಎಂದಿಗೂ ಚಂಚಲತೆಯನ್ನು ತೋರಲಿಲ್ಲ. ಈಕೆ ಯದುವಂಶಿ ರಾಜ ಶೂರಸೇನನ ಮಗಳು. ವಸುದೇವ ಮತ್ತು ಸುತ್ಸುಭನ ಸಹೋದರಿ. ಹಸ್ತಿನಾಪುರದ ರಾಜ ಪಾಂಡುವಿನ ಮೊದಲ ಪತ್ನಿ ಹಾಗೂ ಐವರು ಪಾಂಡವರ ತಾಯಿ.

ದ್ರೌಪದಿ

ಮಹಾಭಾರತದ ಪ್ರಮುಖ ಪಾತ್ರಧಾರಿ ದ್ರೌಪದಿ. ಅವಳು ತನ್ನ ಶೌರ್ಯ, ಬುದ್ಧಿವಂತಿಕೆ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾಳೆ. ದ್ರೌಪದಿ ಪಾಂಡವರ ಪತ್ನಿ. ಪಾಂಚಾಲ ರಾಜನ ಮಗಳು. ದ್ರುಪದರಾಜನು ಪುತ್ರಕಾಮೇಷ್ಟಿ ಯಾಗವನ್ನು ಮಾಡಿದ್ದರಿಂದ ದ್ರೌಪದಿಯು ಜನಿಸಿದಳು ಎನ್ನಲಾಗುತ್ತದೆ. ಮಹಾಭಾರತದಲ್ಲಿ ದ್ರೌಪದಿ ತನ್ನ ಹಕ್ಕುಗಳಿಗಾಗಿ ಮಾಡಿದ ಹೋರಾಟ, ಅನ್ಯಾಯದ ವಿರುದ್ಧ ಅವಳ ನಿಲುವು ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗಾಗಿ ಆಕೆ ಈ ಯುಗದ ಮಹಿಳೆಯರಿಗೂ ಕೂಡ ಮಾದರಿಯಾಗಿ ನಿಲ್ಲುತ್ತಾಳೆ.

ಸೀತಾ ದೇವಿ

ರಾಮಾಯಣದಲ್ಲಿ ಸೀತಾ ದೇವಿಯ ಬಗ್ಗೆ ಓದಿ ತಿಳಿದುಕೊಂಡವರಿಗೆ ಆಕೆ ಎಲ್ಲಾ ಸಮಯದಲ್ಲಿಯೂ ಮಾರ್ಗದರ್ಶಿಯಾಗಿ ನಿಲ್ಲುತ್ತಾಳೆ. ಅವಳು ತನ್ನ ನಿಷ್ಠೆ, ಮುಗ್ಧತೆ ಮತ್ತು ಸ್ಥೈರ್ಯಕ್ಕಾಗಿ ಗೌರವಿಸಲ್ಪಟ್ಟಿದ್ದಾಳೆ. ಶ್ರೀ ರಾಮನ ಪತ್ನಿಯಾದ ಸೀತಾ ದೇವಿಯು, ಅಚಲ ನಂಬಿಕೆ ಇದ್ದಲ್ಲಿ ಎಂದಿಗೂ ಸೋಲು ಬರದು ಎಂಬುದನ್ನು ಸಾಬೀತುಪಡಿಸಿದ್ದಳು. ರಾಮನೊಂದಿಗೆ ವನವಾಸಕ್ಕೆ ಹೋದಾಗ ವಿವಿಧ ಕಷ್ಟಗಳನ್ನು ಅನುಭವಿಸಿದ್ದಳು, ಅಲ್ಲದೆ ಆಶ್ರಮದಲ್ಲಿ ತನ್ನ ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದ್ದಳು. ಹಾಗಾಗಿ ಅವಳು ಇಂದಿನ ಎಲ್ಲಾ ಹೆಣ್ಣುಮಕ್ಕಳಿಗೂ ಆಕೆ ಆದರ್ಶ ಮಹಿಳೆಯಾಗಿದ್ದಾಳೆ.

ಸಾವಿತ್ರಿ

ಹಿಂದೂ ಧರ್ಮದಲ್ಲಿ ಸಾವಿತ್ರಿಯನ್ನು ಸತಿಶ್ರೇಷ್ಠರಲ್ಲಿ ಒಬ್ಬಳೆಂದು ಗುರುತಿಸಲಾಗುತ್ತದೆ. ಸತ್ಯವಾನ್ ಅವರ ಪತ್ನಿಯಾದ ಸಾವಿತ್ರಿ, ತನ್ನ ಪತಿ ಮರಣ ಹೊಂದಿದಾಗ ಯಮನೊಡನೆ ಮಾತಿನಲ್ಲೇ ಹೋರಾಡಿ, ತನ್ನ ಪತಿಯ ಪ್ರಾಣವನ್ನು ಉಳಿಸಿಕೊಳ್ಳುತ್ತಾಳೆ. ಹಾಗಾಗಿ ಸಾವಿತ್ರಿಯು ನಂಬಿಕೆ, ಪ್ರೀತಿ ಮತ್ತು ಮಹಿಳೆಯ ಅಚಲ ಮನೋಭಾವಕ್ಕೆ ಸಾಕ್ಷಿಯಾಗುತ್ತಾಳೆ.

ಇದನ್ನೂ ಓದಿ: ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಹೆಣ್ಣಿನಲ್ಲಿ ಎಂತಹ ಗುಣವಿರಬೇಕು

ಮಂಡೋದರಿ

ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಮಂಡೋದರಿಯು ಪ್ರಮುಖ ವ್ಯಕ್ತಿಯಾಗಿದ್ದಾಳೆ. ಮಂಡೋದರಿ ರಾವಣನ ಪತ್ನಿ, ಅಸುರ ರಾಜನಾದ ಮಾಯಾಸುರ ಮತ್ತು ಸುಂದರಿ ಅಪ್ಸರೆಯ ಮಗಳು. ಆಕೆ ತನ್ನ ತಾಯಿಯಂತೆ ಅತ್ಯಂತ ಸುಂದರಿಯೂ, ಗುಣವಂತಳೂ ಆಗಿದ್ದಳು. ರಾವಣ ಎಷ್ಟೇ ಹೀನ ಕಾರ್ಯಗಳನ್ನು ಮಾಡಿದರೂ ಆಕೆ ಅವನನ್ನು ಸರಿ ದಾರಿಗೆ ತರಲು ಪ್ರಯತ್ನಿಸಿದಳೇ ಹೊರತು ಆತನಿಂದ ದೂರವಾಗಲಿಲ್ಲ ಹಾಗಾಗಿ ಈಕೆಯನ್ನು ರಾಮಾಯಣದಲ್ಲಿ ಮಹಾನ್‌ ಪತಿವ್ರತೆ ಎಂದು ಉಲ್ಲೇಖಿಸಲಾಗಿದೆ.

ಊರ್ಮಿಳಾ

ರಾಮಾಯಣದಲ್ಲಿ, ರಾಮನ ನಿಷ್ಠಾವಂತ ಸಹೋದರನಾದ ಲಕ್ಷ್ಮಣನ ಪತ್ನಿ ಊರ್ಮಿಳಾ. ಲಕ್ಷ್ಮಣನು ರಾಮ ಮತ್ತು ಸೀತೆಯೊಂದಿಗೆ ವನವಾಸಕ್ಕೆ ಹೋದಾಗ ಊರ್ಮಿಳಾ ಅಯೋಧ್ಯೆಯಲ್ಲಿ ಉಳಿಯಲು ನಿರ್ಧರಿಸಿ ತನ್ನ ಗಂಡನಿಗಾಗಿ ಎಲ್ಲಾ ರೀತಿಯ ಸುಖ- ಸಂಪತ್ತುಗಳನ್ನು ತ್ಯಾಗ ಮಾಡಿದಳು. ಹಾಗಾಗಿ ಊರ್ಮಿಳಾ ಮಾಡಿದ ನಿಸ್ವಾರ್ಥ ಪ್ರೀತಿ ಎಲ್ಲರಿಗೂ ದಾರಿದೀಪವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ