AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Garuda Purana: ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಹೆಣ್ಣಿನಲ್ಲಿ ಎಂತಹ ಗುಣವಿರಬೇಕು

ಗರುಡ ಪುರಾಣದಲ್ಲಿ ತಿಳಿಸಿರುವ ಕ್ರಮ ಅನುಸರಿಸುವ ಮೂಲಕ ಸರಿ -ತಪ್ಪುಗಳನ್ನು ಗುರುತಿಸುವುದರ ಜೊತೆಗೆ ಧರ್ಮ- ಕರ್ಮದ ಮಾರ್ಗವನ್ನು ಅನುಸರಿಸುವ ಮೂಲಕ ಉತ್ತಮ ಜೀವನ ನಡೆಸಬಹುದು. ಇದೇ ರೀತಿಯಲ್ಲಿ ಒಂದು ಹೆಣ್ಣು ಯಾವ ಯಾವ ಗುಣಗಳನ್ನು ಅಳವಡಿಸಿಕೊಂಡಿರಬೇಕು ಎಂಬುದರ ಬಗ್ಗೆಯೂ ಗರುಡ ಪುರಾಣದಲ್ಲಿ ಮಾಹಿತಿ ನೀಡಲಾಗಿದೆ. ಹಾಗಾದರೆ ಯಾವ ಗುಣಗಳನ್ನು ಹೊಂದಿರಬೇಕು? ಪುರಾಣಗಳಲ್ಲಿ ಹೇಳಿರುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Garuda Purana: ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಹೆಣ್ಣಿನಲ್ಲಿ ಎಂತಹ ಗುಣವಿರಬೇಕು
Garuda PuranaImage Credit source: Pinterest
ಪ್ರೀತಿ ಭಟ್​, ಗುಣವಂತೆ
| Edited By: |

Updated on:Mar 07, 2024 | 12:51 PM

Share

ಹಿಂದೂ ಧರ್ಮದಲ್ಲಿ ಒಟ್ಟು ನಾಲ್ಕು ವೇದಗಳು ಮತ್ತು 18 ಮಹಾ ಪುರಾಣಗಳಿವೆ. ಇವುಗಳಲ್ಲಿ ಗರುಡ ಪುರಾಣವೂ ಸೇರಿದೆ. ಇದರಲ್ಲಿ ಮಾನವನ ಜೀವನ ಮತ್ತು ಮರಣಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಲಾಗಿದೆ. ಈ ಪುರಾಣದಲ್ಲಿ ತಿಳಿಸಿರುವ ಕ್ರಮಗಳನ್ನು ಅನುಸರಿಸುವ ಮೂಲಕ, ಸರಿ – ತಪ್ಪುಗಳನ್ನು ಗುರುತಿಸಬಹುದು ಜೊತೆಗೆ ಧರ್ಮ- ಕರ್ಮದ ಮಾರ್ಗವನ್ನು ಅನುಸರಿಸುವ ಮೂಲಕ ಉತ್ತಮ ಜೀವನವನ್ನು ನಡೆಸಬಹುದು. ಇದೇ ರೀತಿಯಲ್ಲಿ ಒಂದು ಹೆಣ್ಣು ಯಾವ ಯಾವ ಗುಣಗಳನ್ನು ಅಳವಡಿಸಿಕೊಂಡಿರಬೇಕು ಎಂಬುದರ ಬಗ್ಗೆಯೂ ಗರುಡ ಪುರಾಣದಲ್ಲಿ ಮಾಹಿತಿ ನೀಡಲಾಗಿದೆ. ಹಾಗಾದರೆ ಯಾವ ಗುಣಗಳನ್ನು ಹೊಂದಿರಬೇಕು? ಪುರಾಣಗಳಲ್ಲಿ ಹೇಳಿರುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು:

ಹೆಣ್ಣು ಮಕ್ಕಳಿಗೆ ಎಲ್ಲಕ್ಕಿಂತ ಮುಖ್ಯವಾಗಿ, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಗುಣವಿರಬೇಕು. ಯಾವ ಮನೆ ಸ್ವಚ್ಛವಾಗಿರುತ್ತದೆಯೋ ಅಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರುತ್ತಾಳೆ. ಮನೆಯನ್ನು ನೆನಪಾದಾಗ ಸ್ವಚ್ಛ ಮಾಡುವ ಬದಲು ಪ್ರತಿ ನಿತ್ಯವೂ ಎಲ್ಲಾ ಕೆಲಸಗಳಂತೆಯೇ ಇದನ್ನು ಮುಖ್ಯ ಎಂದು ಮಾಡುವ ಹೆಣ್ಣು, ಮನೆಗೆ ಅದೃಷ್ಟವನ್ನು ತರುತ್ತಾಳೆ. ಜೊತೆಗೆ ಅಂತಹ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ಸದಾ ನೆಲೆಯಾಗಿರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.

ಅತಿಥಿಗಳನ್ನು ಸತ್ಕರಿಸುವ ಗುಣವಿರಬೇಕು:

ಮನೆಗೆ ಅತಿಥಿಗಳು ಬಂದಾಗ ಅವರನ್ನು ಕಡೆಗಣಿಸದೆಯೇ ಅವರನ್ನು ಆದರ, ಆತಿಥ್ಯಗಳಿಂದ ಸತ್ಕರಿಸುವ ಗುಣವಿರಬೇಕು. ಇಂತಹ ಗುಣವಿದ್ದ ಹೆಣ್ಣಿಗೆ ಎಲ್ಲಾ ಕಡೆಗಳಲ್ಲಿಯೂ ಗೌರವ ಪ್ರಾಪ್ತವಾಗುತ್ತದೆ ಎಂದು ಪುರಾಣ ಹೇಳುತ್ತದೆ. ಮನೆಯ ಹಿರಿಮೆಯನ್ನು ಕಾಪಾಡಿ, ಹಿರಿಯರ ಗೌರವಕ್ಕೆ ದಕ್ಕೆ ಬರದಂತೆ ನೋಡಿಕೊಳ್ಳುವ ಮಹಿಳೆಯೂ ಪ್ರತಿ ಮನೆಗೂ ಅದೃಷ್ಟಶಾಲಿಯಾಗಿರುತ್ತಾಳೆ. ಅಲ್ಲದೆ ಪುರಾಣಗಳ ಪ್ರಕಾರ ಈ ಗುಣಗಳು ಹೆಣ್ಣಿಗೆ ಶ್ರೇಯಸ್ಸಾಗಿದೆ.

ಯಾರಿಗೂ ನೋವು ಮಾಡದವಳು:

ತನ್ನಿಂದ ಯಾರಿಗೂ ನೋವಾಗಬಾರದು ಎಂದು ಬಯಸುವುದು ಉತ್ತಮ ಗುಣಗಳಲ್ಲಿ ಒಂದಾಗಿದೆ. ಅಂತಹ ಮಹಿಳೆ ಸಮಾಜದಲ್ಲಿ ಎಲ್ಲರ ಪ್ರೀತಿ ಮತ್ತು ಗೌರವವನ್ನು ಪಡೆಯುತ್ತಾಳೆ. ಮನದಾಳದಿಂದ ಇನ್ನೊಬ್ಬರಿಗೆ ನೋವು ಮಾಡಬಾರದು ಎಂದು ಯೋಚಿಸುವವರಿಗೆ ಎಂದಿಗೂ ಕೆಡುಕಾಗುವುದಿಲ್ಲ ಎನ್ನುತ್ತದೆ ಪುರಾಣ.

ನಂಬಿಕೆಗೆ ಅರ್ಹಳಾಗಿರಬೇಕು:

ಎಲ್ಲರಿಗೂ ನಂಬಿಕಸ್ತಳಾಗಿರುವುದೇ ಹೆಣ್ಣಿನ ಅತಿ ದೊಡ್ಡ ಗುಣವಾಗಿದ್ದು, ಮನೆಯವರಿಗಾಗಲಿ ಅಥವಾ ಮದುವೆಯಾದ ಕುಟುಂಬದಲ್ಲಾಗಲಿ ಯಾರಿಗೂ ಸುಳ್ಳು ಹೇಳದೆಯೇ, ಕುಟುವಾದ ಸತ್ಯವನ್ನು ನುಡಿಯುವ ಮಹಿಳೆಯೂ ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರಳಾಗುತ್ತಾಳೆ. ಬದುಕಿನಲ್ಲಿ ಒಂದು ಸುಳ್ಳನ್ನು ಮುಚ್ಚಲು ಇನ್ನೊಂದು ಸುಳ್ಳು ಹೇಳುವ ಮನಸ್ಥಿತಿ ಎಂದಿಗೂ ಒಳ್ಳೆಯದಲ್ಲ. ಹಾಗಾಗಿ ಹೆಣ್ಣು ಎಂದಿಗೂ ನಂಬಿಕೆಗೆ ಅರ್ಹಳಾಗಿರಬೇಕು ಎನ್ನುತ್ತದೆ ಪುರಾಣ.

ಇಂತಹ ಹೆಣ್ಣಿರುವ ಮನೆಯೂ ಸುಖ, ಶಾಂತಿ, ನೆಮ್ಮದಿಯಿಂದ ಕೊಡಿರುತ್ತದೆ. ಅದಲ್ಲದೆ ಆಕೆಯ ಮುಂದಿನ ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ. ಇದು ಹೆಣ್ಣು ಮಕ್ಕಳು ಹೀಗೆ ಇರಬೇಕು ಎಂಬುದಲ್ಲ, ಬದಲಾಗಿ ಇಂತಹ ಗುಣಗಳು ಹೆಣ್ಣು ಮಕ್ಕಳಿಗೆ ಗೌರವ ತಂದು ಕೊಡುತ್ತದೆ. ಜೊತೆಗೆ ಗರುಡ ಪುರಾಣದಲ್ಲಿ ತಿಳಿಸಿರುವ ಅಂಶಗಳನ್ನು ಅಳವಡಿಸಿಕೊಂಡಲ್ಲಿ ಜೀವನ ಇನ್ನಷ್ಟು ಸುಂದರ ಗೊಳ್ಳುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:01 pm, Tue, 5 March 24

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಅದೆಂತಹ ನೋವು... ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ!
ಅದೆಂತಹ ನೋವು... ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ!
‘ಸಿಂಪತಿ ಬೇಡ, ಸೋಲು ಪದ ಕೇಳಿದ್ರೆ ಸಿಟ್ಟು ಬರುತ್ತೆ’; ರವಿಚಂದ್ರನ್
‘ಸಿಂಪತಿ ಬೇಡ, ಸೋಲು ಪದ ಕೇಳಿದ್ರೆ ಸಿಟ್ಟು ಬರುತ್ತೆ’; ರವಿಚಂದ್ರನ್
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ