Spirituality: ಹಿಂದೂ ಧರ್ಮದಲ್ಲಿ ಸಂಖ್ಯೆ ‘108’ ಏಕೆ ವಿಶೇಷವೆಂದು ಪರಿಗಣಿಸಲಾಗುತ್ತದೆ?

ಹಿಂದೂ ಧರ್ಮದಲ್ಲಿ, ಸಂಖ್ಯೆ '108' ನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೇ ನೀವು ಯಾವುದೇ ಮಂತ್ರವನ್ನು 108 ಬಾರಿ ಜಪಿಸಿದರೆ ಮಾತ್ರ ಫಲ ಲಭಿಸುವುದು ಎಂಬ ನಂಬಿಕೆ ಇದೆ. ಆದ್ದರಿಂದ ಈ ಸಂಖ್ಯೆಯನ್ನು ಏಕೆ ವಿಶೇಷವೆಂದು ಪರಿಗಣಿಸಲಾಗುತ್ತದೆ,ಇದರ ಹಿಂದಿನ ನಂಬಿಕೆಗಳೇನು? ಎಂಬುದನ್ನು ಇಲ್ಲಿ ತಿಳಿಯಿರಿ.

Spirituality: ಹಿಂದೂ ಧರ್ಮದಲ್ಲಿ ಸಂಖ್ಯೆ '108' ಏಕೆ  ವಿಶೇಷವೆಂದು ಪರಿಗಣಿಸಲಾಗುತ್ತದೆ?
Spirituality
Follow us
ಅಕ್ಷತಾ ವರ್ಕಾಡಿ
|

Updated on: Dec 29, 2023 | 1:13 PM

ಹಿಂದೂ ಧರ್ಮದಲ್ಲಿ, ಸಂಖ್ಯೆ ‘108’ ನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದೇವರ ನಾಮವನ್ನು ಜಪಿಸಲು ಬಳಸುವ ಯಾವುದೇ ಜಪಮಾಲೆಯು 108 ಮಣಿಗಳಿಂದ ಕೂಡಿರಬೇಕು. ವಿಶೇಷವಾಗಿ ರುದ್ರಾಕ್ಷಿ ಜಪಮಾಲೆಯಲ್ಲಿ 108 ಮಣಿಗಳಿವೆ. ಹಿಂದೂ ಧರ್ಮದಲ್ಲಿ ಮತ್ತು ಬೌದ್ಧ ಧರ್ಮದಲ್ಲಿ, 108 ಸಂಖ್ಯೆಯನ್ನು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೇ ನೀವು ಯಾವುದೇ ಮಂತ್ರವನ್ನು 108 ಬಾರಿ ಜಪಿಸಿದರೆ ಮಾತ್ರ ಫಲ ಲಭಿಸುವುದು ಎಂಬ ನಂಬಿಕೆ ಇದೆ. ತುಳಸಿಗೆ 108 ಬಾರಿ ಪ್ರದಕ್ಷಿಣೆ ಮಾಡಿದರೆ ಮಾತ್ರ ಮನೆಯ ದಾರಿದ್ರ್ಯ ದೂರವಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಈ ಸಂಖ್ಯೆಯನ್ನು ಏಕೆ ವಿಶೇಷವೆಂದು ಪರಿಗಣಿಸಲಾಗುತ್ತದೆ,ಇದರ ಹಿಂದಿನ ನಂಬಿಕೆಗಳೇನು? ಎಂಬುದನ್ನು ಇಲ್ಲಿ ತಿಳಿಯಿರಿ.

108 ಸಂಖ್ಯೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆಯೇ?

ಧಾರ್ಮಿಕ ನಂಬಿಕೆಗಳ ಪ್ರಕಾರ, ರಾಮನ ಹೆಸರನ್ನು ಅಥವಾ ಯಾವುದೇ ಇತರ ದೇವರ ಹೆಸರನ್ನು 108 ಬಾರಿ ಜಪಿಸುವುದು ಅತ್ಯಂತ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೇ ಮತ್ತೊಂದು ಕಾರಣವೆಂದರೆ ಸಾವಿರಾರು ಗೋಪಿಯರಲ್ಲಿ ಶ್ರೀಕೃಷ್ಣನ ಬಗ್ಗೆ 108 ಗೋಪಿಯರು ಮಾತ್ರ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯರಾಗಿದ್ದರು. ಶ್ರೀ ಕೃಷ್ಣನು ಬಾಲ್ಯದಲ್ಲಿ ಅವರೊಂದಿಗೆ ಆಟವಾಡುತ್ತಾ ಬೆಳೆದಿದ್ದು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಶಿವ ತಾಂಡವ:

ಮಂಗಳಕರವಾದ ಸಂಖ್ಯೆ ‘108’ ಶಿವ ದೇವನಿಗೂ ಸಂಬಂಧವನ್ನು ಹೊಂದಿದೆ. ಶಿವನು ಕೋಪಗೊಂಡಾಗ ತಾಂಡವ ನೃತ್ಯವನ್ನು ಮಾಡುತ್ತಾನೆ ಎಂಬ ನಂಬಿಕೆಯಿದೆ. ಈ ತಾಂಡವವು 108 ಭಂಗಿಗಳನ್ನು ಒಳಗೊಂಡಿರುವ ನೃತ್ಯವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಹಣೆಗೆ ತಿಲಕ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ರುದ್ರಾಕ್ಷ ಜಪಮಾಲೆ:

ಹಿಂದೂ ಧರ್ಮದಲ್ಲಿ ರುದ್ರಾಕ್ಷಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ರುದ್ರಾಕ್ಷಿಯು ಶಿವನ ಕಣ್ಣೀರಿಂದ ಉಗುಮವಾಗಿ ಎಂದು ನಂಬಲಾಗಿದೆ.ರುದ್ರಾಕ್ಷಿ ಜಪಮಾಲೆಯಲ್ಲಿ ಕೇವಲ 108 ಮಣಿಗಳಿವೆ. ಈ ಮಣಿಗಳಿಂದಾಗಿ ಶಿವನ ವಿಶೇಷ ಆಶೀರ್ವಾದ ಪಡೆಯಬಹುದಾಗಿದೆ.

ಬೌದ್ಧ ಧರ್ಮದ ನಂಬಿಕೆ:

ಬೌದ್ಧ ಧರ್ಮದ ಪ್ರಕಾರ, ಮನಸ್ಸಿನಲ್ಲಿ 108 ರೀತಿಯ ಭಾವನೆಗಳಿವೆ. ಪ್ರತಿಯೊಬ್ಬ ಮನುಷ್ಯನೊಳಗೆ 108 ರೀತಿಯ ಭಾವನೆಗಳಿರುತ್ತವೆ. ಈ ಕಾರಣಕ್ಕಾಗಿ 108 ಸಂಖ್ಯೆಯನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಇದಲ್ಲದೇ ಅನೇಕ ಬೌದ್ಧ ದೇವಾಲಯಗಳಲ್ಲಿ 108 ಮೆಟ್ಟಿಲುಗಳನ್ನು ಕಾಣಬಹುದು.

ಜ್ಯೋತಿಷ್ಯಶಾಸ್ತ್ರ:

ಜ್ಯೋತಿಷ್ಯಶಾಸ್ತ್ರದ ಪ್ರಕಾರ,ಇದು ಇಡೀ ವಿಶ್ವವನ್ನು 12 ಭಾಗಗಳಾಗಿ ವಿಭಜಿಸುವ ಮೇಲೆ ಆಧಾರಿತವಾಗಿದೆ. ಅದರಲ್ಲಿ 9 ಗ್ರಹಗಳು ಚಲಿಸುತ್ತಲೇ ಇರುತ್ತವೆ. 12 ಮತ್ತು 9 ಸಂಖ್ಯೆಗಳನ್ನು ಪರಸ್ಪರ ಗುಣಿಸಿದಾಗ 108 ಸಂಖ್ಯೆ ಬರುತ್ತದೆ. ಆದ್ದರಿಂದ ಈ ಸಂಖ್ಯೆಯು ಇಡೀ ಜಗತ್ತನ್ನು ಪ್ರತಿನಿಧಿಸುತ್ತದೆ ಎಂದು ಸಾಬೀತಾಗಿದೆ.

ಆಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?