Panchakanya Smarana: ಪಂಚಕನ್ಯಾ ಸ್ಮರಣೆದಿಂದ ಸಿಗುವ ಫಲವೇನು? ಜ್ಯೋತಿಷ್ಯ ಸಲಹೆ ಇಲ್ಲಿದೆ

ನಮ್ಮ ಕಷ್ಟಗಳಿಗೆ ಮತ್ತು ಸಮಸ್ಯೆಗಳಿಗೆ ಪಂಚಕನ್ಯಾ ಸ್ಮರಣೆಯು ಒಂದು ಮಹತ್ವದ ಪರಿಹಾರವಾಗಿದೆ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ. ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರಿ ಎಂಬ ಐದು ಆದರ್ಶ ಮಹಿಳೆಯರ ನಿತ್ಯ ಸ್ಮರಣೆಯು ಮಹಾಪಾತಕಗಳನ್ನು ನಾಶಪಡಿಸಿ, ಕಾರ್ಯಸಿದ್ಧಿ, ಧೈರ್ಯ, ಸ್ಥೈರ್ಯ ಮತ್ತು ವಿಘ್ನ ನಿವಾರಣೆಗೆ ಸಹಾಯಕವಾಗಿದೆ. ಇದು ಎಲ್ಲ ರೀತಿಯ ಅಡೆತಡೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.

Panchakanya Smarana: ಪಂಚಕನ್ಯಾ ಸ್ಮರಣೆದಿಂದ ಸಿಗುವ ಫಲವೇನು? ಜ್ಯೋತಿಷ್ಯ ಸಲಹೆ ಇಲ್ಲಿದೆ
ಪಂಚಕನ್ಯಾ ಸ್ಮರಣೆ

Updated on: Oct 03, 2025 | 10:40 AM

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಪಂಚಕನ್ಯಾ ಸ್ಮರಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ಉಲ್ಲೇಖಿತವಾದ ಮಹನೀಯರ ಮತ್ತು ಋಷಿಗಳ ಸ್ಮರಣೆ, ಪೂರ್ವಿಕರ ಸ್ಮರಣೆ ಇವೆಲ್ಲವೂ ನಮ್ಮ ಬದುಕಿಗೆ ಹಿತವನ್ನು ತರುತ್ತವೆ. ಇಂತಹ ಸ್ಮರಣೆಗಳಲ್ಲಿ ತಕ್ಷಣವೇ ಫಲಿತಾಂಶಗಳನ್ನು ನೀಡುವಂತಹ ಒಂದು ವಿಶಿಷ್ಟ ವಿಧಾನವೆಂದರೆ ಪಂಚಕನ್ಯಾ ಸ್ಮರಣೆ. ಇದನ್ನು ಪತಿವ್ರತಾ ಸ್ಮರಣೆ ಎಂದೂ ಕರೆಯಲಾಗುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಕನ್ಯಾ ಎಂಬ ಪದಕ್ಕೆ ಇಲ್ಲಿ ವಿವಾಹವಾಗದವರು ಎಂಬ ಅರ್ಥವಲ್ಲ. ಬದಲಾಗಿ, ಶುಭ ಮತ್ತು ಶುದ್ಧ ಗುಣಗಳನ್ನು ಹೊಂದಿರುವ ಮಹಿಳೆಯರು ಎಂದು ವ್ಯಾಖ್ಯಾನಿಸಲಾಗಿದೆ. ಇತಿಹಾಸ ಮತ್ತು ಪುರಾಣಗಳಲ್ಲಿ ಉಲ್ಲೇಖಿತವಾಗಿರುವ ಈ ಪಂಚಕನ್ಯಾ ಸ್ಮರಣೆ, ಅಥವಾ ಪತಿವ್ರತಾ ಸ್ಮರಣೆಯು ನಮ್ಮ ಕಷ್ಟಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ಶನಿ ಕಾಟ, ಮಾಟ ಮಂತ್ರ, ದುಷ್ಟ ಗ್ರಹಗಳ ಕಾಟದಿಂದ ಬಳಲುತ್ತಿರುವವರು, ನಿರಂತರ ಸಮಸ್ಯೆಗಳಿಂದ ನೊಂದಿರುವವರು ಈ ಐದು ಆದರ್ಶ ಮಹಿಳೆಯರ ಹೆಸರನ್ನು ಸ್ಮರಿಸುವುದರಿಂದ ಕಾರ್ಯಸಿದ್ಧಿ ಪಡೆಯಬಹುದು. ಇದರಿಂದ ಸಂಕಲ್ಪಗಳು ಈಡೇರುತ್ತವೆ, ಮನೆ ಕಟ್ಟಿಕೊಳ್ಳುವ ಕನಸು, ಸೈಟ್ ಖರೀದಿಯಂತಹ ಮಹತ್ವದ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಅರ್ಧಂಬರ್ಧ ನಿಂತ ಕೆಲಸಗಳು ಪೂರ್ಣಗೊಂಡು, ಜೀವನದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ತುಳಸಿ ಮಾಲೆ ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

ಈ ಐದು ಕನ್ಯೆಯರು ಯಾರು ಮತ್ತು ಅವರ ಸ್ಮರಣೆ ಹೇಗೆ ಮಹತ್ವ ಪಡೆದಿದೆ ಎಂಬುದನ್ನು ಪುರಾಣಗಳು ಮತ್ತು ಅನುಭವಿಗಳು ವಿವರಿಸಿದ್ದಾರೆ. ಅವರು ಅಹಲ್ಯಾ, ದ್ರೌಪದಿ, ಸೀತಾ, ತಾರಾ ಮತ್ತು ಮಂಡೋದರಿ. ಇವರ ಕುರಿತಾದ ಶ್ಲೋಕ ಹೀಗಿದೆ: “ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರಿ ತಥಾ, ಪಂಚಕನ್ಯಾ ಸ್ಮರೇನಿತ್ಯಂ, ಮಹಾಪಾತಕನಾಶನಂ.” ಈ ಶ್ಲೋಕದ ಅರ್ಥವೇನೆಂದರೆ, ಈ ಐದು ಮಹಿಳೆಯರ ನಿತ್ಯ ಸ್ಮರಣೆಯಿಂದ ಮಹಾಪಾತಕಗಳು ಕೂಡ ನಾಶವಾಗುತ್ತವೆ. ಮಹಾಪಾತಕ ಎಂದರೆ ಪೂರ್ವಜನ್ಮದ ಕರ್ಮಗಳು, ಈ ಜನ್ಮದಲ್ಲಿ ಅರಿತು ಮಾಡಿದ ಪಾಪಗಳು, ಹಾವನ್ನು ಸಾಯಿಸಿದಂತಹ ಪಾಪಗಳು ಸೇರಿದಂತೆ ದೊಡ್ಡ ಪಾಪಗಳು ಕೂಡ ಈ ಸ್ಮರಣೆಯಿಂದ ನಿವಾರಣೆಯಾಗುತ್ತವೆ ಎಂಬ ಗುರೂಜಿ ವಿವರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:39 am, Fri, 3 October 25