ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಒಬ್ಬರಿಂದ ಇನ್ನೊಬ್ಬರು ತೆಗೆದುಕೊಂಡು ಬಳಸುವುದು ಒಳ್ಳೆಯದಲ್ಲ. ಇದು ಒಬ್ಬರಿಂದ ಇನ್ನೊಬ್ಬರಿಗೆ ನಕಾರಾತ್ಮಕ ಶಕ್ತಿಯನ್ನು ವರ್ಗಾಯಿಸುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಪರಸ್ಪರ ವಸ್ತುಗಳನ್ನು ಹಂಚಿಕೊಳ್ಳುವುದು ಅಥವಾ ಅಗತ್ಯವಿದ್ದಾಗ ವಸ್ತುಗಳನ್ನು ಕೇಳುವುದು ಒಳ್ಳೆಯ ಅಭ್ಯಾಸಗಳೇ, ಆದರೆ ಕೆಲವು ಸಂದರ್ಭಗಳಲ್ಲಿ, ಇದು ಶುಭಕ್ಕಿಂತ ಅಶುಭ ಫಲಿತಾಂಶಕ್ಕೆ ಕಾರಣವಾಗಬಹುದು. ಹಾಗದರೆ ಯಾವೆಲ್ಲಾ ವಸ್ತುಗಳನ್ನು ಒಬ್ಬರಿಂದ ಪಡೆದು ಇನ್ನೊಬ್ಬರು ಬಳಸಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಇತರರ ಬಟ್ಟೆಗಳನ್ನು ಧರಿಸುವುದರಿಂದ ಒಬ್ಬರ ನಕಾರಾತ್ಮಕ ಶಕ್ತಿ ಇನ್ನೊಬ್ಬರಿಗೆ ವರ್ಗಾಯಿಸುತ್ತದೆ. ಬಟ್ಟೆಗಳು ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತವೆ. ನಾವು ಸಮಾರಂಭಗಳು ಮತ್ತು ಪಾರ್ಟಿಗಳ ಸಮಯದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರಿಂದ ಬಟ್ಟೆಗಳನ್ನು ಪಡೆಯುತ್ತೇವೆ. ನಂತರ ನಾವು ಅದನ್ನು ಅವರಿಗೆ ಹಿಂತಿರುಗಿಸುತ್ತೇವೆ. ಆದರೆ ಆ ತಪ್ಪನ್ನು ಮಾಡಬೇಡಿ ಎಂದು ಜ್ಯೋತಿಷ್ಯ ಹೇಳುತ್ತದೆ. ಹೀಗೆ ಮಾಡುವುದರಿಂದ, ನಿಮ್ಮೊಳಗಿನ ಸಕಾರಾತ್ಮಕ ಶಕ್ತಿ ಕಳೆದುಹೋಗುತ್ತದೆ ಮತ್ತು ನೀವು ಯಾರ ಬಟ್ಟೆ ಧರಿಸಿದ್ದೀರೋ ಅವರ ನಕಾರಾತ್ಮಕ ಶಕ್ತಿಯು ನಿಮಗೆ ಸಿಗುತ್ತದೆ. ಇದು ತೊಂದರೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಯಾವುದೋ ಶುಭ ಸಮಾರಂಭಗಳಿದ್ದಾಗ ಇತರರಿಂದ ಪಾದರಕ್ಷೆಗಳು ಅಥವಾ ಬೂಟುಗಳನ್ನು ತೆಗೆದುಕೊಂಡು ಅದನ್ನು ಬಳಸುವುದು ಸಹ ಒಳ್ಳೆಯದಲ್ಲ. ನಂಬಿಕೆಗಳ ಪ್ರಕಾರ, ನೀವು ಬೇರೆಯವರ ಶೂ ಅಥವಾ ಸ್ಯಾಂಡಲ್ ಧರಿಸಿದರೆ, ಆ ವ್ಯಕ್ತಿಯ ತೊಂದರೆಗಳು ನಿಮ್ಮ ಮೇಲೂ ಪರಿಣಾಮ ಬೀರುತ್ತವೆ.
ಇದನ್ನೂ ಓದಿ: ಶುಕ್ರ-ಬುಧ ಸಂಯೋಗ; ಈ 6ರಾಶಿಯವರು ಹಣದ ವಿಷಯಗಳಲ್ಲಿ ಜಾಗರೂಕರಾಗಿರಿ!
ನಮ್ಮಲ್ಲಿ ಎರಡು ಪೆನ್ನುಗಳಿದ್ದರೆ, ಯಾರದರೂ ಕೇಳಿದರೆ ಕೊಟ್ಟು ಬಿಡುತ್ತೇವೆ. ಆದರೆ ಜ್ಯೋತಿಷ್ಯ ಶಾಸ್ತ್ರವು ನೀವು ಆ ತಪ್ಪನ್ನು ಮಾಡಬಾರದು ಎಂದು ಹೇಳುತ್ತದೆ. ಏಕೆಂದರೆ ಪೆನ್ನು ಜ್ಞಾನಕ್ಕೆ ಸಂಬಂಧಿಸಿದ ವಸ್ತು. ಅದನ್ನು ಯಾರಿಗಾದರೂ ನೀಡುವುದರಿಂದ ವೃತ್ತಿಪರವಾಗಿ ನಿಮಗೆ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಇದನ್ನು ಇತರರೊಂದಿಗೆ ಹಂಚಿಕೊಳ್ಳದಿರುವುದು ಉತ್ತಮ.
ನೀವು ಬೇರೆಯವರ ಉಂಗುರವನ್ನು ಧರಿಸಬಾರದು. ಪ್ರತಿಯೊಂದು ರತ್ನ ಮತ್ತು ಲೋಹವು ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಅದು ವ್ಯಕ್ತಿಯ ಗ್ರಹಗಳು ಮತ್ತು ನಕ್ಷತ್ರಗಳಿಗೆ ಸಂಬಂಧಿಸಿದೆ. ಜೊತೆಗೆ ಬೇರೆಯವರ ವಾಚ್ ಧರಿಸುವುದರಿಂದ ಅವರ ಒಳ್ಳೆಯ ಮತ್ತು ಕೆಟ್ಟ ಕಾಲಗಳು ನಿಮ್ಮ ಮೇಲೆ ಪರಿಣಾಮ ಬೀರಬಹುದು ವಾಸ್ತು ಶಾಸ್ತ್ರಜ್ಞರು ಎಚ್ಚರಿಸುತ್ತಾರೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:48 am, Sun, 23 March 25