Deepavali 2023: ದೀಪಾವಳಿ ಹಬ್ಬ ಯಾವಾಗ? ದಿನದ ಮಹತ್ವ, ಪೂಜಾ ವಿಧಾನ, ಮುಹೂರ್ತಗಳ ಬಗ್ಗೆ ತಿಳಿದುಕೊಳ್ಳಿ

| Updated By: ಅಕ್ಷತಾ ವರ್ಕಾಡಿ

Updated on: Nov 09, 2023 | 10:07 AM

ಭಗವಾನ್ ಕೃಷ್ಣನಿಂದ ನರಕಾಸುರನಂತಹ ಅನೇಕ ರಾಕ್ಷಸರ ವಧೆ, ರಾವಣನನ್ನು ಕೊಂದ ನಂತರ ಅಯೋಧ್ಯೆಗೆ ಭಗವಾನ್ ರಾಮನ ಆಗಮನ ಮತ್ತು ಬಲಿಯನ್ನು ವಾಮನ ಸೋಲಿಸಿದ ದಿನ ಹೀಗೆ ಈ ದೀಪಾವಳಿ ಹಬ್ಬವನ್ನು ಹಲವಾರು ಕಾರಣಕ್ಕೆ ಆಚರಿಸಲಾಗುತ್ತದೆ. ಈ ಬಾರಿ ದೀಪಾವಳಿ ಹಬ್ಬವನ್ನು ಯಾವಾಗ ಆಚರಿಸಲಾಗುತ್ತದೆ. ದಿನದ ಮಹತ್ವ, ಪೂಜಾ ವಿಧಾನ, ಮುಹೂರ್ತಗಳ ಬಗ್ಗೆ ತಿಳಿದುಕೊಳ್ಳಿ.

Deepavali 2023: ದೀಪಾವಳಿ ಹಬ್ಬ ಯಾವಾಗ? ದಿನದ ಮಹತ್ವ, ಪೂಜಾ ವಿಧಾನ, ಮುಹೂರ್ತಗಳ ಬಗ್ಗೆ ತಿಳಿದುಕೊಳ್ಳಿ
Deepavali 2023
Follow us on

ನವರಾತ್ರಿ ಮುಗಿದು ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಆರಂಭವಾಗಲಿದೆ. ಭಗವಾನ್ ಕೃಷ್ಣನಿಂದ ನರಕಾಸುರನಂತಹ ಅನೇಕ ರಾಕ್ಷಸರ ವಧೆ, ರಾವಣನನ್ನು ಕೊಂದ ನಂತರ ಅಯೋಧ್ಯೆಗೆ ಭಗವಾನ್ ರಾಮನ ಆಗಮನ ಮತ್ತು ಬಲಿಯನ್ನು ವಾಮನ ಸೋಲಿಸಿದ ದಿನ ಹೀಗೆ ಈ ದೀಪಾವಳಿ ಹಬ್ಬವನ್ನು ಹಲವಾರು ಕಾರಣಕ್ಕೆ ಆಚರಿಸಲಾಗುತ್ತದೆ. ಜೊತೆಗೆ ಈ ಹಬ್ಬವು ಅಜ್ಞಾನವನ್ನು ಕಳೆದು ಜ್ಞಾನ, ಕೆಡುಕಿನ ಮೇಲೆ ಒಳ್ಳೆಯ ಮತ್ತು ಹತಾಶೆಯ ಮೇಲೆ ಭರವಸೆಯ ವಿಜಯವನ್ನು ಸಂಕೇತಿಸುತ್ತದೆ. ಜನರು ಲಕ್ಷ್ಮೀ ಪೂಜೆಯನ್ನು ಮಾಡುವ ಮೂಲಕ ದೀಪಾವಳಿಯಂದು ದೇವಿಯನ್ನು ಪ್ರಾರ್ಥಿಸುತ್ತಾರೆ. ಸಮೃದ್ಧಿ, ಸಂತೋಷ, ಶಾಂತಿ ಮತ್ತು ಸಂಪತ್ತನ್ನು ಆಶೀರ್ವದಿಸುವಂತೆ ಕೇಳಿಕೊಳ್ಳುತ್ತಾರೆ. ದೇಶದ ಬಹುತೇಕ ಸ್ಥಳಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಇನ್ನೂ ಕೆಲವು ಕಡೆ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.

ನಮ್ಮಲ್ಲಿ ಅಂದರೆ ದಕ್ಷಿಣ ಭಾರತದಲ್ಲಿ, ಹಬ್ಬದ ಹಿಂದಿನ ದಿನದ ರಾತ್ರಿ ಮನೆಯಲ್ಲಿರುವ ಬಾವಿಗೆ ಮತ್ತು ನೀರಿನ ಹಂಡೆಗಳಿಗೆ ಸಹ ಪೂಜೆ ಮಾಡುತ್ತಾರೆ. ಬಳಿಕ ಹಂಡೆಗೆ ನೀರು ತುಂಬಿಸಿ ಮರುದಿನ ಎಣ್ಣೆ ಹಚ್ಚಿ ಅದೇ ನೀರಿನಲ್ಲಿ ಸ್ನಾನ ಮಾಡಲಾಗುತ್ತದೆ. ಕೆಲವರು ಬಾವಿ ಪೂಜೆಯನ್ನು ಗಂಗಾಷ್ಟಮಿಯಂದು ಕೂಡ ಮಾಡುತ್ತಾರೆ. ಇನ್ನು ಮೊದಲ ದಿನ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ, ನಂತರ ಎರಡನೇ ದಿನ ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಕೊನೆಯ ದಿನ ಬಲಿಪಾಡ್ಯಮಿ ಆಚರಿಸಲಾಗುತ್ತದೆ. ಈ ದಿನ ಗೋವುಗಳಿಗೆ ಪೂಜೆ ಮಾಡಲಾಗುತ್ತದೆ. ಗೋವುಗಳು ಲಕ್ಷ್ಮೀ ದೇವಿಯ ಸ್ವರೂಪ ವಾಗಿರುವುದರಿಂದ ಈ ದಿನದ ಪೂಜೆ ಗೋವುಗಳಿಗೆ ಸಲ್ಲುತ್ತದೆ. ಗೋ ಪೂಜೆಯ ದಿನದಂದು ಮನೆಯಲ್ಲಿನ ಹಸುಗಳಿಗೆ ಸ್ನಾನ ಮಾಡಿಸಿ, ಗೋವುಗಳನ್ನು ಅಲಂಕರಿಸಿ ಪೂಜೆಯನ್ನು ಮಾಡಿ ವಿಶೇಷ ಖಾದ್ಯಗಳನ್ನು ಅವುಗಳಿಗೆ ನೀಡುವ ಮೂಲಕ ಗೋ ಪೂಜೆಯನ್ನು ಪೂರ್ಣಗೊಳಿಸಲಾಗುತ್ತದೆ.

2023 ರ ದೀಪಾವಳಿ ಯಾವಾಗ?

2023 ರ ನರಕ ಚತುರ್ಥಿಯನ್ನು ನವೆಂಬರ್ 12 ರಂದು ಆಚರಿಸಲಾಗುತ್ತದೆ. ಈ ದಿನದಂದು ಅಭ್ಯಂಗ ಸ್ನಾನ ಮಾಡುವುದು ರೂಢಿ. ಇದರ ಮುಹೂರ್ತವು ಬೆಳಿಗ್ಗೆ 05:00 ರಿಂದ 06:13 ರವರೆಗೆ ಇರುತ್ತದೆ. ಇನ್ನು ಮರುದಿನ ಅಂದರೆ ನವೆಂಬರ್ 13 ರಂದು ಶಾರದಾ ಮತ್ತು ಲಕ್ಷ್ಮೀ ಪೂಜೆ ಮಾಡುವವರು ಮುಂಜಾನೆ 04:36 ರಿಂದ 06:14 ರವರೆಗೆ ಪೂಜೆ ಮಾಡಬಹುದು. ಈ ವರ್ಷ ಗೋವಿನ ಪೂಜೆ ಅಥವಾ ಗೋವರ್ಧನ ಪೂಜೆಯನ್ನು ನವೆಂಬರ್ 14 ರಂದು ಆಚರಿಸಲಾಗುತ್ತದೆ. ಈ ದಿನದಂದು ಪೂಜೆಗೆ ಶುಭ ಸಮಯವು ಬೆಳಿಗ್ಗೆ 06:15 ರಿಂದ 08:25 ರವರೆಗೆ ಇರುತ್ತದೆ.

ದೀಪಾವಳಿಯ ಮಹತ್ವವೇನು?

ದೀಪಾವಳಿ ಎಂದರೆ ದೀಪಗಳ ಹಬ್ಬ ಹಾಗಾಗಿ ಈ ದಿನದಿಂದ ಕಾರ್ತಿಕ ಮಾಸ ಮುಗಿಯುವವರೆಗೂ ಪ್ರತಿದಿನ ಮನೆಯ ಮುಂದೆ ಸಂಜೆ ದೀಪಗಳನ್ನು ಹಚ್ಚಲಾಗುತ್ತದೆ. ಇದು ಮನೆಗೆ ಬಹಳ ಶುಭ ತರುತ್ತದೆ. ಜೊತೆಗೆ ಹಬ್ಬದ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ದೇವರ ಪೂಜೆ ಮಾಡಿ, ನಂತರ ಬ್ರಾಹ್ಮಣರಿಗೆ ಊಟ ಹಾಕಿ. ಬಳಿಕ ಪ್ರದೋಷ ಕಾಲದಲ್ಲಿ ಮಹಾಲಕ್ಷ್ಮೀ ಪೂಜೆಯನ್ನು ಮಾಡಿ. ದೀಪಾವಳಿ ಹಬ್ಬವು ಮನಸ್ಸಿನಲ್ಲಿರುವ ಅಂಧಕಾರ ತೊಲಗಿಸಿ ಬೆಳಕನ್ನು ಚೆಲ್ಲುತ್ತದೆ.

ದೀಪಾವಳಿ ದಿನದಂದು ಈ ಮಂತ್ರಗಳನ್ನು ಪಠಿಸಬೇಕು?

-ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಘ್ನಂ ಕುರೂ ಮೇ ದೇವ ಸರ್ವಕಾರ್ಯೇಷು ಸರ್ವದಾ

-ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್‌ ಪ್ರಸೀದ್‌

– ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ

-ಓಂ ಯಕ್ಷಾಯ ಕುಬೇರಾಯ
ವೈಶ್ರವಣಾಯ ಧನಧಾನ್ಯಾಧಿಪತಯೇ
ಧನಧಾನ್ಯಸಮೃದ್ಧಿ ಮೇಂ ದೇಹಿ ದಾಪಯೇ

ಆಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 7:04 pm, Wed, 8 November 23