ದೀಪಾವಳಿ ಹಬ್ಬದಲ್ಲಿ ಮಧುಮೇಹಿಗಳು ಡಯಾಬಿಟಿಸ್ ನಿಯಂತ್ರಿಸುವುದು ಹೇಗೆ?

ದೀಪಾವಳಿಯ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಚೆಕ್ ಮಾಡಿಕೊಳ್ಳುತ್ತಿರುವುದು ಮುಖ್ಯವಾಗಿದೆ. ಇದರಿಂದ ಸಮಸ್ಯೆ ಹೆಚ್ಚಾಗುವ ಮೊದಲೇ  ಸಮಸ್ಯೆಗಳನ್ನು ಮೊದಲೇ ಗುರುತಿಸಲು ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ದೀಪಾವಳಿ ಹಬ್ಬದಲ್ಲಿ ಮಧುಮೇಹಿಗಳು ಡಯಾಬಿಟಿಸ್ ನಿಯಂತ್ರಿಸುವುದು ಹೇಗೆ?
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 06, 2023 | 2:14 PM

ದೀಪಾವಳಿ ಬೆಳಕಿನ ಹಬ್ಬ. ಸಂತೋಷ, ಸಂಭ್ರಮದ ಸಮಯ. ಹಬ್ಬದಲ್ಲಿ ಸಿಹಿತಿಂಡಿಗಳನ್ನು ಮಾಡುವುದು ಸಾಮಾನ್ಯ. ಈ ವೇಳೆ ಸ್ವೀಟ್ ತಿನ್ನಬೇಡಿ ಎಂದು ಹೇಳುವುದಾದರೂ ಹೇಗೆ? ಡಯಾಬಿಟಿಸ್ ರೋಗಿಗಳಿಗೂ ಹಬ್ಬದ ಸಮಯದಲ್ಲಿ ಎಕ್ಸ್​ಕ್ಯೂಸ್ ಇದ್ದೇ ಇರುತ್ತದೆ. ಮಧುಮೇಹಿಗಳು ಹಬ್ಬದ ಸಮಯದಲ್ಲಿ ತಮ್ಮ ಬಾಯಿಯ ಚಪಲವನ್ನು ಯಾವ ರೀತಿ ಕಂಟ್ರೋಲ್ ಮಾಡಬೇಕು? ತಮ್ಮ ರಕ್ತದ ಸಕ್ಕರೆಮಟ್ಟವನ್ನು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಹಬ್ಬದ ಸಮಯದಲ್ಲಿ ಎಲ್ಲರ ಜೊತೆ ಕುಳಿತು ಊಟ ಮಾಡುವ ಬದಲು ನಿಮ್ಮ ಊಟದ ಸಮಯಕ್ಕಿಂತ ಮುಂಚಿತವಾಗಿಯೇ ಊಟ ಮಾಡಿ. ಆಗ ಎಲ್ಲರೂ ತಿಂದರು ಎಂಬ ಕಾರಣಕ್ಕೆ ನೀವು ಹೆಚ್ಚು ಸಿಹಿತಿಂಡಿಗಳನ್ನು ತಿನ್ನುವುದು ತಪ್ಪುತ್ತದೆ. ಈ ಸಂದರ್ಭದಲ್ಲಿ ಕಡಿಮೆ ಸಕ್ಕರೆ, ಕಡಿಮೆ ಕಾರ್ಬೋಹೈಡ್ರೇಟ್‌ಗಳು ಮತ್ತು ಹೆಚ್ಚಿನ ಪ್ರೋಟೀನ್ ಹಾಗೂ ಫೈಬರ್ ಅಂಶವನ್ನು ಹೊಂದಿರುವ ಆಹಾರವನ್ನು ಸೇವಿಸಿ.

ಇದನ್ನೂ ಓದಿ: ಮಧುಮೇಹಿಗಳಿಗೆ ಕರಿಬೇವಿನ ಸೊಪ್ಪಿನಿಂದ ಏನು ಪ್ರಯೋಜನ?

ದೀಪಾವಳಿಯ ಸಮಯದಲ್ಲಿ ಅತಿಯಾಗಿ ಆಹಾರವನ್ನು ಸೇವಿಸುವುದು ಸುಲಭ. ಆದರೆ ನಾವು ಎಷ್ಟು ತಿನ್ನಬೇಕೆಂದು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಊಟಕ್ಕೆ ಸಣ್ಣ ಪ್ಲೇಟ್‌ಗಳನ್ನು ತೆಗೆದುಕೊಳ್ಳಿ. ಒಮ್ಮೆ ಬಡಿಸಿಕೊಂಡಿದ್ದು ಇಷ್ಟವಾದರೆ ಮತ್ತೊಮ್ಮೆ ಹಾಕಿಸಿಕೊಳ್ಳುವ ಆಸೆಯಿದ್ದರೂ ಅದನ್ನು ನಿಯಂತ್ರಿಸಿಕೊಳ್ಳಿ.

ದೀಪಾವಳಿ ಹಬ್ಬಕ್ಕೆ ಹಲವು ರೀತಿಯ ಸಿಹಿತಿಂಡಿ, ಎಣ್ಣೆತಿಂಡಿಗಳನ್ನು ಮಾಡುತ್ತಾರೆ. ನಿಮಗೇನಾದರೂ ಊಟಕ್ಕೂ ಮೊದಲು ಅಥವಾ ಊಟವಾದ ನಂತರ ಹಸಿವಾದರೆ ಆ ಸಿಹಿತಿಂಡಿಗಳನ್ನು ತಿನ್ನುವ ಬದಲು ನಟ್ಸ್​, ಡ್ರೈಫ್ರೂಟ್ಸ್​, ಮೊಸರನ್ನು ಸೇವಿಸಿ. ಇದರಿಂದ ಹೊಟ್ಟೆಯೂ ತುಂಬುತ್ತದೆ, ಆರೋಗ್ಯವೂ ಹೆಚ್ಚುತ್ತದೆ. ಇವು ನಿಮ್ಮ ರಕ್ತದ ಸಕ್ಕರೆಮಟ್ಟವನ್ನು ಹೆಚ್ಚಿಸುವುದಿಲ್ಲ.

ಇದನ್ನೂ ಓದಿ: ಡಯಾಬಿಟಿಸ್ ಇರುವವರು ಬಾಳೆಹಣ್ಣು ತಿನ್ನಬಹುದಾ?

ದೀಪಾವಳಿಯ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಚೆಕ್ ಮಾಡಿಕೊಳ್ಳುತ್ತಿರುವುದು ಮುಖ್ಯವಾಗಿದೆ. ಇದರಿಂದ ಸಮಸ್ಯೆ ಹೆಚ್ಚಾಗುವ ಮೊದಲೇ  ಸಮಸ್ಯೆಗಳನ್ನು ಮೊದಲೇ ಗುರುತಿಸಲು ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಇದರ ಜೊತೆಗೆ, ಚಳಿಗಾಲದಲ್ಲಿ ಆದಷ್ಟೂ ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ. ಆಲ್ಕೋಹಾಲ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹೈಪೊಗ್ಲಿಸಿಮಿಯಾ ಅಪಾಯವನ್ನು ಹೆಚ್ಚಿಸುತ್ತದೆ. ಸಾಕಷ್ಟು ನಿದ್ರೆ ಮಾಡಿ. ದೇಹವು ಚೆನ್ನಾಗಿ ವಿಶ್ರಾಂತಿ ಪಡೆದಾಗ ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ನಿಮ್ಮ ಮಾನಸಿಕ ಒತ್ತಡವು ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ ಯೋಗ, ಧ್ಯಾನ ಅಥವಾ ಪ್ರಕೃತಿಯಲ್ಲಿ ಸಮಯ ಕಳೆಯಲು ಪ್ರಯತ್ನಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ