ಪೂಜೆಯ ಸಮಯದಲ್ಲಿ ತಲೆಯನ್ನು ಮುಚ್ಚಿಕೊಳ್ಳುವುದು ಏಕೆ ? ಇಲ್ಲಿದೆ ಉತ್ತರ

| Updated By: ವಿವೇಕ ಬಿರಾದಾರ

Updated on: Sep 10, 2022 | 6:30 AM

ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅಥವಾ ಮನೆಯಲ್ಲಿ ದೇವರಿಗೆ ಪೂಜೆ ಮಾಡುವಾಗ ಪುರುಷರು ಮತ್ತು ಮಹಿಳೆಯರು ತೆಲೆಯ ಮೇಲೆ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ.

ಪೂಜೆಯ ಸಮಯದಲ್ಲಿ ತಲೆಯನ್ನು ಮುಚ್ಚಿಕೊಳ್ಳುವುದು ಏಕೆ ? ಇಲ್ಲಿದೆ ಉತ್ತರ
ಸಾಂಧರ್ಬಿಕ ಚಿತ್ರ
Follow us on

ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅಥವಾ ಮನೆಯಲ್ಲಿ ದೇವರಿಗೆ ಪೂಜೆ ಮಾಡುವಾಗ ಪುರುಷರು ಮತ್ತು ಮಹಿಳೆಯರು ತೆಲೆಯ ಮೇಲೆ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ. ಈ ಪದ್ದತಿಯನ್ನು ಏಕೆ ಅನುಸರಿಸಬೇಕು ಎಂದು ಕೆಲವರು ಪ್ರಶ್ನೆ ಮಾಡಿದ್ದು, ಉಂಟು. ಆಗ ಇದು ಮೊದಲಿನಿಂದಲೂ ಬಂದ ಪದ್ದತಿ ಎಂದು ಹೇಳಿ ಸುಮ್ಮನಾಗುತ್ತೇವೆ. ಆದರೆ ಇದಕ್ಕೆ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣವು ಇದೆ. ಅದು ಏನು ತಿಳಿಯೋಣ ಬನ್ನಿ
ಪೂಜೆಯ ಸಮಯದಲ್ಲಿ ತಲೆಯನ್ನು ಮುಚ್ಚಿಕೊಳ್ಳುವುದು ತುಂಬಾ ಶುಭ ಎಂದು ಹೇಳಲಾಗುತ್ತದೆ. ಹೇಗೆ ಶುಭ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ

ಪೂಜೆಯ ಸಮಯದಲ್ಲಿ ತಲೆಯನ್ನು ಮುಚ್ಚಿಕೊಳ್ಳುವುದು ಏಕೆ ?

1. ಗರುಡ ಪುರಾಣದ ಪ್ರಕಾರ, ಪೂಜೆ ಅಥವಾ ಇತರ ಯಾವುದೇ ಶುಭ ಕಾರ್ಯವನ್ನು ಮಾಡುವಾಗ ತಲೆಯನ್ನು ಮುಚ್ಚಬೇಕು ಏಕೆಂದರೆ ಅದು ಮಾನಸಿಕ ಶಾಂತಿ ಮತ್ತು ದೇವರ ಕಡೆ ಅಥವಾ ಶುಭ ಕಾರ್ಯದ ಕಡೆ ಗಮನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಮನಸ್ಸು ಎಲ್ಲಿಯೂ ವಿಚಲಿತವಾಗಿಲ್ಲ ಮತ್ತು ನೀವು ಸಂಪೂರ್ಣವಾಗಿ ಪೂಜೆಯ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಬಹುದು ಎಂದು ನಂಬಲಾಗಿದೆ. ಇದು ನಿಮ್ಮ ಜೀವನಕ್ಕೆ ಅದೃಷ್ಟವನ್ನು ತರುತ್ತದೆ.

2. ಧರ್ಮಗ್ರಂಥಗಳ ಪ್ರಕಾರ, ಪೂಜೆಯ ಸಮಯದಲ್ಲಿ ನಿಮ್ಮ ತಲೆಯನ್ನು ಮುಚ್ಚಿಕೊಳ್ಳುವುದು ಗೌರವ, ಕೃತಜ್ಞತೆ ಮತ್ತು ಮಾನವೀಯತೆಯ ಸಂಕೇತವಾಗಿದೆ. ಇದನ್ನು ನಾವು ದೇವರಿಗೆ ತೋರಿಸಬೇಕು.

3. ದೇವತೆಗಳ ದೈವಿಕ ಆಶೀರ್ವಾದ ಪಡೆಯಲು ನಾವೆಲ್ಲರೂ ದೇವಸ್ಥಾನ ಅಥವಾ ಯಾವುದೇ ಧಾರ್ಮಿಕ ಸ್ಥಳಕ್ಕೆ ಹೋಗುತ್ತೇವೆ. ದೇವಾಲಯದ ಸುತ್ತಮುತ್ತಲಿನ ಶಾಂತಿಯು ಆತ್ಮದ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಪರಿಣಾಮಕಾರಿಯಾಗಿ ನಿಭಾಯಿಸದಿದ್ದಲ್ಲಿ, ಈ ಜಾಗೃತವಾದ ಆತ್ಮಶಕ್ತಿಯನ್ನು ಒಂದೆರಡು ಸೆಕೆಂಡುಗಳಲ್ಲಿ ಬ್ರಹ್ಮರಂಧ್ರದ ಮೂಲಕ ಹೊರಹಾಕಬಹುದು. ಹಾಗಾಗಿ ತಲೆಯನ್ನು ಮುಚ್ಚಿಕೊಳ್ಳುವುದರ ಹಿಂದೆ ಇದೂ ಒಂದು ಕಾರಣ ಇದೆ.

4. ಕೆಲವು ಧರ್ಮಗಳಲ್ಲಿ, ಧಾರ್ಮಿಕ ಸಂದರ್ಭಗಳಲ್ಲಿ ಬಳಸುವ ಮಹಿಳೆಯರ ಸೀರೆಗಳು, ಚಿನ್ನ ಮತ್ತು ಬೆಳ್ಳಿಯ ಎಳೆಗಳಿಂದ ಮಾಡಿದ ವಿಶಿಷ್ಟವಾದ ಆಭರಣಗಳು ದೇವತೆಯ ದೈವಿಕ ಆತ್ಮವನ್ನು ಆಕರ್ಷಿಸುತ್ತವೆ ಎಂದು ಭಾವಿಸಲಾಗಿದೆ. ಸ್ತ್ರೀಯು ಸೀರೆಯಿಂದ ತನ್ನ ತಲೆಯನ್ನು ಮುಚ್ಚಿಕೊಳ್ಳುವುದರಿಂದ ಆಧ್ಯಾತ್ಮಿಕ ಜಾಗೃತಿಯು ನಮ್ಮಲ್ಲಿ ಉದ್ಭವಿಸುತ್ತದೆ.

5. ಒಂದು ನಂಬಿಕೆ ಪ್ರಕಾರ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳೆರಡೂ ನಮ್ಮ ಸುತ್ತ ಸುತ್ತುತ್ತಿರುತ್ತವೆ ಎಂದು ನಂಬಲಾಗಿದೆ. ಪೂಜೆಯ ಸಮಯದಲ್ಲಿ, ಧನಾತ್ಮಕ ಶಕ್ತಿಯು ನಮ್ಮನ್ನು ದೇವರ ಕಡೆಗೆ ಆಕರ್ಷಿಸುತ್ತದೆ. ಇದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳು ನಮ್ಮಲ್ಲಿ ಪ್ರವೇಶಿಸದಂತೆ ತಲೆಯನ್ನು ಮುಚ್ಚಿಕೊಳ್ಳುವುದು ಉತ್ತಮ.

6. ಧಾರ್ಮಿಕ ಸಮುದಾಯದ ಮುಖಂಡೊಬ್ಬರು ತಲೆಯನ್ನು ಮುಚ್ಚಿಕೊಳ್ಳುವುದರಿಂದ ಧಾರ್ಮಿಕ ಆಚರಣೆಗಳ ಸಮಯದಲ್ಲಿ ಹೆಚ್ಚು ಭಗವಂತನಲ್ಲಿ ಹೆಚ್ಚು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿ, ಧಾರ್ಮಿಕ ಸಮಾರಂಭಗಳಲ್ಲಿ ಪುರುಷರು ಕೂಡ ಪೇಟವನ್ನು ಧರಿಸುತ್ತಾರೆ.

7. ಕೇವಲ ಧಾರ್ಮಿಕ ನಂಬಿಕೆಗೆ ಮಾತ್ರವಲ್ಲ, ತಲೆ ಮುಚ್ಚಿಕೊಳ್ಳುವುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಹೋಮ-ಹವನದ ಸಮಯದಲ್ಲಿ ನಿಮ್ಮ ತಲೆಯನ್ನು ಮುಚ್ಚಿಕೊಂಡು ಕುಳಿತಾಗ ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಎಂದು ನಂಬಲಾಗಿದೆ.‘

8. ಸಿಖ್ ಧರ್ಮದಲ್ಲಿಯೂ ಸಹ, ಗುರುದ್ವಾರವನ್ನು ಪ್ರವೇಶಿಸುವ ಮೊದಲು ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮ ತಲೆಯನ್ನು ಮುಚ್ಚಿಕೊಳ್ಳುತ್ತಾರೆ. ಸಿಖ್ಖರ ಪ್ರಕಾರ, ನಮ್ಮ ಶಕ್ತಿಯು ದೇಹದ ಮಧ್ಯಭಾಗದಲ್ಲಿದೆ. ನಂಬಿಕೆಗಳ ಪ್ರಕಾರ, ಪೂಜೆಯ ಸಮಯದಲ್ಲಿ ವ್ಯಕ್ತಿಗಳು ತಮ್ಮ ತಲೆಯನ್ನು ಮುಚ್ಚಿಕೊಳ್ಳದಿದ್ದರೆ, ನಕಾರಾತ್ಮಕತೆಯು ನಮ್ಮನ್ನು ತಲೆ ಮುಖಾಂತರ ಪ್ರವೇಶಿಸಬಹುದು, ಅದು ಆತ್ಮಕ್ಕೆ ಒಳ್ಳೆಯದಲ್ಲ ಎಂದು ನಂಬಲಾಗಿದೆ.