ಶಾಲಾ ವಿದ್ಯಾರ್ಥಿಗಳ ವೃತ್ತಿಪರ ಯಶಸ್ಸಿಗೆ ಅವರಲ್ಲಿ ಕೌಶಲಗಳನ್ನು ಬೆಳೆಸಿ: ಲೀಡ್‌ ಐ.ಎ.ಎಸ್. ಜೂನಿಯರ್‌

| Updated By: ಡಾ. ಭಾಸ್ಕರ ಹೆಗಡೆ

Updated on: Oct 27, 2023 | 5:49 PM

ಲೀಡ್‌ ಐ.ಎ.ಎಸ್. ಜೂನಿಯರ್‌ ಪಠ್ಯಕ್ರಮವನ್ನು 5ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಾಗರಿಕ ಸೇವೆಗಳಲ್ಲಿ ಉತ್ತಮ ಪ್ರತಿಭೆಗಳನ್ನು ಬೆಳೆಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ದಕ್ಷಿಣ ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲ್ಪಡುತ್ತಿರುವ ನಾಗರಿಕ ಸೇವೆಗಳ ಅಕ್ಯಾಡೆಮಿಗಳಲ್ಲಿ ಒಂದಾಗಿರುವ ಲೀಡ್‌ ಐ.ಎ.ಎಸ್. ಅಕ್ಯಾಡೆಮಿಯ ಕನಸಿನ ಕೂಸಾಗಿದೆ. ಒಂದು ವರ್ಷದ ಅವಧಿಯ ಈ ಪಠ್ಯಕ್ರಮವು ಪ್ರಮುಖ ಸಾಧಕರು ನಡೆಸಿಕೊಡುವ ವಾರಾಂತ್ಯದ ಪರಿಣತ ತರಗತಿಗಳನ್ನು, ವಾರಕ್ಕೊಮ್ಮೆ ನಡೆಸಲಾಗುವ ಪ್ರತಿ ವಿದ್ಯಾರ್ಥಿಯೊಂದಿಗಿನ ನೇರಾನೇರ ಮುಖಾಮುಖಿ ಮಾರ್ಗದರ್ಶಕ ಅವಧಿಗಳು, ಮತ್ತು ವಾಸ್ತವಾಂಶಗಳನ್ನು ಆಧರಿಸಿದ ಸಂಪರ್ಕ ಕಾರ್ಯಕ್ರಮಗಳನ್ನು ಒಳಗೊಂಡಿದೆ.

ಶಾಲಾ ವಿದ್ಯಾರ್ಥಿಗಳ ವೃತ್ತಿಪರ ಯಶಸ್ಸಿಗೆ ಅವರಲ್ಲಿ ಕೌಶಲಗಳನ್ನು ಬೆಳೆಸಿ: ಲೀಡ್‌ ಐ.ಎ.ಎಸ್. ಜೂನಿಯರ್‌
Lead I.A.S. Jr
Follow us on

ಯಾವುದೇ ಸ್ಪರ್ಧಾತ್ಮಕ ರಂಗದಲ್ಲಿ ಅತ್ಯುನ್ನತವಾದುದನ್ನು ಸಾಧಿಸಲು ಪಠ್ಯಪುಸ್ತಕದ ಜ್ಞಾನಕ್ಕಿಂತ ಕೌಶಲದ ಪಾತ್ರವೇ ದೊಡ್ಡದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು, ಪುಸ್ತಕದ ಜ್ಞಾನಕ್ಕಿಂತಲೂ ಜೀವನೋಪಾಯಕ್ಕೆ ಸಹಕರಿಸುವ ಕೌಶಲಗಳನ್ನು ಹೊಂದುವುದು ಅತ್ಯವಶ್ಯಕವಾದದ್ದು. ತರ್ಕಯುಕ್ತ ಮತ್ತು ವಿಶ್ಲೇಷಣಾತ್ಮಕವಾದ ಆಲೋಚನೆ, ಬರವಣಿಗೆಯ ಕೌಶಲ, ಉತ್ತಮ ಸಂವಹನದ ಸಾಮರ್ಥ್ಯ, ಮತ್ತು ವಿವಿಧ ಆಯಾಮಗಳಲ್ಲಿ ಯೋಚಿಸುವ ಸಾಮರ್ಥ್ಯಗಳು ಶ್ರೇಷ್ಠತೆಯನ್ನು ಪ್ರದರ್ಶಿಸುವ ಸ್ಪರ್ಧಾತ್ಮಕ ಕೌಶಲಗಳಾಗಿವೆ. ವಿದ್ಯಾರ್ಥಿಗಳು ಪದವೀಪೂರ್ವ ಹಂತವನ್ನು ತಲುಪುವ ಮೊದಲೇ ಇಂತಹ ಕೌಶಲಗಳನ್ನು ಹೊಂದುವುದನ್ನು ಖಚಿತಪಡಿಸಿಕೊಳ್ಳುವುದು ನಮಗೆ ಸಾಧ್ಯವಾದರೆ, ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದ ತಕ್ಷಣವೇ ನೇರವಾಗಿ ತಮ್ಮ ವೃತ್ತಿಗಳನ್ನು ಆರಂಭಿಸಬಹುದಾಗಿದೆ. ಅವರ ಶಾಲಾ ಅಭ್ಯಾಸಕ್ಕೆ ಯಾವುದೇ ರೀತಿಯ ಭಂಗ ತರದೇ, ಅವರು ತಮ್ಮ ಶೈಕ್ಷಣಿಕ ಜೀವನದಲ್ಲಿ ಅತ್ಯುನ್ನತ ಯಶಸ್ಸು ಗಳಿಸಲು ಸಾಧ್ಯವಾಗುವಂತೆಯೂ ಸಹ ಈ ಪ್ರಕ್ರಿಯೆಯನ್ನು ಜಾರಿಗೊಳಿಸಬಹುದಾಗಿದೆ.

ಲೀಡ್‌ ಐ.ಎ.ಎಸ್. ಜೂನಿಯರ್‌ ಪಠ್ಯಕ್ರಮವನ್ನು 5ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಾಗರಿಕ ಸೇವೆಗಳಲ್ಲಿ ಉತ್ತಮ ಪ್ರತಿಭೆಗಳನ್ನು ಬೆಳೆಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ದಕ್ಷಿಣ ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲ್ಪಡುತ್ತಿರುವ ನಾಗರಿಕ ಸೇವೆಗಳ ಅಕ್ಯಾಡೆಮಿಗಳಲ್ಲಿ ಒಂದಾಗಿರುವ ಲೀಡ್‌ ಐ.ಎ.ಎಸ್. ಅಕ್ಯಾಡೆಮಿಯ ಕನಸಿನ ಕೂಸಾಗಿದೆ. ಒಂದು ವರ್ಷದ ಅವಧಿಯ ಈ ಪಠ್ಯಕ್ರಮವು ಪ್ರಮುಖ ಸಾಧಕರು ನಡೆಸಿಕೊಡುವ ವಾರಾಂತ್ಯದ ಪರಿಣತ ತರಗತಿಗಳನ್ನು, ವಾರಕ್ಕೊಮ್ಮೆ ನಡೆಸಲಾಗುವ ಪ್ರತಿ ವಿದ್ಯಾರ್ಥಿಯೊಂದಿಗಿನ ನೇರಾನೇರ ಮುಖಾಮುಖಿ ಮಾರ್ಗದರ್ಶಕ ಅವಧಿಗಳು, ಮತ್ತು ವಾಸ್ತವಾಂಶಗಳನ್ನು ಆಧರಿಸಿದ ಸಂಪರ್ಕ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಲೀಡ್‌ ಐ.ಎ.ಎಸ್. ಜೂನಿಯರ್‌ ಸಂಸ್ಥೆಯು ಪ್ರತಿ ತಿಂಗಳೂ ವಿದ್ಯಾರ್ಥಿಗಳು ಐ.ಎ.ಎಸ್./ಐ.ಪಿ.ಎಸ್. ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಮುಕ್ತ ವೇದಿಕೆಯನ್ನು ಒದಗಿಸುತ್ತಿದೆ.

ತನ್ನ ಕೌಶಲ-ಆಧಾರಿತ ತರಬೇತಿ ಮಾದರಿಗಳ ಮೂಲಕ, ಅತಿ ಹೆಚ್ಚು ಸಂಖ್ಯೆಯ ಆಕಾಂಕ್ಷಿಗಳು ಯು.ಪಿ.ಎಸ್.ಸಿ. ಅಗ್ರಗಣ್ಯರ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಿದ ನಂತರ, ಲೀಡ್‌ ಐ.ಎ.ಎಸ್. ಅಕ್ಯಾಡೆಮಿಯು ಅಂತಹುದೇ ಒಂದು ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗೂ ಸಹ ವಿನ್ಯಾಸಗೊಳಿಸುವ ಆತ್ಮವಿಶ್ವಾಸವನ್ನು ಗಳಿಸಿತು. ಪ್ರಸ್ತುತ, ಭಾರತದಲ್ಲಿ, ಲೀಡ್‌ ಐ.ಎ.ಎಸ್. ಜೂನಿಯರ್‌ ಸಂಸ್ಥೆಯು ಅತಿ ಹೆಚ್ಚು ಸಂಖ್ಯೆಯ ಶಾಲಾ ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳಿಗಾಗಿ ತಮ್ಮ ಕೌಶಲಗಳನ್ನು ಬೆಳೆಸಿಕೊಳ್ಳಲು ಏಕೈಕ ಹಾಗೂ ವಿಶಿಷ್ಟ ವೇದಿಕೆಯಾಗಿರುವುದನ್ನು ನೀವು ಕಾಣಬಹುದಾಗಿದೆ. ಇದೇ ದೃಷ್ಟಿಕೋನದಿಂದ, ಲೀಡ್‌ ಐ.ಎ.ಎಸ್. ತಂಡವು ತನ್ನ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರು, ಹೈದರಾಬಾದ್‌, ಮತ್ತು ಯು.ಎ.ಇ.ಯ ಶಾರ್ಜಾಗಳಿಗೂ ಸಹ ವಿಸ್ತರಿಸಿದೆ.

ಇದನ್ನೂ ಓದಿ: IAS ಆಕಾಂಕ್ಷಿಗಳಿಗೆ ಸಂಪೂರ್ಣ ಕಲಿಕೆಯ ಪರಿಸರ ವ್ಯವಸ್ಥೆ ಇಲ್ಲಿದೆ 

ಲೀಡ್‌ ಐ.ಎ.ಎಸ್. ಜೂನಿಯರ್‌ ಸಂಸ್ಥೆಯ ಬೋಧನಾಕ್ರಮವನ್ನು ಐ.ಎ.ಎಸ್./ಐ.ಪಿ.ಎಸ್. ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗಿದೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌), ವಿಪತ್ತುಗಳ ನಿರ್ವಹಣೆ, ದತ್ತಾಂಶಗಳ ವಿಜ್ಞಾನದ ಪ್ರಾಥಮಿಕ ಅಂಶಗಳು, ಕಾನೂನಿನ ಅರಿವು, ಅಂತರರಾಷ್ಟ್ರೀಯ ಸಂಬಂಧಗಳು, ಸದಾಚಾರಗಳು, ಮತ್ತು ಉತ್ತಮ ಆಡಳಿತ ನಿರ್ವಹಣೆಗಳಂತಹ ವಿಷಯಗಳನ್ನು ಮಾರ್ಗದರ್ಶಕ ಅವಧಿಗಳಲ್ಲಿ ಮತ್ತು ವಾರಾಂತ್ಯದ ತರಗತಿಗಳಲ್ಲಿ ಹೇಳಿಕೊಡಲಾಗುತ್ತಿದೆ. ಲೀಡ್‌ ಐ.ಎ.ಎಸ್. ಜೂನಿಯರ್‌ ಅಕ್ಯಾಡೆಮಿಯಿಂದ ವಿದ್ಯಾರ್ಥಿಗಳಿಗೆ ಒದಗಿಸಲಾಗುವ ಅಭ್ಯಾಸಪುಸ್ತಕಗಳೊಂದಿಗೆ, ಪರಿಣತ ಶಿಕ್ಷಕರು ಆನ್‌ಲೈನ್‌ ತರಗತಿಗಳ ಮೂಲಕ ನೇರ ಪ್ರಸಾರದ ತರಗತಿಗಳನ್ನು ನಡೆಸುತ್ತಾರೆ. ಈ ತರಗತಿಗಳು ಅತ್ಯಾಧುನಿಕ ವಿಧಾನಗಳಲ್ಲಿ ನಡೆಯುವುದರಿಂದ, ಈ ಕೌಶಲಾಭಿವೃದ್ಧಿಯ ತರಗತಿಗಳು ವಿದ್ಯಾರ್ಥಿಗಳ ಶಾಲಾ ಅಭ್ಯಾಸದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಇಂತಹ ತರಗತಿಗಳಲ್ಲದೇ, ವಿದ್ಯಾರ್ಥಿಗಳು ಮಾರ್ಗದರ್ಶಕರೊಬ್ಬರ ಮೂಲಕ ಮಾರ್ಗದರ್ಶಕ ತರಗತಿಗಳ ಪ್ರಯೋಜನವನ್ನೂ ಪಡೆಯಬಹುದಾಗಿದೆ. ಪ್ರತಿ 15 ವಿದ್ಯಾರ್ಥಿಗಳಿಗೆ ಇಂತಹ ಒಬ್ಬ ಮಾರ್ಗದರ್ಶಕರನ್ನು ನಿಯೋಜಿಲಾಗುತ್ತದೆ. ವಾಸ್ತವದಲ್ಲಿ, ಸದ್ಯದ ಸಮಯದಲ್ಲಿ, ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ಮೂಲಕ ಸೂಕ್ತ ಕೌಶಲಗಳನ್ನು ಹೊಂದಲು ಇರುವ ಕೊರತೆಯನ್ನು ಲೀಡ್‌ ಐ.ಎ.ಎಸ್‌. ಜೂನಿಯರ್‌ ಸಂಸ್ಥೆಯಿಂದ ಒದಗಿಸಲಾಗುವ ಮಾಹಿತಿಗಳಿಂದ ನೀಗಿಸಲಾಗುವುದು. ಇಂತಹ ಕೌಶಲ್ಯಾಭಿವೃದ್ಧಿಯು ತಮ್ಮ ವೃತ್ತಿ-ಸಂಬಂಧಿತ ಕನಸುಗಳನ್ನು ಈಡೇರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಬಹಳಷ್ಟು ಸಹಕಾರಿಯಾಗಲಿದೆ.

ಇಂದಿನ ದಿನಮಾನಗಳಲ್ಲಿ, ವಿದ್ಯಾರ್ಥಿಗಳಲ್ಲಿರುವ ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಕೌಶಲಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಗಳಲ್ಲಿ, ಅದರಲ್ಲೂ ವಿಶೇಷವಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒರೆಗೆ ಹಚ್ಚಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಚಿಕ್ಕ ವಯಸ್ಸಿನಲ್ಲೇ ಭಾಷೆ ಮತ್ತು ಸಂವಹನದ ಕೌಶಲಗಳನ್ನು ಬೆಳೆಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಬಹಳಷ್ಟು ಹೆಚ್ಚುವುದು. ಮುಂಬರುವ ಹೊಸ ಬಗೆಯ ವೃತ್ತಿ ಅವಕಾಶಗಳ ಸಂದರ್ಭಗಳಲ್ಲಿ, ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥಗಳನ್ನು ಪ್ರದರ್ಶಿಸಲು ಇದು ವಿಶೇಷ ಅರ್ಹತೆಯನ್ನು ನೀಡುತ್ತದೆ. ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೂ ನಿರ್ಧಾರಗಳನ್ನು ಕೈಗೊಳ್ಳುವ ಕೌಶಲಗಳುಳ್ಳ ಜನರಿಗೆ ಗರಿಷ್ಠ ಮಟ್ಟದ ಬೇಡಿಕೆ ಇದೆ.

ಬಹುರಾಷ್ಟ್ರೀಯ ಸಂಸ್ಥೆಗಳೂ ಸಹ ಅಂತಹ ಅತ್ಯುನ್ನತ ಕೌಶಲಗಳನ್ನು ಹೊಂದಿರುವ ವ್ಯಕ್ತಿತ್ವಗಳಿಗೇ ಅತಿ ಹೆಚ್ಚಿನ ಆದ್ಯತೆ ನೀಡುತ್ತಿವೆ. ಇಂದಿನ ಪರಿಸ್ಥಿತಿಯಲ್ಲಿ, ವಿದ್ಯಾರ್ಥಿಗಳು ಪದವಿಯನ್ನು ಮುಗಿಸಿದ ನಂತರವಷ್ಟೇ ತಮ್ಮ ವೃತ್ತಿ-ನಿರ್ದೇಶಿತ ಕೌಶಲಗಳನ್ನು ಬೆಳೆಸಿಕೊಳ್ಳುವ ಯೋಚನೆ ಮಾಡುತ್ತಾರೆ. ಆದಾಗ್ಯೂ, ಅತಿ ಚಿಕ್ಕ ವಯಸ್ಸಿನಲ್ಲೇ ಇಂತಹ ಕೌಶಲಗಳಲ್ಲಿ ಪ್ರಾವೀಣ್ಯತೆಯನ್ನು ಸಾಧಿಸುವುದು ಅತ್ಯಂತ ಲಾಭದಾಯಕವಾಗಿದೆ. ಇಂತಹ ಅಭ್ಯಾಸವು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಲೀಡ್‌ ಐ.ಎ.ಎಸ್. ಜೂನಿಯರ್‌ ಸಂಸ್ಥೆಯು ಅರಿವಿನ ಸೃಷ್ಟಿ, ಕೌಶಲವನ್ನು ಹೊಂದುವುದು, ಮತ್ತು ಚಿಕ್ಕ ವಯಸ್ಸಿನಲ್ಲೇ, ಎಲ್ಲಾ ವಿಧಾನಗಳಲ್ಲೂ, ತಮ್ಮ ವೃತ್ತಿ ಬೆಳವಣಿಗೆಯ ಬಗ್ಗೆ ವಿದ್ಯಾರ್ಥಿಗಳು ಉತ್ತಮ ದೃಷ್ಟಿಕೋನವನ್ನು ಹೊಂದುವಂತಹ ಹಾಗೂ ಆ ಮೂಲಕ ಅವರ ಸಂಪೂರ್ಣ ರೂಪಾಂತರಕ್ಕೆ ದಾರಿಯಾಗಬಲ್ಲ ಕಾರ್ಯಕ್ರಮವನ್ನು ರೂಪಿಸಿದೆ.

Lead IAS Junior ನಲ್ಲಿ ಪ್ರವೇಶ ಪಡೆಯಲು ಅಥವಾ ಇನ್ನಿತರೆ ಮಾಹಿತಿಗಾಗಿ ಈ ನಂಬರ್​ಗೆ ಸಂಪರ್ಕಿಸಿ: +91 90357 80648

(ಇದು ಪ್ರಾಯೋಜಿತ ಸುದ್ದಿ)

Published On - 12:47 pm, Fri, 27 October 23