IGJA Awards: ಮಲಬಾರ್ ಗೋಲ್ಡ್​ ಅಂಡ್ ಡೈಮಂಡ್ಸ್​ಗೆ ಆಭರಣ ಸಂಸ್ಥೆಯ ಪ್ರತಿಷ್ಠಿತ ಪುರಸ್ಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 10, 2022 | 11:17 AM

ಆಭರಣ ಮತ್ತು ಅಮೂಲ್ಯ ಹರಳುಗಳ ರಫ್ತು ಉತ್ತೇಜನ ಮಂಡಳಿ (GJEPC) ಈ ಪುರಸ್ಕಾರ ನೀಡಿ ಗೌರವಿಸಿದೆ.

IGJA Awards: ಮಲಬಾರ್ ಗೋಲ್ಡ್​ ಅಂಡ್ ಡೈಮಂಡ್ಸ್​ಗೆ ಆಭರಣ ಸಂಸ್ಥೆಯ ಪ್ರತಿಷ್ಠಿತ ಪುರಸ್ಕಾರ
ಮುಂಬೈನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಟ ಅನುಪಮ್ ಖೇರ್ ಮಲಬಾರ್ ಗ್ರೂಪ್​ನ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಸಲಾಂ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು
Follow us on

ಮುಂಬೈ: ಆಭರಣ ಕ್ಷೇತ್ರದ ಬೃಹತ್ ಮತ್ತು ಪ್ರತಿಷ್ಠಿತ ಕಂಪನಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್​ಗೆ (Malabar Gold & Diamonds) ಹೆಚ್ಚಿನ ಉದ್ಯೋಗಿಗಳಿಗೆ ಕಂಪನಿಯ ಕೆಲಸ ಕೊಟ್ಟಿರುವುದು (Highest Employment on the Company Rolls) ಮತ್ತು ವರ್ಷದ ಜಾಗತಿಕ ರಿಟೇಲರ್ (Global Retailer of the Year) ಪುರಸ್ಕಾರಗಳು ಸಂದಿವೆ. ಆಭರಣ ಮತ್ತು ಅಮೂಲ್ಯ ಹರಳುಗಳ ರಫ್ತು ಉತ್ತೇಜನ ಮಂಡಳಿ (Gem & Jewellery Export Promotion Council – GJEPC) ಈ ಪುರಸ್ಕಾರ ನೀಡಿ ಗೌರವಿಸಿದೆ.

ಮುಂಬೈನಲ್ಲಿ ಈಚೆಗೆ ನಡೆದ 48ನೇ ‘ಭಾರತೀಯ ಅಮೂಲ್ಯ ಹರಳು ಮತ್ತು ಆಭರಣ ಸಂಸ್ಥೆಯ ಪುರಸ್ಕಾರ’ (India Gem & Jewellery Awards – IGJA) ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಆಭರಣ ಮತ್ತು ಅಮೂಲ್ಯ ಹರಳುಗಳ ರಫ್ತು ಉತ್ತೇಜನ ಮಂಡಳಿಯು 1973ರಿಂದಲೂ ಪ್ರತಿ ವರ್ಷ ಹರಳು ಮತ್ತು ಆಭರಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಕಂಪನಿಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ. ಮುಂಚೂಣಿ ರಫ್ತುದಾರರು ಹಾಗೂ ಆಭರಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಉದ್ಯಮವನ್ನು ಬೆಂಬಲಿಸುತ್ತಿರುವ ಆಮದುದಾರರು ಹಾಗೂ ಬ್ಯಾಂಕ್​ಗಳನ್ನೂ ಮಂಡಳಿಯು ಗೌರವಿಸುತ್ತದೆ. ಈ ಪ್ರಶಸ್ತಿಗಳನ್ನು ನೀಡಲು ಮಂಡಳಿಗೆ ಜಾಗತಿಕ ಮಟ್ಟದ ಪ್ರತಿಷ್ಠಿತ ಕಂಪನಿಯಾದ ಅರ್ನ್​ಸ್ಟ್​ ಅಂಡ್ ಯಂಗ್ ಎಲ್​ಎಲ್​ಪಿ ಸಂಸ್ಥೆಯು ನೆರವಾಗಿದೆ.

‘ಇದು ಮಲಬಾರ್​ ಗ್ರೂಪ್​ನ ಮಹತ್ವದ ಸಾಧನೆಯಾಗಿದೆ’ ಎಂದು ಮಲಬಾರ್​ ಗ್ರೂಪ್​ನ ವ್ಯವಸ್ಥಾಪಕ ನಿರ್ದೇಶಕ (ಭಾರತ ಕಾರ್ಯಾಚರಣೆ) ಒ.ಅಶರ್ ಮತ್ತು ಮಲಬಾರ್ ಗ್ರೂಪ್​ನ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಸಲಾಮ್ ಹೇಳಿದ್ದಾರೆ.

10 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲಬಾರ್ ಗ್ರೂಪ್​ ತನ್ನ 280 ಶೋರೂಮ್​ಗಳ ಮೂಲಕ​ ಪ್ರಸ್ತುತ 14,000 ಉದ್ಯೋಗಿಗಳಿಗೆ ಕೆಲಸ ಕೊಟ್ಟಿದೆ. ಕೆಲಸ ಮಾಡುವ ಸಂಸ್ಥೆಯಲ್ಲಿಯೂ ಹೂಡಿಕೆ ಮಾಡಲು ತನ್ನ ಉದ್ಯೋಗಿಗಳಿಗೆ ಕಂಪನಿ ಅವಕಾಶ ಮಾಡಿಕೊಟ್ಟಿದ್ದು, ಕೆಲಸ ಮಾಡುವ ಸ್ಥಳದಲ್ಲಿಯೂ ಅತ್ಯುತ್ತಮ ವಾತಾವರಣ ರೂಪಿಸಿಕೊಟ್ಟಿದೆ. ನೌಕರರಲ್ಲಿ ವೈವಿಧ್ಯತೆ, ಸಮಾನತೆ, ಪ್ರಗತಿ, ಉದ್ಯಮಶೀಲತೆ ಮತ್ತು ಕೆಲಸದ ಅವಧಿಯಲ್ಲಿ ಅನುಕೂಲ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ.

Published On - 11:16 am, Wed, 10 August 22