ಬೆಂಗಳೂರು, ಸೆಪ್ಟೆಂಬರ್ 29: ಆಯುರ್ವೇದ ಉತ್ಪನ್ನಗಳ ತಯಾರಕವಾದ ಪಂಕಜಕಸ್ತೂರಿ 2023ನೇ ಸಾಲಿನಲ್ಲಿ ಭಾರತದ ಐಕಾನಿಕ್ ಬ್ರ್ಯಾಂಡ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಟೈಮ್ಸ್ ಗ್ರೂಪ್ ನಡೆಸುವ ಐಕಾನಿಕ್ ಬ್ರ್ಯಾಂಡ್ಸ್ ಆಫ್ ಇಂಡಿಯಾದ ಆರನೇ ಆವೃತ್ತಿಯಲ್ಲಿ (Iconic Brands of India 2023) ಪಂಕಜಕಸ್ತೂರಿ ಹರ್ಬಲ್ಸ್ ಇಂಡಿಯಾವನ್ನು (Pankajakasthuri Herbals Pvt Ltd) ಆಯ್ಕೆ ಮಾಡಲಾಗಿದೆ. ಭಾರತದ ಮೂನ್ ಮ್ಯಾನ್ ಎಂದು ಹೆಸರುವಾಸಿಯಾಗಿರುವ ಇಸ್ರೋ ಸೆಟಿಲೈಟ್ ಸೆಂಟರ್ನ ಮಾಜಿ ನಿರ್ದೇಶಕ ಡಾ. ಮೈಲಸ್ವಾಮಿ ಅಣ್ಣಾದುರೈ ಅವರಿಂದ ಐಕಾನಿಕ್ ಬ್ರ್ಯಾಂಡ್ 2023 ಪ್ರಶಸ್ತಿ ಫಲಕವನ್ನು ಪಂಕಜಕಸ್ತೂರಿ ಸಂಸ್ಥೆಯ ಮಾರ್ಕೆಟಿಂಗ್ ನಿರ್ದೇಶಕ ಅರುಣ್ ವಿಸಾಖ್ ನಾಯರ್ ಸ್ವೀಕರಿಸಿದರು.
ಈ ವೇಳೆ ಅರುಣ್ ನಾಯರ್ ತಮ್ಮ ಸಂಸ್ಥೆಗೆ ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಪಂಕಜಕಸ್ತೂರಿ ಇತಿಹಾಸದಲ್ಲೇ ಇದೊಂದು ಹೆಮ್ಮೆಯ ಕ್ಷಣ ಎಂದು ಅವರು ಬಣ್ಣಿಸಿದರು. ‘ಕಳೆದ 35 ವರ್ಷಗಳಿಗೂ ಹೆಚ್ಚು ಕಾಲದಿಂದ ನಮ್ಮ ಮೇಲೆ ವಿಶ್ವಾಸ ಇಟ್ಟಿರುವ ಕೋಟ್ಯಂತರ ಜನರಿಗೆ ಶ್ರೇಷ್ಠ ಉತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಗೆ ಇದು ಸಿಕ್ಕ ಪ್ರಶಂಸೆಯಾಗಿದೆ’ ಎಂದು ಅರುಣ್ ನಾಯರ್ ಹೇಳಿದರು.
ಪುರಾತನ ಆಯುರ್ವೇದದ ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನ ಎರಡನ್ನೂ ಸೇರಿಸಿ ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ಪಂಕಜ ಕಸ್ತೂರಿ ಹರ್ಬಲ್ಸ್ ಸಂಸ್ಥೆ ಒದಗಿಸುತ್ತಿರುವುದನ್ನು ಈ ಸಂದರ್ಭದಲ್ಲಿ ಗುರುತಿಸಲಾಗಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲದೇ ಉತ್ಪನ್ನಗಳನ್ನು ತಯಾರಿಸುವ ಪಂಕಜ ಕಸ್ತೂರಿ ಬ್ರ್ಯಾಂಡ್ ಅಡಿಯಲ್ಲಿ ಬ್ರೀತ್ ಈಸಿ (Pankajakasthuri Breath Eazy), ಆರ್ತೋ ಹರ್ಬ್ (Orthoherb), ಆಂಟಿಸಿಡ್ (Anticid) ಮೊದಲಾದ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ.
ಪಂಕಜ ಕಸ್ತೂರಿ ಬ್ರೀತ್ ಈಸಿ ಉತ್ಪನ್ನವು ಉಸಿರಾಟ ತೊಂದರೆಗೆ ತೆಗೆದುಕೊಳ್ಳಬಹುದಾದ ಔಷಧವಾಗಿದೆ. ಇನ್ನು, ಪಂಕಜ ಕಸ್ತೂರಿ ಆರ್ತೋಹರ್ಬ್ ಸಂಧಿ ವಾತ, ಕೀಲುನೋವು ಉಪಶಮನಕ್ಕೆ ನೀಡುವ ಔಷಧವಾಗಿದೆ. ಹಾಗೆಯೇ, ಅಜೀರ್ಣ ಸಮಸ್ಯೆಗೆ ಪಂಕಜ ಕಸ್ತೂರಿ ಆಂಟಿಸಿಡ್ ಔಷಧ ಇದೆ.
(ಇದು ಪ್ರಾಯೋಜಿತ ಸುದ್ದಿ)