Tata Ace Pro: ತಳಮಟ್ಟದ ಉದ್ಯಮಿಗಳ ಉತ್ಸಾಹ ಆಚರಿಸಲು ತಯಾರಾಗಿ; ರಾಷ್ಟ್ರವ್ಯಾಪಿ ಆಂದೋಲನ #AbMeriBaari

Brand New Tata Ace Pro: ತ್ರಿಚಕ್ರ ವಾಹನ ಚಾಲಕನಾಗಲೀ, ಡೆಲಿವರಿ ಪಾರ್ಟ್ನರ್ ಆಗಲೀ, ಸೆಕ್ಯೂರಿಟಿ ಗಾರ್ಡ್ ಆಗಲಿ ತಳಮಟ್ಟದ ವ್ಯಕ್ತಿಗಳ ಉದ್ಯಮಶೀಲತಾ ಮನೋಭಾವ ಮತ್ತು ಆಕಾಂಕ್ಷೆಗಳನ್ನು ಸಂಭ್ರಮಿಸಲು ಇಗೋ ಇಲ್ಲಿದೆ #AbMeriBaari ಅಭಿಯಾನ. ಸ್ವಂತ ಉದ್ಯಮದ ಕನಸುಗಳನ್ನು ಸಾಕಾರಗೊಳಿಸಲು ಹೊಚ್ಚ ಹೊಸ Tata Ace Pro ಬಂದಿದೆ. ಈ ಟಾಟಾ ಏಸ್ ಶಕ್ತಿಯೊಂದಿಗೆ ನೀವೂ #AbMeriBaari ಹೇಳಿ.

ಭಾರತದ ಪ್ರಗತಿಯ ಕಥೆ ರೂಪುಗೊಳ್ಳೋದು ಬೋರ್ಡ್​ರೂಮುಗಳಲ್ಲಿ ಮಾತ್ರ ಅಲ್ಲ, ಪ್ರತೀ ದಿನವೂ ಬೀದಿಗಳಲ್ಲಿ ಇದು ಅಭಿವ್ಯಕ್ತಗೊಳ್ಳುತ್ತಿರುವುದನ್ನು ಕಾಣಬಹುದು. ತಳಮಟ್ಟದ ಉದ್ಯಮಿಗಳ ಕೈಗಳಲ್ಲಿ ಈ ಪ್ರಗತಿಯ ಕಥೆ ರೂಪುಗೊಳ್ಳುವುದನ್ನು ಕಾಣಬಹುದು.

ಯಶಸ್ಸಿನ ಹಾದಿಗೆ ಹೋಗುವ ಕನಸು ಕಾಣುವ ತ್ರಿಚಕ್ರ ವಾಹನ ಚಾಲಕ, ತನ್ನ ಕುಟುಂಬಕ್ಕೆ ಉತ್ತಮ ಭವಿಷ್ಯ ಕಲ್ಪಿಸಲು ಟ್ರಾಫಿಕ್ ಕಿರಿಕಿರಿಯಲ್ಲೂ ಸಾಗುವ ಡೆಲಿವರಿ ಪಾರ್ಟ್ನರ್, ತನ್ನದೇ ಸ್ವಂತ ಬ್ಯುಸಿನೆಸ್ ಆರಂಭಿಸಲು ಅವಕಾಶಗಳ ಬಾಗಿಲು ತೆರೆಯಲು ಕಾಯುತ್ತಿರುವ ಸೆಕ್ಯೂರಿಟಿ ಗಾರ್ಡ್, ಹೀಗೆ ಇವರೆಲ್ಲರೂ ಮೌನವಾಗಿ ಶ್ರಮಿಸುತ್ತಿರುವವರು, ಭಾರತದ ಬದಲಾವಣೆಯ ನಿಜವಾದ ಹರಿಕಾರರಾಗಿದ್ದಾರೆ. ತಮಗೆ ಮಾತ್ರವಲ್ಲ, ತಮ್ಮ ಸಮುದಾಯಗಳಿಗಾಗಿಯೂ ಇವರು ಭವಿಷ್ಯ ಕಟ್ಟುವ ಕನಸು ಕಾಣುತ್ತಿದ್ಧಾರೆ.

ಅವರ ಪ್ರಯಾಣಕ್ಕೆ ಶಕ್ತಿ ತುಂಬಲು ಬಂದಿದೆ ಹೊಚ್ಚ ಹೊಸ ಟಾಟಾ ಏಸ್ ಪ್ರೋ (Tata Ace Pro). ಸರಿಸಾಟಿ ಇಲ್ಲದ ಬಾಳಿಕೆ, ಹೆಚ್ಚಿನ ಶಕ್ತಿ, ವಿಶ್ವಾಸಾರ್ಹತೆಯೊಂದಿಗೆ Tata Ace Pro ಕನಸುಗಳನ್ನು ಗೆರಿಗೆದರಿಸಲು ಮತ್ತು ಸ್ವಾವಲಂಬನೆ ಸ್ಥಾಪಿಸಲು ಬಂದಿದೆ.
ಇದು ಅವರ ಸಮಯ. ಇದು ಅವರ ಸರದಿ.

ಕನಸನ್ನು ನನಸು ಮಾಡಲು ನಡೆಸಿ ತಯಾರಿ
ಬಹಳ ಬೇಗ ನೀವೂ ಹೇಳುತ್ತೀರಿ, ಈಗ ನನ್ನ ಸರದಿ