
2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ನಾಲ್ಕನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಅದರಲ್ಲೂ ಒಂದೇ ದಿನ ಭಾರತಕ್ಕೆ ಒಂದೇ ಕ್ರೀಡೆಯಲ್ಲಿ ಎರಡೆರಡು ಚಿನ್ನದ ಪದಕಗಳು ಲಭಿಸಿವೆ. ಇಂದು ಬೆಳಿಗ್ಗೆ ನಡೆದ ಮಹಿಳಾ ಕಬಡ್ಡಿ ಫೈನಲ್‌ನಲ್ಲಿ ಭಾರತದ ಮಹಿಳಾ ತಂಡ ಇರಾನ್ ಮಹಿಳಾ ತಂಡವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತ್ತು. ಇದೀಗ ಭಾರತದ ಪುರುಷರ ಕಬಡ್ಡಿ ತಂಡವು ಫೈನಲ್‌ನಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ತಂಡವನ್ನು 40-34 ಅಂಕಗಳಿಂದ ಸೋಲಿಸುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದ ಮೊದಲಾರ್ಧದಲ್ಲಿ ಇರಾನ್ 1 ಅಂಕದ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ, ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡಿ 23 ಅಂಕಗಳನ್ನು ಕಲೆಹಾಕಿದರು. ಇತ್ತ ದ್ವಿತೀಯಾರ್ಧದಲ್ಲಿ ಇರಾನ್ ಕೇವಲ 16 ಅಂಕಗಳನ್ನು ಗಳಿಸಿತು. ಹೀಗಾಗಿ ಭಾರತ 6 ಅಂಕಗಳ ಅಂತರದಿಂದ ಫೈನಲ್ ಗೆದ್ದಿತು. ಮೇಲೆ ಹೇಳಿದಂತೆ 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಇದು ಭಾರತದ ನಾಲ್ಕನೇ ಚಿನ್ನದ ಪದಕವಾಗಿದೆ.
INDIAN MEN KABADDI AT ASIAN GAMES!
1990 🥇
1994 🥇
1998 🥇
2002🥇
2006🥇
2010 🥇
2014 🥇
2018 🥉
2022 🥇
2026 🥇INDIA ARE NOW 9 TIMES CHAMPIONS! 🏆 pic.twitter.com/zBFc99cMUl
— The Khel India (@TheKhelIndia) September 26, 2026
ಈ ಗೆಲುವಿನೊಂದಿಗೆ ಭಾರತ ತಂಡ 2018 ರ ಜಕಾರ್ತಾ ಕ್ರೀಡಾಕೂಟದಲ್ಲಿನ ಸೋಲಿಗೆ ಸತತ ಎರಡನೇ ಆವೃತ್ತಿಯಲ್ಲಿ ಸೇಡು ತೀರಿಸಿಕೊಂಡಿದೆ. 2018 ರ ಆವೃತ್ತಿಯಲ್ಲಿ ಇದೇ ಇರಾನ್ ವಿರುದ್ಧ ಭಾರತ ಸೋಲನುಭವಿಸಿತ್ತು. ಆದರೆ ಅದಕ್ಕೂ ಮುನ್ನ ನಡೆದಿದ್ದ ಏಷ್ಯನ್ ಕ್ರೀಡಾಕೂಟಗಳಲ್ಲಿ ಭಾರತದ ಪುರುಷರ ಕಬಡ್ಡಿ ತಂಡ ಸತತ ಏಳು ಚಿನ್ನದ ಪದಕಗಳನ್ನು ಗೆದ್ದುಕೊಂಡಿತ್ತು. ಇನ್ನು 2023 ರಲ್ಲಿ ನಡೆದಿದ್ದ ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಕಬಡ್ಡಿ ತಂಡ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಏಷ್ಯನ್ ಕ್ರೀಡಾಕೂಟದಲ್ಲಿ ಕಬಡ್ಡಿಯಲ್ಲಿ ಇದು ಭಾರತದ ಒಟ್ಟಾರೆ 9 ನೇ ಚಿನ್ನದ ಪದಕವಾಗಿದೆ.
ಏಷ್ಯನ್ ಗೇಮ್ಸ್ 2026: ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ 2ನೇ ಚಿನ್ನ
ಭಾರತದ ಮಹಿಳಾ ಕಬಡ್ಡಿ ತಂಡವು ಕೂಡ ಇಂದು ನಡೆದ ಫೈನಲ್‌ನಲ್ಲಿ ಇರಾನ್ ಮಹಿಳಾ ತಂಡವನ್ನು 37- 34 ಅಂಕಗಳ ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಮಹಿಳಾ ಕಬಡ್ಡಿ ಫೈನಲ್ಸ್ ಕೂಡ ರೋಮಾಂಚಕವಾಗಿತ್ತು. ಮೊದಲಾರ್ಧದಲ್ಲಿ ಭಾರತ 22-16 ಮುನ್ನಡೆ ಸಾಧಿಸಿತ್ತು, ಆದರೆ ದ್ವಿತೀಯಾರ್ಧದಲ್ಲಿ ಇರಾನ್ ಪುನರಾಗಮನ ಮಾಡಿ 18-15 ರಿಂದ ಮುನ್ನಡೆ ಸಾಧಿಸಿತು. ಅಂತಿಮವಾಗಿ ಭಾರತ ವಿಜಯಶಾಲಿಯಾಯಿತು. 2018 ರ ಜಕಾರ್ತಾ ಕ್ರೀಡಾಕೂಟವನ್ನು ಹೊರತುಪಡಿಸಿ, ಮಹಿಳಾ ತಂಡವು ಈಗ ಪ್ರತಿಯೊಂದು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.
Published On - 4:06 pm, Sat, 26 September 26