FIFA World Cup 2026: 8,396 ಕೋಟಿಯಲ್ಲಿ ಚಾಂಪಿಯನ್ ತಂಡಕ್ಕೆ ಸಿಗುವುದೆಷ್ಟು? ಉಳಿದ ತಂಡಗಳಿಗೆಷ್ಟು?

FIFA World Cup 2026 Prize Money: 2026ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ಮತ್ತು ಸ್ಪೇನ್ ತಂಡಗಳು ಸೆಣಸಲಿವೆ. ಈ ಬಾರಿಯ ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ದೊಡ್ಡ ₹8,396 ಕೋಟಿ ಬಹುಮಾನದ ಮೊತ್ತವನ್ನು ಹೊಂದಿದೆ. ಚಾಂಪಿಯನ್ ತಂಡಕ್ಕೆ ₹490 ಕೋಟಿ ಹಾಗೂ ವಿಶೇಷ ಚಿನ್ನದ ಉಂಗುರ ಲಭಿಸಲಿದೆ. 48 ತಂಡಗಳು ಭಾಗವಹಿಸಿರುವ ಈ ಪಂದ್ಯಾವಳಿ ಹಲವು ಕಾರಣಗಳಿಗೆ ವಿಶೇಷವಾಗಿದೆ. ಸ್ಪೇನ್‌ಗೆ 2010ರ ನಂತರ ಪ್ರಶಸ್ತಿ ಗೆಲ್ಲುವ ಸುವರ್ಣಾವಕಾಶ.

FIFA World Cup 2026: 8,396 ಕೋಟಿಯಲ್ಲಿ ಚಾಂಪಿಯನ್ ತಂಡಕ್ಕೆ ಸಿಗುವುದೆಷ್ಟು? ಉಳಿದ ತಂಡಗಳಿಗೆಷ್ಟು?
Fifa 2026

Updated on: Jul 18, 2026 | 4:19 PM

2026 ರ ಫಿಫಾ ವಿಶ್ವಕಪ್ (FIFA World Cup 2026) ಅಂತಿಮ ಹಂತಕ್ಕೆ ಬಂದು ನಿಂತಿದೆ. ಭಾನುವಾರ ಅಂದರೆ ಜುಲೈ 19 ರಂದು ನಡೆಯಲಿರುವ ಅರ್ಜೆಂಟೀನಾ ಹಾಗೂ ಸ್ಪೇನ್ (Argentina vs Spain) ನಡುವಿನ ಫೈನಲ್ ಪಂದ್ಯದೊಂದಿಗೆ ಈ ಪಂದ್ಯಾವಳಿಗೆ ತೆರೆ ಬೀಳಲಿದೆ. ಒಂದೆಡೆ ಹಾಲಿ ಚಾಂಪಿಯನ್ ಅರ್ಜೆಂಟೀನಾ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ಫೈನಲ್​ಗೇರಿದರೆ, ಇತ್ತ ಸ್ಪೇನ್ ಕಳೆದ ಬಾರಿಯ ರನ್ನರ್ ಅಪ್ ಫ್ರಾನ್ಸ್ ತಂಡವನ್ನು ಮಣಿಸಿ ಫೈನಲ್​ಗೆ ಟಿಕೆಟ್ ಪಡೆದುಕೊಂಡಿದೆ. 2010 ರ ನಂತರ ಸ್ಪೇನ್ ಫೈನಲ್ ತಲುಪಿರುವುದರಿಂದ ಈ ಬಾರಿ ಪ್ರಶಸ್ತಿ ಬರ ನೀಗಿಸಿಕೊಳ್ಳುತ್ತಾ ಎಂಬ ಕುತೂಹಲ ಮೂಡಿದೆ. ಅಂದಹಾಗೆ ಈ ಬಾರಿ ಫಿಫಾ ವಿಶ್ವಕಪ್​ಗೆ ಸರಿಸುಮಾರು 8,396 ಕೋಟಿ ರೂಗಳನ್ನು ಬಹುಮಾನದ ಮೊತ್ತವಾಗಿ ಮೀಸಲಿಡಲಾಗಿದೆ. ಇದರರ್ಥ ಈ ಬಾರಿಯ ಚಾಂಪಿಯನ್ ತಂಡದ ಮೇಲೆ ಹಣದ ಮಳೆಯೇ ಸುರಿಯಲಿದೆ. ಚಾಂಪಿಯನ್ ತಂಡದ ಜೊತೆಗೆ ರನ್ನರ್ ಅಪ್ ತಂಡ ಹಾಗೂ ಇತರ ತಂಡಗಳಿಗೂ 100 ಕೋಟಿ ಗೂ ಅಧಿಕ ಮೊತ್ತ ಬಹುಮಾನವಾಗಿ ಸಿಗಲಿದೆ.

2026 ರ ಫಿಫಾ ವಿಶ್ವಕಪ್‌ ಹಲವು ಕಾರಣಗಳಿಗೆ ವಿಶೇಷವಾಗಿತ್ತು. ಮೊದಲ ಬಾರಿಗೆ, ಪಂದ್ಯಾವಳಿಯಲ್ಲಿ ಗರಿಷ್ಠ 48 ತಂಡಗಳು ಆಡಿದವು, ಗರಿಷ್ಠ ಸಂಖ್ಯೆಯ ಪಂದ್ಯಗಳು ನಡೆದವು. ಹಾಗೆಯೇ ಇದರ ಜೊತೆಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ದೊಡ್ಡ ಬಹುಮಾನದ ಹಣವನ್ನು ಈ ಬಾರಿ ಘೋಷಿಸಲಾಗಿದೆ.

ಸುಮಾರು 8,396 ಕೋಟಿ ರೂ..!

ಮೇಲೆ ಹೇಳಿದಂತೆ ಈ ಬಾರಿ ಪಂದ್ಯಾವಳಿಗಾಗಿ ಒಟ್ಟು 871 ಮಿಲಿಯನ್ ಡಾಲರ್ (ಸುಮಾರು 8,396 ಕೋಟಿ ರೂ) ಅನ್ನು ಬಹುಮಾನಕ್ಕಾಗಿ ಮೀಸಲಿಡಲಾಗಿದೆ. ಅದರಲ್ಲಿ ಈಗಾಗಲೇ ಪ್ರದರ್ಶನದ ಆಧಾರದ ಮೇಲೆ 703 ಮಿಲಿಯನ್ (ಸುಮಾರು 6775.8 ಕೋಟಿ ರೂ.) ವಿತರಿಸಲಾಗಿದೆ. ಹಾಗೆಯೇ 168 ಮಿಲಿಯನ್ (ಸುಮಾರು 1619.2 ಕೋಟಿ ರೂ) ಭಾಗವಹಿಸುವಿಕೆ ಶುಲ್ಕ ಮತ್ತು ಪೂರ್ವಸಿದ್ಧತಾ ಅನುದಾನದ ರೂಪದಲ್ಲಿ ಎಲ್ಲಾ ಅರ್ಹತಾ ತಂಡಗಳಿಗೆ ಹೋಗುತ್ತದೆ.

ವಿಜೇತ ತಂಡಕ್ಕೆ 348 ಕೋಟಿ ರೂ

ಹಿಂದಿನ ಆವೃತ್ತಿಯಲ್ಲಿ, ವಿಜೇತ ತಂಡವು 348 ಕೋಟಿ ರೂಪಾಯಿಗಳನ್ನು (42 ಮಿಲಿಯನ್) ಬಹುಮಾನವನ್ನಾಗಿ ಪಡೆದುಕೊಂಡಿತ್ತು. ಇತ್ತ ಫೈನಲ್​ನಲ್ಲಿ ಸೋತ ತಂಡಕ್ಕೆ 248 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಉಳಿದಂತೆ ಪಂದ್ಯಾವಳಿಯಲ್ಲಿ ಭಾಗವಹಿಸಿದ 32 ತಂಡಗಳಿಗೆ ವಿತರಿಸಲಾದ ಒಟ್ಟು ಬಹುಮಾನದ ಮೊತ್ತ 36 ಬಿಲಿಯನ್​ಗೂ ಹೆಚ್ಚಾಗಿತ್ತು.

ಈ ವರ್ಷ, ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದ ಪ್ರತಿ ತಂಡವು ಸರಿಸುಮಾರು 12.5 ಮಿಲಿಯನ್ (ಸುಮಾರು ರೂ. 120.4 ಕೋಟಿ) ಪಡೆಯುತ್ತದೆ. ಹಾಗೆಯೇ ಫೈನಲ್ ಗೆದ್ದ ತಂಡದ ಎಲ್ಲಾ ಆಟಗಾರರಿಗೆ ವಿಶೇಷ ಚಿನ್ನದ ಉಂಗುರವನ್ನು ನೀಡಲಾಗುವುದು ಎಂದು ಫಿಫಾ ಘೋಷಿಸಿದೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ, ಚಾಂಪಿಯನ್ ತಂಡದ ಆಟಗಾರರು ಮತ್ತು ಎಲ್ಲಾ ಸಹಾಯಕ ಸಿಬ್ಬಂದಿ ಸದಸ್ಯರು ಟ್ರೋಫಿ ಮತ್ತು ಚಿನ್ನದ ಪದಕಗಳೊಂದಿಗೆ ಚಾಂಪಿಯನ್‌ಶಿಪ್ ಉಂಗುರಗಳನ್ನು ಸ್ವೀಕರಿಸುತ್ತಾರೆ.

FIFA World cup Craze: ಬೆಂಗಳೂರಲ್ಲಿ ಜೋರಾಯ್ತು ಫಿಫಾ ವಿಶ್ವಕಪ್ ಕ್ರೇಜ್! ರೆಸ್ಟೋರೆಂಟ್‌ಗಳಿಗೆ ರಾತ್ರಿ 3:30ರವರೆಗೆ ತೆರೆದಿರಲು ಅನುಮತಿ

ಬಹುಮಾನದ ಮೊತ್ತ ಹೀಗೆ ಹಂಚಿಕೆಯಾಗಲಿದೆ

  • ಚಾಂಪಿಯನ್ ತಂಡ: 490 ಕೋಟಿ ರೂ.
  • ರನ್ನರ್ ಅಪ್: 317 ಕೋಟಿ ರೂ.
  • ಮೂರನೇ ಸ್ಥಾನ: 279 ಕೋಟಿ ರೂ.
  • ನಾಲ್ಕನೇ ಸ್ಥಾನ: 259 ಕೋಟಿ ರೂ.
  • 5-8ನೇ ಸ್ಥಾನ: ಪ್ರತಿ ತಂಡಕ್ಕೆ 182 ಕೋಟಿ ರೂ.
  • 9-16ನೇ ಸ್ಥಾನ: ಪ್ರತಿ ತಂಡಕ್ಕೆ 144 ಕೋಟಿ ರೂ.
  • 17-32ನೇ ಸ್ಥಾನ: ಪ್ರತಿ ತಂಡಕ್ಕೆ 105 ಕೋಟಿ ರೂ.
  • 33-48ನೇ ಸ್ಥಾನ: ಪ್ರತಿ ತಂಡಕ್ಕೆ 86 ಕೋಟಿ ರೂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Sat, 18 July 26

Follow Us