ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಹೈವೋಲ್ಟೇಜ್ ಟಿ20 ಪಂದ್ಯದಲ್ಲಿ ಕೊಹ್ಲಿ ಸೈನ್ಯ ಗೆಲುವಿನ ರಣ ಕೇಕೆ ಹಾಕಿದೆ. ಕೆರಿಬಿಯನ್ನರನ್ನ ಬಗ್ಗುಬಡಿದಿರುವ ಟೀಮ್ ಇಂಡಿಯಾ ಪೊಲಾರ್ಡ್ ಪಡೆಯನ್ನೇ ಖಲ್ಲಾಸ್ ಮಾಡಿ ರಣಭೇರಿ ಬಾರಿಸಿದೆ.
ಕೆರಿಬಿಯನ್ನರ ರಣಬೇಟೆಯಾಡಿದ ಕೊಹ್ಲಿ!
ವೆಸ್ಟ್ ಇಂಡೀಸ್ ತಂಡವನ್ನ ಕಿಂಗ್ ಕೊಹ್ಲಿ ಧೂಳೀಪಟ ಮಾಡ್ಬಿಟ್ಟಿದ್ದಾರೆ. ಹೈದ್ರಾಬಾದ್ನಲ್ಲಿ ಕೆರಿಬಿಯನ್ನರ ಅಟ್ಟಾಡಿಸಿ ಹೆಬ್ಬುಲಿಯಂತೆ ರಣ ಬೇಟೆಯಾಡಿದ ವಿರಾಟ್ ಪೊಲಾರ್ಡ್ ಪಡೆ ಪಂಚ್ ಕೊಟ್ರು. ಕೊಹ್ಲಿ ಅಬ್ಬರದ ಬ್ಯಾಟಿಂಗ್ಗೆ ವೆಸ್ಟ್ ಇಂಡೀಸ್ ಬೌಲರ್ಗಳು ದಿಕ್ಕಾಪಲಾಗಿ ಹೋಗಿದ್ರು.
ಮರಿ ಗೇಲ್ ಹೆಟ್ಮೇರ್ ಆರ್ಭಟ.. ಲಿವಿಸ್ ಡೆಡ್ಲಿ ಬ್ಯಾಟಿಂಗ್!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ ಆಯ್ದುಕೊಳ್ಳುತ್ತೆ. ವಿಂಡೀಸ್ ಪರ ಇವಿನ್ ಲಿವೀಸ್ ಅಬ್ಬರದ ಬ್ಯಾಟಿಂಗ್ಗೆ ಮುಂದಾಗ್ತಾರೆ. 17 ಬಾಲ್ನಲ್ಲಿ 4 ಸಿಕ್ಸರ್ ಸಹಿತ 3 ಬೌಂಡ್ರಿ ಸಿಡಿಸಿ 40ರನ್ಗಳಿಸಿದ್ರು. ಮರಿ ಗೇಲ್ ಖ್ಯಾತಿಯ ಶಿಮ್ರಾನ್ ಹೆಟ್ಮೇರ್ ಎದುರಿಸಿದ 41 ಬಾಲ್ನಲ್ಲಿ 2ಬೌಂಡ್ರಿ ಹಾಗೂ 4 ಸಿಕ್ಸರ್ ಸಹಿತ 56ರನ್ಗಳಿಸಿ ಆರ್ಭಟಿಸಿದ್ರು.
ಇನ್ನು ವಿಂಡೀಸ್ ನಾಯಕ ಕೆರಾನ್ ಪೊಲಾರ್ಡ್ 4 ಸಿಕ್ಸರ್ ಸಹಿತ 37 ರನ್ಗಳಿಸಿದ್ರೆ, ಜೇಸನ್ ಹೋಲ್ಡರ್ 9 ಬಾಲ್ನಲ್ಲಿ 24ರನ್ಗಳಿಸ್ತಾರೆ. ಈ ಮೂಲಕ ವೆಸ್ಟ್ ಇಂಡೀಸ್ ತಂಡ ನಿಗಧಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 207ರನ್ಗಳನ್ನ ಗಳಿಸ್ತು. ವೆಸ್ಟ್ ಇಂಡೀಸ್ ನೀಡಿದ್ದ 208ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 8ರನ್ಗಳಿಸಿರುವಾಗ ವಿಕೆಟ್ ಒಪ್ಪಿಸಿ ತಂಡಕ್ಕೆ ಶಾಕ್ ನೀಡಿದ್ರು.
ರೋಹಿತ್ ಶರ್ಮಾ ಔಟಾಗ್ತಿದ್ದಂತೆ ಮೈದಾನಕ್ಕೆ ಎಂಟ್ರಿಕೊಟ್ಟಿದ್ದೇ ಟೀಮ್ ಇಂಡಿಯಾದ ಹುಲಿಯಾ ವಿರಾಟ್ ಕೊಹ್ಲಿ. ಕನ್ನಡಿಗ ಕೆ.ಎಲ್.ರಾಹುಲ್ ಜೊತೆಗೂಡಿ ಅದ್ಭುತ ಬ್ಯಾಟಿಂಗ್ ಮಾಡಿದ ನಾಯಕ ವಿರಾಟ್ ಕೊಹ್ಲಿ ಚಾಣಾಕ್ಷದಾಟಕ್ಕೆ ಮುಂದಾದ್ರು. ಕರುನಾಡ ಕುವರ ಕೆ.ಎಲ್.ರಾಹುಲ್ ಹೊಡಿಬಡಿ ಆಟಕ್ಕೆ ವಿಂಡೀಸ್ ಬೌಲರ್ಗಳು ಪತರುಗುಟ್ಟಿ ಹೋಗ್ತಾರೆ.
ರಾಹುಲ್ ಅರ್ಧ ಶತಕದಾಟಕ್ಕೆ ವಿಂಡೀಸ್ ಖಲ್ಲಾಸ್!
ವೆಸ್ಟ್ ಇಂಡೀಸ್ ಬೌಲರ್ಗಳ ಮೇಲೆ ಭರ್ಜರಿ ಸವಾರಿ ಮಾಡಿದ ಕನ್ನಡಿಗ ಕೆ.ಎಲ್.ರಾಹುಲ್ ಬೌಂಡ್ರಿ ಸಿಕ್ಸರ್ಗಳ ಸುರಿಮಳೆ ಗೈದ್ರು. 40 ಬಾಲ್ನಲ್ಲಿ 5 ಬೌಂಡ್ರಿ ಸಹಿತ 4 ಸಿಕ್ಸರ್ ಸಿಡಿಸಿದ ಪರಾಕ್ರಮ ರಾಹುಲ್ 62ರನ್ಗಳಿಸಿ ತಂಡಕ್ಕೆ ನೆರವಾದ್ರು.
ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್ ಮಾಡ್ತಿದ್ದ ವಿರಾಟ್, ಕೊನೆ ಕೊನೆಗೆ ಅಬ್ಬರಿಸೋದಕ್ಕೆ ಶುರುಮಾಡ್ತಾರೆ. ಮೊದಲ 34ಬಾಲ್ನಲ್ಲಿ 44ರನ್ಗಳಿಸಿದ್ದ ವಿರಾಟ್, ಉಳಿದ 16 ಬಾಲ್ನಲ್ಲಿ ರನ್ಪ್ರವಾಹ ಎಬ್ಬಿಸಿಬಿಡ್ತಾರೆ. ಹೋಲ್ಡರ್ ಬೌಲಿಂಗ್ನಲ್ಲಿ ಸಿಕ್ಸರ್ಗಟ್ಟುವ ಮೂಲಕ 50ರನ್ ಪೂರೈಸಿದ ಕೊಹ್ಲಿ, ಪಿಕ್ಚರ್ ಈಗ ಶುರುವಾಗುತ್ತೆ ನೋಡ್ಕೊಳಿ ಅನ್ನೋ ಸಿಗ್ನಲ್ ಕೊಟ್ಟಿದ್ರು.
ವಿಲಿಯಮ್ಸ್ ನೋಟ್ಬುಕ್ ಸೆಲೆಬ್ರೆಷನ್ಗೆ ವಿರಾಟ್ ಟಕ್ಕರ್!
ವಿಂಡೀಸ್ ಬೌಲರ್ ಕೆಸ್ರಿಕ್ ವಿಲಿಯಮ್ಸ್ ಈ ಹೈದ್ರಾಬಾದ್ ಪಂದ್ಯವನ್ನ ತಮ್ಮ ಕರಿಯರ್ನಲ್ಲಿ ಸದಾ ನೆನಪಿಡೋ ಆಗೇ ಕೊಹ್ಲಿ ಮಾಡಿದ್ದಾರೆ. ವಿಲಿಯಮ್ಸ್ ಮಾಡಿದ 16ನೇ ಓವರ್ನಲ್ಲಿ 2 ಸಿಕ್ಸರ್ ಸಹಿತ ಒಂದು ಬೌಂಡ್ರಿ ಸಿಡಿಸಿದ ಚೇಸಿಂಗ್ ಮಾಸ್ಟರ್ ಹುಲಿಯಾ ಕೊಹ್ಲಿ, ವಿಲಿಯಮ್ಸ್ ಮಾಡ್ತಿದ್ದ, ನೋಟ್ಬುಕ್ ಸೆಲೆಬ್ರೆಷನ್ ಅನ್ನೇ ಕಾಪಿ ಮಾಡಿ ವಿಲಿಯಮ್ಸ್ಗೆ ಟಕ್ಕರ್ ಕೊಡ್ತಾರೆ.
ಬಾಲಬಿಚ್ಚಿದ ಪೊಲಾರ್ಡ್ಗೆ ಚೇಸಿಂಗ್ ಮಾಸ್ಟರ್ ಸಿಕ್ಸರ್ ಏಟು!
ಇನ್ನೇನು ಪಂದ್ಯ ಕೈಬಿಟ್ಟುಹೋಗ್ತಿದೆ ಅನ್ನೋದು ಗೊತ್ತಾಗ್ತಿರುವಾಗ್ಲೇ ವಿಂಡೀಸ್ ನಾಯಕ ಕೆರಾನ್ ಪೊಲಾರ್ಡ್ ಕೊಹ್ಲಿ ಜೊತೆ ಮೈದಾನದಲ್ಲಿ ಕಿರಿಕ್ ತೆಗೆಯೋಕೆ ಮುಂದಾಗ್ತಾರೆ. 17.2ನೇ ಓವರ್ನಲ್ಲಿ ವೈಡ್ ಮಾಡಿದ ಪೊಲಾರ್ಡ್ ಕೊಹ್ಲಿಗೆ ಚಮಕ್ ಕೊಡ್ತಾರೆ. ಇದ್ರಿಂದ ಸಿಟ್ಟಾದ ಹುಲಿಯಾ ಕೊಹ್ಲಿ, ತದನಂತರದ ಬಾಲ್ಅನ್ನೇ ಸೀದಾ ಸಿಕ್ಸರ್ಗಟ್ಟಿ, ಪೊಲಾರ್ಡ್ರನ್ನ ದುರ್ಗಟ್ಟಿ ನೋಡುತ್ತಾ ನೀ ಬಾಲಬಿಚ್ಚಿದ್ರೆ ಇದೇ ಗತಿ ಎಂದು ತಮ್ಮ ಖಡಕ್ ಲುಕ್ನಲ್ಲೇ ಪೊಲಾರ್ಡ್ಗೆ ವಾರ್ನಿಂಗ್ ಕೊಡ್ತಾರೆ.
ವಿಂಡೀಸ್ ವಿರುದ್ಧ ಕೊಹ್ಲಿ ರನ್ ಸುನಾಮಿ
ವೆಸ್ಟ್ ಇಂಡೀಸ್ ವಿರುದ್ಧ ಎದುರಿಸಿದ 50 ಬಾಲ್ನಲ್ಲಿ 6 ಬೌಂಡ್ರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 94ರನ್ಗಳನ್ನ ಗಳಿಸಿದ ವಿರಾಟ್ ಕೊಹ್ಲಿ, ತಂಡವನ್ನ ಗೆಲ್ಲಿಸಿಕೊಡ್ತಾರೆ. ಮುಖ್ಯವಾದ ವಿಚಾರ ಏನಂದ್ರೆ, ನಿನ್ನೆಯ ಇಂಡೋ-ವಿಂಡೀಸ್ ಟಿಟ್ವೆಂಟಿ ಪಂದ್ಯದಿಂದ ಕ್ರಿಕೆಟ್ ಲೋಕದಲ್ಲಿ ಹೊಸ ನಿಯಮ ಜಾರಿಗೆ ಬಂದಿದೆ. ಇನ್ಮುಂದೆ ನೋ ಬಾಲ್ಅನ್ನ ಥರ್ಡ್ ಅಂಪೈರ್ ಪರೀಕ್ಷಿಸುತ್ತಾರೆ. ವಿಂಡೀಸ್ ಬೌಲರ್ಗಳು ಫ್ರಂಟ್ಫುಟ್ ನೋ ಬಾಲ್ ಮಾಡಿ ಕೈಸುಟ್ಟಿಕೊಂಡ್ರು. ಇದರ ಅಡ್ವಾಂಟೇಜ್ ಪಡೆದುಕೊಂಡ ಬ್ಲೂಬಾಯ್ಸ್ ರನ್ಮಳೆ ಹರಿಸಿದ್ರು.
ವಿಂಡೀಸ್ ಉಡೀಸ್ ಮಾಡಿದ ಹುಲಿಯಾ ಕೊಹ್ಲಿ, ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸುವಂತೆ ಮಾಡಿದ್ರು. ಅಜೇಯ 94ರನ್ಗಳಿಸಿದ ಹುಲಿಯಾ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ಬಾಚಿಕೊಂಡ್ರು.
Published On - 9:18 am, Sat, 7 December 19