ಗೆಲುವಿಗೆ ಬೇಕಾಗಿದ್ದ 179ರನ್ಗಳ ಬೆನ್ನಟ್ಟಿದ ವಿರಾಟ್ ಕೊಹ್ಲಿ ಟೀಮಿನ ಆರಂಭ ಅಷ್ಟೇನೂ ಚೆನ್ನಾಗಿರಲಿಲ್ಲ. ಧೇವದತ್ ಪಡಿಕ್ಕಲ್ ಜೊತೆ ಇನ್ನಿಂಗ್ಸ್ ಪ್ರಾರಂಭಿಸಿದ ಆರನ್ ಫಿಂಚ್ ಕೇವಲ ಎರಡು ಸಿಕ್ಸರ್ಗಳನ್ನು ಬಾರಿ ಭರವಸೆ ಮೂಡಿಸುತ್ತಿದ್ದಂತೆಯೇ 14 ರನ್ಗಳಿಗೆ ಔಟಾದರು. ನಂತರ ಪಡಿಕ್ಕಲ್ರನ್ನು ಮತ್ತು ಕೊಹ್ಲಿ ಎಚ್ಚರಿಕೆ ಮಿಶ್ರಿತ ಆಕ್ರಮಣಕಾರಿ ಆಟವಾಡಿ ಸ್ಕೋರನ್ನು 102ಕ್ಕೆ ಕೊಂಡೊಯ್ದರು. ಈವತ್ತು ಸ್ವಲ್ಪ ನಿಧಾನವಾಗಿಯೇ ಬ್ಯಾಟ್ ಮಾಡಿದ ಪಡಿಕ್ಕಲ್ 37 ಎಸೆತಗಳಲ್ಲಿ 35 ರನ್ (2X4) ಗಳಿಸಿ ಔಟಾದರು. 32 ಎಸೆತಗಳಲ್ಲಿ 43 ರನ್ (1X4 2X6) ಗಳಿಸಿದ್ದ ಕೊಹ್ಲಿ ಆದೇ ಸ್ಕೋರಿಗೆ ಔಟಾದಾಗ ಬೆಂಗಳೂರು ಒತ್ತಡಕ್ಕೆ ಸಿಲುಕಿಕೊಂಡಿತು. ಆದರೆ, ಎಬಿಡಿ ಮತ್ತು ಯುವ ಆಟಗಾರ ಗುರ್ಕೀರತ್ ಸಿಂಗ್ ಮುರಿಯದ ನಾಲ್ಲನೇ ವಿಕೆಟ್ಗೆ 75 ರನ್ ಸೇರಿಸಿ ಟೀಮನ್ನು ಇನ್ನೂ 2 ಎಸೆತಗಳಿರುವಂತೆಯೇ ಗೆಲುವಿನ ಗೆರೆ ದಾಟಿಸಿದರು.
ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ರಾಯಲ್ಸ್ ಆರಂಭ ಚೆನ್ನಾಗಿತ್ತು. ಇನ್ನಿಂಗ್ಸ್ ಆರಂಭಿಸಿದ ರಾಬಿನ್ ಉತ್ತಪ್ಪ ಮತ್ತು ಬೆನ್ ಸ್ಟೋಕ್ಸ್ 50 ರನ್ ಪೇರಿಸಿದರು. ಆಕ್ರಮಣಕಾರಿ ಹೊಡೆತಗಳನ್ನು ಬಾರಿಸಿದ ಉತ್ತಪ್ಪ 22 ಎಸೆತಗಳಲ್ಲಿ 41 ರನ್ (7X4 1X6) ಬಾರಿಸಿ ಈ ಆವೃತಿಯಲ್ಲಿ ಮೊದಲ ಬಾರಿಗೆ ಉತ್ತಮವೆನ್ನಬಹುದಾದ ಕಾಣಿಕೆ ನೀಡಿದರು. ಸ್ಟೋಕ್ಸ್ 19 ಎಸೆತಗಳನ್ನಾಡಿ 15 ರನ್ ಗಳಿಸಿದರು. ಸ್ಕೋರು 69 ತಲುಪುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಅಪಾಯಕ್ಕೆ ಸಿಕ್ಕಿದ್ದ ರಾಯಲ್ಸ್ ಇನ್ನಿಂಗ್ಸ್ ಅನ್ನು ನಾಯಕ ಸ್ಟಿವೆನ್ ಸ್ಮಿತ್ ಸಂಭಾಳಿಸಿದರು. ಸ್ಮಿತ್ 36 ಎಸೆತಗಳಲ್ಲಿ 57 ರನ್ (6X4 1X6) ಗಳಿಸಿದರು. ಜೊಸ್ ಬಟ್ಲರ್ (24 25 1X4 1X6) ಮತ್ತು ತೆವಾಟಿಯಾ (19 11 1X1 1X6) ಅವರ ಕಾಂಟ್ರಿಬ್ಯೂಷನ್ಗಳಿಂದ ರಾಯಲ್ಸ್ ಮೊತ್ತ 177/6 ತಲುಪಿತು.
ಮತ್ತೊಮ್ಮೆ ತಮ್ಮ ಉಪಯುಕ್ತತೆಯ ಉದಾಹರಣೆ ನೀಡಿದ ವೇಗದ ಬೌಲರ್ ಕ್ರಿಸ್ ಮೊರಿಸ್ ಕೇವಲ 26 ರನ್ ನೀಡಿ 4 ವಿಕೆಟ್ ಪಡೆದರು. ಅವರಿಗೆ ಉತ್ತಮ ಬೆಂಬಲ ನೀಡಿದ ಯುಜ್ವೇಂದ್ರ ಚಹಲ್ 34 ರನ್ಗಳಿಗೆ 2 ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ 2 ಅಂಕಗಳನ್ನು ಸಂಪಾದಿಸಿದ ಆರ್ಸಿಬಿ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 3 ನೇ ಸ್ಥಾನದಲ್ಲಿದೆ.