ದಾಂಪತ್ಯ ಜೀವನಕ್ಕೆ ಕಾಲಿಟ್ಟ 19 ವರ್ಷದ ಕ್ರಿಕೆಟಿಗ​ ಮುಜೀಬ್​.. ಮದ್ವೆ ವಿಡಿಯೋ ಆಯ್ತು ಫುಲ್​ ವೈರಲ್​!

|

Updated on: Nov 15, 2020 | 3:43 PM

ದೂರದ ಅಫ್ಘಾನಿಸ್ತಾನದಿಂದ ಬಂದು IPLನಲ್ಲಿ ತನ್ನದೇ ಛಾಪು ಮೂಡಿಸಿದ ಕ್ರಿಕೆಟಿಗ ಮುಜೀಬ್ ಉರ್ ರಹಮಾನ್​ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ಕೇವಲ 19ರ ಪ್ರಾಯದ ಮುಜೀಬ್​ IPL ಮುಗಿಸಿ ತಮ್ಮ ಮನೆ ಸೇರುತ್ತಿದ್ದಂತೆಯೇ ಅವರ ವಿವಾಹದ ಸುದ್ದಿ ಹೊರಬಿದ್ದಿದೆ. ಇದೀಗ, ಮುಜೀಬ್​ ವಿವಾಹ ಸಂಭ್ರಮದಲ್ಲಿ ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟ್​ ಆಟಗಾರರು ಕುಣಿದು ಕುಪ್ಪಳಿಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅತಿ ಕಿರಿಯ ವಯಸ್ಸಿನಲ್ಲೇ 20-20ಕ್ರಿಕೆಟ್ ಫಾರ್ಮ್ಯಾಟ್​ನ ಎರಡನೇ ಶ್ರೇಷ್ಠ ಸ್ಪಿನ್ ಬೌಲರ್ ಆಗಿ ಮುಜೀಬ್​ ಹೊರಹೊಮ್ಮಿದ್ದಾರೆ. […]

ದಾಂಪತ್ಯ ಜೀವನಕ್ಕೆ ಕಾಲಿಟ್ಟ 19 ವರ್ಷದ ಕ್ರಿಕೆಟಿಗ​ ಮುಜೀಬ್​.. ಮದ್ವೆ ವಿಡಿಯೋ ಆಯ್ತು ಫುಲ್​ ವೈರಲ್​!
Follow us on

ದೂರದ ಅಫ್ಘಾನಿಸ್ತಾನದಿಂದ ಬಂದು IPLನಲ್ಲಿ ತನ್ನದೇ ಛಾಪು ಮೂಡಿಸಿದ ಕ್ರಿಕೆಟಿಗ ಮುಜೀಬ್ ಉರ್ ರಹಮಾನ್​ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ಕೇವಲ 19ರ ಪ್ರಾಯದ ಮುಜೀಬ್​ IPL ಮುಗಿಸಿ ತಮ್ಮ ಮನೆ ಸೇರುತ್ತಿದ್ದಂತೆಯೇ ಅವರ ವಿವಾಹದ ಸುದ್ದಿ ಹೊರಬಿದ್ದಿದೆ. ಇದೀಗ, ಮುಜೀಬ್​ ವಿವಾಹ ಸಂಭ್ರಮದಲ್ಲಿ ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟ್​ ಆಟಗಾರರು ಕುಣಿದು ಕುಪ್ಪಳಿಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅತಿ ಕಿರಿಯ ವಯಸ್ಸಿನಲ್ಲೇ 20-20ಕ್ರಿಕೆಟ್ ಫಾರ್ಮ್ಯಾಟ್​ನ ಎರಡನೇ ಶ್ರೇಷ್ಠ ಸ್ಪಿನ್ ಬೌಲರ್ ಆಗಿ ಮುಜೀಬ್​ ಹೊರಹೊಮ್ಮಿದ್ದಾರೆ. IPL​ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿದ್ದರೂ ಮುಜೀಬ್​ಗೆ ಈ ಬಾರಿ ಹೆಚ್ಚಿನ ಅವಕಾಶ ಸಿಗಲಿಲ್ಲ. ಇದೀಗ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಶ್ ಲೀಗ್​ನಲ್ಲಿ ಮುಜೀಬ್ ತಮ್ಮ ಟ್ಯಾಲೆಂಟ್​ ಪ್ರದರ್ಶಿಸುವ ವಿಶ್ವಾಸದಲ್ಲಿದ್ದಾರೆ.

21ನೇ ಶತಮಾನದಲ್ಲಿ ಜನಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿರುವ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಮುಜೀಬ್ ಪಾತ್ರರಾಗಿದ್ದಾರೆ. ತಮ್ಮ 16ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 5 ವಿಕೆಟ್ ಪಡೆದಿರುವ ಸಾಧನೆ ಅವರದ್ದಾಗಿದೆ. ಮುಜೀಬ್ ಸಾಧನೆಯನ್ನು ಗುರುತಿಸಿದ ICC, ಅವರನ್ನು ಅಫ್ಘಾನಿಸ್ತಾನ ತಂಡದ ‘ರೈಸಿಂಗ್ ಸ್ಟಾರ್’ ಎಂದು ಸಹ ಘೋಷಿಸಿದೆ.

ಹಾಗಾಗಿ, ಇಷ್ಟು ಕಿರಿಯ ವಯಸ್ಸಿನಲ್ಲೇ ಸಾಧನೆಗೈದಿರುವ ಮುಜೀಬ್​ ಮದುವೆಯಾಗುವುದರಲ್ಲಿ ತಪ್ಪೇನು ಇಲ್ಲ ಎಂದು ಹಲವು ಕ್ರಿಕೆಟಿಗರು ಸಮರ್ಥಿಸಿಕೊಂಡಿದ್ದಾರೆ. ಅಂದ ಹಾಗೆ, ಅಫ್ಘಾನಿಸ್ತಾನದ ಸಂವಿಧಾನದ ಕಲಂ 70ರ ಪ್ರಕಾರ ಪುರುಷರು 18ನೇ ವಯಸ್ಸಿಗೆ ಮದುವೆಯಾಗಬಹುದು ಎಂದು ಉಲ್ಲೇಖಿಸಲಾಗಿದೆ.