
ಬಿದ್ದವರ ಮೇಲೆ ಆಳಿಗೊಂದು ಕಲ್ಲು ಅನ್ನೋ ಮಾತಿದೆ. ಹಾಗೇನೆ ಕ್ರಿಕೆಟ್‌ನಲ್ಲೂ ಕೂಡಾ ಸೋತು ಸುಣ್ಣವಾದವರ ಮೇಲೆ ಆಳಿಗೊಬ್ರು ಕಲ್ಲು ಎಸೆಯೋದು ಹೊಸತೇನಲ್ಲ. ಇಂಥದ್ದೆ ಒಂದು ಘಟನೆ ಈಗ ಕ್ರಿಕೆಟ್ ವಲಯದಲ್ಲಿ ಹಲ್‌ಚಲ್ ಸೃಷ್ಟಿಸಿದೆ. ವಿರಾಟ್ ಕೊಹ್ಲಿ ಬಗ್ಗೆ ಕಾಮೆಂಟ್ ಮಾಡೋ ಭರದಲ್ಲಿ ಸುನೀಲ್ ಗವಾಸ್ಕರ್ ಆಡಿದ ಮಾತು ವಿರಾಟ್ ಪತ್ನಿ ನಟಿ ಅನುಷ್ಕಾ ಶರ್ಮಾಗೆ ಸಿಕ್ಕಾಪಟ್ಟೆ ಸಿಟ್ಟು ತರಿಸಿದೆ. ಹೀಗಾಗಿ ಅನುಷ್ಕಾ ಸಾಮಾಜಿಕ ತಾಣದ ಮೂಲಕ ಗವಾಸ್ಕರ್‌ಗೆ ಬಹಿರಂಗವಾಗೇ ತರಾಟೆಗೆ ತೆಗೆದುಕೊಂಡಿದ್ದಾರೆ.
Published On - 8:00 pm, Sat, 26 September 20