Asian Boxing Championship: ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ದೀಪಾಲಿ ಥಾಪಾ

|

Updated on: Sep 09, 2024 | 4:41 PM

Asian Boxing Championship: 35 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ದೀಪಾಲಿ ಥಾಪಾ ಮತ್ತು ಲ್ಯುಡ್ಮಿಲಾ ವಸಿಲ್ಚೆಂಕೊ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಆದರೆ ಥಾಪಾ ತಮ್ಮ ಕೌಶಲ್ಯವನ್ನು ಬುದ್ಧಿವಂತಿಕೆಯಿಂದ ಬಳಸಿ ಏಷ್ಯನ್ ಸ್ಕೂಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

Asian Boxing Championship: ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ದೀಪಾಲಿ ಥಾಪಾ
ದೀಪಾಲಿ ಥಾಪಾ
Follow us on

ಅಬುಧಾಬಿಯಲ್ಲಿ ನಡೆದ ಏಷ್ಯನ್ ಸ್ಕೂಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್ ದೀಪಾಲಿ ಥಾಪಾ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಕಜಕಿಸ್ತಾನದ ಆಟಗಾರ್ತಿ ಅನೆಲಿಯಾ ಓರ್ಡ್ಬೆಕ್ ಅವರನ್ನು ಸೋಲಿಸಿ ಫೈನಲ್​ಗೇರಿದ್ದ ದೀಪಾಲಿ, ಪದಕದ ಪಂದ್ಯದಲ್ಲಿ ಉಕ್ರೇನ್ ಆಟಗಾರ್ತಿ ಲ್ಯುಡ್ಮಿಲಾ ವಸಿಲ್ಚೆಂಕೊ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಇತಿಹಾಸ ಬರೆದ ದೀಪಾಲಿ

35 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ದೀಪಾಲಿ ಥಾಪಾ ಮತ್ತು ಲ್ಯುಡ್ಮಿಲಾ ವಸಿಲ್ಚೆಂಕೊ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಆದರೆ ಥಾಪಾ ತಮ್ಮ ಕೌಶಲ್ಯವನ್ನು ಬುದ್ಧಿವಂತಿಕೆಯಿಂದ ಬಳಸಿ ಏಷ್ಯನ್ ಸ್ಕೂಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇದರೊಂದಿಗೆ ದೀಪಾಲಿ, ಈ ಸಾಧನೆ ಮಾಡಿದ ಮೊದಲ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಇರಾನ್, ಇರಾಕ್, ಚೀನಾ ಸೇರಿದಂತೆ 26 ದೇಶಗಳು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದವು. ಇನ್ನು ಈ ಕ್ರೀಡಾಕೂಟದಲ್ಲಿ ಭಾರತದ ಆಟಗಾರರು ಒಟ್ಟು 15 ಪದಕಗಳನ್ನು ಗೆದ್ದಿದ್ದಾರೆ.

ಈ ಹಿಂದೆಯೂ ಚಿನ್ನ ಗೆದ್ದಿದ್ದ ದೀಪಾಲಿ

ಇನ್ನು ದೀಪಾಲಿ ಅವರ ಈ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದ ದೀಪಾಲಿ ಥಾಪಾ ಅವರ ಕೋಚ್ ಅಜಯ್ ಕುಮಾರ್, ‘ದೀಪಾಲಿ ಥಾಪಾ ಈಗಾಗಲೇ ಚಿನ್ನದ ಪದಕ ಗೆದ್ದಿದ್ದಾರೆ. ನೋಯ್ಡಾದಲ್ಲಿ ನಡೆದ ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ದೀಪಾಲಿ ಚಿನ್ನದ ಪದಕ ಗೆದ್ದಿದ್ದರು. ಇದಾದ ನಂತರ ಭಾರತೀಯ ತಂಡಕ್ಕೆ ಆಯ್ಕೆಯಾದ ದೀಪಾಲಿಗೆ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ನೀಡಲಾಯಿತು. ಇದಾದ ಬಳಿಕ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:40 pm, Mon, 9 September 24