ಏಷ್ಯನ್ ಗೇಮ್ಸ್ 2026: 8 ಚಿನ್ನದ ಪದಕಗಳೊಂದಿಗೆ ಅಗ್ರ ಹತ್ತರೊಳಗೆ ಭಾರತ!

2026ರ ಏಷ್ಯನ್ ಗೇಮ್ಸ್‌ನಿಂದ ಕ್ರೀಡಾಪ್ರೇಮಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ! ಜಪಾನ್‌ನ ನಗೋಯಾದಲ್ಲಿ ಅಬ್ಬರಿಸುತ್ತಿರುವ ಭಾರತದ ಕ್ರೀಡಾಪಟುಗಳು ದೇಶಕ್ಕೆ 8ನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಈ ಅದ್ಭುತ ಪ್ರದರ್ಶನದೊಂದಿಗೆ ಭಾರತವು ಏಷ್ಯನ್ ಗೇಮ್ಸ್ 2026ರ ಪದಕ ಪಟ್ಟಿಯಲ್ಲಿ ಟಾಪ್-10 ಗೆ ಲಗ್ಗೆಯಿಟ್ಟಿದೆ.

ಏಷ್ಯನ್ ಗೇಮ್ಸ್ 2026: 8 ಚಿನ್ನದ ಪದಕಗಳೊಂದಿಗೆ ಅಗ್ರ ಹತ್ತರೊಳಗೆ ಭಾರತ!
Indian Kabaddi Team
Image Credit source: Asian Games

Updated on: Sep 30, 2026 | 11:32 AM

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ಮುಂದುವರಿಸಿದ್ದಾರೆ. ಇಂದು (ಸೆಪ್ಟೆಂಬರ್ 30, ಬುಧವಾರ) ಭಾರತದ ಬಿಲ್ಲುಗಾರರು ಎರಡು ಚಿನ್ನದ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಈ ಮೂಲಕ 8 ಬಂಗಾರದ ಪದಕಗಳೊಂದಿಗೆ ಭಾರತ ಇದೀಗ ಪದಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ.

ಬಿಲ್ಲುಗಾರಿಕೆಯಲ್ಲಿ ‘ಅವಳಿ’ ಚಿನ್ನ:

ಭಾರತ ಅಗ್ರ 10ರ ಪಟ್ಟಿಗೆ ಲಗ್ಗೆ ಇಡಲು ಇಂದಿನ ಬಿಲ್ಲುಗಾರಿಕೆ ಸ್ಪರ್ಧೆಯ ಪ್ರದರ್ಶನವೇ ಪ್ರಮುಖ ಕಾರಣವಾಯಿತು. ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಭಾರತದ ಕ್ರೀಡಾಪಟುಗಳು ಅದ್ಭುತ ಕೌಶಲ್ಯ ಮೆರೆದು ಎರಡು ಚಿನ್ನದ ಪದಕಗಳನ್ನು ತಂದು ಕೊಟ್ಟಿದ್ದಾರೆ.

  • ಮಹಿಳಾ ಕಾಂಪೌಂಡ್ ಆರ್ಚರಿ ತಂಡ: ಜ್ಯೋತಿ ಸುರೇಖಾ ವೆನ್ನಂ, ಪ್ರಿಥಿಕಾ ಪ್ರದೀಪ್ ಮತ್ತು ಚಿಕಿತಾ ತನಿಪರ್ತಿ ಅವರ ತ್ರಿವಳಿ ಮೈದಾನದಲ್ಲಿ ಅಮೋಘ ಗುರಿ ಇಟ್ಟು ಚಿನ್ನದ ಪದಕ ಗೆದ್ದರು.
  • ಮಿಶ್ರ ಕಾಂಪೌಂಡ್ ಆರ್ಚರಿ ತಂಡ: ಚಿಕಿತಾ ತನಿಪರ್ತಿ ಮತ್ತು ಸಾಹಿಲ್ ಜಾಧವ್ ಜೋಡಿಯು ಸ್ಥಿರ ಪ್ರದರ್ಶನ ನೀಡಿ ಭಾರತಕ್ಕೆ ಮತ್ತೊಂದು ಬಂಗಾರದ ಪದಕ ತಂದುಕೊಟ್ಟಿತು.

ಭಾರತದ ‘ಸುವರ್ಣ’ ಸಾಧನೆ:

ಕೇವಲ ಬಿಲ್ಲುಗಾರಿಕೆ ಮಾತ್ರವಲ್ಲದೆ, ಕಬಡ್ಡಿ, ಶೂಟಿಂಗ್ ಮತ್ತು ಅಥ್ಲೆಟಿಕ್ಸ್‌ನಲ್ಲೂ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ.

  • ಶೂಟಿಂಗ್: ಮಹಿಳೆಯರ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾರತದ ನೀರು ಧಂಡಾ ಅವರು ಏಷ್ಯನ್ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಹಾಗೆಯೇ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡವೂ ಬಂಗಾರ ಜಯಿಸಿದೆ.
  •  ಕಬಡ್ಡಿ: ಸಾಂಪ್ರದಾಯಿಕ ಕ್ರೀಡೆ ಕಬಡ್ಡಿಯಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ತಮ್ಮ ಆಧಿಪತ್ಯವನ್ನು ಮುಂದುವರಿಸಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿವೆ.
  • ಕ್ರಿಕೆಟ್ & ಅಥ್ಲೆಟಿಕ್ಸ್: ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹಾಗೂ ಮಹಿಳೆಯರ 4×400 ಮೀಟರ್ ರಿಲೇ ತಂಡಗಳು ಚಿನ್ನದ ಪದಕಗಳಿಗೆ ಕೊರೊಳೊಡ್ಡಿದ್ದಾರೆ.

ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯರು (ಸೆ.30):

ಕ್ರ.ಸಂ. ವಿಜೇತರು ಕ್ರೀಡೆ  ಸ್ಪರ್ಧೆ ಪದಕ 
1 ಭಾರತೀಯ ಮಹಿಳಾ ಕ್ರಿಕೆಟ್ ತಂಡ ಕ್ರಿಕೆಟ್ ಮಹಿಳಾ ಟಿ20 ಟೂರ್ನಮೆಂಟ್ ಚಿನ್ನ 
2 ಕಮಲ್‌ಜೀತ್ ಮತ್ತು ಸುರುಚಿ ಸಿಂಗ್ ಶೂಟಿಂಗ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಚಿನ್ನ 
3 ಭಾರತೀಯ ಮಹಿಳಾ ಕಬಡ್ಡಿ ತಂಡ ಕಬಡ್ಡಿ ಮಹಿಳಾ ಟೂರ್ನಮೆಂಟ್ ಚಿನ್ನ
4 ಭಾರತೀಯ ಪುರುಷರ ಕಬಡ್ಡಿ ತಂಡ ಕಬಡ್ಡಿ ಪುರುಷರ ಟೂರ್ನಮೆಂಟ್ ಚಿನ್ನ
5 ನೀರು ಧಂಡಾ ಶೂಟಿಂಗ್ ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ಚಿನ್ನ 
6 ಕಿರಣ್ ಪಹಲ್, ಎಂ. ಆರ್. ಪೂವಮ್ಮ, ಪ್ರಾಚಿ ಚೌಧರಿ, ವಿಥ್ಯಾ ರಾಮರಾಜ್ ಅಥ್ಲೆಟಿಕ್ಸ್ ಮಹಿಳೆಯರ 4×400 ಮೀಟರ್ ರಿಲೇ ಚಿನ್ನ 
7 ಜ್ಯೋತಿ ಸುರೇಖಾ ವೆನ್ನಂ, ಪ್ರಿಥಿಕಾ ಪ್ರದೀಪ್, ಚಿಕಿತಾ ತನಿಪರ್ತಿ ಬಿಲ್ಲುಗಾರಿಕೆ ಮಹಿಳಾ ಕಾಂಪೌಂಡ್ ತಂಡ ಚಿನ್ನ 
8 ಚಿಕಿತಾ ತನಿಪರ್ತಿ ಮತ್ತು ಸಾಹಿಲ್ ಜಾಧವ್ ಬಿಲ್ಲುಗಾರಿಕೆ ಮಿಶ್ರ ಕಾಂಪೌಂಡ್ ತಂಡ ಚಿನ್ನ

ಪದಕ ಪಟ್ಟಿಯಲ್ಲಿ 9ನೇ ಸ್ಥಾನ:

ಶ್ರೇಯಾಂಕ ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು ಪದಕಗಳು
1 ಚೀನಾ 143 62 49 254
2 ಜಪಾನ್ 45 71 67 183
3 ಸೌತ್ ಕೊರಿಯಾ 24 27 45 96
4 ಉಜ್ಬೇಕಿಸ್ತಾನ್ 14 17 13 44
5 ಥೈಲ್ಯಾಂಡ್ 12 9 12 33
6 ಬಹ್ರೇನ್ 11 5 4 20
7 ಇರಾನ್ 10 16 11 37
8 ಕಝಾಕಿಸ್ತಾನ್ 9 14 25 48
9 ಭಾರತ 8 21 27 56
10 ನಾರ್ತ್ ಕೊರಿಯಾ 7 5 6 18

ಇದನ್ನೂ ಓದಿ: WPL 2027: ಯಾವ ತಂಡ ಎಷ್ಟು ಆಟಗಾರ್ತಿಯರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

ಇನ್ನು ಹಾಕಿ, ಬ್ಯಾಂಡ್ಮಿಟನ್, ಕ್ರಿಕೆಟ್, ಅಥ್ಲೆಟಿಕ್ಸ್ ಸ್ಪರ್ಧೆಗಳು ಬಾಕಿಯಿದ್ದು, ಈ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಭಾರತದ ಪದಕಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಂಪೂರ್ಣ ನಿರೀಕ್ಷೆಯಿದೆ.

 

Published On - 11:31 am, Wed, 30 September 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us