10 ವರ್ಷಗಳ ಕಾನೂನು ಸಮರದಲ್ಲಿ ಗೆದ್ದ BCCI ಗೆ ಸಿಕ್ಕ ದುಡ್ಡೆಷ್ಟು ಗೊತ್ತಾ?

ಮುಂಬೈ: ಬಿಸಿಸಿಐ ಮತ್ತು ಮಾರಿಷಸ್ ಮೂಲದ ಡಬ್ಲುಎಸ್‌ಜಿ ನಡವಿನ ದಶಕದ ಕಾನೂನು ಸಮರಕ್ಕೆ ತೆರೆ ಬಿದ್ದಿದ್ದು, ಬಿಸಿಸಿಐ 850 ಕೋಟಿ ರೂಪಾಯಿಗಳ ದಾವೆಯಲ್ಲಿ ಅಂತಿಮವಾಗಿ ಗೆಲುವಿನ ಕೇಕೆ ಹಾಕಿದೆ. ಕೊರೊನಾ ಕಾಟದಿಂದ ಈ ಬಾರಿಯ ಐಪಿಎಲ್​ ನಡೆಯದೇ ಹೋದ್ರೆ ಹೇಗಪ್ಪಾ? IPL 13 ನಡೆಸದಿದ್ದರೆ ನೂರಾರು ಕೋಟಿ ರೂಪಾಯಿ ಆದಾಯಕ್ಕೆ ಕಂಟಕವಾಗಲಿದೆ ಎಂದು ತಲೆಯ ಮೇಲೆ ಕೈಹೊತ್ತಿಕೊಂಡು ಕುಳಿತಿದ್ದ ಬಿಸಿಸಿಐ ದಾದಾಗೆ ಇದು ಬಯಸದೆ ಬಂದ ಭಾಗ್ಯವಾಗಿದೆ! ಹೌದು ವಿಶ್ವ ಕ್ರೀಡಾ ಜಗತ್ತಿನಲ್ಲಿಯೇ ಭಾರೀ ಹೆಸರು ಮಾಡಿರುವ […]

10 ವರ್ಷಗಳ ಕಾನೂನು ಸಮರದಲ್ಲಿ ಗೆದ್ದ BCCI ಗೆ ಸಿಕ್ಕ ದುಡ್ಡೆಷ್ಟು ಗೊತ್ತಾ?
Edited By:

Updated on: Jul 14, 2020 | 6:30 PM

ಮುಂಬೈ: ಬಿಸಿಸಿಐ ಮತ್ತು ಮಾರಿಷಸ್ ಮೂಲದ ಡಬ್ಲುಎಸ್‌ಜಿ ನಡವಿನ ದಶಕದ ಕಾನೂನು ಸಮರಕ್ಕೆ ತೆರೆ ಬಿದ್ದಿದ್ದು, ಬಿಸಿಸಿಐ 850 ಕೋಟಿ ರೂಪಾಯಿಗಳ ದಾವೆಯಲ್ಲಿ ಅಂತಿಮವಾಗಿ ಗೆಲುವಿನ ಕೇಕೆ ಹಾಕಿದೆ. ಕೊರೊನಾ ಕಾಟದಿಂದ ಈ ಬಾರಿಯ ಐಪಿಎಲ್​ ನಡೆಯದೇ ಹೋದ್ರೆ ಹೇಗಪ್ಪಾ? IPL 13 ನಡೆಸದಿದ್ದರೆ ನೂರಾರು ಕೋಟಿ ರೂಪಾಯಿ ಆದಾಯಕ್ಕೆ ಕಂಟಕವಾಗಲಿದೆ ಎಂದು ತಲೆಯ ಮೇಲೆ ಕೈಹೊತ್ತಿಕೊಂಡು ಕುಳಿತಿದ್ದ ಬಿಸಿಸಿಐ ದಾದಾಗೆ ಇದು ಬಯಸದೆ ಬಂದ ಭಾಗ್ಯವಾಗಿದೆ!

ಹೌದು ವಿಶ್ವ ಕ್ರೀಡಾ ಜಗತ್ತಿನಲ್ಲಿಯೇ ಭಾರೀ ಹೆಸರು ಮಾಡಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ  ಆರಂಭದ ದಿನಗಳಲ್ಲಿ ಕಮೀಶನರ್ ಆಗಿದ್ದ ವಿವಾದಿತ ಲಲೀತ್ ಮೋದಿ, ಮಾರಿಷಸ್ ಮೂಲದ ಡಬ್ಲುಎಸ್‌ಜಿ ಅಂದರೆ ವರ್ಲ್ಡ್ ಸ್ಪೋರ್ಟ್ಸ್ ಗ್ರೂಪ್ ಕಂಪನಿಯೊಂದಿಗೆ ಐಪಿಎಲ್‌ನ ವಿದೇಶಿ ಪ್ರಸಾರದ ಹಕ್ಕಿನ ಒಪ್ಪಂದ ಮಾಡಿಕೊಂಡಿದ್ದರು. ಆದ್ರೆ ಯಾವುದೇ ಬ್ರಾಡ್‌ಕಾಸ್ಟರ್‌ ಸಿಗದೆ ಡಬ್ಲುಎಸ್‌ಜಿ, ಎಮ್ಎಸ್ಎಮ್ ಅಂದ್ರೆ ಸೋನಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಪ್ರಸಾರದ ಹಕ್ಕು ನೀಡಿತ್ತು. ಇದಕ್ಕಾಗಿ ಅದು ಸೋನಿಯಿಂದ 425 ಕೋಟಿ ರೂ.ಗಳ ಫೆಸಿಲಿಟೇಶನ್ ಫೀಯನ್ನು ಪಡೆದಿತ್ತು.

ಒಪ್ಪಂದ ರದ್ದು ಪಡಿಸಿದ್ದ ಬಿಸಿಸಿಐ
ಈ ವಿಷಯ ತಿಳಿಯುತ್ತಿದ್ದಂತೆ ದಂಗಾದ ಬಿಸಿಸಿಐ, ಡಬ್ಲುಎಸ್‌ಜಿಯೊಂದಿಗಿನ ಒಪ್ಪಂದವನ್ನೇ 2010ರಲ್ಲಿ ರದ್ದು ಮಾಡಿತು. ಹಾಗೇನೆ ಸೋನಿ ಕಂಪನಿಗೆ ಈ ಫೆಸಿಲಿಟೇಶನ್ ಫೀಯನ್ನ ನೇರವಾಗಿ ಬಿಸಿಸಿಐಗೆ ಪಾವತಿಸುವಂತೆ ತಿಳಿಸಿತ್ತು. ಹೀಗಾಗಿ ಸೋನಿ ಕಂಪನಿ ಫೆಸಿಲಿಟೇಶನ್ ಹಣವನ್ನುನೇರವಾಗಿ ಬಿಸಿಸಿಐಗೆ ಪಾವತಿಸಲು ಆರಂಭಿಸಿತು. ಇದರಿಂದ ಆಕ್ರೋಶಗೊಂಡ ಡಬ್ಲುಎಸ್‌ಜಿ ಬಿಸಿಸಿಐ ಅನ್ನು ಕೋರ್ಟ್ ಕಟಕಟಗೆ ಎಳೆದಿತ್ತು.

ಹತ್ತು ವರ್ಷಗಳ ಕಾಲ ನಡೆದ ಕಾನೂನು ಸಮರ
ಈ ಬಗ್ಗೆ ಸಮಗ್ರವಾಗಿ ಸುಮಾರು ದಶಕಗಳ ಕಾಲ ವಿಚಾರಣೆ ನಡೆಸಿದ ಚೆನ್ನೈನಲ್ಲಿರುವ ಸುಪ್ರೀಮ್ ಕೋರ್ಟ್‌ನ ಮೂವರು ನ್ಯಾಯಧೀಶರನ್ನೊಳಗೊಂಡ ಆರ್ಬಿಟ್ರಲ್ ಟ್ರೀಬ್ಯೂನಲ್ ಬಿಸಿಸಿಐ ಪರ ತೀರ್ಪು ನೀಡಿದೆ. ಡಬ್ಲುಎಸ್‌ಜಿಯೊಂದಿಗಿನ ಒಪ್ಪಂದ ಸರಿಯಾಗಿಲ್ಲ ಮತ್ತು ಅದರೊಂದಿಗಿನ ಒಪ್ಪಂದ ರದ್ದಿನಿಂದ ಅದಕ್ಕೆ ಯಾವುದೇ ಹಾನಿಯಾಗಿಲ್ಲ ಹಾಗೂ ಬಿಸಿಸಿಐ ಅದಕ್ಕೆ ಯಾವುದೇ ಪರಿಹಾರ ನೀಡಬೇಕಿಲ್ಲ ಎಂದು ನೀವೃತ್ತ ನ್ಯಾಯಮೂರ್ತಿ ಸುಜಾತಾ ಮನೋಹರ್, ನ್ಯಾ. ಮುಕುಂಠಕಮ್ ಶರ್ಮಾ ಮತ್ತು ನ್ಯಾ. ಎಸ್ಎಸ್ ನಿಜ್ಜರ್ ಅವರ ಪೀಠ ತೀರ್ಪು ನೀಡಿದೆ. ಇದರೊಂದಿಗೆ ತನಗೆ ಬರಬೇಕಿದ್ದ 850 ಕೋಟಿ ರೂ.ಗಳನ್ನ ಬಿಸಿಸಿಐ ಈಗ ಯಾವುದೇ ಅಡೆತಡೆಗಳಿಲ್ಲದೇ ಖಜಾನೆಗೆ ಹಾಕಿಕೊಳ್ಳಬಹುದಾಗಿದೆ.

 

Published On - 6:22 pm, Tue, 14 July 20