ಜರ್ಮನಿಯಲ್ಲಿ ನಡೆಯುತ್ತಿರುವ ಬುಂಡೆಸ್‌ಲಿಗಾ ಮಹಿಳಾ ಫುಟ್ಬಾಲ್ ಟೂರ್ನಿಯ ಮ್ಯಾಚ್‌ಡೇ 7 ರ 38ನೇ ಪಂದ್ಯದಲ್ಲಿ ಇಂದು ಅಂದರೆ ಅಕ್ಟೋಬರ್ 19 ರಂದು ಬಲಿಷ್ಠ ಐಂಟ್ರಾಕ್ಟ್ ಫ್ರಾಂಕ್‌ಫರ್ಟ್ ಹಾಗೂ ವೆರ್ಡರ್ ಬ್ರೆಮೆನ್ ತಂಡಗಳು ಮುಖಾಮುಖಿಯಾಗಿದ್ದವು. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದಲ್ಲಿ ವೆರ್ಡರ್ ಬ್ರೆಮೆನ್ ತಂಡ 1-0 ಗೋಲುಗಳ ಅಂತರದಿಂದ ಐಂಟ್ರಾಕ್ಟ್ ಫ್ರಾಂಕ್‌ಫರ್ಟ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಫ್ರಾಂಕ್‌ಫರ್ಟ್ ತಂಡ ಟೂರ್ನಿಯಲ್ಲಿ ಮೊದಲು ಸೋಲು ದಾಖಲಿಸಿದರೆ, ವೆರ್ಡರ್ ಬ್ರೆಮೆನ್ ತಂಡ ಟೂರ್ನಿಯಲ್ಲಿ ತನ್ನ ಎರಡನೇ ಗೆಲುವನ್ನು ದಾಖಲಿಸಿತು.
ಉಭಯ ತಂಡಗಳ ನಡುವೆ ಸಮಬಲದ ಹೋರಾಟ ಕಂಡುಬಂತು. ಹೀಗಾಗಿ ಪಂದ್ಯದ ಮೊದಲಾರ್ಧದಲ್ಲಿ ಎರಡು ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ದ್ವಿತೀಯಾರ್ಧದಲ್ಲೂ ಗೋಲುಗಳಿಸಲು ಎರಡು ತಂಡಗಳು ಸಾಕಷ್ಟು ಪ್ರಯತ್ನ ಪಟ್ಟರು ಸಫಲವಾಗಲಿಲ್ಲ. ಆದರೆ ಪಂದ್ಯದ 75 ನೇ ನಿಮಿಷದಲ್ಲಿ ವೆರ್ಡರ್ ಬ್ರೆಮೆನ್ ತಂಡದ ಮಿಡಲ್ ಫೀಲ್ಡರ್ ಸೋಫಿ ವೀಡೌರ್ ಎದುರಾಳಿ ತಂಡದ ರಕ್ಷಣೆಯನ್ನು ಭೇದಿಸಿ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಉಳಿದಂತೆ ಒಟ್ಟಾರೆ 95 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಮತ್ತ್ಯಾವುದೇ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ವೆರ್ಡರ್ ಬ್ರೆಮೆನ್ ತಂಡ, ಅಗ್ರಸ್ಥಾನದಲ್ಲಿರುವ ಐಂಟ್ರಾಕ್ಟ್ ಫ್ರಾಂಕ್‌ಫರ್ಟ್ ತಂಡವನ್ನು 1-0 ಗೋಲುಗಳಿಂದ ಮಣಿಸುವಲ್ಲಿ ಯಶಸ್ವಿಯಾಯಿತು.
ಇನ್ನು ಟೂರ್ನಿಯಲ್ಲಿ ಉಭಯ ತಂಡಗಳ ಇದುವರೆಗಿನ ಪ್ರದರ್ಶನ ಬಗ್ಗೆ ಹೇಳುವುದಾದರೆ.. ಐಂಟ್ರಾಕ್ಟ್ ಫ್ರಾಂಕ್‌ಫರ್ಟ್ ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದ್ದರೆ, 1 ಪಂದ್ಯದಲ್ಲಿ ಸೋಲು ಕಂಡಿದೆ. ಉಳಿದಂತೆ ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ ತಂಡದ ಬಳಿ ಒಟ್ಟಾರೆ 16 ಪಾಯಿಂಟ್ಗಳಿವೆ. ಇತ್ತ ವೆರ್ಡರ್ ಬ್ರೆಮೆನ್ ತಂಡ ಆಡಿರುವ 7 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಉಳಿದಂತೆ 2 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ತಂಡ ಪ್ರಸ್ತುತ 8 ಅಂಕ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ