India vs England: 5ನೇ T20 ಪಂದ್ಯಕ್ಕೆ ಉಭಯ ತಂಡಗಳಲ್ಲಾಗಬಹುದಾದ ಬದಲಾವಣೆ, ಹವಾಮಾನ ವರದಿ ಇಲ್ಲಿದೆ!

|

Updated on: Mar 19, 2021 | 5:29 PM

India vs England: ಕೆ. ಎಲ್ ರಾಹುಲ್ ಬದಲಿಗೆ 4 ನೇ ಟಿ 20 ಪಂದ್ಯವನ್ನು ತಪ್ಪಿಸಿಕೊಂಡಿದ್ದ ಇಶಾನ್ ಕಿಶನ್ ಅವರನ್ನು ಆಡುವ ಹನ್ನೊಂದರ ಬಳಗದೊಳಗೆ ಕರೆತರಬಹುದು.

India vs England: 5ನೇ T20 ಪಂದ್ಯಕ್ಕೆ ಉಭಯ ತಂಡಗಳಲ್ಲಾಗಬಹುದಾದ ಬದಲಾವಣೆ, ಹವಾಮಾನ ವರದಿ ಇಲ್ಲಿದೆ!
ಟೀಂ ಇಂಡಿಯಾ
Follow us on

ಅಹಮದಾಬಾದ್​: ಮಾರ್ಚ್ 20 ರಂದು ನಡೆಯಲಿರುವ ಐದನೇ ಮತ್ತು ಅಂತಿಮ ಟಿ 20 ಅಂತಾರಾಷ್ಟ್ರೀಯ ಪಂದ್ಯಕ್ಕೆ ವಿರಾಟ್ ಕೊಹ್ಲಿ, ಹಿಂದಿನ ಪಂದ್ಯದಲ್ಲಿ ಆಡಿದ 11 ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಭಾರತ 4ನೇ ಪಂದ್ಯದಲ್ಲಿ ಭರ್ಜರಿಯಾಗಿ ಪುನರಾಗಮನ ಮಾಡಿತು ಮತ್ತು ಕೊನೆಯ ಓವರ್‌ನಲ್ಲಿ 4 ನೇ ಪಂದ್ಯವನ್ನು ಗೆದ್ದುಕೊಂಡಿತು. 2ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಸೂರ್ಯಕುಮಾರ್ ಯಾದವ್, ತಾವಾಡಿದ ಮೊದಲ ಬಾಲ್ ಅನ್ನೇ ಸಿಕ್ಸರ್ಗಟ್ಟಿದ್ರು. ಅಷ್ಟೇ ಅಲ್ಲ.. ಇಂಗ್ಲೆಂಡ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್, ಮೋದಿ ಮೈದಾನದಲ್ಲಿ ರನ್ ಮಳೆ ಹರಿಸಿದ್ರು. 31 ಬಾಲ್ನಲ್ಲಿ 6 ಬೌಂಡರಿ 3 ಸಿಕ್ಸರ್ ಸಿಡಿಸಿದ ಸೂರ್ಯಕುಮಾರ್ 57 ರನ್ಗಳಿಸಿದ್ರು. ಯಾದವ್​ ಅವರ ಅದ್ಭುತ ಆಟದಿಂದಾಗಿ ಟೀಂ ಇಂಡಿಯಾ ಕೊನೆಯ ಓವರ್​ನಲ್ಲಿ ಭರ್ಜರಿ ಜಯ ದಾಖಲಿಸಿತು.

ಇಶಾನ್ ಕಿಶನ್ ಆಡುವ ಹನ್ನೊಂದರ ಬಳಗದೊಳಗೆ ಬರಬಹುದು
ವಿರಾಟ್ ಕೊಹ್ಲಿ, ಕೆ. ಎಲ್ ರಾಹುಲ್ ಬದಲಿಗೆ 4 ನೇ ಟಿ 20 ಪಂದ್ಯವನ್ನು ತಪ್ಪಿಸಿಕೊಂಡಿದ್ದ ಇಶಾನ್ ಕಿಶನ್ ಅವರನ್ನು ಆಡುವ ಹನ್ನೊಂದರ ಬಳಗದೊಳಗೆ ಕರೆತರಬಹುದು. ಈ ಸರಣಿಯಲ್ಲಿ ಕರ್ನಾಟಕ ಬ್ಯಾಟ್ಸ್‌ಮನ್ ಯಾವುದೇ ಪರಿಣಾಮಕಾರಿ ಆಟ ಆಡುವಲ್ಲಿ ವಿಫಲರಾಗಿದ್ದಾರೆ ಮತ್ತು ನಿರ್ಣಾಯಕ ಪಂದ್ಯವೊಂದರಲ್ಲಿ ಪ್ರಸ್ತುತ ಫಾರ್ಮ್‌ನಲ್ಲಿರುವ ಕಿಶನ್​ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿವೆ.

ಭಾರತದ ತಂಡ ಹೀಗಿರಬಹುದು: ರೋಹಿತ್ ಶರ್ಮಾ, ಇಶಾನ್ ಕಿಶನ್ / ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಭುವನೇಶ್ವರ್ ಕುಮಾರ್, ರಾಹುಲ್ ಚಹರ್.

ಶನಿವಾರ ಪಂದ್ಯ ಪ್ರಾರಂಭವಾಗುವ ಮೊದಲು ತಂಡದ ಯಾವುದೇ ಆಟಗಾರ ಗಾಯಗೊಳ್ಳದ ಹೊರತು ತಂಡದಲ್ಲಿ ಇಂಗ್ಲೆಂಡ್ ಯಾವುದೇ ಬದಲಾವಣೆ ಮಾಡುವ ನಿರೀಕ್ಷೆಗಳಿಲ್ಲ.

ಇಂಗ್ಲೆಂಡ್ ತಂಡ ಹೀಗಿರಬಹುದು: ಜೇಸನ್ ರಾಯ್, ಜೋಸ್ ಬಟ್ಲರ್, ಡೇವಿಡ್ ಮಲನ್, ಜಾನಿ ಬೈರ್‌ಸ್ಟೋವ್, ಇಯೊನ್ ಮೋರ್ಗಾನ್, ಬೆನ್ ಸ್ಟೋಕ್ಸ್, ಸ್ಯಾಮ್ ಕುರ್ರನ್, ಜೋಫ್ರಾ ಆರ್ಚರ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಮಾರ್ಕ್ ವುಡ್.

5 ನೇ ಟಿ20: ಮೊಟೆರಾ ಪಿಚ್ ವರದಿ
ಮೊಟೆರಾ ಕ್ರೀಡಾಂಗಣದಲ್ಲಿ ನಡೆದ 4 ನೇ ಟಿ 20 ಪಂದ್ಯದ ವೇಳೆ ಮೈದಾನದಲ್ಲಿ ಸಾಕಷ್ಟು ಇಬ್ಬನಿ ಇತ್ತು. ಆದರೂ, ಎಸೆತಗಳನ್ನು ಬೆರೆಸುವ ಮೂಲಕ ಭಾರತದ ಬೌಲರ್‌ಗಳು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಇಬ್ಬನಿಯ ಮುಖ್ಯ ಕಾರಣವೆಂದರೆ ಸಂಜೆಯ ಸಮಯದಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು.

ಮೊಟೆರಾದಲ್ಲಿ ಮಾರ್ಚ್ 20 ರಂದು ಮಬ್ಬು ಬಿಸಿಲು ಮತ್ತು ಕೊಂಚ ಮಟ್ಟಿಗೆ ಮೋಡ ಕವಿದ ವಾತಾವರಣ ಇರಲಿದೆ. ಹೀಗಾಗಿ ಹವಾಮಾನ ಮುನ್ಸೂಚನೆಯಂತೆ ವಾತಾವರಣ ಸೃಷ್ಟಿಯಾದರೆ ಮತ್ತೆ ಪಿಚ್​ನಲ್ಲಿ ಇಬ್ಬನಿಯನ್ನು ಕಾಣಬಹುದಾಗಿದೆ.

2 ತಂಡಗಳ ಸೋಲು ಗೆಲುವಿನ ಲೆಕ್ಕಾಚಾರ..
ಆಡಿದ ಒಟ್ಟು ಪಂದ್ಯಗಳು: 18
ಭಾರತ ಗೆದ್ದಿರುವ ಪಂದ್ಯಗಳು: 9
ಇಂಗ್ಲೆಂಡ್ ಗೆದ್ದಿರುವ ಪಂದ್ಯಗಳು: 9

ಟಿ 20 ಯಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಸಾಧನೆ
ಗರಿಷ್ಠ ಸ್ಕೋರ್: 218-4
ಕಡಿಮೆ ಸ್ಕೋರ್: 120-9

ಟಿ 20 ಯಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ತಂಡದ ಸಾಧನೆ
ಗರಿಷ್ಠ ಸ್ಕೋರ್: 200-6
ಕಡಿಮೆ ಸ್ಕೋರ್: 80

ಇದನ್ನೂ ಓದಿ: India vs England: ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ.. ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ ಪ್ರಸಿದ್ಧ್ ಕೃಷ್ಣ!