ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022) ಪ್ರಾರಂಭವಾಗುವ ಮುನ್ನವೇ ಭಾರತೀಯ ಮಹಿಳಾ ಕ್ರಿಕೆಟ್ ತಂಡ ( Indian women’s cricket team) ಮತ್ತೊಂದು ಹಿನ್ನಡೆ ಅನುಭವಿಸಿದೆ. ಕೊರೊನಾ ವೈರಸ್ ಸೋಂಕಿನಿಂದ ಟೀಮ್ ಇಂಡಿಯಾದ ಮತ್ತೊಬ್ಬ ಸದಸ್ಯೆ ಬರ್ಮಿಂಗ್ಹ್ಯಾಮ್ಗೆ ತೆರಳಲು ಸಾಧ್ಯವಾಗಲಿಲ್ಲ. ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಟೀಮ್ ಇಂಡಿಯಾದಲ್ಲಿ ಇದು ಎರಡನೇ ಕೊರೊನಾ ಪ್ರಕರಣ ಎಂದು ಹೇಳಲಾಗಿದೆ. ಇದಕ್ಕೂ ಮೊದಲು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಇತ್ತೀಚೆಗೆ ಆಟಗಾರ್ತಿಗೆ ಸೋಂಕು ತಗುಲಿರುವ ಬಗ್ಗೆ ಮಾಹಿತಿ ನೀಡಿದ್ದರು. ಜುಲೈ 24 ರ ಭಾನುವಾರದಂದು ಭಾರತದ ತಂಡ ಬೆಂಗಳೂರಿನಿಂದ ಬರ್ಮಿಂಗ್ಹ್ಯಾಮ್ಗೆ ತೆರಳಿದೆ.
ಆಸ್ಟ್ರೇಲಿಯಾ ವಿರುದ್ಧ ಅವಕಾಶ ಸಿಗುವುದಿಲ್ಲ
ಸೋಂಕಿತರಾಗಿರುವ ಇಬ್ಬರು ಆಟಗಾರ್ತಿರ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ CWG 2022 ರಲ್ಲಿ ಭಾರತದ ಮೊದಲ ಪಂದ್ಯವನ್ನು ಆಡಲು ಇಬ್ಬರೂ ಕ್ರಿಕೆಟಿಗರಿಗೆ ಸಾಧ್ಯವಾಗುವುದಿಲ್ಲ ಎಂಬುದು ಖಚಿತವಾಗಿದೆ. ಮಹಿಳಾ ಕ್ರಿಕೆಟ್ ಅನ್ನು CWG ನಲ್ಲಿ ಮೊದಲ ಬಾರಿಗೆ ಸೇರಿಸಲಾಗಿದೆ, ಜೊತೆಗೆ 24 ವರ್ಷಗಳ ನಂತರ ಕಾಮನ್ವೆಲ್ತ್ಗೆ ಕ್ರಿಕೆಟ್ ಮರಳಿದೆ. ಟಿ20 ಮಾದರಿಯಲ್ಲಿ ಕ್ರಿಕೆಟ್ ಆಡಲಿದ್ದು, ಬಿ ಗುಂಪಿನಲ್ಲಿ ಭಾರತ ಜುಲೈ 29 ರಂದು ಮೊದಲ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಬೇಕಾಗಿದೆ.
ಬಿಸಿಸಿಐ ಮತ್ತು ಐಒಎ ಹೇಳಿದ್ದೇನು?
ಈ ನಿಟ್ಟಿನಲ್ಲಿ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ನ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ PTI ಗೆ ತಿಳಿಸಿರುವ ಪ್ರಕಾರ, ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ್ತಿಗೆ ಕೋವಿಡ್ -19 ಪಾಸಿಟಿವ್ ಆಗಿದ್ದು, ಇಬ್ಬರೂ ಆಟಗಾರ್ತಿಯರು ಭಾರತದಲ್ಲಿಯೇ ಉಳಿದಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಭಾರತೀಯ ಮಂಡಳಿಯಿಂದ ಅಧಿಕೃತವಾಗಿ ಏನನ್ನೂ ಹೇಳಲಾಗಿಲ್ಲ, ಆದರೆ ನಿಯಮಗಳ ಪ್ರಕಾರ, ಅವರ ಕೋವಿಡ್ ವರದಿ ನೆಗೆಟಿವ್ ಬಂದರೆ ಮಾತ್ರ ಇಬ್ಬರೂ ಆಟಗಾರ್ತಿಯರು ತಂಡವನ್ನು ಸೇರಿಕೊಳ್ಳಬಹುದು ಎಂದು ಬಿಸಿಸಿಐ ಮೂಲ ತಿಳಿಸಿದೆ.
A warm send off for #TeamIndia as they left for Birmingham this morning from Bengaluru. ??? #Birmingham2022 pic.twitter.com/Z6tcR3jcDf
— BCCI Women (@BCCIWomen) July 24, 2022
ಎರಡನೇ ಪಂದ್ಯಕ್ಕೆ ವಾಪಸ್?
ಇಬ್ಬರೂ ಆಟಗಾರ್ತಿಯರು ಫಿಟ್ ಆಗಿದ್ದರೆ ಜುಲೈ 31 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಗ್ರೂಪ್ ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ ಭಾರತವು ಬಾರ್ಬಡೋಸ್ ವಿರುದ್ಧವೂ ಪಂದ್ಯವನ್ನು ಆಡಬೇಕಾಗಿದೆ. ಇವುಗಳಲ್ಲದೆ, ಆತಿಥೇಯ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಕೂಡ ಕ್ರೀಡಾಕೂಟದ ಭಾಗವಾಗಿದೆ. ಫೈನಲ್ ಸೇರಿದಂತೆ ಎಲ್ಲಾ ಪಂದ್ಯಗಳು ಬರ್ಮಿಂಗ್‌ಹ್ಯಾಮ್‌ನ ಪ್ರಸಿದ್ಧ ಎಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿವೆ.
ಬೆಂಗಳೂರಿನಲ್ಲಿ ತಯಾರಿ
ಈ ತಿಂಗಳ ಆರಂಭದಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಏಕದಿನ ಮತ್ತು ಟಿ20 ಸರಣಿಗೆ ತನ್ನ ಸಿದ್ಧತೆಯನ್ನು ಚುರುಕುಗೊಳಿಸಿತ್ತು. ಅಂದಿನಿಂದ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಂಡ ಅಭ್ಯಾಸದಲ್ಲಿ ತೊಡಗಿತ್ತು. ತಂಡದ ನಿರ್ಗಮನದ ಮೊದಲು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡುವ ಬಗ್ಗೆ ಭಾರತದ ನಾಯಕಿ ಹರ್ಮನ್‌ಪ್ರೀತ್ ಮಾತನಾಡಿ, “ನಮಗೆ ಆಗಾಗ್ಗೆ ಈ ಕ್ರೀಡಾಕೂಟದಲ್ಲಿ ಆಡಲು ಅವಕಾಶ ಸಿಗುವುದಿಲ್ಲ, ಆದ್ದರಿಂದ ಈ ಅವಕಾಶ ನಮಗೆ ಮುಖ್ಯವಾಗಿದೆ ಎಂದಿದ್ದರು.
Published On - 7:44 pm, Tue, 26 July 22