T20 World Cup: 12 ತಂಡಗಳ ನಡುವೆ ಟಿ20 ವಿಶ್ವಕಪ್ ಫೈಟ್; ಲಾರ್ಡ್ಸ್‌ನಲ್ಲಿ ಫೈನಲ್ ಪಂದ್ಯ

T20 World Cup 2026: 2026ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ಗೆ ಐಸಿಸಿ ಮಹತ್ವದ ಪ್ರಕಟಣೆ ಹೊರಡಿಸಿದೆ. ಮೊದಲ ಬಾರಿಗೆ 12 ತಂಡಗಳು ಭಾಗವಹಿಸಲಿದ್ದು, ಜುಲೈ 5ರಂದು ಲಾರ್ಡ್ಸ್‌ನಲ್ಲಿ ಫೈನಲ್ ನಡೆಯಲಿದೆ. 24 ದಿನಗಳ ಈ ಟೂರ್ನಿಯಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ. 8 ತಂಡಗಳು ನೇರ ಅರ್ಹತೆ ಪಡೆದಿದ್ದು, ಉಳಿದ 4 ತಂಡಗಳು ಅರ್ಹತಾ ಪಂದ್ಯಗಳ ಮೂಲಕ ಆಯ್ಕೆಯಾಗಲಿವೆ.

T20 World Cup: 12 ತಂಡಗಳ ನಡುವೆ ಟಿ20 ವಿಶ್ವಕಪ್ ಫೈಟ್; ಲಾರ್ಡ್ಸ್‌ನಲ್ಲಿ ಫೈನಲ್ ಪಂದ್ಯ
T20 World Cup 2026

Updated on: May 01, 2025 | 7:14 PM

2026 ರಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್​ಗೆ (Women’s T20 World Cup 2026) ಸಂಬಂಧಿಸಿದಂತೆ ಐಸಿಸಿ ಮಹತ್ವದ ಪ್ರಕಟಣೆ ಹೊರಡಿಸಿದೆ. ಮೇ 1 ರಂದು ಐಸಿಸಿ (ICC) ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಮೊದಲ ಬಾರಿಗೆ 12 ತಂಡಗಳು ಪಂದ್ಯಾವಳಿಯಲ್ಲಿ ಆಡಲಿವೆ ಎಂದು ತಿಳಿಸಿದೆ. ಹಾಗೆಯೇ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದ ಸ್ಥಳವನ್ನು ಸಹ ನಿರ್ಧರಿಸಲಾಗಿದ್ದು, ಟೂರ್ನಮೆಂಟ್‌ನ ಫೈನಲ್ ಪಂದ್ಯವು ಜುಲೈ 5 ರಂದು ಲಾರ್ಡ್ಸ್‌ನಲ್ಲಿ (Lord’s Cricket Ground) ನಡೆಯಲಿದೆ. ಇದಕ್ಕೂ ಮೊದಲು, 2017 ರಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯವೂ ಸಹ ಲಾರ್ಡ್ಸ್‌ನಲ್ಲಿ ನಡೆದಿತ್ತು.

24 ದಿನ, 33 ಪಂದ್ಯಗಳು, 12 ತಂಡ

2026 ರ ಮಹಿಳಾ ಟಿ20 ವಿಶ್ವಕಪ್ ಅನ್ನು ಇಂಗ್ಲೆಂಡ್ ಆಯೋಜಿಸಲಿದೆ. ಪಂದ್ಯಾವಳಿ ಜೂನ್ 12 ರಂದು ಪ್ರಾರಂಭವಾಗಿ ಜುಲೈ 5 ರವರೆಗೆ ನಡೆಯಲಿದೆ. ಮೊದಲ ಬಾರಿಗೆ 12 ತಂಡಗಳು ಇದರಲ್ಲಿ ಭಾಗವಹಿಸಲಿದ್ದು, ಅದರಲ್ಲಿ 8 ತಂಡಗಳು ನೇರವಾಗಿ ಅರ್ಹತೆ ಪಡೆಯುತ್ತವೆ, ಆದರೆ 4 ತಂಡಗಳು ಅರ್ಹತೆಯ ಮೂಲಕ ಟಿಕೆಟ್ ಪಡೆಯುತ್ತವೆ. 2026 ರ 24 ದಿನಗಳ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ.

ಪಂದ್ಯಾವಳಿಯ ಸ್ವರೂಪ ಹೇಗಿರಲಿದೆ?

2026 ರ ಮಹಿಳಾ ಟಿ20 ವಿಶ್ವಕಪ್‌ನ ಸ್ವರೂಪದ ಬಗ್ಗೆ ಹೇಳುವುದಾದರೆ, ತಲಾ 6 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಹಂತದ ಪಂದ್ಯಗಳ ನಂತರ, ನಾಕೌಟ್ ಹಂತವಿದ್ದು, ಅದರ ಮೂಲಕ ಅಂತಿಮ ಸ್ಪರ್ಧಿಗಳನ್ನು ನಿರ್ಧರಿಸಲಾಗುತ್ತದೆ. 2026 ರ ಟಿ20 ವಿಶ್ವಕಪ್‌ನಲ್ಲಿ ಮಹಿಳಾ ಪಂದ್ಯಗಳು ಇಂಗ್ಲೆಂಡ್‌ನ 7 ಮೈದಾನಗಳಲ್ಲಿ ನಡೆಯಲಿವೆ, ಇದರಲ್ಲಿ ಲಾರ್ಡ್ಸ್, ಓಲ್ಡ್ ಟ್ರಾಫರ್ಡ್, ಹೆಡಿಂಗ್ಲೆ, ಎಡ್ಜ್‌ಬಾಸ್ಟನ್, ಹ್ಯಾಂಪ್‌ಶೈರ್ ಬೌಲ್, ದಿ ಓವಲ್ ಮತ್ತು ಬ್ರಿಸ್ಟಲ್ ಕೌಂಟಿ ಮೈದಾನ ಸೇರಿವೆ.

ಈ ತಂಡಗಳು ಅರ್ಹತೆ ಪಡೆದಿವೆ

ಟೂರ್ನಿಯಲ್ಲಿ ಆಡಲಿರುವ 12 ತಂಡಗಳಲ್ಲಿ, ನೇರ ಅರ್ಹತೆ ಪಡೆದ 8 ತಂಡಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಅರ್ಹತೆ ಪಡೆದ 8 ತಂಡಗಳಲ್ಲಿ ಆತಿಥೇಯ ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಶ್ರೀಲಂಕಾ ಸೇರಿವೆ. ಈ ವರ್ಷ ನಡೆಯಲಿರುವ ಅರ್ಹತಾ ಪಂದ್ಯಗಳ ನಂತರ ಉಳಿದ 4 ತಂಡಗಳ ಹೆಸರನ್ನು ಅಂತಿಮಗೊಳಿಸಲಾಗುತ್ತದೆ.

ICC Awards: ಶುಭ್​ಮನ್ ಗಿಲ್​ಗೆ ಒಲಿದ ಐಸಿಸಿಯ ವಿಶೇಷ ಪ್ರಶಸ್ತಿ

ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡವು ಹಾಲಿ ಚಾಂಪಿಯನ್ ಆಗಿ 20256 ರ ಟಿ20 ವಿಶ್ವಕಪ್ ಪ್ರವೇಶಿಸಲಿದೆ. 2024 ರಲ್ಲಿ ಯುಎಇಯಲ್ಲಿ ನಡೆದ ಕೊನೆಯ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ಪ್ರಶಸ್ತಿ ಗೆದ್ದಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ