ಹಾರ್ದಿಕ್ ಪಾಂಡ್ಯ ಖರೀದಿಗೆ 6 ಫ್ರಾಂಚೈಸಿಗಳ ಪೈಪೋಟಿ!

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ದೊಡ್ಡ ಸ್ವಾಪ್ ಡೀಲ್​ಗೆ ವೇದಿಕೆ ಸಿದ್ಧವಾಗುತ್ತಿದೆಯೇ? ಐಪಿಎಲ್ ವಲಯದಿಂದ ಬರುತ್ತಿರುವ ಹೊಚ್ಚ ಹೊಸ ಸುದ್ದಿಯೊಂದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಿಕೊಳ್ಳಲು ಬರೋಬ್ಬರಿ ಆರು ಫ್ರಾಂಚೈಸಿಗಳು ತೆರೆಮರೆಯ ಪ್ರಯತ್ನಕ್ಕೆ ಕೈಹಾಕಿವೆ.

ಹಾರ್ದಿಕ್ ಪಾಂಡ್ಯ ಖರೀದಿಗೆ 6 ಫ್ರಾಂಚೈಸಿಗಳ ಪೈಪೋಟಿ!
Hardik Pandya
Image Credit source: GettyImages

Updated on: Oct 28, 2026 | 2:12 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಮಿನಿ ಹರಾಜಿನ ರಿಟೆನ್ಷನ್ ದಿನಾಂಕ ಹತ್ತಿರ ಬರುತ್ತಿದ್ದಂತೆ, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೆಳೆದುಕೊಳ್ಳಲು ಫ್ರಾಂಚೈಸಿಗಳ ನಡುವೆ ಒಳಗೊಳಗೇ ಭಾರಿ ಪೈಪೋಟಿ ಆರಂಭಿಸಿದೆ ಎಂದು ವರದಿಯಾಗಿದೆ. ಈ ವರದಿ ಪ್ರಕಾರ, ಬರೋಬ್ಬರಿ 6 ಐಪಿಎಲ್ ಫ್ರಾಂಚೈಸಿಗಳು ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಿಕೊಳ್ಳಲು ಭಾರಿ ಆಸಕ್ತಿ ತೋರಿಸಿವೆ.

ಪ್ಲೇಯರ್ ಟು ಪ್ಲೇಯರ್ ಆಫರ್:

ಈ ಬಾರಿ ಕೇವಲ ಹಣದ ವ್ಯವಹಾರದ ಬದಲಿಗೆ, ಬಹುತೇಕ ತಂಡಗಳು ‘ಪ್ಲೇಯರ್ ಟು ಪ್ಲೇಯರ್’ ಅದಲು-ಬದಲು ಮಾಡಿಕೊಳ್ಳಲು ಮುಂದಾಗಿವೆ. ಹಾರ್ದಿಕ್  ಪಾಂಡ್ಯ ಅವರ ಪ್ರಸ್ತುತ ಮೌಲ್ಯ ₹16.35 ಕೋಟಿ ಆಗಿರುವುದರಿಂದ, ಅದನ್ನು ಸರಿದೂಗಿಸಲು ಕೆಲವು ತಂಡಗಳು ತಮ್ಮ ಸ್ಟಾರ್ ಆಟಗಾರರನ್ನು ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಡಲು ಸಿದ್ಧವಾಗಿವೆ ಎನ್ನಲಾಗಿದೆ.

ಈ ಮೂಲಕ ಸ್ವಾಪ್ ಡೀಲ್ ಮಾಡಿಕೊಳ್ಳಲು ಕೆಲ ಫ್ರಾಂಚೈಸಿಗಳು ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಜೊತೆ ಮಾತುಕತೆ ಆರಂಭಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ರೇಸ್‌ನಲ್ಲಿ ಚಾಂಪಿಯನ್ನರು:

ವಿಶೇಷವೆಂದರೆ, ಹಾರ್ದಿಕ್ ಪಾಂಡ್ಯ ಅವರನ್ನು ಸ್ವಾಪ್ ಡೀಲ್ ಮಾಡಿಕೊಳ್ಳಲು ಐಪಿಎಲ್​ನ ಚಾಂಪಿಯನ್ ತಂಡಗಳೇ ಆಸಕ್ತಿ ತೋರಿಸಿವೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕೊಲ್ಕತ್ತಾ ನೈಟ್ ರೈಡರ್ಸ್​.

  • ಕೋಲ್ಕತಾ ನೈಟ್ ರೈಡರ್ಸ್ (KKR): 2024ರ ಚಾಂಪಿಯನ್ಸ್ ಕೆಕೆಆರ್ ತಂಡಕ್ಕೆ ಒಬ್ಬ ಅನುಭವಿ ಭಾರತೀಯ ನಾಯಕನ ಅಗತ್ಯವಿದೆ. ಹೀಗಾಗಿ ಕೆಕೆಆರ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರ ಬೆನ್ನು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
  • ರಾಜಸ್ಥಾನ್ ರಾಯಲ್ಸ್ (RR): ಚೊಚ್ಚಲ ಐಪಿಎಲ್​ನ ಚಾಂಪಿಯನ್ಸ್ ರಾಜಸ್ಥಾನ್ ರಾಯಲ್ಸ್ ಕೂಡ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಮೇಲೆ ಕಣ್ಣಿಟ್ಟಿದ್ದಾರೆ. ಪಾಂಡ್ಯರನ್ನು ಸೇರ್ಪಡೆಗೊಳಿಸುವ ಮೂಲಕ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಇರಾದೆಯಲ್ಲಿದ್ದಾರೆ ಆರ್​ಆರ್​ ಫ್ರಾಂಚೈಸಿ.
  • ಚೆನ್ನೈ ಸೂಪರ್ ಕಿಂಗ್ಸ್ (CSK): ಇತ್ತೀಚೆಗೆ ಸಿಎಸ್​ಕೆ ಬಿಡುಗಡೆ ಮಾಡಿದ ಪ್ರೋಮೋ ಒಂದರಲ್ಲಿ ಪಾಂಡ್ಯ ಅವರ ’33’ ನಂಬರ್ ಜೆರ್ಸಿ ಹೈಲೈಟ್ ಆಗಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಪಾಂಡ್ಯರ ಖರೀದಿಗೆ ಸಿಎಸ್​ಕೆ ಕೂಡ ತೆರೆಮರೆಯ ಪ್ರಯತ್ನಕ್ಕೆ ಮತ್ತೊಮ್ಮೆ ಕೈಹಾಕಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: 7 ಎಸೆತಗಳಿಂದ​ ಅಭಿಷೇಕ್ ಶರ್ಮಾ ಕೈತಪ್ಪಿದ ವಿಶ್ವ ದಾಖಲೆ!

ನವೆಂಬರ್ 1 ರಿಂದ ಅಸಲಿ ಜಿದ್ದಾಜಿದ್ದಿ:

ಸದ್ಯ ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಪಟ್ಟಿಯನ್ನು ಅಂತಿಮಗೊಳಿಸುತ್ತಿದ್ದು, ನವೆಂಬರ್ 1, 2026 ರಿಂದ ಈ ಟ್ರೇಡಿಂಗ್ ಮಾತುಕತೆಗಳು ಅಧಿಕೃತವಾಗಿ ವೇಗ ಪಡೆದುಕೊಳ್ಳಲಿವೆ. ಡೆಲ್ಲಿ ಕ್ಯಾಪಿಟಲ್ಸ್ (DC), ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಕೂಡ ಹಾರ್ದಿಕ್ ಪಾಂಡ್ಯ ಅವರ ಮುಂದಿನ ನಡೆ ಏನಿರಬಹುದು ಎಂದು ಸೂಕ್ಷ್ಮವಾಗಿ ಗಮನಿಸುತ್ತಿವೆ. ಹೀಗಾಗಿ ಮುಂದಿನ ಸೀಸನ್​ನಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬುದು ಇನ್ನೂ ಕೂಡ ನಿಗೂಢ!

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us