ಧೋನಿ ಮೇಲಿನ ಹುಚ್ಚು ಅಭಿಮಾನದಿಂದ ಮನೆಯನ್ನೇ ಮಾರ್ಪಡಿಸಿದ್ದ, ದುರಂತವೆಂದರೆ ಅದೇ ಮನೆಯಲ್ಲಿ ಆತ್ಮಹತ್ಯೆ.. ಏನಾಯಿತು?

|

Updated on: Jan 19, 2024 | 6:08 PM

MS Dhoni Fan Suicide: ಕ್ರಿಕೆಟಿಗ ಧೋನಿಯ ದೊಡ್ಡ ಅಭಿಮಾನಿ ಗೋಪಿ ಕೃಷ್ಣ ದುಬೈನಲ್ಲಿ ಕೆಲಸ ಮಾಡುತ್ತಿದ್ದರೂ ವಿಶ್ವಕಪ್ ಕ್ರಿಕೆಟ್ ವೇಳೆ ಭಾರತಕ್ಕೆ ಮರಳಿದ್ದರು. ಆದರೆ, ತುಂಬಾ ಆಸೆಯಿಂದ ವಿನ್ಯಾಸಗೊಳಿಸಿದ ಮನೆಯಲ್ಲಿ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧೋನಿ ಮೇಲಿನ ಹುಚ್ಚು ಅಭಿಮಾನದಿಂದ ಮನೆಯನ್ನೇ ಮಾರ್ಪಡಿಸಿದ್ದ, ದುರಂತವೆಂದರೆ ಅದೇ ಮನೆಯಲ್ಲಿ ಆತ್ಮಹತ್ಯೆ.. ಏನಾಯಿತು?
ಧೋನಿ ಮೇಲಿನ ಹುಚ್ಚು ಅಭಿಮಾನದಿಂದ ಮನೆಯನ್ನೇ ಮಾರ್ಪಡಿಸಿದ್ದ, ದುರಂತವೆಂದರೆ ಅದೇ ಮನೆಯಲ್ಲಿ ಆತ್ಮಹತ್ಯೆ
Follow us on

ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ಸಾರಥಿ ಮಹೇಂದ್ರ ಸಿಂಗ್ ಧೋನಿ ಮುಂಬರುವ ಐಪಿಎಲ್ ಸೀಸನ್‌ಗಾಗಿ ಅಭ್ಯಾಸ ಆರಂಭಿಸಿದ್ದು ಗೊತ್ತೇ ಇದೆ. ಆದರೆ, ಹಲವು ಮಂದಿಯನ್ನು ಅಪ್ಪಟ ಅಭಿಮಾನಿಗಳನ್ನಾಗಿ ಪರಿವರ್ತಿಸಿರುವ ಈ ಜಾರ್ಖಂಡ್ ಡೈನಾಮೈಟ್ ಮತ್ತೊಮ್ಮೆ ಮೈದಾನದಲ್ಲಿ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದ್ದಾರೆ. ಆದರೆ, ಈ ನಡುವೆ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಸಂಚಲನ ಮೂಡಿಸಿದೆ. ತಮಿಳುನಾಡು ಮೂಲದ ಗೋಪಿ ಕೃಷ್ಣನ್ (34) ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಡಲೂರು ಜಿಲ್ಲೆಯ ತಿಟಕುಡಿ ಬಳಿಯ ಅರಂಗೂರು ಗ್ರಾಮದ ನಿವಾಸಿ ಗೋಪಿ ಅವರು ಮುಂಜಾನೆ 4.30ಕ್ಕೆ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದ ಕೃಷ್ಣನ್ ಕುಟುಂಬ ಹಾಗೂ ಧೋನಿ ಅಭಿಮಾನಿಗಳು ದುಃಖದಲ್ಲಿ ಮುಳುಗಿದ್ದಾರೆ.

ಕ್ರಿಕೆಟಿಗ ಧೋನಿಯ ದೊಡ್ಡ ಅಭಿಮಾನಿಯಾಗಿರುವ ಗೋಪಿ ಕೃಷ್ಣನ್ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. 2020 ರಲ್ಲಿ ತನ್ನ ತವರಿಗೆ ಮರಳಿದ ಗೋಪಿ, ಧೋನಿಯ ಮೇಲಿನ ಅಭಿಮಾನದಿಂದ ಮನೆಗೆ ಹಳದಿ ಬಣ್ಣ ಬಳಿಯುವ ಮೂಲಕ ವಿಶೇಷ ಪ್ರೀತಿಯನ್ನು ತೋರಿಸಿದರು. ಧೋನಿ ಅವರ ಚಿತ್ರಗಳ ಜೊತೆಗೆ, ಮನೆ ಗೋಡೆಯ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಿತ್ರಿಸಿದರು. ಈ ಹಿನ್ನೆಲೆಯಲ್ಲಿ ಗೋಪಿ ಮನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂತಿಮವಾಗಿ, ಈ ಫೋಟೋಗಳು ಮತ್ತು ವೀಡಿಯೊಗಳು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಯನ್ನು ತಲುಪಿದವು. ನಾನು ಆ ಮನೆಯ ನೋಟವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿದೆ. ಇದು ನನಗೆ ಮಾತ್ರವಲ್ಲ. ಇದು ಚೆನ್ನೈ ತಂಡ ಹಾಗೂ ನನ್ನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಕಾರ್ಯ ಎಂದು ಧೋನಿ ಸಂತಸಪಟ್ಟರು. ಆದರೆ…

ಆ ಬಳಿಕ ತಮಿಳುನಾಡು ರಾಜ್ಯ ಯುವಜನ ಅಭಿವೃದ್ಧಿ ಸಚಿವ ಉದಯನಿಧಿ ಅವರು ಗೋಪಿಕೃಷ್ಣ ಅವರ ಮನೆಗೆ ತೆರಳಿ ಅಭಿನಂದಿಸಿದರು. ಗೋಪಿಕೃಷ್ಣ ಅವರ ಮನೆಗೆ ಚಿತ್ರರಂಗದ ಗಣ್ಯರು, ಯುವಕರು, ಜನಸಾಮಾನ್ಯರು ಬರುತ್ತಿದ್ದರು. ಹೀಗೆ ತನ್ನ ವಿಶೇಷತೆ ಕಾರ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾದರು ಗೋಪಿಕೃಷ್ಣ. ಆದರೆ…

ಗೋಪಿ ಕೃಷ್ಣ ದುಬೈನಲ್ಲಿ ಕೆಲಸ ಮಾಡುತ್ತಿದ್ದರೂ ವಿಶ್ವಕಪ್ ಕ್ರಿಕೆಟ್ ವೇಳೆ ಭಾರತಕ್ಕೆ ಮರಳಿದ್ದರು. ಆದರೆ, ತುಂಬಾ ಆಸೆಯಿಂದ ವಿನ್ಯಾಸಗೊಳಿಸಿದ ಮನೆಯಲ್ಲಿ ಗುರುವಾರ ಮುಂಜಾನೆ ಗೋಪಿಕೃಷ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಪಡೆದ ರಾಮನಾಥಂ ಪೊಲೀಸರು ಸ್ಥಳಕ್ಕಾಗಮಿಸಿ ಗೋಪಿಕೃಷ್ಣ ಅವರ ಮೃತದೇಹವನ್ನು ತಿಟ್ಟಕುಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ಕಾರಣಗಳನ್ನು ಹುಡುಕುವ ಕೆಲಸದಲ್ಲಿ ತೊಡಗಿದ್ದಾರೆ.

ಗೋಪಿಕೃಷ್ಣ ಅವರ ಸಂಬಂಧಿಕರು ಪೊಲೀಸರ ಜೊತೆ ಮಾತನಾಡುತ್ತಾ… “ಅದೇ ಗ್ರಾಮದ ಕೆಲವರು ಗೋಪಿಕೃಷ್ಣ ಅವರೊಂದಿಗೆ ಹಣಕಾಸು ವ್ಯವಹಾರಗಳನ್ನು ಹೊಂದಿದ್ದರು. ಅದು ವಿವಾದಕ್ಕೂ ತಿರುಗಿದೆ. ಪೊಂಗಲ್‌ಗೂ ಮುನ್ನ ನಿನ್ನೆ ನಡೆದ ಕ್ರೀಡಾ ಸ್ಪರ್ಧೆಯಲ್ಲೂ ಇದೇ ವಿಚಾರ ಮುನ್ನೆಲೆಗೆ ಬಂದಿದೆ. ಇದರಿಂದ ಗೋಪಿಕೃಷ್ಣ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಇದರಿಂದ ಮನನೊಂದ ಗೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಮೃತ ಗೋಪಿಕೃಷ್ಣ ಅವರಿಗೆ ಪತ್ನಿ ಅನ್ಬರಸಿ ಹಾಗೂ 10 ಮತ್ತು 8 ವರ್ಷದ ಪುತ್ರರಿದ್ದಾರೆ. ಅಲ್ಲದೆ 10 ದಿನಗಳ ಹಿಂದೆ ಹೆಣ್ಣು ಮಗುವೊಂದು ಜನಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ