AB de Villiers: ಅಭ್ಯಾಸಕ್ಕಿಳಿದ ಡಿವಿಲಿಯರ್ಸ್: ಹೊಡೆದ ಶಾಟ್​ಗಳೆಲ್ಲಾ ಮೈದಾನದಿಂದ ಹೊರಕ್ಕೇ

| Updated By: Vinay Bhat

Updated on: Sep 14, 2021 | 7:48 AM

IPL 2021: ಎಬಿ ಡಿವಿಲಿಯರ್ಸ್ ನೆಟ್ ಪ್ರಾಕ್ಟೀಸ್ ನಡೆಸುತ್ತಿರುವ ವಿಶೇಷ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವುದರ ಮೂಲಕ ಹಂಚಿಕೊಂಡಿದೆ.

AB de Villiers: ಅಭ್ಯಾಸಕ್ಕಿಳಿದ ಡಿವಿಲಿಯರ್ಸ್: ಹೊಡೆದ ಶಾಟ್​ಗಳೆಲ್ಲಾ ಮೈದಾನದಿಂದ ಹೊರಕ್ಕೇ
AB De Villiers
Follow us on

ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ (IPL 2021) ಎರಡನೇ ಚರಣಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಫೋಟಕ ಬ್ಯಾಟ್ಸ್​ಮನ್​ ಎಬಿ ಡಿವಿಲಿಯರ್ಸ್ (AB de Villiers) ಅಭ್ಯಾಸ ಆರಂಭಿಸಿದ್ದಾರೆ. ದಕ್ಷಿಣ ಆಫ್ರಿಕಾದಿಂದ ನೇರವಾಗಿ ದುಬೈಗೆ (Dubai) ಬಂದಿಳಿದಿದ್ದ ಎಬಿಡಿ ಹೋಟೆಲ್ ರೂಮ್​ನಲ್ಲಿ ಆರು ದಿನಗಳ ಕಡ್ಡಾಯ ಕ್ವಾರಂಟೈನ್​ನಲ್ಲಿದ್ದರು. ಸದ್ಯ ತಮ್ಮ ಕ್ವಾರಂಟೈನ್ ಅಂತ್ಯಗೊಂಡಿದ್ದು, ಮೈದಾನದಲ್ಲಿ ಬೆವರು ಹರಿಸಲು ಶುರು ಮಾಡಿದ್ದಾರೆ. ಮಿ. 360 (Mr. 360) ನೆಟ್​ನಲ್ಲಿ ಚೆಂಡನ್ನು ಫೋರ್- ಸಿಕ್ಸರ್​ಗೆ ಅಟ್ಟುತ್ತಿರುವ ವಿಡಿಯೋ ವೈರಲ್ (Viral Video) ಆಗುತ್ತಿದೆ.

ಎಬಿ ಡಿವಿಲಿಯರ್ಸ್ ನೆಟ್ ಪ್ರಾಕ್ಟೀಸ್ ನಡೆಸುತ್ತಿರುವ ವಿಶೇಷ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವುದರ ಮೂಲಕ ಹಂಚಿಕೊಂಡಿದೆ. ತುಂಬಾ ದಿನಗಳ ನಂತರ ಬ್ಯಾಟ್ ಹಿಡಿದು ಮೈದಾನದಲ್ಲಿ ತರಬೇತಿಯನ್ನು ಮಾಡುತ್ತಿರುವುದರ ಕುರಿತು ಸಂತಸ ವ್ಯಕ್ತಪಡಿಸಿದ ಎಬಿ ಡಿವಿಲಿಯರ್ಸ್ ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು.

 

ಕೊಹ್ಲಿ-ಎಬಿಡಿಗೆ ಕಠಿಣ ಸವಾಲು ಎಂದ ಗಂಭೀರ್:

ಐಪಿಎಲ್ 2021 ಎರಡನೇ ಚರಣದಲ್ಲಿ ವಿವಿಧ ತಂಡಗಳ ಕೆಲ ಆಟಗಾರರು ಸವಾಲುಗಳನ್ನು ಎದುರಿಸಲಿದ್ದಾರೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ. ಅದರಲ್ಲೂ ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಡಿವಿಲಿಯರ್ಸ್ ಕೂಡ ಕಠಿಣ ಸವಾಲುಗಳನ್ನು ಎದುರಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಷ್ಟೆ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಟವನ್ನಾಡಿ ಬಂದಿದ್ದು ಯಾವುದೇ ಟಿ-20 ಪಂದ್ಯವನ್ನಾಡದೇ ನೇರವಾಗಿ ಮುಂದುವರಿಯಲಿರುವ ಐಪಿಎಲ್​ನಲ್ಲಿ ಭಾಗವಹಿಸಲಿದ್ದಾರೆ ಹಾಗೂ ಯಾವುದೇ ಕ್ರಿಕೆಟ್ ಪಂದ್ಯವನ್ನಾಡದೇ ಎಬಿ ಡಿವಿಲಿಯರ್ಸ್ ನೇರವಾಗಿ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಈ ಇಬ್ಬರಿಗೂ ಇತ್ತೀಚಿನ ದಿನಗಳಲ್ಲಿ ಟಿ-20 ಕ್ರಿಕೆಟ್ ಪಂದ್ಯಗಳನ್ನಾಡಿರುವ ಅನುಭವವಿಲ್ಲದೇ ಇರುವುದರಿಂದ ಮುಂದುವರಿಯಲಿರುವ ಕಠಿಣ ಸವಾಲಾಗಲಿದೆ ಎಂದು ಗಂಭೀರ್ ಹೇಳಿದ್ದಾರೆ.

ಈ ಬಾರಿಯ ಐಪಿಎಲ್ ಟೂರ್ನಿ ಭಾರತದಲ್ಲಿ ಆರಂಭವಾದಾಗ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಿದ್ದವು. ಇದೀಗ ಯುಎಇಯಲ್ಲಿ ಸೆಪ್ಟೆಂಬರ್‌ 19 ರಿಂದ ಐಪಿಎಲ್ ಟೂರ್ನಿ ಮುಂದುವರಿಯಲಿದ್ದು ಸೆಪ್ಟೆಂಬರ್ 20ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯಾರ್ಧದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತನ್ನ ಮೊದಲನೇ ಪಂದ್ಯವನ್ನಾಡಲಿದೆ.

Brendan Taylor Retirement: ಅಂತರರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ವಿದಾಯ ಘೋಷಿಸಿದ ಬ್ರೆಂಡನ್ ಟೇಲರ್

ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸದ್ಯಕ್ಕಂತೂ ಸಾಧ್ಯವೇ ಇಲ್ಲ: ರಮೀಜ ರಾಜಾ, ಪಿಸಿಬಿ ಚೇರ್ಮನ್

(AB de Villiers starts net sessions with RCB for IPL 2021 second phace in UAE)